logo
ಕನ್ನಡ ಸುದ್ದಿ  /  ಮನರಂಜನೆ  /  ದುಡ್ಡು ಪಡೆದು ಮೋಸ ಮಾಡಿದ್ರಾ ಎಆರ್‌ ರೆಹಮಾನ್‌ ತಂಡ? ಸಂಗೀತಪ್ರಿಯರ ಆರೋಪವೇನು?

ದುಡ್ಡು ಪಡೆದು ಮೋಸ ಮಾಡಿದ್ರಾ ಎಆರ್‌ ರೆಹಮಾನ್‌ ತಂಡ? ಸಂಗೀತಪ್ರಿಯರ ಆರೋಪವೇನು?

HT Kannada Desk HT Kannada

Sep 11, 2023 02:54 PM IST

ಎಆರ್‌ ರೆಹಮಾನ್‌ ಹಾಗೂ ಕಾನ್ಸರ್ಟ್‌ ಆಯೋಜಕರ ವಿರುದ್ಧ ಆಕ್ರೋಶ ಹೊರ ಹಾಕಿದ ಚೆನ್ನೈ ಜನತೆ

  • ಮುರುಕ್ಕುಂ ನೆಂಜಂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾವಿರಾರು ಅಭಿಮಾನಿಗಳು ಮುಂಗಡ ಟಿಕೆಟ್‌ ಕಾಯ್ದಿರಿಸಿದ್ದರು. ಆಸೆಯಿಂದ ಎಆರ್‌ ರೆಹಮಾನ್‌ ಹಾಡು ಕೇಳಲು ಬಂದವರಿಗೆ ನಿರಾಸೆ ಕಾದಿತ್ತು. ಅಲ್ಲಿ ಟಿಕೆಟ್‌ ಪಡೆದಿದ್ದವರಿಗೆ ಸ್ಥಳವೇ ಇರಲಿಲ್ಲ.

ಎಆರ್‌ ರೆಹಮಾನ್‌ ಹಾಗೂ ಕಾನ್ಸರ್ಟ್‌ ಆಯೋಜಕರ ವಿರುದ್ಧ ಆಕ್ರೋಶ ಹೊರ ಹಾಕಿದ ಚೆನ್ನೈ ಜನತೆ
ಎಆರ್‌ ರೆಹಮಾನ್‌ ಹಾಗೂ ಕಾನ್ಸರ್ಟ್‌ ಆಯೋಜಕರ ವಿರುದ್ಧ ಆಕ್ರೋಶ ಹೊರ ಹಾಕಿದ ಚೆನ್ನೈ ಜನತೆ (PC: Twitter)

ಎಆರ್‌ ರೆಹಮಾನ್‌ ಸಂಗೀತ ನಿರ್ದೇಶನದ ಹಾಡುಗಳು ಎಂದರೆ ಕೇಳಬೇಕಾ? ಅವರ ಹಾಡುಗಳ ಬಗ್ಗೆ ಎರಡು ಮಾತೇ ಇಲ್ಲ. ಜನರಂತೂ ಅವರ ಹಾಡುಗಳನ್ನು ಕೇಳಲು ಕಾಯುತ್ತಿರುತ್ತಾರೆ. ಇನ್ನು, ಲೈವ್‌ನಲ್ಲೇ ಅವರ ಹಾಡುಗಳನ್ನು ಕೇಳುವ ಅವಕಾಶ ದೊರೆತರೆ ಯಾರು ತಾನೇ ಬಿಡುತ್ತಾರೆ. ಆದರೆ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಕಾನ್ಸರ್ಟ್‌ ವಿಚಾರದಲ್ಲಿ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಮತ್ತಷ್ಟು ಹಿರಿದಾಯ್ತು ಕಣ್ಣಪ್ಪ ಸಿನಿಮಾ ತಾರಾಬಳಗ; ಅಕ್ಷಯ್‌ ಕುಮಾರ್‌, ಪ್ರಭಾಸ್‌ ಬಳಿಕ ಕಾಜಲ್‌ ಅಗರ್ವಾಲ್ ಎಂಟ್ರಿ

ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮ

ಸೆಪ್ಟೆಂಬರ್‌ 10 ಭಾನುವಾರ ಚೆನ್ನೈನಲ್ಲಿ 'ಮುರುಕ್ಕುಂ ನೆಂಜಂ' ಹೆಸರಿನಲ್ಲಿ ಸಂಗೀತ ಕಾರ್ಯಕ್ರಮ ಏರ್ಪಾಡಾಗಿತ್ತು. ಎಸಿಟಿಸಿ ಎಂಬ ಇವೆಂಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆ ಈ ಕಾನ್ಸರ್ಟ್‌ ಆಯೋಜಿಸಿತ್ತು. ಮುರುಕ್ಕುಂ ನೆಂಜಂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾವಿರಾರು ಅಭಿಮಾನಿಗಳು ಮುಂಗಡ ಟಿಕೆಟ್‌ ಕಾಯ್ದಿರಿಸಿದ್ದರು. ಆಸೆಯಿಂದ ಎಆರ್‌ ರೆಹಮಾನ್‌ ಹಾಡು ಕೇಳಲು ಬಂದವರಿಗೆ ನಿರಾಸೆ ಕಾದಿತ್ತು. ಅಲ್ಲಿ ಟಿಕೆಟ್‌ ಪಡೆದಿದ್ದವರಿಗೆ ಸ್ಥಳವೇ ಇರಲಿಲ್ಲ. ಎಷ್ಟೋ ಜನರು ಕಾರ್ಯಕ್ರಮ ಆಯೋಜನೆ ಮಾಡಿದ್ದ ಸ್ಥಳದ ಹತ್ತಿರ ಹೋಗಲು ಕೂಡಾ ಅವಕಾಶವಾಗಲಿಲ್ಲ.

ಎಲ್ಲಾ ಸರಿ ಹೋಗುತ್ತದೆ. ಆಯೋಜಕರು ಎಲ್ಲವನ್ನೂ ಸರಿ ಮಾಡುತ್ತಾರೆ ಎಂದು ಕಾಯುತ್ತಲೇ ಕಾರ್ಯಕ್ರಮ ಮುಗಿದು ಎಆರ್‌ ರೆಹಮಾನ್‌ ಹಾಗೂ ತಂಡ ಅಲ್ಲಿಂದ ನಿರ್ಗಮಿಸಿದರು. ಈ ಕಾನ್ಸರ್ಟ್‌ಗಾಗಿ ಆಯೋಜಕರು 500 ರಿಂದ 50 ಸಾವಿರ ಟಿಕೆಟ್‌ ದರ ನಿಗದಿ ಮಾಡಿದ್ದರು. ಎಆರ್‌ ರೆಹಮಾನ್‌ ಅಭಿಮಾನಿಗಳು 500 ರೂಪಾಯಿಯ ಜನರಲ್‌ ಪಾಸ್‌ನಿಂದ 50 ಸಾವಿರ ರೂಪಾಯಿ ಪ್ರೀಮಿಯರ್‌ ಲಾಂಚ್‌ವರೆಗೂ ಹಣ ತೆತ್ತು ಪಾಸ್‌ ಖರೀದಿಸಿದ್ದರು. ಆದರೆ ಅವರಲ್ಲಿ ವೇದಿಕೆ ಬಳಿ ಕೂರಲು ಸ್ಥಳ ಸಿಕ್ಕಿದ್ದು ಕೆಲವೇ ಕೆಲವರಿಗೆ ಮಾತ್ರ.

ಸೋಷಿಯಲ್‌ ಮೀಡಿಯಾ ಮೂಲಕ ಆಕ್ರೋಶ

ಈ ವಿಚಾರವಾಗಿ ಇದೀಗ ಪಾಸ್‌ ಖರೀದಿಸಿ ನಿರಾಸೆ ಆದವರು ಸೋಷಿಯಲ್‌ ಮೀಡಿಯಾ ಮೂಲಕ ಬೇಸರ ಹೊರ ಹಾಕುತ್ತಿದ್ದಾರೆ. ''ಆಯೋಜಕರು ಕೇವಲ ದುಡ್ಡು ಮಾಡುವ ಸಲುವಾಗಿ ನಮಗೆ ಮೋಸ ಮಾಡಿದ್ದಾರೆ. ಅಷ್ಟು ಹಣ ನೀಡಿದಾಗ ಅವರು ನಮಗೆ ತಕ್ಕಂತೆ ಅನುಕೂಲ ಮಾಡಿಕೊಡಬೇಕು. ಅದರೆ ಕಾರ್ಯಕ್ರಮದಲ್ಲಿ ಸೌಂಡ್‌ ಸಿಸ್ಟಮ್‌ ಸರಿ ಇರಲಿಲ್ಲ. ನಮಗೆ ಏನೂ ಕೇಳಿಸುತ್ತಿರಲಿಲ್ಲ. ಪಾಸ್‌ ಪಡೆದಿದ್ದರೂ ನಮಗೆ ಕೂರಲು ಸೀಟೇ ಇರಲಿಲ್ಲ. ಆ ಜನಜಂಗುಳಿಯಿಂತ ತಪ್ಪಿಸಿಕೊಂಡು ಹೊರ ಬರಲು ನಮಗೆ ಸಾಕು ಸಾಕಾಯ್ತು'' ಎಂದು ಜನರು ಆರೋಪಿಸುತ್ತಿದ್ದಾರೆ.

''ಇಂತಹ ಕೀಳು ಮಟ್ಟದ ಕಾನ್ಸರ್ಟ್‌ ನಾವು ಎಲ್ಲೂ ನೋಡಿರಲಿಲ್ಲ. ಎಆರ್‌ ರೆಹಮಾನ್‌ ಇಂತಹ ಇವೆಂಟ್‌ ಮ್ಯಾನೇಜ್‌ಮೆಂಟ್‌ ಜೊತೆ ಕೈ ಜೋಡಿಸಬಾರದಿತ್ತು. ಇದೊಂದು ಸ್ಕಾಮ್‌ ಅಷ್ಟೇ. ದುಡ್ಡು ಪಡೆದು ನಮಗೆ ಮೋಸ ಮಾಡಿದ್ದಾರೆ. ವೇದಿಕೆಯಲ್ಲಿ ಎಷ್ಟು ಜನರನ್ನು ಕೂರಿಸಲು ಸಾಧ್ಯವೋ ಅಷ್ಟು ಪಾಸ್‌ ಮಾರಾಟ ಮಾಡಬೇಕಿತ್ತು. ಆದರೆ ಹಣದ ಆಸೆಯಿಂದ ಆಯೋಜಕರು ವೇದಿಕೆ ಫಿಲ್‌ ಆಗಿದ್ದರೂ ಪಾಸ್‌ ಮಾರಾಟ ಮಾಡಿದ್ದಾರೆ. ನೂರಾರು ಕಿಲೋ ಮೀಟರ್‌ ದೂರದಿಂದ ಬಂದು ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದ ಒಳಗೆ ಹೆಜ್ಜೆ ಇಡದೆ ವಾಪಸ್‌ ಹೋಗುತ್ತಿದ್ದೇವೆ'' ಎಂದು ಜನರು ಬೇಸರ ಹೊರ ಹಾಕುತ್ತಿದ್ದಾರೆ.

ಎಆರ್‌ ರೆಹಮಾನ್‌ ಟ್ವೀಟ್‌

ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಸಂಗೀತ ನಿರ್ದೇಶಕ ಎಆರ್‌‌ ರೆಹಮಾನ್‌ ಪ್ರತಿಕ್ರಿಯಿಸಿದ್ದಾರೆ. ''ಟಿಕೆಟ್‌ ಪಡೆದು ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗದವರು ನಮ್ಮ ತಂಡವನ್ನು ಸಂಪರ್ಕಿಸಿ. ಅವರು ನಿಮಗೆ ಪ್ರತಿಕ್ರಿಯಿಸುತ್ತಾರೆ'' ಎಂದು ಟ್ವೀಟ್‌ ಮಾಡಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ