logo
ಕನ್ನಡ ಸುದ್ದಿ  /  ಮನರಂಜನೆ  /  Trisha Krishnan: ತ್ರಿಶಾ ಮುಂದೆ ಮಂಡಿಯೂರಿದ ಮನ್ಸೂರ್ ಅಲಿಖಾನ್; 'ನನ್ನನ್ನು ಕ್ಷಮಿಸಿ..' ಎಂದಿದ್ದಕ್ಕೆ ಹೀಗಿದೆ ನಟಿಯ ಪ್ರತಿಕ್ರಿಯೆ

Trisha Krishnan: ತ್ರಿಶಾ ಮುಂದೆ ಮಂಡಿಯೂರಿದ ಮನ್ಸೂರ್ ಅಲಿಖಾನ್; 'ನನ್ನನ್ನು ಕ್ಷಮಿಸಿ..' ಎಂದಿದ್ದಕ್ಕೆ ಹೀಗಿದೆ ನಟಿಯ ಪ್ರತಿಕ್ರಿಯೆ

Nov 26, 2023 11:28 AM IST

Trisha Krishnan: ತ್ರಿಶಾ ಮುಂದೆ ಮಂಡಿಯೂರಿದ ಮನ್ಸೂರ್ ಅಲಿಖಾನ್; 'ನನ್ನನ್ನು ಕ್ಷಮಿಸಿ..' ಎಂದಿದ್ದಕ್ಕೆ ಹೀಗಿದೆ ನಟಿಯ ಪ್ರತಿಕ್ರಿಯೆ

    • ತ್ರಿಶಾ ಬಗ್ಗೆ ರೇಪ್‌ ಸೀನ್‌ ಕುರಿತ ಹೇಳಿಕೆ ವಿವಾದ ಕಾವು ಪಡೆದುಕೊಳ್ಳುತ್ತಿದ್ದಂತೆ, ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಕ್ಷಮೆಯಾಚಿಸುವುದಿಲ್ಲ ಎಂದಿದ್ದರು ಮನ್ಸೂರ್‌ ಅಲಿಖಾನ್‌. ಇದೀಗ ತೀವ್ರ ಟೀಕೆಗೆ ಗುರಿಯಾಗುತ್ತಿದ್ದಂತೆ, ನಟಿ ಬಳಿ ಕ್ಷಮೆ ಕೇಳಿ ವಿವಾದವನ್ನು ತಣ್ಣಗೆ ಮಾಡಿದ್ದಾರೆ.
Trisha Krishnan: ತ್ರಿಶಾ ಮುಂದೆ ಮಂಡಿಯೂರಿದ ಮನ್ಸೂರ್ ಅಲಿಖಾನ್; 'ನನ್ನನ್ನು ಕ್ಷಮಿಸಿ..' ಎಂದಿದ್ದಕ್ಕೆ ಹೀಗಿದೆ ನಟಿಯ ಪ್ರತಿಕ್ರಿಯೆ
Trisha Krishnan: ತ್ರಿಶಾ ಮುಂದೆ ಮಂಡಿಯೂರಿದ ಮನ್ಸೂರ್ ಅಲಿಖಾನ್; 'ನನ್ನನ್ನು ಕ್ಷಮಿಸಿ..' ಎಂದಿದ್ದಕ್ಕೆ ಹೀಗಿದೆ ನಟಿಯ ಪ್ರತಿಕ್ರಿಯೆ

Trisha Krishnan: 'ಲಿಯೋ' ಸಿನಿಮಾ ಖ್ಯಾತಿಯ ತಮಿಳು ನಟ ಮನ್ಸೂರ್ ಅಲಿ ಖಾನ್ ಇತ್ತೀಚೆಗೆ ನಟಿ ತ್ರಿಶಾ ಕೃಷ್ಣನ್ ಅವರ ಬಗ್ಗೆ ಉಡಾಫೆ ಹೇಳಿಕೆ ನೀಡಿ, ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಇದೀಗ ಆ ಹೇಳಿಕೆಗಾಗಿ ಕ್ಷಮೆಯಾಚಿಸಿದ್ದಾರೆ. ಮನ್ಸೂರ್ ಕ್ಷಮೆಯಾಚಿಸುತ್ತಿದ್ದಂತೆ, ತ್ರಿಶಾ ಸಹ ಟ್ವೀಟ್ ಮೂಲಕ ಅವರನ್ನು ಕ್ಷಮಿಸಿದ್ದಾರೆ. 'ತಪ್ಪು ಮಾಡುವುದು ಮಾನವ ಸಹಜ ಮತ್ತು ಕ್ಷಮಿಸುವುದು ದೇವರ ಗುಣ' ಎಂದು ತ್ರಿಶಾ ಪೋಸ್ಟ್‌ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ವಿವಾದ ಕಾವು ಪಡೆದುಕೊಳ್ಳುತ್ತಿದ್ದಂತೆ, ನಾನು ಯಾವುದೇ ತಪ್ಪು ಮಾಡಿಲ್ಲ, ನಾನು ಕ್ಷಮೆಯಾಚಿಸುವುದಿಲ್ಲ ಎಂದಿದ್ದರು. ಇದೀಗ ತೀವ್ರ ಟೀಕೆಗೆ ಗುರಿಯಾಗುತ್ತಿದ್ದಂತೆ, ಕ್ಷಮೆ ಕೇಳಿ ವಿವಾದವನ್ನು ತಣ್ಣಗೆ ಮಾಡಿದ್ದಾರೆ. ತಮಿಳಿನಲ್ಲಿ ಸುದೀರ್ಘ ಬರಹವನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ ಮನ್ಸೂರ್‌ ಅಲಿಖಾನ್. "ನನ್ನ ಸಹನಟಿ ತ್ರಿಶಾ ನನ್ನನ್ನು ದಯವಿಟ್ಟು ಕ್ಷಮಿಸಿ. ನಿಮ್ಮ ಮದುವೆಯಲ್ಲಿ ನಿಮ್ಮನ್ನು ಆಶೀರ್ವದಿಸುವ ಅವಕಾಶ ನನಗೆ ಸಿಗಲಿ ಎಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ" ಎಂದಿದ್ದಾರೆ.

ಕ್ರಿಮಿನಲ್‌ ಹಿನ್ನೆಲೆ ಹೊಂದಿದ ಮನ್ಸೂರ್‌

ನಟ ಮನ್ಸೂರ್ ಅಲಿಖಾನ್‌ ನಟನೆ ಜತೆಗೆ ಕಾಂಟ್ರವರ್ಸಿಯಲ್ಲಿಯೂ ಮುಂದು. ಇವರಿಗೆ ಕ್ರಿಮಿನಲ್ ಹಿನ್ನೆಲೆಯೂ ಇದೆ. 2012 ರಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯವು ಇವರಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಆದಾಗ್ಯೂ, 2021 ರಲ್ಲಿ ಇಂಥದ್ದೇ ಪ್ರಕರಣದಲ್ಲಿ ಮನ್ಸೂರ್‌ ಹೆಸರು ಕೇಳಿಬಂದಿತ್ತು. ಇದೀಗ ತ್ರಿಶಾ ಬಗ್ಗೆ ಆಡಿದ ಮಾತು ಮನ್ಸೂರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸೋಷಿಯಲ್‌ ಮೀಡಿಯಾದಲ್ಲಿಯೂ ಅವರ ವಿರುದ್ಧ ಟೀಕೆಗಳ ಮಳೆಯೇ ಸುರಿದಿತ್ತು. ಅದರಂತೆ, ಈ ಹೇಳಿಕೆ ಖಂಡಿಸಿ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿತ್ತು.

ತ್ರಿಶಾ ಬಗ್ಗೆ ಮನ್ಸೂರ್‌ ಹೇಳಿಕೆ ಏನಾಗಿತ್ತು

“ಲಿಯೋ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ತಿಳಿದಾಗ ತ್ರಿಶಾ ಜೊತೆ ಅತ್ಯಾಚಾರದ ದೃಶ್ಯ ಬರಬಹುದೆಂಬ ನಿರೀಕ್ಷೆಯಲ್ಲಿದ್ದೆ. ತ್ರಿಶಾಳನ್ನು ನನ್ನ ತೋಳುಗಳಲ್ಲಿ ಎತ್ತಿಕೊಂಡು ಬರುವ ದೃಶ್ಯವೊಂದು ಬರಬಹುದೆಂದು ಊಹಿಸಿದ್ದೆ. ಆಕೆಯ ಜತೆಗೆ ಬೆಡ್‌ರೂಮ್‌ ದೃಶ್ಯಗಳಲ್ಲಿ ನಟಿಸುವೆ ಎಂದುಕೊಂಡಿದ್ದೆ. ಆದರೆ ನಿರ್ದೇಶಕ ಲೋಕೇಶ್ ಕನಕರಾಜ್, ಕನಿಷ್ಠ ಪಕ್ಷ ತ್ರಿಶಾ ಅವರನ್ನೂ ತೋರಿಸಲಿಲ್ಲ. ನಾನು ಈಗಾಗಲೇ ಸಾಕಷ್ಟು ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ. ಆದರೆ, ತ್ರಿಶಾ ಜತೆಗೆ ಇದು ನನಗೆ ಹೊಸದು ಎಂದು ನಾನು ಭಾವಿಸಿದ್ದೆ" ಎಂದು ಮನ್ಸೂರ್‌ ಅಲಿಖಾನ್‌ ಹೇಳಿಕೆ ನೀಡಿದ್ದರು.

ಮನ್ಸೂರ್‌ ಮಾತಿಗೆ ತ್ರಿಶಾ ಕಿಡಿ

"ಮನ್ಸೂರ್ ಅಲಿ ಖಾನ್ ನನ್ನ ಬಗ್ಗೆ ಅಸಹ್ಯವಾಗಿ ಮತ್ತು ಕೆಟ್ಟದಾಗಿ ಮಾತನಾಡಿರುವ ವೀಡಿಯೊವನ್ನು ನಾನು ನೋಡಿದ್ದೇನೆ. ಆ ಮಾತುಗಳನ್ನು ನಾನು ಖಂಡಿಸುತ್ತೇನೆ. ಇದು ಕೆಟ್ಟತನದ ಪರಮಾವಧಿ, ಅಗೌರವ, ಸ್ತ್ರೀದ್ವೇಷ ಮತ್ತು ಅಷ್ಟೇ ಅಸಹ್ಯಕರ. ಇನ್ಮೇಲೆ ನಾನು ಎಂದಿಗೂ ಆ ನೀಚ ವ್ಯಕ್ತಿಯೊಂದಿಗೆ ತೆರೆ ಹಂಚಿಕೊಳ್ಳುವುದಿಲ್ಲ. ಅವರಂಥವರು ಮನುಕುಲಕ್ಕೇ ಕೆಟ್ಟ ಹೆಸರು" ಎಂದು ಕಿಡಿ ಕಾರಿದ್ದರು. ನಟಿಯ ಈ ಕಾಮೆಂಟ್‌ಗೆ ಚಿತ್ರರಂಗದ ಸಾಕಷ್ಟು ಮಂದಿ ಬೆಂಬಲ ಸೂಚಿಸಿ, ಮನ್ಸೂರ್‌ ಅಲಿಖಾನ್‌ ಮಾತಿನ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ.

ಲಿಯೋ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಎಷ್ಟಾಯ್ತು

ದಳಪತಿ ವಿಜಯ್ ಅಭಿನಯದ ಲಿಯೋ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಬಿಜಿನೆಸ್‌ ಮುಂದುವರಿಸಿದೆ. ಈ ಚಿತ್ರ ಇದುವರೆಗೆ ದೇಶದಲ್ಲಿ 400 ಕೋಟಿ ರೂಪಾಯಿ ಪ್ಲಸ್‌ ಕಲೆಕ್ಷನ್ ಮಾಡಿದ್ದು, ಹಲವು ದಾಖಲೆಗಳನ್ನು ಮುರಿದಿದೆ. ಚಿತ್ರದಲ್ಲಿ ವಿಜಯ್ ಮತ್ತು ತ್ರಿಶಾ ಜೊತೆಗೆ ಸಂಜಯ್ ದತ್, ಅರ್ಜುನ್‌ ಸರ್ಜಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ