logo
ಕನ್ನಡ ಸುದ್ದಿ  /  ಮನರಂಜನೆ  /  Kriti Sanon: ತಿರುಪತಿಯಲ್ಲಿ ಮುತ್ತು ಗಿತ್ತು ಬೇಕಿತ್ತಾ; ಆದಿಪುರುಷ್ ಚಿತ್ರದ ನಿರ್ದೇಶಕ ಓಂ ರಾವುತ್‌ ಕೃತಿ ಸನೊನ್‌ ಬಗ್ಗೆ ನೆಟಿಜನ್ಸ್‌ ಬೇಸರ

Kriti Sanon: ತಿರುಪತಿಯಲ್ಲಿ ಮುತ್ತು ಗಿತ್ತು ಬೇಕಿತ್ತಾ; ಆದಿಪುರುಷ್ ಚಿತ್ರದ ನಿರ್ದೇಶಕ ಓಂ ರಾವುತ್‌ ಕೃತಿ ಸನೊನ್‌ ಬಗ್ಗೆ ನೆಟಿಜನ್ಸ್‌ ಬೇಸರ

Rakshitha Sowmya HT Kannada

Jun 07, 2023 02:11 PM IST

ಕೃತಿ ಸನೊನ್‌ಗೆ ಹಗ್‌ ಮಾಡಿ ಮುತ್ತಿಟ್ಟ ನಿರ್ದೇಶಕ ಓಂ ರಾವುತ್

    • ದೇವರ ದರ್ಶನ ಮಾಡಿದ ಬಳಿಕ ನಟಿ ಕೃತಿ ಸನೊನ್‌, ಮನೆಗೆ ಹೊರಡಲು ಕಾರು ಏರುವಾಗ ತಮ್ಮ ಜೊತೆಯಲ್ಲಿದ್ದವರಿಗೆ ಬೈ ಹೇಳುತ್ತಾರೆ. ಆತ್ಮೀಯತೆಯಿಂದ ಅವರನ್ನು ಹಗ್‌ ಮಾಡುತ್ತಾರೆ. ಓಂ ರಾವುತ್‌ ಕೂಡಾ ಕೃತಿ ಸನೊನ್‌ನನ್ನು ಹಗ್‌ ಮಾಡಿ ಮುತ್ತು ನೀಡುತ್ತಾರೆ.
ಕೃತಿ ಸನೊನ್‌ಗೆ ಹಗ್‌ ಮಾಡಿ ಮುತ್ತಿಟ್ಟ ನಿರ್ದೇಶಕ ಓಂ ರಾವುತ್
ಕೃತಿ ಸನೊನ್‌ಗೆ ಹಗ್‌ ಮಾಡಿ ಮುತ್ತಿಟ್ಟ ನಿರ್ದೇಶಕ ಓಂ ರಾವುತ್ (PC: Twitter)

ಸಾಕಷ್ಟು ವಿವಾದಗಳು ಅಡೆ ತಡೆಗಳನ್ನು ದಾಟಿ, ಪ್ರಭಾಸ್‌ ಅಭಿನಯದ ಬಹು ನಿರೀಕ್ಷಿತ 'ಆದಿಪುರುಷ್‌' ಸಿನಿಮಾ ಕೊನೆಗೂ ತೆರೆ ಕಾಣುತ್ತಿದೆ. ಜೂನ್‌ 16 ರಂದು ಈ ಸಿನಿಮಾ 5 ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಸಿನಿಮಾ ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ತಯಾರಾಗಿದ್ದು ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಡಬ್‌ ಆಗಿ ರಿಲೀಸ್‌ ಆಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಒಂದು ವೇಳೆ ಕನ್ನಡದ ಬ್ಲಿಂಕ್ ಮಲಯಾಳಿ ಸಿನಿಮಾ ಆಗಿದ್ದಿದ್ರೆ, ಅಲ್ಲಿನವ್ರು ಎತ್ತಿ ಮೆರೆಸುತ್ತಿದ್ರು! ನಮ್ಮವರಿಗೆ ಏನಾಗಿದ್ಯೋ? INTERVIEW

Brundavana Serial: ಆಕಾಶ್‌ ನೆಮ್ಮದಿ ಹಾಳು ಮಾಡಲು ಭಾರ್ಗವಿ ಜೊತೆ ಗಿರಿಜಾ ಕೂಡ ಮಾಡ್ತಿದ್ದಾಳೆ ಸಂಚು; ಕೊನೆಗೂ ಸತ್ಯ ಹೇಳಿಲ್ಲ ಸುನಾಮಿ

‘ಪೌಡರ್‌’ ಕೊಟ್ಟು ಪವರ್‌ ಹೆಚ್ಚಿಸಲು ಹೊರಟ ಗುಲ್ಟು ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ; ನಗು ಉಕ್ಕಿಸುವ ಟೀಸರ್‌ ಬಿಡುಗಡೆ

ಶಿಳ್ಳೆ, ಕೇಕೆ, ಚಪ್ಪಾಳೆ.. ಬೆಳ್ಳಿತೆರೆ ಮೇಲೆ ಮತ್ತೆ ಮಿನುಗಿದ ಕಲ್ಟ್‌ ಕ್ಲಾಸಿಕ್‌ A ಚಿತ್ರ; ಥಿಯೇಟರ್‌ ಮುಂದೆ ಹಬ್ಬ ಮಾಡಿದ ಉಪ್ಪಿ ಫ್ಯಾನ್ಸ್

ಜೂನ್‌ 6 ರಂದು ಚಿತ್ರತಂಡ ತಿರುಮಲ ತಿರುಪತಿಯಲ್ಲಿ ಪ್ರೀ ರಿಲೀಸ್‌ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಪ್ರಭಾಸ್‌ , ಕೃತಿ ಸನೊನ್‌ ಸೇರಿದಂತೆ ಚಿತ್ರತಂಡದ ಅನೇಕ ಮಂದಿ ಹಾಜರಿದ್ದರು. ಲಕ್ಷಾಂತರ ಮಂದಿ ಈ ಕಾರ್ಯಕ್ರಮ ನೋಡಲು ದೂರುದೂರುಗಳಿಂದ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಭಾಸ್‌ ಭಾರೀ ಗಾತ್ರದ ಧನಸ್ಸು ಎತ್ತಿ ಹಿಡಿದು ಫೋಟೋಗೆ ಪೋಸ್‌ ನೀಡಿದ್ದರು. ಕಾರ್ಯಕ್ರಮದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ. ಜೂನ್‌ 16 ರಂದು ಸಿನಿಮಾ ನೋಡಲು ಪ್ರಭಾಸ್‌ ಅಭಿಮಾನಿಗಳು ಕಾಯುತ್ತಿದ್ದಾರೆ.

ಇನ್ನು ಮಂಗಳವಾರ ಪ್ರೀ ರಿಲೀಸ್‌ ಕಾರ್ಯಕ್ರಮಕ್ಕೆ ಹಾಜರಾಗುವ ಮುನ್ನ ಪ್ರಭಾಸ್‌, ಕೃತಿ ಸನೊನ್‌, ನಿರ್ದೇಶಕ ಓಂ ರಾವುತ್‌ ಸೇರಿದಂತೆ ಅನೇಕ ಮಂದಿ ತಿರುಪತಿ ದೇಗುಲಕ್ಕೆ ತೆರಳಿ ವೆಂಕಟೇಶ್ವರನ ದರ್ಶನ ಪಡೆದಿದ್ದರು. ತಮ್ಮ ಚಿತ್ರ ಯಶಸ್ವಿಯಾಗಲೆಂದು ಪ್ರಾರ್ಥಿಸಿದ್ದರು. ಆದರೆ ಕೃತಿ ಹಾಗೂ ಓಂ ರಾವುತ್‌ ಫೋಟೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಕೆಲವರು ಈ ಫೋಟೋಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ದೇವರ ದರ್ಶನ ಮಾಡಿದ ಬಳಿಕ ನಟಿ ಕೃತಿ ಸನೊನ್‌, ಮನೆಗೆ ಹೊರಡಲು ಕಾರು ಏರುವಾಗ ತಮ್ಮ ಜೊತೆಯಲ್ಲಿದ್ದವರಿಗೆ ಬೈ ಹೇಳುತ್ತಾರೆ. ಆತ್ಮೀಯತೆಯಿಂದ ಅವರನ್ನು ಹಗ್‌ ಮಾಡುತ್ತಾರೆ. ಓಂ ರಾವುತ್‌ ಕೂಡಾ ಕೃತಿ ಸನೊನ್‌ನನ್ನು ಹಗ್‌ ಮಾಡಿ ಮುತ್ತು ನೀಡುತ್ತಾರೆ. ಈ ವಿಡಿಯೋ ಕ್ಲಿಪ್ಲಿಂಗ್‌ ಹಾಗೂ ಪೋಟೋ ಸ್ಕ್ರೀನ್‌ ಶಾಟ್‌ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ತಿರುಪತಿಯಂತಹ ಪುಣ್ಯಸ್ಥಳದಲ್ಲಿ ಈ ರೀತಿ ಕಿಸ್ಸಿಂಗ್‌ ಅವಶ್ಯಕತೆ ಇತ್ತಾ? ಎಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದು ನಿಮಗೆ ಗೊತ್ತಿಲ್ವಾ? ಎಂದು ನೆಟಿಜನ್ಸ್‌ ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು ಪ್ರತಿಕ್ರಿಯಿಸಿ ಸಿನಿಮಾ ಮಂದಿ ಆತ್ಮೀಯತೆಯಿಂದ ಈ ರೀತಿ ನಡೆದುಕೊಳ್ಳುತ್ತಾರೆ. ಅದರಲ್ಲೂ ತಪ್ಪು ಹುಡುಕುವುದು ಬೇಡ, ಸೆಲೆಬ್ರಿಟಿಗಳಾಗಿ ಎಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ಅರಿವು ಅವರಿಗೂ ಇರುತ್ತದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಈಗ ಚರ್ಚೆಯಾಗುತ್ತಿರುವುದಂತೂ ನಿಜ.

'ಆದಿಪುರುಷ್‌' ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ ನಟಿಸುತ್ತಿದ್ದರೆ, ಕೃತಿ ಸನನ್ ಸೀತೆಯ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ರಾವಣಾಸುರನಾಗಿ ಕಾಣಿಸಿಕೊಳ್ಳಲಿದ್ದಾರೆ. 3ಡಿ ಮೋಷನ್ ಕ್ಯಾಪ್ಚರ್ ತಂತ್ರಜ್ಞಾನ ಹೊಂದಿರುವ ಈ ಚಿತ್ರವನ್ನು ಟಿ ಸೀರೀಸ್‌ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ಭೂಷಣ್‌ ಕುಮಾರ್‌ ನಿರ್ಮಿಸಿದ್ದಾರೆ. ಓಂ ರಾವುತ್‌ ಚಿತ್ರಕಥೆ ಹಾಗೂ ನಿರ್ದೇಶನ 'ಆದಿಪುರುಷ್‌' ಚಿತ್ರಕ್ಕೆ ಇದೆ. ಜೂನ್‌ 16 ರಂದು ಸಿನಿಮಾ ವಿಶ್ವಾದ್ಯಂತ ತೆರೆ ಕಾಣುತ್ತಿದೆ. 500 ಕೋಟಿ ಬಜೆಟ್‌ನಲ್ಲಿ ತಯಾರಾಗಿರುವ ಸಿನಿಮಾ, ಸಿನಿಪ್ರಿಯರನ್ನು ಯಾವ ರೀತಿ ಮೋಡಿ ಮಾಡಲಿದೆ ಕಾದು ನೋಡಬೇಕು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ