logo
ಕನ್ನಡ ಸುದ್ದಿ  /  Entertainment  /  Discursions Going On Telugu Superstar Mahesh Babu Hair Style

Mahesh Babu wig: ಮಹೇಶ್‌ ಬಾಬು ವಿಗ್‌ ಬಳಸ್ತಾರಾ...ಫೋಟೋದಲ್ಲಿ ಅಸಲಿ ಯಾವ್ದು ನಕಲಿ ಯಾವ್ದು...ಮೇಕಪ್‌ ಮ್ಯಾನ್‌ ಹೇಳಿದ ಸತ್ಯವೇನು?

HT Kannada Desk HT Kannada

Nov 24, 2022 02:59 PM IST

ತೆಲುಗು ಸ್ಟಾರ್‌ ನಟ ಮಹೇಶ್ ಬಾಬು

    • ಮಹೇಶ್ ಬಾಬು ಅವರ ತಲೆಗೂದಲಿನ ಬಗ್ಗೆ ಕೆಲವು ವರ್ಷಗಳಿಂದ ಚರ್ಚೆ ನಡೆಯುತ್ತಲೇ ಇದೆ. ಮಹೇಶ್ ಬಾಬು ಅವರ ಸಿನಿಮಾಗಳನ್ನು ನೋಡಿದರೆ ಅವರು ವಿಗ್‌ ಧರಿಸಿರುವಂತೆ ಕಂಡುಬರುತ್ತದೆ. ಇದಕ್ಕೆ ಪೂರಕ ಎಂಬಂತೆ ಮಹೇಶ್ ಬಾಬು ಅವರ ಫೋಟೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.
ತೆಲುಗು ಸ್ಟಾರ್‌ ನಟ ಮಹೇಶ್ ಬಾಬು
ತೆಲುಗು ಸ್ಟಾರ್‌ ನಟ ಮಹೇಶ್ ಬಾಬು (PC: Facebook)

ಚಿತ್ರರಂಗದಲ್ಲಿ ಮಹೇಶ್ ಬಾಬು ಬಗ್ಗೆ ಗೊತ್ತಿಲ್ಲದವರೇ ಇಲ್ಲ. ತಮ್ಮ ನಟನೆಯಿಂದ ಕೋಟ್ಯಂತರ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ಮಹೇಶ್ ಬಾಬು ಅವರಿಗೆ ಮಹಿಳಾ ಅಭಿಮಾನಿಗಳೇ ಹೆಚ್ಚು. ತೆಲುಗಿನ ಈ ಸೂಪರ್‌ಸ್ಟಾರ್‌ಗೆ ಈಗ 47 ವರ್ಷಗಳು. ಇಷ್ಟಾದರೂ ಅವರು ಇನ್ನೂ 25ರ ಯುವಕನಂತೆ ಕಾಣುತ್ತಾರೆ. ದಿನೇ ದಿನ ಮಹೇಶ್ ಬಾಬು ಕ್ರೇಜ್‌ ಹೆಚ್ಚುತ್ತಲೇ ಇದೆ.

ಟ್ರೆಂಡಿಂಗ್​ ಸುದ್ದಿ

Brundavana Serial: ಭಾರ್ಗವಿಯ ದಾಳ, ಸಹನಾಳ ಪ್ರೀತಿ ಆಕಾಶ್‌ ಎಂದು ತಿಳಿಯದೇ ಸಹಾಯ ಮಾಡುವ ಪುಷ್ಪಾ, ಗಂಡನನ್ನೇ ದೂರ ಮಾಡಿಕೊಳ್ತಾಳಾ?

Darshan: ಮಳೆಗಾಲ ಶುರುವಾಗುತ್ತಿದೆ, ದಸರಾ ಅಂಬಾರಿ ಆನೆ ಅರ್ಜುನನಿಗೆ ಸಮಾಧಿ ನಿರ್ಮಾಣ ಯಾವಾಗ? ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಪ್ರಶ್ನೆ

Amruthadhaare: ನನ್ನ ಶ್ರಮಕ್ಕೆ ಸಾಮರ್ಥ್ಯಕ್ಕೆ ಬೆಲೆಯೇ ಇಲ್ವ? ಭೂಮಿಕಾಳ ಬೇಸರದ ಮಾತಿಗೆ ಕಂಗಲಾದ ಗೌತಮ್‌ ದಿವಾನ್‌

Kaatera: ‘ನಾನು ಗೆದ್ದ ಎತ್ತಿನ ಬಾಲ ಹಿಡಿಯಲ್ಲ, ಅದು ಮುಗಿದ ಅಧ್ಯಾಯ!’ ಕಾಟೇರ ತಂಡದ ದಿಢೀರ್‌ ಸುದ್ದಿಗೋಷ್ಠಿಯಲ್ಲಿ ದರ್ಶನ್‌ ಸ್ಪಷ್ಟನೆ

ಇನ್ನು ಮಹೇಶ್ ಬಾಬು ಅವರ ತಲೆಗೂದಲಿನ ಬಗ್ಗೆ ಕೆಲವು ವರ್ಷಗಳಿಂದ ಚರ್ಚೆ ನಡೆಯುತ್ತಲೇ ಇದೆ. ಮಹೇಶ್ ಬಾಬು ಅವರ ಸಿನಿಮಾಗಳನ್ನು ನೋಡಿದರೆ ಅವರು ವಿಗ್‌ ಧರಿಸಿರುವಂತೆ ಕಂಡುಬರುತ್ತದೆ. ಇದಕ್ಕೆ ಪೂರಕ ಎಂಬಂತೆ ಮಹೇಶ್ ಬಾಬು ಅವರ ಫೋಟೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆ ಫೋಟೋದಲ್ಲಿ ಮಹೇಶ್ ಬಾಬು ಕೂದಲು ಬಹುತೇಕ ಉದುರಿಹೋಗಿದೆ. ಅದೇ ರೀತಿಯ ಮತ್ತೊಂದು ಫೋಟೋದಲ್ಲಿ ಮಹೇಶ್ ಬಾಬು ತಲೆ ತುಂಬಾ ಕೂದಲಿದೆ. ಆದರೆ ಈ ಫೋಟೋ ನೋಡಿದವರಿಗೆ ಇದರಲ್ಲಿ ಅಸಲಿ ಯಾವುದು..? ನಕಲಿ ಯಾವುದು..? ಎಂದು ಗೊಂದಲ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ಆದರೆ ಮೂಲಗಳ ಪ್ರಕಾರ ಮಹೇಶ್ ಬಾಬು, ಕ್ಯೂ6 ಹೇರ್ ಪ್ಯಾಚ್ ತಂತ್ರಜ್ಞಾನದ ಮೂಲಕ ನಾನ್‌-ಸರ್ಜಿಕಲ್‌ ಹೇರ್‌ ಫಿಕ್ಸಿಂಗ್‌ ಮಾಡಿಸಿಕೊಂಡಿದ್ದಾರಂತೆ. ಮಹೇಶ್ ಬಾಬು ತಂದೆ ಕೃಷ್ಣ ಅವರ ಪರ್ಸನಲ್‌ ಮೇಕಪ್‌ ಮ್ಯಾನ್‌ ಚೆಬ್ರೋಲ್‌ ಮಾಧವ್‌ ರಾವ್‌, ಕೂಡಾ ತಂದೆ ಕೃಷ್ಣ ಅವರಂತೆ ಮಹೇಶ್‌ ಬಾಬು ಕೂಡಾ ವಿಗ್‌ ಧರಿಸುತ್ತಾರೆ ಎಂದಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ಮಹೇಶ್‌ ಬಾಬು ಅವರದ್ದು ನಿಜವಾದ ಕೂದಲು, ಯಾರೋ ಅವರ ಫೋಟೋವನ್ನು ಬೇಕಂತಲೇ ಹೀಗೆ ಮಾಡಿದ್ದಾರೆ ಎನ್ನುತ್ತಿದ್ದಾರೆ.

ಮಹೇಶ್‌ ಬಾಬು ಸಿನಿಮಾ ವಿಚಾರಕ್ಕೆ ಬರುವುದಾದರೆ, ಇದೇ ವರ್ಷ ಮೇ ತಿಂಗಳಲ್ಲಿ ಕೀರ್ತಿ ಸುರೇಶ್‌ ಜೊತೆ ನಟಿಸಿದ್ದ 'ಸರ್ಕಾರುವಾರಿಪಾಟ' ಸಿನಿಮಾ ತೆರೆ ಕಂಡಿತ್ತು. ಸದ್ಯಕ್ಕೆ ಅವರು ತ್ರಿವಿಕ್ರಮ್‌ ಶ್ರೀನಿವಾಸ್‌ ಅವರೊಂದಿಗೆ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 2005 ರಲ್ಲಿ ತೆರೆ ಕಂಡ ಅತಡು, 2010ರಲ್ಲಿ ತೆರೆ ಕಂಡ 'ಖಲೇಜ' ಸಿನಿಮಾ ನಂತರ ಸುಮಾರು 12 ವರ್ಷಗಳ ಬಳಿಕ ಮತ್ತೆ ತ್ರಿವಿಕ್ರಮ್‌ ಹಾಗೂ ಮಹೇಶ್‌ ಬಾಬು ಜೋಡಿ ಮತ್ತೆ ತೆರೆ ಮೇಲೆ ಮೋಡಿ ಮಾಡಲು ಹೊರಟಿದೆ. ಹಾರಿಕಾ ಅಂಡ್‌ ಹಾಸಿನಿ ಕ್ರಿಯೇಷನ್ಸ್‌ ಬ್ಯಾನರ್‌ ಅಡಿಯಲ್ಲಿ ನಾಗವಂಶಿ ನಿರ್ಮಿಸುತ್ತಿರುವ ಚಿತ್ರವನ್ನು ತ್ರಿವಿಕ್ರಮ್‌ ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗೆ ನಮ್ರತಾ ಶಿರೋಡ್ಕರ್‌ ಹಂಚಿಕೊಂಡಿದ್ದ ಮಹೇಶ್‌ ಬಾಬು ಹೊಸ ಲುಕ್‌ ಬಹಳ ವೈರಲ್‌ ಆಗಿತ್ತು. ಈಗಾಗಲೇ ಚಿತ್ರೀಕರಣ ಆರಂಭವಾಗಿದೆ. ಮುಂದಿನ ವರ್ಷ ಏಪ್ರಿಲ್‌ 28 ರಂದು ಸಿನಿಮಾ ತೆರೆಗೆ ಬರುವುದಾಗಿ ಅಧಿಕೃತವಾಗಿ ಅನೌನ್ಸ್‌ ಕೂಡಾ ಆಗಿದೆ.

ಈ ಚಿತ್ರದ ಮೂಲಕ ಪೂಜಾ ಹೆಗ್ಡೆ ಮತ್ತೊಮ್ಮೆ ಮಹೇಶ್ ಬಾಬುಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದಕ್ಕೂ ಮುನ್ನ 'ಮಹರ್ಷಿ' ಚಿತ್ರದಲ್ಲಿ ಇಬ್ಬರೂ ಜೊತೆಯಾಗಿ ನಟಿಸಿದ್ದರು. ಈ ಹೊಸ ಚಿತ್ರದ ಹಾಡುಗಳಿಗೆ ತಮನ್ ಸಂಗೀತ ನೀಡುತ್ತಿದ್ದಾರೆ. ಮುಂದಿನ ವರ್ಷ ಬೇಸಿಗೆ ವೇಳೆಗೆ ಸಿನಿಮಾವನ್ನು ಚಿತ್ರಮಂದಿರಕ್ಕೆ ತರಲು ಚಿತ್ರತಂಡ ಮುಂದಾಗಿದೆ. ಈ ಸಿನಿಮಾ ನಂತರ ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ಮಹೇಶ್ ಬಾಬು ನಟಿಸಲಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು