logo
ಕನ್ನಡ ಸುದ್ದಿ  /  ಮನರಂಜನೆ  /  Chetan Ahimsa: ‘ಸಿನಿಮಾ ತಾರೆಯೊಬ್ಬರು ಬಿಜೆಪಿಗೆ ಸೇರಿದರೆ ಉದಾರವಾದಿಗಳು ಅದನ್ನು ‘ಮಾರಾಟ’ ಎನ್ನುವುದೇಕೆ?’ ಕಿಚ್ಚನ ಬಗ್ಗೆ ಚೇತನ್‌ ಮಾತು..

Chetan Ahimsa: ‘ಸಿನಿಮಾ ತಾರೆಯೊಬ್ಬರು ಬಿಜೆಪಿಗೆ ಸೇರಿದರೆ ಉದಾರವಾದಿಗಳು ಅದನ್ನು ‘ಮಾರಾಟ’ ಎನ್ನುವುದೇಕೆ?’ ಕಿಚ್ಚನ ಬಗ್ಗೆ ಚೇತನ್‌ ಮಾತು..

Apr 05, 2023 04:23 PM IST

‘ಸಿನಿಮಾ ತಾರೆಯೊಬ್ಬರು ಬಿಜೆಪಿಗೆ ಸೇರಿದರೆ ಉದಾರವಾದಿಗಳು ಅದನ್ನು ‘ಮಾರಾಟ’ ಎನ್ನುವುದೇಕೆ?’ ಕಿಚ್ಚನ ಬಗ್ಗೆ ಚೇತನ್‌ ಮಾತು..

    • ಈ ಸಲದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಸುದೀಪ್ ಹೇಳಿದ್ದಾರೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ, ನಟ ಚೇತನ್‌ ಅಹಿಂಸಾ, ಪ್ರತಿಕ್ರಿಯೆ ನೀಡಿದ್ದಾರೆ.
‘ಸಿನಿಮಾ ತಾರೆಯೊಬ್ಬರು ಬಿಜೆಪಿಗೆ ಸೇರಿದರೆ ಉದಾರವಾದಿಗಳು ಅದನ್ನು ‘ಮಾರಾಟ’ ಎನ್ನುವುದೇಕೆ?’ ಕಿಚ್ಚನ ಬಗ್ಗೆ ಚೇತನ್‌ ಮಾತು..
‘ಸಿನಿಮಾ ತಾರೆಯೊಬ್ಬರು ಬಿಜೆಪಿಗೆ ಸೇರಿದರೆ ಉದಾರವಾದಿಗಳು ಅದನ್ನು ‘ಮಾರಾಟ’ ಎನ್ನುವುದೇಕೆ?’ ಕಿಚ್ಚನ ಬಗ್ಗೆ ಚೇತನ್‌ ಮಾತು..

Chetan Ahimsa on Kichcha Sudeep: ಸಾಮಾಜಿಕ ಹೋರಾಟಗಾರ ಚೇತನ್‌ ಅಹಿಂಸಾ ಸದಾ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ಈ ನಟ, ನಿತ್ಯದ ಬೆಳವಣಿಗೆಗಳ ಬಗ್ಗೆ ಒಂದಿಲ್ಲೊಂದು ಕಮೆಂಟ್‌ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಹಿಂದೂ ಧರ್ಮದ ಬಗ್ಗೆ ನೀಡಿದ್ದ ಹೇಳಿಕೆ ಕೋರ್ಟ್‌ ಮೆಟ್ಟಿಲೇರಿತ್ತು. ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರಬಂದಿದ್ದರು. ಅದಾದ ಮೇಲೆ ರಾಹುಲ್‌ ಗಾಂಧಿ ಬಗ್ಗೆಯೂ ಮಾತನಾಡಿದ್ದರು. ಕೇಂದ್ರ ಸರ್ಕಾರವನ್ನೂ ಟೀಕಿಸಿದ್ದರು. ಅಂಬರೀಶ್ ಸ್ಮಾರಕ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದರತ. ಈಗ ಸುದೀಪ್‌ ರಾಜಕೀಯ ವಿಚಾರದ ಬಗ್ಗೆಯೂ ಮಾತನಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಒಂದು ವೇಳೆ ಕನ್ನಡದ ಬ್ಲಿಂಕ್ ಮಲಯಾಳಿ ಸಿನಿಮಾ ಆಗಿದ್ದಿದ್ರೆ, ಅಲ್ಲಿನವ್ರು ಎತ್ತಿ ಮೆರೆಸುತ್ತಿದ್ರು! ನಮ್ಮವರಿಗೆ ಏನಾಗಿದ್ಯೋ? INTERVIEW

Brundavana Serial: ಆಕಾಶ್‌ ನೆಮ್ಮದಿ ಹಾಳು ಮಾಡಲು ಭಾರ್ಗವಿ ಜೊತೆ ಗಿರಿಜಾ ಕೂಡ ಮಾಡ್ತಿದ್ದಾಳೆ ಸಂಚು; ಕೊನೆಗೂ ಸತ್ಯ ಹೇಳಿಲ್ಲ ಸುನಾಮಿ

‘ಪೌಡರ್‌’ ಕೊಟ್ಟು ಪವರ್‌ ಹೆಚ್ಚಿಸಲು ಹೊರಟ ಗುಲ್ಟು ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ; ನಗು ಉಕ್ಕಿಸುವ ಟೀಸರ್‌ ಬಿಡುಗಡೆ

ಶಿಳ್ಳೆ, ಕೇಕೆ, ಚಪ್ಪಾಳೆ.. ಬೆಳ್ಳಿತೆರೆ ಮೇಲೆ ಮತ್ತೆ ಮಿನುಗಿದ ಕಲ್ಟ್‌ ಕ್ಲಾಸಿಕ್‌ A ಚಿತ್ರ; ಥಿಯೇಟರ್‌ ಮುಂದೆ ಹಬ್ಬ ಮಾಡಿದ ಉಪ್ಪಿ ಫ್ಯಾನ್ಸ್

ಕಿಚ್ಚ ಸುದೀಪ್‌ ಬಿಜೆಪಿ ಸೇರ್ಪಡೆ ಆಗಲಿದ್ದಾರೆ... ಇಂದು ಪಕ್ಷ ಸೇರ್ಪಡೆ ಆಗಿ, ವಿಧಾನ ಸಭೆ ಚುನಾವಣೆಗೂ ಸ್ಪರ್ಧಿಸಲಿದ್ದಾರೆ ಎಂಬಿತ್ಯಾದಿ ಸುದ್ದಿ ಎಲ್ಲೆಡೆ ಹರಿದಾಡುತ್ತಿದ್ದಂತೆ, ಅಭಿಮಾನಿ ವಲಯದಲ್ಲಿಯೂ ಕುತೂಹಲ ಮೂಡಿತ್ತು. ಆದರೆ, ನಾನು ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ ಎಂದು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು. ಜತೆಗೆ ಈ ಸಲದ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಸುದೀಪ್ ಹೇಳಿದ್ದಾರೆ. ಈ ಬೆಳವಣಿಗೆಗೆ ಸಂಬಂಧಿಸಿದಂತೆ, ನಟ ಚೇತನ್‌ ಅಹಿಂಸಾ, ಪ್ರತಿಕ್ರಿಯೆ ನೀಡಿದ್ದಾರೆ.

ಚೇತನ್‌ ಅಹಿಂಸಾ ಹೇಳಿಕೆ ಏನು?

"ಸಿನಿಮಾ ತಾರೆಯೊಬ್ಬರು ಬಿಜೆಪಿ ಪಕ್ಷಕ್ಕೆ ಸೇರಿದರೆ ಉದಾರವಾದಿಗಳು ಅದನ್ನು ‘ಮಾರಾಟ’ ಎನ್ನುತ್ತಾರೆ — ಏಕೆ? ಏಕೆಂದರೆ ಈ ಉದಾರವಾದಿಗಳು ಈಗಾಗಲೇ ಕಾಂಗ್ರೆಸ್‌/ಜೆಡಿಎಸ್/ಎಎಪಿ ಅಂತಹ ವ್ಯವಸ್ಥಿತ ರಾಜಕೀಯ ಹಿಂದೂ ಶಕ್ತಿಗಳಿಗೆ 'ಮಾರಾಟ' ಆಗಿದ್ದಾರೆ.

ನೆನಪಿಡಿ: ಬಿಜೆಪಿ ಮಾತ್ರ ಶತ್ರು ಎಂದು ಹೇಳುವವರು ಕೂಡ ನಮ್ಮ ಶತ್ರುಗಳು. ನಾವು ಅನ್ಯಾಯದ ಮತ್ತು ಅಸಮಾನತೆಯ ಸಂಪೂರ್ಣ ವ್ಯವಸ್ಥೆಯ ವಿರುದ್ಧ ಹೋರಾಡಬೇಕು" ಎಂದು ಚೇತನ್‌ ಅಹಿಂಸಾ ಫೇಸ್‌ಬುಕ್‌ನಲ್ಲಿ ಈ ಬರಹವನ್ನು ಪೋಸ್ಟ್‌ ಮಾಡಿದ್ದಾರೆ.

ಅಂಬಿ ಸ್ಮಾರಕ ನಿರ್ಮಾಣಕ್ಕೆ ಸಾರ್ವಜನಿಕರ ಹಣ ಬಳಸುವ ಜರೂರತ್ತೇನಿತ್ತು?

ಕಂಠೀರವ ಸ್ಟುಡಿಯೋದಲ್ಲಿ ಸರ್ಕಾರ ಎರಡು ಎಕರೆ ಜಾಗದಲ್ಲಿ ಅಂಬಿ ಸ್ಮಾರಕ ನಿರ್ಮಾಣ ಮಾಡಿದೆ. ಇದಕ್ಕೆ 12 ಕೋಟಿ ರೂಪಾಯಿಗಳನ್ನೂ ಸರ್ಕಾರ ವ್ಯಯಿಸಿದೆ. ಇದನ್ನು ಖಂಡಿಸಿರುವ ಚೇತನ್‌ ಇತ್ತೀಚೆಗಷ್ಟೇ ಸೋಷಿಯಲ್‌ ಮೀಡಿಯಾದಲ್ಲಿ ಈ ವಿಚಾರವನ್ನು ಟೀಕಿಸಿದ್ದರು. ಅವರ ಟ್ವಿಟ್‌ ಹೀಗಿತ್ತು..

‘ಅಂಬರೀಶ್ ಯಾರನ್ನೂ ಕೈ ಚಾಚಿದವರಲ್ಲ’- ಸುಮಲತಾ

(ಅನಗತ್ಯ) ಅಂಬರೀಶ್ ಸ್ಮಾರಕಕ್ಕೆ ಸುಮಲತಾರವರು ಅಂದಾಜು ಎರಡು ಎಕರೆ ಜಾಗ & 12 ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ ‘ಕೈ ಚಾಚಿ’ ಪಡೆದಿರುವುದು ವಿಪರ್ಯಾಸವಾಗಿದೆ.

ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಬದಲು ಸುಮಲತಾರವರು ತಮ್ಮ ಸ್ವಂತ 23.4 ಕೋಟಿ ರೂ.ಗಳನ್ನು ಖರ್ಚು ಮಾಡಲು ಸಾಧ್ಯವಾಗಲಿಲ್ಲವೇ?

ಎಲ್ಲಾ ಉಳ್ಳವರಿಗೆ ಮತ್ತೆ ಸವಲತ್ತು ಒದಗಿಸುವುದು ನ್ಯಾಯವೇ? ಎಂದಿದ್ದಾರೆ..

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ