logo
ಕನ್ನಡ ಸುದ್ದಿ  /  ಮನರಂಜನೆ  /  Aamir Khan South Movie: ಪ್ರಶಾಂತ್‌ ನೀಲ್‌ ಚಿತ್ರದಲ್ಲಿ ಆಮೀರ್‌ ಖಾನ್‌!; ಎನ್‌ಟಿಆರ್‌ಗೆ ವಿಲನ್‌ ಆಗ್ತಾರಾ ಮಿಸ್ಟರ್‌ ಫರ್ಫೆಕ್ಷನಿಸ್ಟ್‌?

Aamir Khan South Movie: ಪ್ರಶಾಂತ್‌ ನೀಲ್‌ ಚಿತ್ರದಲ್ಲಿ ಆಮೀರ್‌ ಖಾನ್‌!; ಎನ್‌ಟಿಆರ್‌ಗೆ ವಿಲನ್‌ ಆಗ್ತಾರಾ ಮಿಸ್ಟರ್‌ ಫರ್ಫೆಕ್ಷನಿಸ್ಟ್‌?

HT Kannada Desk HT Kannada

Dec 31, 2022 04:57 PM IST

ಪ್ರಶಾಂತ್‌ ನೀಲ್‌ ಚಿತ್ರದಲ್ಲಿ ಆಮೀರ್‌ ಖಾನ್‌!; ಎನ್‌ಟಿಆರ್‌ಗೆ ವಿಲನ್‌ ಆಗ್ತಾರಾ ಮಿಸ್ಟರ್‌ ಫರ್ಫೆಕ್ಷನಿಸ್ಟ್‌?

    • ಸೋಲಿನ ಬಳಿಕ ಆಮೀರ್‌ ಖಾನ್‌ ಖಿನ್ನತೆಗೆ ಜಾರಿದರು, ಇನ್ನೆಂದೂ ಸಿನಿಮಾ ಮಾಡಲ್ಲ, ಬರೀ ಸಿನಿಮಾ ನಿರ್ಮಾಣದ ಕಡೆಗಷ್ಟೇ ಮುಖ ಮಾಡಲಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದವು. ಇದೀಗ ಇದೇ ಆಮೀರ್‌ ಖಾನ್‌ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರಾ?
ಪ್ರಶಾಂತ್‌ ನೀಲ್‌ ಚಿತ್ರದಲ್ಲಿ ಆಮೀರ್‌ ಖಾನ್‌!; ಎನ್‌ಟಿಆರ್‌ಗೆ ವಿಲನ್‌ ಆಗ್ತಾರಾ ಮಿಸ್ಟರ್‌ ಫರ್ಫೆಕ್ಷನಿಸ್ಟ್‌?
ಪ್ರಶಾಂತ್‌ ನೀಲ್‌ ಚಿತ್ರದಲ್ಲಿ ಆಮೀರ್‌ ಖಾನ್‌!; ಎನ್‌ಟಿಆರ್‌ಗೆ ವಿಲನ್‌ ಆಗ್ತಾರಾ ಮಿಸ್ಟರ್‌ ಫರ್ಫೆಕ್ಷನಿಸ್ಟ್‌?

Aamir Khan South Movie: 2022ರಲ್ಲಿ ಸೌತ್‌ನ ಸಿನಿಮಾಗಳದ್ದೇ ಅಬ್ಬರ. ಬಾಲಿವುಡ್‌ನ ಸ್ಟಾರ್‌ಗಳ ಸಿನಿಮಾಗಳು ಈ ವರ್ಷ ಹೆಚ್ಚು ಸದ್ದು ಮಾಡಲಿಲ್ಲ. ಬೆರಳೆಣಿಕೆ ಸಿನಿಮಾಗಳು ಮಾತ್ರ ಗಳಿಕೆಯಲ್ಲಿ ಮುಂದಡಿ ಇಟ್ಟರೆ, ಇನ್ನುಳಿದ ಬಹುತೇಕ ಸಿನಿಮಾಗಳು ಪ್ಲಾಪ್‌ ಪಟ್ಟಿ ಸೇರಿ ಹೀನಾಯ ಸೋಲುಂಡವು. ಅದರಲ್ಲಿ ಆಮೀರ್‌ ಖಾನ್‌ ಸಹ ಒಬ್ಬರು. ಬಹುನಿರೀಕ್ಷೆ ಮೂಡಿಸಿದ್ದ ಲಾಲ್‌ ಸಿಂಗ್‌ ಚಡ್ಡಾ ಸಿನಿಮಾ, ಬಾಕ್ಸ್‌ ಆಫೀಸ್‌ನಲ್ಲಿ ಮಕಾಡೆ ಮಲಗಿತು.

ಟ್ರೆಂಡಿಂಗ್​ ಸುದ್ದಿ

ಒಂದು ವೇಳೆ ಕನ್ನಡದ ಬ್ಲಿಂಕ್ ಮಲಯಾಳಿ ಸಿನಿಮಾ ಆಗಿದ್ದಿದ್ರೆ, ಅಲ್ಲಿನವ್ರು ಎತ್ತಿ ಮೆರೆಸುತ್ತಿದ್ರು! ನಮ್ಮವರಿಗೆ ಏನಾಗಿದ್ಯೋ? INTERVIEW

Brundavana Serial: ಆಕಾಶ್‌ ನೆಮ್ಮದಿ ಹಾಳು ಮಾಡಲು ಭಾರ್ಗವಿ ಜೊತೆ ಗಿರಿಜಾ ಕೂಡ ಮಾಡ್ತಿದ್ದಾಳೆ ಸಂಚು; ಕೊನೆಗೂ ಸತ್ಯ ಹೇಳಿಲ್ಲ ಸುನಾಮಿ

‘ಪೌಡರ್‌’ ಕೊಟ್ಟು ಪವರ್‌ ಹೆಚ್ಚಿಸಲು ಹೊರಟ ಗುಲ್ಟು ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ; ನಗು ಉಕ್ಕಿಸುವ ಟೀಸರ್‌ ಬಿಡುಗಡೆ

ಶಿಳ್ಳೆ, ಕೇಕೆ, ಚಪ್ಪಾಳೆ.. ಬೆಳ್ಳಿತೆರೆ ಮೇಲೆ ಮತ್ತೆ ಮಿನುಗಿದ ಕಲ್ಟ್‌ ಕ್ಲಾಸಿಕ್‌ A ಚಿತ್ರ; ಥಿಯೇಟರ್‌ ಮುಂದೆ ಹಬ್ಬ ಮಾಡಿದ ಉಪ್ಪಿ ಫ್ಯಾನ್ಸ್

ಸೋಲಿನ ಬಳಿಕ ಆಮೀರ್‌ ಖಾನ್‌ ಖಿನ್ನತೆಗೆ ಜಾರಿದರು, ಇನ್ನೆಂದೂ ಸಿನಿಮಾ ಮಾಡಲ್ಲ, ಬರೀ ಸಿನಿಮಾ ನಿರ್ಮಾಣದ ಕಡೆಗಷ್ಟೇ ಮುಖ ಮಾಡಲಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದವು. ಇದೀಗ ಇದೇ ಆಮೀರ್‌ ಖಾನ್‌ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರಾ? ಹೀಗೊಂದು ಸುದ್ದಿ ಬಾಲಿವುಡ್‌ನಿಂದ ಬಂದಿಲ್ಲ. ಬದಲಿಗೆ ಸೌತ್‌ ಸಿನಿಮಾ ಅಂಗಳಿದಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಆ ಸುದ್ದಿ ಏನೆಂದರೆ ಆಮೀರ್‌ ಖಾನ್‌ ಸೌತ್‌ ಸಿನಿಮಾದಲ್ಲಿ ನಟಿಲಿದ್ದಾರಂತೆ!

ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ ಎಂಬ ಮಾತಿನಂತೆ, ಸೋಷಿಯಲ್‌ ಮೀಡಿಯಾದಲ್ಲಿ ಈ ವಿಚಾರ ಹರಿದಾಡುತ್ತಿದೆ. ಹಾಗಾದರೆ ಯಾರ ಸಿನಿಮಾದಲ್ಲಿ ಆಮೀರ್‌ ನಟಿಸಲಿದ್ದಾರೆ? ಅದಕ್ಕೂ ಉತ್ತರವಿದೆ. ಕೆಜಿಎಫ್‌ ಸಿನಿಮಾ ಮೂಲಕವೇ ಇಡೀ ದೇಶದ ಗಮನ ಸೆಳೆದ ನಿರ್ದೇಶಕ ಪ್ರಶಾಂತ್‌ ನೀಲ್‌ ಇದೀಗ, ತಮ್ಮ ಮುಂಬರುವ ಸಿನಿಮಾದಲ್ಲಿ ಆಮೀರ್‌ ಅವರನ್ನು ಸೇರಿಸಿಕೊಳ್ಳಲಿದ್ದಾರಂತೆ. ಈ ವಿಚಾರ ಟಾಲಿವುಡ್‌ ಅಂಗಳದಲ್ಲಿ ದೊಡ್ಡ ಮಟ್ಟದ ಕುತೂಹಲಕ್ಕೂ ಕಾರಣವಾಗಿದೆ.

ಪ್ರಶಾಂತ್‌ ನೀಲ್‌ ಮತ್ತು ಜೂ. ಎನ್‌ಟಿಆರ್‌ ಒಟ್ಟಿಗೆ ಸಿನಿಮಾ ಮಾಡುತ್ತಿರುವುದು ಈಗಾಗಲೇ ಗೊತ್ತಿರುವ ವಿಚಾರ. ಈ ಜೋಡಿಯ ಸಿನಿಮಾ ಪೋಸ್ಟರ್‌ ಸಹ ಬಿಡುಗಡೆ ಆಗಿದೆ. ಈಗ ಇದೇ ಸಿನಿಮಾಕ್ಕೆ ಆಮೀರ್‌ ಖಾನ್‌ ಅವರನ್ನು ಕರೆ ತರಲಿದ್ದಾರಂತೆ ಪ್ರಶಾಂತ್‌ ನೀಲ್.‌ ಹಾಗಾದರೆ ಆಮೀರ್‌ ಪಾತ್ರವೇನು? ಸದ್ಯಕ್ಕೆ ಹರಿದಾಡುತ್ತಿರುವ ಸುದ್ದಿ ಪ್ರಕಾರ, ವಿಶೇಷ ಪಾತ್ರವೊಂದರಲ್ಲಿ ನಟಿಸಿಲಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಎನ್‌ಟಿಆರ್‌ ಎದುರು ವಿಲನ್‌ ಆಗಿಯೂ ಅವರನ್ನು ಕರೆತರುವ ಬಗ್ಗೆಯೂ ಮಾತುಕತೆಗಳು ನಡೆದಿವೆಯಂತೆ. ಆದರೆ ಇನ್ನಷ್ಟೇ ಈ ವಿಚಾರ ಅಧಿಕೃತವಾಗಿ ಘೋಷಣೆ ಆಗಬೇಕಿದೆ.

ಸದ್ಯಕ್ಕೆ ಸಲಾರ್‌ ಸಿನಿಮಾ ಕೆಲಸಗಳಲ್ಲಿ ಪ್ರಶಾಂತ್‌ ನೀಲ್‌ ಬಿಜಿಯಾಗಿದ್ದಾರೆ. ಪ್ರಭಾಸ್‌ ಜತೆಗಿನ ಈ ಸಿನಿಮಾ ಬಹುತೇಕ ಶೂಟಿಂಗ್‌ ಮುಕ್ತಾಯದ ಹಂತದಲ್ಲಿದೆ. ಈ ಸಿನಿಮಾ ಮುಗಿಯುತ್ತಿದ್ದಂತೆ, 2023ರಲ್ಲಿ ಜೂ. ಎನ್‌ಟಿಆರ್‌ ಜತೆಗಿನ ಇನ್ನೂ ಶೀರ್ಷಿಕೆ ಅಂತಿಮವಾಗದ ಸಿನಿಮಾ ಕೈಗೆತ್ತಿಕೊಳ್ಳಲಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ