logo
ಕನ್ನಡ ಸುದ್ದಿ  /  ಮನರಂಜನೆ  /  ಭಾರತ ಕ್ರಿಕೆಟ್‌ ತಂಡದಲ್ಲಿ ಮೀಸಲಾತಿ ಇದ್ದಿದ್ದರೆ, ನಾವು ಕಪ್‌ ಗೆಲ್ಲುತ್ತಿದ್ದೆವು; ನಟ ಚೇತನ್‌ ಅಹಿಂಸಾ

ಭಾರತ ಕ್ರಿಕೆಟ್‌ ತಂಡದಲ್ಲಿ ಮೀಸಲಾತಿ ಇದ್ದಿದ್ದರೆ, ನಾವು ಕಪ್‌ ಗೆಲ್ಲುತ್ತಿದ್ದೆವು; ನಟ ಚೇತನ್‌ ಅಹಿಂಸಾ

Nov 20, 2023 06:44 AM IST

google News

ಭಾರತ ಕ್ರಿಕೆಟ್‌ ತಂಡದಲ್ಲಿ ಮೀಸಲಾತಿ ಇದ್ದಿದ್ದರೆ, ನಾವು ಕಪ್‌ ಗೆಲ್ಲುತ್ತಿದ್ದೆವು; ನಟ ಚೇತನ್‌ ಅಹಿಂಸಾ

    • ಆಸ್ಟ್ರೇಲಿಯಾ ವಿರುದ್ಧ ವಿಶ್ವಕಪ್‌ ಫೈನಲ್‌ನಲ್ಲಿ ಭಾರತ ಮುಗ್ಗರಿಸಿದೆ. ಭಾರತ ಸೋತ ಬೆನ್ನಲ್ಲೇ ಭಾರತ ಕ್ರಿಕೆಟ್‌ ತಂಡದಲ್ಲಿ ಮೀಸಲಾತಿ ಇರಬೇಕಿತ್ತು ಎಂದು ನಟ, ಸಾಮಾಜಿಕ ಕಾರ್ಯಕರ್ತ ಚೇತನ್‌ ಅಹಿಂಸಾ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಕ್ರಿಕೆಟ್‌ ತಂಡದಲ್ಲಿ ಮೀಸಲಾತಿ ಇದ್ದಿದ್ದರೆ, ನಾವು ಕಪ್‌ ಗೆಲ್ಲುತ್ತಿದ್ದೆವು; ನಟ ಚೇತನ್‌ ಅಹಿಂಸಾ
ಭಾರತ ಕ್ರಿಕೆಟ್‌ ತಂಡದಲ್ಲಿ ಮೀಸಲಾತಿ ಇದ್ದಿದ್ದರೆ, ನಾವು ಕಪ್‌ ಗೆಲ್ಲುತ್ತಿದ್ದೆವು; ನಟ ಚೇತನ್‌ ಅಹಿಂಸಾ

Chetan Ahimsa: ಕೋಟಿ ಕೋಟಿ ಭಾರತೀಯ ಕ್ರಿಕೆಟ್‌ ಪ್ರೇಮಿಗಳ ಕನಸು ನುಚ್ಚುನೂರಾಗಿದೆ. ಇನ್ನೇನು ಕೈಗೆ ಬಂದದ್ದು, ಮುಡಿಗೇರಬೇಕು ಎನ್ನುವಷ್ಟರಲ್ಲಿ ವಿಶ್ವಕಪ್‌ ಕೈಯಿಂದ ಜಾರಿದೆ. ಆಸ್ಟ್ರೇಲಿಯಾ ತಂಡ ವಿಜಯದ ಕಪ್‌ ಮುತ್ತಿಕ್ಕಿದೆ. ಇತ್ತ ಸೋಲಿನ ಪರಾಮರ್ಶೆಗಳು ನಡೆಯುತ್ತಿವೆ. ಅಭಿಮಾನಿಗಳು ಸೋಲಿನ ಹ್ಯಾಂಗ್‌ವೋವರ್‌ನಿಂದ ಆಚೆ ಬರಲು ಪ್ರಯತ್ನಿಸುತ್ತಿದ್ದಾರೆ. ಈ ನಡುವೆಯೇ ನಟ ಚೇತನ್‌ ಅವರ ಹೇಳಿಕೆಯೊಂದು ಅಚ್ಚರಿಗೆ ಕಾರಣವಾಗಿದೆ.

ಚಂದನವನದ ನಟ ಮತ್ತು ಸಾಮಾಜಿಕ ಹೋರಾಟಗಾರರಾಗಿ ಗುರುತಿಸಿಕೊಂಡಿರುವ ನಟ ಚೇತನ್‌ ಅಹಿಂಸಾ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ಪ್ರಸ್ತುತ ಘಟಿಸುವ ಬೆಳವಣಿಗೆಗಳ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಬರಹದ ರೂಪದಲ್ಲಿ ಶೇರ್‌ ಮಾಡುತ್ತಿರುತ್ತಾರೆ. ಇದೀಗ ಭಾರತ ವಿಶ್ವಕಪ್‌ನಲ್ಲಿ ಸೋತ ಬಳಿಕವೂ ತಮ್ಮ ಕಾಮೆಂಟ್‌ ದಾಟಿಸಿದ್ದಾರೆ.

ಕ್ರಿಕೆಟ್‌ನಲ್ಲಿ ಮೀಸಲಾತಿ ಬೇಕು

'ನಾನು ಮತ್ತೆ ಹೇಳುತಿದ್ದೇನೆ, ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಅಗತ್ಯವಿದೆ. ಭಾರತಕ್ಕೆ ಕ್ರಿಕೆಟ್‌ನಲ್ಲಿ ಮೀಸಲಾತಿ ಇದ್ದಿದ್ದರೆ ಭಾರತ ಸುಲಭವಾಗಿ ಈ ವಿಶ್ವ ಕಪ್ಪನ್ನು ಗೆಲ್ಲುತ್ತಿತ್ತು..' ಎಂದು ಚೇತನ್‌ ಟ್ವೀಟ್‌ ಮಾಡಿದ್ದಾರೆ. ಹೀಗೆ ಟ್ವಿಟ್‌ ಮಾಡುತ್ತಿದ್ದಂತೆ, ಸಾಕಷ್ಟು ಮಂದಿ ಅವರ ವಿರುದ್ಧ ಕಾಮೆಂಟ್‌ ಪಾಸ್‌ ಮಾಡಿದ್ದಾರೆ. ನಟ ಚೇತನ್‌ ಅವರನ್ನು ಮನೋರೋಗಿಗೆ ಹೋಲಿಕೆ ಮಾಡಿದ್ದಾರೆ. ಸುಮ್ನೆ ಅಮೆರಿಕಕ್ಕೆ ಹೋಗಿಬಿಡು ಗುರು ಇರಬೇಡ ಇಲ್ಲಿ ಎಂದೂ ಕಾಮೆಂಟ್‌ ಮಾಡಿದ್ದಾರೆ.

ರಾಷ್ಟ್ರ ನಿರ್ಮಾಣಕ್ಕೆ ಇವರ ಕೊಡುಗೆ ಏನು?

ಮೀಸಲಾತಿ ಟ್ವಿಟ್‌ಗೂ ಮುನ್ನ ಇನ್ನೊಂದು ಟ್ವೀಟ್‌ ಮಾಡಿದ್ದ ಚೇತನ್‌ ಅಹಿಂಸಾ, 'ಭಾರತೀಯ ಕ್ರಿಕೆಟಿಗರು ಇಂದು ಚೆಂಡನ್ನು ಎಸೆಯಬಹುದು/ ಹಿಡಿಯಬಹುದು/ ಹೊಡೆಯಬಹುದು ಆದರೆ ರಾಷ್ಟ್ರ ನಿರ್ಮಾಣಕ್ಕೆ ಹೆಚ್ಚಿನ ಕೊಡುಗೆ ನೀಡುವುದಿಲ್ಲ. 100+ ವರ್ಷಗಳ ಹಿಂದೆ, ಪಲ್ವಾಂಕರ್ ಬಾಲೂ- ಧಾರವಾಡ ಮೂಲದ ಬೌಲರ್ ಮತ್ತು ಭಾರತದ 1ನೇ ದಲಿತ ಕ್ರಿಕೆಟಿಗ- ಬಾಬಾಸಾಹೇಬ್ ಅವರ ಕಾರ್ಯಕರ್ತ ಮತ್ತು ಪರಿಚಯಸ್ಥರಾಗಿದ್ದರು.. ಭಾರತಕ್ಕೆ ಸಮಾಜವನ್ನು ಕಾಳಜಿ ವಹಿಸುವ ಕ್ರಿಕೆಟಿಗರು ಅಗತ್ಯವಿದೆ- ಹಣ ಮತ್ತು ವೈಭವವಲ್ಲ' ಎಂದು ಅವರು ಬರೆದಿದ್ದರು.

ನೆಟ್ಟಿಗರ ಪ್ರತಿಕ್ರಿಯೆಗಳು

- ಯಾವುದೇ ಕ್ರೀಡೆಯಲ್ಲಾಗಲಿ ಆಯ್ಕೆಯ ವಿಷಯದಲ್ಲಿ ಪ್ರಭಾವ ಬೀರುವ ಕಾಣದ ಕೈಗಳಿರುವುದು ಹೊಸತೇನಲ್ಲ ಅಥವಾ ಅದೇನು ಆಶ್ಚರ್ಯಪಡುವ ವಿಷಯವೇನೂ ಅಲ್ಲ, ಆದರೆ ಕ್ರೀಡೆಯಲ್ಲೂ ಮೀಸಲಾತಿ ಬಯಸುವ ಮನಸ್ಥಿತಿಯುಳ್ಳವರು ಪ್ರತಿಯೊಬ್ಬ ಆಟಗಾರನ ಸಾಮರ್ಥ್ಯವನ್ನು ಅವಮಾನಿಸುವ ಮನಸ್ಸುಳ್ಳವರು.

- ಚೇತನ್ ಸರ್ ಯಾಕೆ ಇಂಥ ಅಭಿಪ್ರಾಯ ಬಂತು..ಇಲ್ಲಿ ಆ ವಿಚಾರ ಯಾಕೆ.ಸುಮ್ಮನೆ ಅಸಂಬದ್ಧ ವಿಚಾರವನ್ನ ಹೇಳಿ ಯಾಕೆ ಬೇರೆಯವರ ನಾಲಗೆಗೆ ಆಹಾರ ಆಗ್ತಾ ಇದ್ದೀರಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ