logo
ಕನ್ನಡ ಸುದ್ದಿ  /  ಮನರಂಜನೆ  /  Dhanush Birthday: 40ನೇ ಬರ್ತ್‌ಡೇ ಸಂಭ್ರಮದಲ್ಲಿ ಧನುಷ್;‌ ಟೀಸರ್‌ ಗಿಫ್ಟ್‌ ನೀಡಿದ ಕ್ಯಾಪ್ಟನ್‌ ಮಿಲ್ಲರ್‌ ಚಿತ್ರತಂಡ

Dhanush Birthday: 40ನೇ ಬರ್ತ್‌ಡೇ ಸಂಭ್ರಮದಲ್ಲಿ ಧನುಷ್;‌ ಟೀಸರ್‌ ಗಿಫ್ಟ್‌ ನೀಡಿದ ಕ್ಯಾಪ್ಟನ್‌ ಮಿಲ್ಲರ್‌ ಚಿತ್ರತಂಡ

HT Kannada Desk HT Kannada

Jul 28, 2023 10:46 AM IST

'ಕ್ಯಾಪ್ಟನ್‌ ಮಿಲ್ಲರ್‌' ಟೀಸರ್

  • ಟೀಸರ್‌ ನೋಡಿದರೆ ಅದು ಸ್ವಾತಂತ್ರ್ಯಪೂರ್ವ ಸಿನಿಮಾದ ಕಥೆಯನ್ನು ಹೊಂದಿರುವುದು ಎಂಬುದು ತಿಳಿಯುತ್ತಿದೆ. ಬ್ರಿಟಿಷರ ವಿರುದ್ಧ ಕ್ಯಾಪ್ಟನ್‌ ಮಿಲ್ಲರ್‌ ಯುದ್ಧ ಸಾರುವ ದೃಶ್ಯಗಳು ಅದ್ಧೂರಿಯಾಗಿ ಮೂಡಿ ಬಂದಿದೆ.

'ಕ್ಯಾಪ್ಟನ್‌ ಮಿಲ್ಲರ್‌' ಟೀಸರ್
'ಕ್ಯಾಪ್ಟನ್‌ ಮಿಲ್ಲರ್‌' ಟೀಸರ್

ಕಾಲಿವುಡ್‌ ಸ್ಟಾರ್‌ ನಟ ಧನುಷ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 40ನೇ ಬರ್ತ್‌ಡೇ ಸಂಭ್ರಮದಲ್ಲಿರುವ ಧನುಷ್‌ಗೆ ಅಭಿಮಾನಿಗಳು, ಸಿನಿಮಾ ಗಣ್ಯರು ಶುಭ ಕೋರುತ್ತಿದ್ದಾರೆ. ಧನುಷ್‌ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ತಮ್ಮ ಮೆಚ್ಚಿನ ನಟನ ಬರ್ತ್‌ಡೇ ಆಚರಿಸುತ್ತಿದ್ದಾರೆ. ವಿಶೇಷವೆಂದರೆ ಧನುಷ್‌ ಹುಟ್ಟುಹಬ್ಬದ ಪ್ರಯುಕ್ತ 'ಕ್ಯಾಪ್ಟನ್‌ ಮಿಲ್ಲರ್‌' ಟೀಸರ್‌ ಕೂಡಾ ರಿಲೀಸ್‌ ಆಗಿದೆ.‌

ಟ್ರೆಂಡಿಂಗ್​ ಸುದ್ದಿ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

1:33 ನಿಮಿಷ ಅವಧಿಯ ಟೀಸರ್‌

'ಕ್ಯಾಪ್ಟನ್‌ ಮಿಲ್ಲರ್‌', ಧನುಷ್‌ ಅವರ ಮುಂಬರುವ ಸಿನಿಮಾ, ಈ ಚಿತ್ರ ಇದೇ ವರ್ಷ ಡಿಸೆಂಬರ್‌ನಲ್ಲಿ ರಿಲೀಸ್‌ ಆಗಲಿದೆ. 1:33 ನಿಮಿಷ ಅವಧಿಯ ಟೀಸರ್‌ ಧನುಷ್‌ ಹಾಗೂ ಶಿವರಾಜ್‌ಕುಮಾರ್‌ ಅಭಿಮಾನಿಗಳಲ್ಲಿ ಗೂಸ್‌ ಬಂಪ್ಸ್‌ ಕ್ರಿಯೇಟ್‌ ಮಾಡಿದೆ. ಚಿತ್ರದಲ್ಲಿ ನಮ್ಮ ಕನ್ನಡದ ಸೆಂಚುರಿ ಸ್ಟಾರ್‌ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈಗಾಗಲೇ ಶಿವಣ್ಣ ಭಾಗದ ಚಿತ್ರೀಕರಣ ಮುಗಿದಿದೆ. ಚಿತ್ರದಲ್ಲಿ ಶಿವಣ್ಣ ಇರುವುದರಿಂದ ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಸಿನಿಮಾ ಅನೌನ್ಸ್‌ ಆದಾಗಿನಿಂದ ಬಹಳ ನಿರೀಕ್ಷೆ ಮೂಡಿಸಿತ್ತು. ಈಗ ಟೀಸರ್‌ ರಿಲೀಸ್‌ ಆಗಿತ್ತು ಸಿನಿಮಾ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

ಸ್ವತಂತ್ರ್ಯಪೂರ್ವ ಕಥೆ ಹೊಂದಿರುವ ಸಿನಿಮಾ

ಟೀಸರ್‌ ನೋಡಿದರೆ ಅದು ಸ್ವಾತಂತ್ರ್ಯಪೂರ್ವ ಸಿನಿಮಾದ ಕಥೆಯನ್ನು ಹೊಂದಿರುವುದು ಎಂಬುದು ತಿಳಿಯುತ್ತಿದೆ. ಬ್ರಿಟಿಷರ ವಿರುದ್ಧ ಕ್ಯಾಪ್ಟನ್‌ ಮಿಲ್ಲರ್‌ ಯುದ್ಧ ಸಾರುವ ದೃಶ್ಯಗಳು ಅದ್ಧೂರಿಯಾಗಿ ಮೂಡಿ ಬಂದಿದೆ. ಹಾಗೇ ಶಿವಣ್ಣ ಕೂಡಾ ಕುದುರಿ ಏರಿ ಬರುವುದನ್ನು ನೋಡಿ ಫ್ಯಾನ್ಸ್‌ ಎಕ್ಸೈಟ್‌ ಆಗಿದ್ದಾರೆ. ಒಟ್ಟಿನಲ್ಲಿ ಅದ್ಧೂರಿ ಮೇಕಿಂಗ್‌ ಸಿನಿಪ್ರಿಯರ ಗಮನ ಸೆಳೆದಿದೆ.

ಡಿಸೆಂಬರ್‌ 15ರಂದು ರಿಲೀಸ್

'ಕ್ಯಾಪ್ಟನ್‌ ಮಿಲ್ಲರ್‌' ಚಿತ್ರವನ್ನು ಸತ್ಯಜ್ಯೋತಿ ಫಿಲ್ಮ್ಸ್‌ ಬ್ಯಾನರ್‌ ಅಡಿ ಸೆಂದಿಲ್‌ ತ್ಯಾಗರಾಜನ್‌ ಮತ್ತು ಅರ್ಜುನ್‌ ತ್ಯಾಗರಾಜನ್‌ ನಿರ್ಮಿಸಿದ್ದಾರೆ. ಅರುಣ್‌ ಮಥೇಶ್ವರನ್‌ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಜಿವಿ ಪ್ರಕಾಶ್‌ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಧನುಷ್‌, ಶಿವರಾಜ್‌ಕುಮಾರ್‌ ಜೊತೆಗೆ ಸಂದೀಪ್‌ ಕಿಶನ್‌, ಪ್ರಿಯಾಂಕಾ ಮೋಹನ್‌ ಹಾಗೂ ಇನ್ನಿತರರು ನಟಿಸಿದ್ದಾರೆ. ಡಿಸೆಂಬರ್‌ 15ರಂದು ಕ್ಯಾಪ್ಟನ್‌ ಮಿಲ್ಲರ್‌ ಸಿನಿಮಾ ವಿಶ್ವಾದ್ಯಂತ ರಿಲೀಸ್‌ ಆಗುತ್ತಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ