logo
ಕನ್ನಡ ಸುದ್ದಿ  /  ಮನರಂಜನೆ  /  Adipurush Teaser Controversy: ಪ್ರಭಾಸ್‌, ಸೈಫ್‌ ಅಲಿಖಾನ್‌ ಸೇರಿ ಐವರ ವಿರುದ್ಧ ಕೇಸ್‌..ವಿಚಾರಣೆಗೆ ಹಾಜರಾಗುವಂತೆ ಸೂಚನೆ

Adipurush Teaser Controversy: ಪ್ರಭಾಸ್‌, ಸೈಫ್‌ ಅಲಿಖಾನ್‌ ಸೇರಿ ಐವರ ವಿರುದ್ಧ ಕೇಸ್‌..ವಿಚಾರಣೆಗೆ ಹಾಜರಾಗುವಂತೆ ಸೂಚನೆ

Rakshitha Sowmya HT Kannada

Oct 13, 2022 11:20 AM IST

google News

ಪ್ರಭಾಸ್‌, ಓಂ ರಾವತ್‌ ಸೇರಿ ಐವರ್‌ ವಿರುದ್ಧ ಕೇಸ್

    • ಚಿತ್ರದ ಟೀಸರ್‌ನಲ್ಲಿ ರಾಮ, ರಾವಣ, ಸೀತೆ, ಹನುಮಂತನ ಪಾತ್ರಧಾರಿಗಳನ್ನು ಸೂಕ್ತ ರೀತಿಯಲ್ಲಿ ತೋರಿಸಿಲ್ಲ. ಹಿಂದೂಗಳ ಭಾವನೆ ಧಕ್ಕೆ ಬರುವಂತೆ ಚಿತ್ರದಲ್ಲಿ ಎಲ್ಲಾ ಪಾತ್ರಗಳನ್ನು ತಿರುಚಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕಾರಣದಿಂದ ಐವರ ವಿರುದ್ಧ ಕೇಸ್‌ ದಾಖಲಿಸಿದ್ದು ಅಕ್ಟೋಬರ್‌ 27 ರಂದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್‌ ಸೂಚಿಸಿದೆ.
ಪ್ರಭಾಸ್‌, ಓಂ ರಾವತ್‌ ಸೇರಿ ಐವರ್‌ ವಿರುದ್ಧ ಕೇಸ್
ಪ್ರಭಾಸ್‌, ಓಂ ರಾವತ್‌ ಸೇರಿ ಐವರ್‌ ವಿರುದ್ಧ ಕೇಸ್ (‌PC: Om Raut Facebook)

ಪ್ರಭಾಸ್‌ ನಟನೆಯ 'ಆದಿಪುರುಷ್' ‌ ಸಿನಿಮಾ ಟೀಸರ್‌ ಎಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿದೆ. ಸಿನಿಮಾ ಟೀಸರ್‌ ಬಿಡುಗಡೆಯಾಗುವರೆಗೂ ಎಲ್ಲವೂ ಸರಿ ಇತ್ತು. ಆದರೆ ಟೀಸರ್‌ನಲ್ಲಿ ಪಾತ್ರಧಾರಿಗಳನ್ನು ಚಿತ್ರಿಸಿರುವ ರೀತಿ ನೋಡಿ ಮೆಚ್ಚುಗೆಗಿಂತ ನೆಗೆಟಿವ್‌ ಕಮೆಂಟ್‌ಗಳ ಸುರಿಮಳೆ ಹರಿದುಬರುತ್ತಿದೆ. ಇದೀಗ ಚಿತ್ರಕ್ಕೆ ಕಾನೂನಿ ಸಂಕಷ್ಟ ಕೂಡಾ ಎದುರಾಗಿದೆ.

ಟೀಸರ್‌ನಲ್ಲಿ ರಾಮಾಯಣ ಪಾತ್ರಧಾರಿಗಳನ್ನು ತಮಗೆ ತೋಚಿದಂತೆ ತೋರಿಸಿರುವುದು. ಅದರಲ್ಲೂ ಸೈಫ್‌ ಅಲಿ ಖಾನ್‌ ಮಾಡಿರುವ ರಾವಣ ಪಾತ್ರಧಾರಿಯನ್ನಂತೂ ಮುಸ್ಲಿಂ ದೊರೆಯಂತೆ ಚಿತ್ರಿಸಲಾಗಿರುವುದು ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಗೃಹಸಚಿವ ನರೋತ್ತಮ್‌ ಮಿಶ್ರಾ ಕೂಡಾ ಆದಿಪುರುಷ್‌ ಟೀಸರ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. 'ಆದಿಪುರುಷ್‌' ಸಿನಿಮಾವನ್ನು ಈ ರೀತಿ ಚಿತ್ರಿಸಿರುವುದು ರಾಮಾಯಣಕ್ಕೆ ಹಾಗೂ ಹಿಂದೂ ಧರ್ಮಕ್ಕೆ ಮಾಡಿರುವ ಅವಮಾನ. ಈ ವಿಚಾರವಾಗಿ ನಾನು ಚಿತ್ರತಂಡಕ್ಕೆ ಪತ್ರ ಬರೆಯುತ್ತಿದ್ದೇನೆ. ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಇದೀಗ ನಟ ಪ್ರಭಾಸ್‌, ಸೈಫ್‌ ಅಲಿ ಖಾನ್‌, ನಿರ್ದೇಶಕ ಓಂ ರಾವತ್‌ ಸೇರಿದಂತೆ ಐವರ ವಿರುದ್ಧ ಕೇಸ್‌ ದಾಖಲಾಗಿದೆ. ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ನೀಡಿರುವ ದೂರಿನ ಆಧಾರದ ಮೇರೆಗೆ 'ಆದಿಪುರುಷ್‌' ಚಿತ್ರತಂಡದ ವಿರುದ್ಧ ಕೇಸ್‌ ದಾಖಲಿಸಲಾಗಿದೆ. ಚಿತ್ರದ ಟೀಸರ್‌ನಲ್ಲಿ ರಾಮ, ರಾವಣ, ಸೀತೆ, ಹನುಮಂತನ ಪಾತ್ರಧಾರಿಗಳನ್ನು ಸೂಕ್ತ ರೀತಿಯಲ್ಲಿ ತೋರಿಸಿಲ್ಲ. ಹಿಂದೂಗಳ ಭಾವನೆ ಧಕ್ಕೆ ಬರುವಂತೆ ಚಿತ್ರದಲ್ಲಿ ಎಲ್ಲಾ ಪಾತ್ರಗಳನ್ನು ತಿರುಚಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಕಾರಣದಿಂದ ಐವರ ವಿರುದ್ಧ ಕೇಸ್‌ ದಾಖಲಿಸಿದ್ದು ಅಕ್ಟೋಬರ್‌ 27 ರಂದು ವಿಚಾರಣೆಗೆ ಹಾಜರಾಗುವಂತೆ ಕೋರ್ಟ್‌ ಸೂಚಿಸಿದೆ.

ಟೀಸರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ರಾಮಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್

ಅಯೋಧ್ಯೆಯ ರಾಮಮಂದಿರದ ಪ್ರಧಾನ ಅರ್ಚಕ ಸತ್ಯೇಂದ್ರ ದಾಸ್ 'ಆದಿಪುರುಷ್‌' ಚಿತ್ರವನ್ನು ನಿಷೇಧಿಸಬೇಕು ಎಂದು ಹೇಳಿದ್ದಾರೆ. ಪೌರಾಣಿಕ ಕಥೆಗಳ ಮೇಲೆ ಸಿನಿಮಾ ಮಾಡುವುದು ತಪ್ಪಲ್ಲ, ಆದರೆ ವಿವಾದ ಸೃಷ್ಟಿಸುವ ಉದ್ದೇಶದಿಂದ ಪೌರಾಣಿಕ ಕಥೆಗಳನ್ನು ತಿರುಚುವುದು ಅಕ್ಷಮ್ಯ ಅಪರಾಧ. ಚಿತ್ರದಲ್ಲಿನ ಪಾತ್ರಗಳು ರಾಮಾಯಣಕ್ಕಿಂತ ಭಿನ್ನವಾಗಿ ಕಾಣುತ್ತವೆ. ಅದನ್ನು ನೋಡುತ್ತಿದ್ದರೆ ಅದು ರಾಮಾಯಣವೇ ಅಲ್ಲ ಎಂದೆನಿಸುತ್ತಿದೆ. ಆದ್ದರಿಂದ ಈ ಚಿತ್ರವನ್ನು ನಿಷೇಧಿಸಲೇಬೇಕು ಎಂದ ಸತ್ಯೇಂದ್ರನಾಥ್, 'ಆದಿಪುರುಷ್‌' ಚಿತ್ರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

ಟ್ರೋಲಿಗರ ವಿರುದ್ಧ ತಿರುಗಿಬಿದ್ದ ಪ್ರೇಮ್‌ ಸಾಗರ್‌

'ರಾಮಾಯಣ' ಧಾರಾವಾಹಿಯ ನಿರ್ದೇಶಕ ರಮಾನಂದ್ ಸಾಗರ್ ಪುತ್ರ ಪ್ರೇಮ್ ಸಾಗರ್, ಇದೀಗ 'ಆದಿಪುರುಷ್‌' ಸಿನಿಮಾ ಬೆಂಬಲಕ್ಕೆ ನಿಂತಿದ್ದಾರೆ. ಎಲ್ಲೆಡೆ ಈ ಚಿತ್ರದ ಟೀಸರ್‌ಗೆ ಟೀಕೆಗಳು ವ್ಯಕ್ತವಾಗುತ್ತಿದ್ದರೆ, ಪ್ರೇಮ್‌ ಸಾಗರ್‌ ಮಾತ್ರ ಚಿತ್ರದ ಪರಿಶ್ರಮವನ್ನು ಮೆಚ್ಚಿದ್ದಾರೆ. ಅಷ್ಟೇ ಅಲ್ಲ ಟ್ರೋಲ್‌ ಮಾಡುತ್ತಿರುವವರ ವಿರುದ್ಧವೂ ತಿರುಗಿ ಬಿದ್ದಿದ್ದಾರೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಅವರು, "ಯಾರಾದರೂ ಏನನ್ನೂ ಮಾಡದಂತೆ ನೀವು ಹೇಗೆ ತಡೆಯುತ್ತೀರಿ? ಕಾಲಕ್ಕೆ ತಕ್ಕಂತೆ ಧರ್ಮವೂ ಬದಲಾಗುತ್ತದೆ. 'ಆದಿಪುರುಷ್‌' ಚಿತ್ರದ ನಿರ್ದೇಶಕ ಓಂ ರಾವುತ್ ತಮಗೆ ಸರಿ ಎನಿಸಿದ್ದನ್ನು ಮಾಡಿದ್ದಾರೆ" ಎಂದು ಪ್ರೇಮ್ ಸಾಗರ್ ಹೇಳಿದ್ದಾರೆ. ಅಷ್ಟೇ ಅಲ್ಲ ರಮಾನಂದ್ ಸಾಗರ್ ಅವರ 'ರಾಮಾಯಣ' ಧಾರಾವಾಹಿಯಲ್ಲಿ ಕೆಲಸ ಮಾಡಿದ ಬಹುತೇಕರು 'ಆದಿಪುರುಷ್‌'ನನ್ನು ವಿರೋಧಿಸುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ