logo
ಕನ್ನಡ ಸುದ್ದಿ  /  ಮನರಂಜನೆ  /  ಬಾಕ್ಸ್‌ ಆಫೀಸ್‌ನಲ್ಲಿ ವಿಕ್ಕಿ ಕೌಶಲ್‌ ನಟನೆಯ ಸ್ಯಾಮ್‌ ಬಹದ್ಧೂರ್‌ ಗಳಿಕೆ ಎಷ್ಟು; ಮಾಣಿಕ್‌ ಷಾ ಜೀವನಗಾಥೆಗೆ ಸಕಾರಾತ್ಮಕ ಪ್ರತಿಕ್ರಿಯೆ

ಬಾಕ್ಸ್‌ ಆಫೀಸ್‌ನಲ್ಲಿ ವಿಕ್ಕಿ ಕೌಶಲ್‌ ನಟನೆಯ ಸ್ಯಾಮ್‌ ಬಹದ್ಧೂರ್‌ ಗಳಿಕೆ ಎಷ್ಟು; ಮಾಣಿಕ್‌ ಷಾ ಜೀವನಗಾಥೆಗೆ ಸಕಾರಾತ್ಮಕ ಪ್ರತಿಕ್ರಿಯೆ

Praveen Chandra B HT Kannada

Dec 04, 2023 10:25 AM IST

ಸ್ಯಾಮ್‌ ಬಹದ್ಧೂರ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

    • Sam Bahadur box office collection day 3: ವಿಕ್ಕಿ ಕೌಶಲ್‌ ನಟನೆಯ ಫೀಲ್ಡ್ ಮಾರ್ಷಲ್ ಸ್ಯಾಮ್ ಬಹದ್ದೂರ್ ಮಾಣಿಕ್ ಷಾ ಅವರ ಜೀವನಗಾಥೆಯ ಸ್ಯಾಮ್‌ ಬಹದ್ಧೂರ್‌ ಸಿನಿಮಾಕ್ಕೆ ಅನಿಮಲ್‌ನಿಂದ ಪ್ರಬಲ ಪೈಪೋಟಿ ಎದುರಾಗುತ್ತಿದೆ. ಹೀಗಿದ್ದರೂ, ಬಾಕ್ಸ್‌ ಆಫೀಸ್‌ನಲ್ಲಿ 25.55 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಸ್ಯಾಮ್‌ ಬಹದ್ಧೂರ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌
ಸ್ಯಾಮ್‌ ಬಹದ್ಧೂರ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌

Sam Bahadur box office collection day 3: ವಿಕ್ಕಿ ಕೌಶಲ್‌ ನಟನೆಯ ಸ್ಯಾಮ್‌ ಬಹದ್ಧೂರ್‌ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಗಳಿಕೆಯತ್ತ ಸಾಗುತ್ತಿದೆ. ಮೇಘಾ ಗುಲ್ಜಾರ್‌ ನಿರ್ದೇಶನದ ಸ್ಯಾಮ್‌ ಬಹದ್ಧೂರ್‌ ಸಿನಿಮಾ ಕೊನೆಗೂ ಎರಡಂಕಿ ಗಳಿಕೆ ಮಾಡಲು ಸಾಧ್ಯವಾಗಿದೆ. ಸಕ್‌ನಿಲ್ಕ್‌.ಕಾಂ ವರದಿ ಪ್ರಕಾರ ಸ್ಯಾಮ್‌ ಬಹದ್ಧೂರ್‌ ಸಿನಿಮಾವು ಭಾರತದಲ್ಲಿ ಭಾನುವಾರ 10.30 ಕೋಟಿ ರೂಪಾಯಿ ಗಳಿಕೆ ಮಾಡಿದೆ. ದೇಶಾದ್ಯಂತ ಒಟ್ಟು 25.55 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಟ್ರೆಂಡಿಂಗ್​ ಸುದ್ದಿ

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕಿರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಗಾಯಗೊಂಡ ನಟಿ ಐಶ್ವರ್ಯಾ ರೈ ಕೈಬಿಟ್ಟು ನಡೆಯಲೊಪ್ಪದ ಆರಾಧ್ಯ ಬಚ್ಚನ್‌; ಮಗಳೆಂದರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

ಸ್ಯಾಮ್‌ ಬಹದ್ಧೂರ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌- ದಿನ 3

ಮೂರನೇ ದಿನವಾದ ಸ್ಯಾಮ್‌ ಬಹದ್ಧೂರ್‌ ಸಿನಿಮಾವು ಉತ್ತಮವಾಗಿ ಗಳಿಕೆ ಮಾಡಿದೆ. ವಿವಿಧ ಭಾಷೆಗಳಲ್ಲಿನ ಆಕ್ಯುಪೆನ್ಸಿಯಲ್ಲಿ ಹಿಂದಿ ಸಿನಿಮಾದ ಗಳಿಕೆ ಶೇಕಡ 56.33ರಷ್ಟು ಇತ್ತು. ಈ ಸಿನಿಮಾವು ಮೊದಲ ದಿನ 6.26 ಕೋಟಿ ಗಳಿಕೆ ಮಾಡಿತ್ತು. ವಾರಾಂತ್ಯದಲ್ಲಿ ಗಳಿಕೆ ಉತ್ತಮವಾಗಿತ್ತು. ಶನಿವಾರ 9 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಸದ್ಯ ಸ್ಯಾಮ್‌ ಬಹದ್ಧೂರ್‌ ಸಿನಿಮಾದ ಒಟ್ಟಾರೆ ಗಳಿಕೆ 25.55 ತಲುಪಿದೆ. ಇನ್ನೊಂದೆಡೆ ಅನಿಮಲ್‌ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ 200 ಕೋಟಿ ಕ್ಲಬ್‌ಗೆ ಸೇರಿದೆ.

ಸಿನಿಮಾ ಟ್ರೇಡ್‌ ವಿಶ್ಲೇಷಕರಾದ ತರಣ್‌ ಆದರ್ಶ್‌ ಪ್ರಕಾರ ಸ್ಯಾಮ್‌ ಬಹದ್ಧೂರ್‌ ಸಿನಿಮಾದ ಭಾನುವಾರದ ಗಳಿಕೆ ಈ ಮುಂದಿನಂತೆ ಇದೆ. ಪಿವಿಆರ್‌ ಐನಾಕ್ಸ್‌ 4.65 ಕೋಟಿ ರೂಪಾಯಿ, ಸಿನಿಪೋಲಿಸ್‌ 1.25 ಕೋಟಿ ರೂಪಾಯಿ, ಒಟ್ಟು 5.90 ಕೋಟಿ ರೂಪಾಯಿ. ಶುಕ್ರವಾರ ಒಟ್ಟು 3.60 ಕೋಟಿ ರೂಪಾಯಿ, ಶನಿವಾರ ಒಟ್ಟು 5.42 ಕೋಟಿ ರೂಪಾಯಿ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ವಾರಾಂತ್ಯದಲ್ಲಿ ಸ್ಯಾಮ್‌ ಬಹದ್ಧೂರ್‌ ಗಳಿಕೆ ಏರಿಕೆ ಕಂಡಿದೆ ಎಂದು ಅವರು ಹೇಳಿದ್ದಾರೆ.

ಸ್ಯಾಮ್‌ ಬಹದ್ಧೂರ್‌ ಸಿನಿಮಾದ ಅಡ್ವಾನ್ಸಡ್‌ ಬುಕ್ಕಿಂಗ್‌ ಆರಂಭವಾದ ಕೆಲವು ದಿನಗಳಲ್ಲಿ ಸುಮಾರು 18 ಲಕ್ಷ ಟಿಕೆಟ್‌ಗಳನ್ನು ಜನರು ಬುಕ್ಕಿಂಗ್‌ ಮಾಡಿದ್ದರು. ಇದರಿಂದ ಸುಮಾರು 64 ಲಕ್ಷ ರೂಪಾಯಿ ಸಂಗ್ರಹವಾಗಿತ್ತು. ಅನಿಮಲ್‌ ಸಿನಿಮಾ ಬಿಡುಗಡೆಯಾದರಿಂದ ಬಹುತೇಕರು ರಣಬೀರ್‌ ಕಪೂರ್‌ ಸಿನಿಮಾ ನೋಡಲು ಗಮನ ನೀಡಿದ್ದಾರೆ. ಸ್ಯಾಮ್‌ ಬಹದ್ಧೂರ್‌ಗೆ ಇದು ಪ್ರಬಲವಾದ ಪೈಪೋಟಿ ನೀಡಿತ್ತು.

 

ಸುದೀರ್ಘ 40 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ದುಡಿದು, ಮೊದಲ ಏರ್‌ ಫೀಲ್ಡ್‌ ಮಾರ್ಷಲ್‌ ಆಗಿದ್ದ ಸ್ಯಾಮ್‌ ಮಾನೆಕ್‌ ಷಾ ಅವರ ಸೇನಾ ದಿನಗಳು ಮತ್ತು ಪ್ರಮುಖ ಯುದ್ಧದ ಕಥಾನಕವನ್ನು ಸ್ಯಾಮ್‌ ಬಹದ್ದೂರ್‌ ಸಿನಿಮಾದಲ್ಲಿ ತೆರೆದಿಟ್ಟಿದ್ದಾರೆ ನಿರ್ದೇಶಕಿ ಮೇಘನಾ ಗುಲ್ಜಾರ್.‌ 1971ರ ಇಂಡೋ- ಪಾಕ್‌ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಇಡೀ ಸಿನಿಮಾ ತೆರೆದುಕೊಳ್ಳಲಿದೆ. 1969ರಲ್ಲಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಸ್ಯಾಮ್‌ ಮಾನೆಕ್‌ ಷಾ, ಪಾಕ್‌ ವಿರುದ್ಧದ ಸಮರದಲ್ಲಿ ವಿಜಯ ಸಾಧಿಸುತ್ತಾರೆ. ಇದರ ಪರಿಣಾಮವಾಗಿ 1971ರಲ್ಲಿ ಬಾಂಗ್ಲಾದೇಶದ ಹುಟ್ಟಿಗೂ ಇವರು ಕಾರಣರಾಗುತ್ತಾರೆ. ಭಾರತೀಯ ಸೇನೆಯ ಇತಿಹಾಸದ ಪುಟದ ಪ್ರಮುಖ ಘಟನಾವಳಿಗಳು ಮತ್ತು ಸೈನಿಕರ ಸಾಹಸದ ಕಥನ ಹೊಂದಿರುವ ಸಿನಿಮಾವು ಮುಂದಿನ ದಿನಗಳಲ್ಲಿ ಗಳಿಕೆ ಹೆಚ್ಚಿಸಿಕೊಳ್ಳುವ ಸಾಧ್ಯತೆಯಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ