logo
ಕನ್ನಡ ಸುದ್ದಿ  /  ಮನರಂಜನೆ  /  Weekend With Ramesh: ರಮ್ಯಾ ರೀಲ್‌ ‘ದನಿ’ಯಿಲ್ಲದೇ ಮುಗೀತು ವೀಕೆಂಡ್‌ ಶೋ; ಡಬ್ಬಿಂಗ್‌ ಕಲಾವಿದೆ ದೀಪಾ ಭಾಸ್ಕರ್‌ ಅವ್ರನ್ನೇ ಮರೆತ್ರಾ ಹೇಗೆ?

Weekend with Ramesh: ರಮ್ಯಾ ರೀಲ್‌ ‘ದನಿ’ಯಿಲ್ಲದೇ ಮುಗೀತು ವೀಕೆಂಡ್‌ ಶೋ; ಡಬ್ಬಿಂಗ್‌ ಕಲಾವಿದೆ ದೀಪಾ ಭಾಸ್ಕರ್‌ ಅವ್ರನ್ನೇ ಮರೆತ್ರಾ ಹೇಗೆ?

HT Kannada Desk HT Kannada

Mar 30, 2023 01:25 PM IST

ರಮ್ಯಾ ರೀಲ್‌ ‘ದನಿ’ಯಿಲ್ಲದೇ ಮುಗೀತು ಕಾರ್ಯಕ್ರಮ; ಡಬ್ಬಿಂಗ್‌ ಕಲಾವಿದೆ ದೀಪಾ ಭಾಸ್ಕರ್‌ ಅವ್ರನ್ನೇ ಮರೆತ್ರಾ ಹೇಗೆ?

  • ಇಲ್ಲಿಯವರೆಗೂ ರಮ್ಯಾ ಅವರ ಬಹುತೇಕ ಸಿನಿಮಾಗಳಿಗೆ ಡಬ್ಬಿಂಗ್‌ ಕಲಾವಿದೆಯಾಗಿ ಧ್ವನಿಯಾಗಿದ್ದವರು ನಟಿ ದೀಪಾ ಭಾಸ್ಕರ್.‌ ಆದರೆ, ಇದೇ ವೀಕೆಂಡ್‌ ವಿಥ್‌ ರಮೇಶ್‌ ಶೋದಲ್ಲಿ ಅವರ ಹೆಸರನ್ನೇ ಪ್ರಸ್ತಾಪಿಸದೆ ಶೋ ಮುಗಿಸಿದ್ದರು ಮೋಹಕ ತಾರೆ..

ರಮ್ಯಾ ರೀಲ್‌ ‘ದನಿ’ಯಿಲ್ಲದೇ ಮುಗೀತು ಕಾರ್ಯಕ್ರಮ; ಡಬ್ಬಿಂಗ್‌ ಕಲಾವಿದೆ ದೀಪಾ ಭಾಸ್ಕರ್‌ ಅವ್ರನ್ನೇ ಮರೆತ್ರಾ ಹೇಗೆ?
ರಮ್ಯಾ ರೀಲ್‌ ‘ದನಿ’ಯಿಲ್ಲದೇ ಮುಗೀತು ಕಾರ್ಯಕ್ರಮ; ಡಬ್ಬಿಂಗ್‌ ಕಲಾವಿದೆ ದೀಪಾ ಭಾಸ್ಕರ್‌ ಅವ್ರನ್ನೇ ಮರೆತ್ರಾ ಹೇಗೆ?

Weekend with Ramesh: ವೀಕೆಂಡ್‌ ವಿಥ್‌ ರಮೇಶ್‌ ಸೀಸನ್‌ 5ರ ಮೊದಲನೇ ಏಪಿಸೋಡ್‌ಗೆ ಮೋಹಕ ತಾರೆ ರಮ್ಯಾ ಅತಿಥಿಯಾಗಿ ಆಗಮಿಸಿದ್ದರು. ಬಾಲ್ಯ, ಶಾಲೆ, ಕಾಲೇಜು, ಸಿನಿಮಾ, ರಾಜಕೀಯ, ವಿವಾದ ಹೀಗೆ ಎಲ್ಲ ವಿಚಾರಗಳ ಬಗ್ಗೆ ನಿರರ್ಗಳವಾಗಿ ಮಾತನಾಡಿದ್ದರು. ಕನ್ನಡಕ್ಕಿಂತ ಇಂಗ್ಲಿಷ್‌ ಸಾಲುಗಳನ್ನೇ ಹೆಚ್ಚು ಮಾತನಾಡಿ ಟ್ರೋಲ್‌ ಸಹ ಆಗಿದ್ದರು ಈ ಮೋಹಕ ತಾರೆ. ಆದರೆ, ಬಹುಮುಖ್ಯವಾದ ಒಂದು ವಿಚಾರವನ್ನು ಮಾತನಾಡದೇ ರಮ್ಯಾ ಕಾರ್ಯಕ್ರಮು ಮುಗಿಸಿದ್ದರು! ಆ ವಿಚಾರ ಇದೀಗ ಸೋಷಿಯಲ್‌ ಮೀಡಿಯಾ ಮೂಲಕ ಮುನ್ನೆಲೆಗೆ ಬಂದಿದೆ.

ಟ್ರೆಂಡಿಂಗ್​ ಸುದ್ದಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಮತ್ತಷ್ಟು ಹಿರಿದಾಯ್ತು ಕಣ್ಣಪ್ಪ ಸಿನಿಮಾ ತಾರಾಬಳಗ; ಅಕ್ಷಯ್‌ ಕುಮಾರ್‌, ಪ್ರಭಾಸ್‌ ಬಳಿಕ ಕಾಜಲ್‌ ಅಗರ್ವಾಲ್ ಎಂಟ್ರಿ

ಹೌದು, ಸಿನಿಮಾ ಎಂದ ಮೇಲೆ ಇಲ್ಲಿ ಆಂಗಿಕ ಅಭಿನಯದಷ್ಟೇ ಧ್ವನಿಯ ಮೇಲೆಯೂ ಹಿಡಿತ ಬಹುಮುಖ್ಯ. ಧ್ವನಿ ಮೇಲೆ ಹಿಡಿತ ಇಲ್ಲದ ನಟನೆ ಬಲ್ಲ ಎಷ್ಟೋ ಮಂದಿ ತೆರೆಮೇಲೆ ಕಾಣಿಸಿಕೊಂಡರೆ, ಅವರಿಗೆ ಹಿನ್ನೆಲೆಯಾಗಿ ಧ್ವನಿ ಕೊಡುವವರೇ ಡಬ್ಬಿಂಗ್‌ ಕಲಾವಿದರು. ಹಾಗೆಯೇ ಇಲ್ಲಿಯವರೆಗೂ ರಮ್ಯಾ ಅವರ ಬಹುತೇಕ ಸಿನಿಮಾಗಳಿಗೆ ಧ್ವನಿಯಾಗಿದ್ದವರು ನಟಿ ದೀಪಾ ಭಾಸ್ಕರ್.‌ ನಟಿಯಾಗಿಯೂ ದೀಪಾ ಭಾಸ್ಕರ್‌ ಹೆಸರು ಮಾಡಿದವರು.

ಆದರೆ, ತಮ್ಮ ಜೀವನದಲ್ಲಿ ಬಂದ ಅದೆಷ್ಟೋ ಮಂದಿಯ ಬಗ್ಗೆ ಮಾತನಾಡಿದ ರಮ್ಯಾ, ತೆರೆಮೇಲೆ ತಮಗೆ ಧ್ವನಿಯಾದ ದೀಪಾ ಭಾಸ್ಕರ್‌ ಬಗ್ಗೆ ವೀಕೆಂಡ್‌ ವಿಥ್‌ ರಮೇಶ್‌ ಶೋದಲ್ಲಿ ತುಟಿ ಬಿಚ್ಚಿಲ್ಲ. ಈ ವಿಚಾರ ಇದೀಗ ಸೋಷಿಯಲ್‌ ಮೀಡಿಯಾದಲ್ಲಿಯೂ ಸುದ್ದಿಯಾಗುತ್ತಿದೆ. ಬೇಕು ಅಂತಲೇ ಮರೆತ್ರಾ? ಅಥವಾ ಇದು ಜಾಣ ಮರೆವೋ? ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಈ ವಿಚಾರವನ್ನು ಸಮೀರ್‌ ಎನ್‌.ಎಂ ಮತ್ತು ಕುಮದವಲ್ಲಿ ಅರುಣ್‌ ಮೂರ್ತಿ ಎಂಬುವವರು ಸುದೀರ್ಘ ಬರಹದ ಜತೆಗೆ ಎಲ್ಲರ ಮುಂದಿಟ್ಟಿದ್ದಾರೆ.

ಸಮೀರ್‌ ಎನ್‌.ಎಂ ಬರೆದ ಬರಹ..

‘’ರಮ್ಯಾ ಅವರು ಆಫ್‌ ಸ್ಕ್ರೀನ್‌ನಲ್ಲಿ ಮಾತ್ರ ಅಲ್ಲ ಆನ್‌ ಸ್ಕ್ರೀನ್‌ ಅಲ್ಲೂ ಕನ್ನಡ ಮಾತಾಡಿರೋದು ತುಂಬಾ ಕಡಿಮೆ. ಯಾಕಂದ್ರೆ ಅವರಿಗೆ ಅನೇಕ ಚಿತ್ರಗಳಲ್ಲಿ ವಾಯ್ಸ್ ಕೊಟ್ಟಿರೋದು ದೀಪಾ ಅವರು’’ ಎಂದಿದ್ದಾರೆ ಸಮೀರ್.ಎನ್‌.ಎಂ.

ಇದು ಜಾಣ ಮರೆವೋ ಎಂದು ಪ್ರಶ್ನಿಸಿದ ಕುಮುದವಲ್ಲಿ..

"ಸಮೀರ್ ಅವರ ಈ ಪೋಸ್ಟ್ ಈಗ ನೋಡಿದೆ. ಈ ಬಗ್ಗೆ ನಾನೂ ಹೇಳಬೇಕೆಂದುಕೊಂಡಿದ್ದೆ ಹಾಗೂ ಜೀ ಕನ್ನಡಕ್ಕೆ ಈ ಪ್ರಶ್ನೆ ಕೇಳಬೇಕು ಅಂದುಕೊಂಡಿದ್ದೆ. ರಮ್ಯಾ ಅವರ ವೀಕೆಂಡ್ ವಿತ್ ರಮೇಶ್ ಎರಡೂ ಎಪಿಸೋಡ್ ನೋಡಿದೆ. ಕಡೆಯವರೆಗೂ ದೀಪಾ ಅವರನ್ನು ಕರೆಸಬಹುದು ಎಂದು ಕಾಯುತ್ತಲೇ ಇದ್ದೆ. ಆದರೆ.. ಇಲ್ಲ, ಬರಲಿಲ್ಲ! ಕಾರ್ಯಕ್ರಮ "ರಮ್ಯಾ ಅವರ ದನಿ"ಯಿಲ್ಲದೇ ಮುಗೀತು. ರಮ್ಯಾ ಕಾರ್ಯಕ್ರಮದಲ್ಲಿ ಹೇಗಾದರೂ ಮಾತಾಡಲಿ ಅದು ಅವರ ವೈಯಕ್ತಿಕ ಕೆಪಾಸಿಟಿ! ಆದರೆ ಅವರ ಸಿನಿಮಾ ಕ್ಷೇತ್ರದ ಜನಪ್ರಿಯತೆಗೆ ಅವರ ಬಹುತೇಕ ಸಿನಿಮಾಗಳಿಗೆ ಡಬ್ಬಿಂಗ್ ಮಾಡಿದ ಕಲಾವಿದೆಯೂ ಕಾರಣ ಎಂಬುದನ್ನು ಚಾನೆಲ್ ನವರು ಯಾಕೆ ಮರೆತರು? ಅಥವಾ ಇದು ರಮ್ಯಾ ಅವರ ಜಾಣ ಮರೆವೋ? ಒಟ್ಟಿನಲ್ಲಿ ಡಬ್ಬಿಂಗ್ ಕಲಾವಿದರಿಗೆ ಮನ್ನಣೆ ಕೊಡೋಕೆ ಇವತ್ತಿಗೂ ಯೋಚಿಸುತ್ತಾರೆ ಅನ್ನೋದು ಸಾಬೀತಾಯ್ತು

ಸರ್ವಮಂಗಳ ತೀರಿಕೊಂಡಾಗ ಮಾಲಾಶ್ರೀ ತನ್ನ ಗಂಟಲೇ ಕಳೆದುಹೋಯ್ತೂ ಅಂತ ಹಲುಬಿದ್ಜರು. ಶ್ರುತಿ ಸೇರಿದಾಗ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಗೀತಾ ಹೃದಯ ಬಿರಿಯುವಂತೆ ಅಳುವ ಮನೋಜ್ಞ ದೃಶ್ಯಕ್ಕೆ ಅಷ್ಟೇ ಪ್ರಭಾವಶಾಲಿಯಾಗಿ ಧ್ವನಿ ನೀಡಿದ ಗಾಯತ್ರಿ ಪ್ರಭಾಕರ್ ಗೆ ಖುದ್ದು ಗೀತಾ ಅವರೇ ಧನ್ಯವಾದಗಳನ್ನು ಅರ್ಪಿಸಿದರಂತೆ. ಅಷ್ಟೇಕೆ ಮೊನ್ಮೊನ್ನೆ ತಮಿಳಿನ ವಿಕ್ರಮ್, ತೆಲುಗಿನ ನಾನಿ ನಮ್ಮ ಸುಮಂತ್ ಭಟ್ ಅನ್ನು ವೇದಿಕೆಗೆ ಕರೆಸಿ ಹೊಗಳ್ತಾರೆ. ಸ್ಪರ್ಶ ಆರ್.ಕೆ ಯನ್ನ ತ್ರಿಷಾ... ಇವರೇ ನನ್ನ ದನಿ ಅಂತ ಕೊಂಡಾಡ್ತಾಳೆ. ಅಂದರೆ, ಡಬ್ಬಿಂಗ್ ಕಲಾವಿದರು ತಮ್ಮ ನಟನೆಗೆ ಎಷ್ಟು ಮುಖ್ಯ ಎಂಬುದನ್ನು ಈ ನಟ ನಟಿಯರು ಅರ್ಥಮಾಡಿಕೊಂಡಿದ್ದಾರೆ ಅಂತಾಯ್ತು. ನಿಜಕ್ಕೂ ಹೆಮ್ಮೆಯೆನಿಸಿತು.

ಈಗ ಮತ್ತೆ ವಿಷಯಕ್ಕೆ ಬರೋಣ! ರಮ್ಯಾ ಅವರು ನಿಜಕ್ಕೂ ಸಹಜ ನಟಿ. ಅವರ ಅಭಿನಯದ ಬಗ್ಗೆ ದೂಸರಾ ಮಾತಿಲ್ಲ. ಆದರೆ ಅದು ಸಂಪೂರ್ಣವಾಗೋದು ಧ್ವನಿಯಲ್ಲೂ ಏರಿಳಿತಗಳು ಸರಿಯಾಗಿ ಬಂದಾಗಲೇ. ಆ ಕೆಲಸವನ್ನು ದೀಪಾ ಮಾಡಿದ್ದಾರೆ. ಅದೇ ಕೆಲಸಕ್ಕೆ ಅವರಿಗೆ ರಾಜ್ಯ ಪ್ರಶಸ್ತಿ ಬಂದಿದೆ. ಆದರೆ ರಮ್ಯಾ ಅವರು ಈವರೆಗೂ ಇದರ ಬಗ್ಗೆ ಎಂದೂ ಮಾತನಾಡಿಲ್ಲ. ಅಟ್ಲೀಸ್ಟ್ ಈ ವೀಕೆಂಡ್ ನಲ್ಲಾದ್ರೂ ಹೇಳ್ತಾರೇನೋ ಅಂದುಕೊಂಡಿದ್ದೆ.. ಊಹ್ಞೂಂ ಇಲ್ಲ! ಕಾರ್ಯಕ್ರಮ ನಿರ್ವಾಹಕರು ಎಲ್ಲೆಲ್ಲಿಂದಲೋ ಸುದ್ದಿ ತಂದು, ಯಾರ್ಯಾರನ್ನೋ ಕರೆಸಿ ಮಾತಡಿಸಿದ್ರು. ಆದರೆ ರಮ್ಯಾಳ ದನಿಯನ್ನೇ ಮರೆತರು. ಇಷ್ಟು ಹೇಳಬೇಕನಿಸಿತು ಹೇಳಿದೆ. ದಯವಿಟ್ಟು ನಟರು/ನಟಿಯರು ತಮಗೆ ದನಿ ನೀಡುವ ಕಲಾವಿದರಿಗೆ ಗೌರವ ಕೊಡುವುದನ್ನು ರೂಢಿಸಿಕೊಳ್ಳಿ’’ ಎಂದು ಸುದೀರ್ಘ ಬರಹದ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ