logo
ಕನ್ನಡ ಸುದ್ದಿ  /  ಮನರಂಜನೆ  /  Thalaivar 170 Movie: 72ನೇ ವಯಸ್ಸಲ್ಲಿ 170ನೇ ಸಿನಿಮಾ ಘೋಷಿಸಿದ ರಜನಿಕಾಂತ್‌; ‘ಜೈಭೀಮ್‌’ ನಿರ್ದೇಶಕರ ಚಿತ್ರದಲ್ಲಿ ತಲೈವಾ

Thalaivar 170 Movie: 72ನೇ ವಯಸ್ಸಲ್ಲಿ 170ನೇ ಸಿನಿಮಾ ಘೋಷಿಸಿದ ರಜನಿಕಾಂತ್‌; ‘ಜೈಭೀಮ್‌’ ನಿರ್ದೇಶಕರ ಚಿತ್ರದಲ್ಲಿ ತಲೈವಾ

HT Kannada Desk HT Kannada

Mar 02, 2023 01:18 PM IST

72ನೇ ವಯಸ್ಸಲ್ಲಿ 170ನೇ ಸಿನಿಮಾ ಘೋಷಿಸಿದ ರಜನಿಕಾಂತ್‌; ‘ಜೈಭೀಮ್‌’ ನಿರ್ದೇಶಕರ ಚಿತ್ರದಲ್ಲಿ ತಲೈವಾ

    • ಸೌತ್‌ನಲ್ಲಿ ಸಾಕಷ್ಟು ಹೈ ಬಜೆಟ್‌ನ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಲೈಕಾ ಪ್ರೊಡಕ್ಷನ್ಸ್ ಈ ರಜನಿಕಾಂತ್‌ ಅವರ 170ನೇ ಚಿತ್ರವನ್ನು ನಿರ್ಮಾಣ ಮಾಡಲಿದೆ.
72ನೇ ವಯಸ್ಸಲ್ಲಿ 170ನೇ ಸಿನಿಮಾ ಘೋಷಿಸಿದ ರಜನಿಕಾಂತ್‌; ‘ಜೈಭೀಮ್‌’ ನಿರ್ದೇಶಕರ ಚಿತ್ರದಲ್ಲಿ ತಲೈವಾ
72ನೇ ವಯಸ್ಸಲ್ಲಿ 170ನೇ ಸಿನಿಮಾ ಘೋಷಿಸಿದ ರಜನಿಕಾಂತ್‌; ‘ಜೈಭೀಮ್‌’ ನಿರ್ದೇಶಕರ ಚಿತ್ರದಲ್ಲಿ ತಲೈವಾ

Rajinikanth 170th Film: ಸೂಪರ್‌ಸ್ಟಾರ್‌ ರಜನಿಕಾಂತ್‌ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜೈಲರ್‌ ಸಿನಿಮಾ ಕೆಲಸಗಳು ನಡೆಯುತ್ತಿದ್ದಂತೆ, 170ನೇ ಚಿತ್ರದ ಘೋಷಣೆ ಹೊರಬಿದ್ದಿದೆ. ವಿಶೇಷ ಏನೆಂದರೆ ಈ ಹಿಂದೆ ಸೂರ್ಯ ಜತೆಗೆ ಜೈ ಭೀಮ್‌ ಸಿನಿಮಾ ಮಾಡಿದ್ದ ಟಿ.ಜೆ ಜ್ಞಾನವೇಲ್‌ ಇದೀಗ ತಲೈವಾ ಜತೆ ಕೈ ಜೋಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

‘ಪೌಡರ್‌’ ಕೊಟ್ಟು ಪವರ್‌ ಹೆಚ್ಚಿಸಲು ಹೊರಟ ಗುಲ್ಟು ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ; ನಗು ಉಕ್ಕಿಸುವ ಟೀಸರ್‌ ಬಿಡುಗಡೆ

ಶಿಳ್ಳೆ, ಕೇಕೆ, ಚಪ್ಪಾಳೆ.. ಬೆಳ್ಳಿತೆರೆ ಮೇಲೆ ಮತ್ತೆ ಮಿನುಗಿದ ಕಲ್ಟ್‌ ಕ್ಲಾಸಿಕ್‌ A ಚಿತ್ರ; ಥಿಯೇಟರ್‌ ಮುಂದೆ ಹಬ್ಬ ಮಾಡಿದ ಉಪ್ಪಿ ಫ್ಯಾನ್ಸ್

ನಮ್ಮ ಚಿತ್ರದ ಹೆಸರು ದಿ ಜಡ್ಜ್‌ಮೆಂಟ್‌ ಆಗಿರಬಹುದು, ಪ್ರೇಕ್ಷಕರು ಕೊಡುವ ಜಡ್ಜ್‌ಮೆಂಟೇ ನಮಗೆ ಅಂತಿಮ; ರವಿಚಂದ್ರನ್

ಕೊನೆಗೂ ಮದುವೆ ಮುನ್ಸೂಚನೆ ನೀಡಿ, ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ ಡಾರ್ಲಿಂಗ್‌ ಪ್ರಭಾಸ್‌; ಅಷ್ಟಕ್ಕೂ ಹುಡುಗಿ ಯಾರಿರಬಹುದು?

ಈಗಾಗಲೇ ಸೌತ್‌ನಲ್ಲಿ ಸಾಕಷ್ಟು ಹೈ ಬಜೆಟ್‌ನ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಲೈಕಾ ಪ್ರೊಡಕ್ಷನ್ಸ್ ಈ ರಜನಿಕಾಂತ್‌ ಅವರ 170ನೇ ಚಿತ್ರವನ್ನು ನಿರ್ಮಾಣ ಮಾಡಲಿದೆ. ಲೈಕಾ ಪ್ರೊಡಕ್ಷನ್ಸ್ ಮುಖ್ಯಸ್ಥ ಸುಭಾಸ್ಕರನ್ ತಮ್ಮ ಬರ್ತ್‌ಡೇ ಹಿನ್ನೆಲೆಯಲ್ಲಿ ರಜನಿಕಾಂತ್‌ ಜತೆ ಸಿನಿಮಾ ಮಾಡುತ್ತಿರುವ ವಿಚಾರವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.

ಇನ್ನೂ ಶೀರ್ಷಿಕೆ ಘೋಷಿಸದ ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ನೀಡಲಿದ್ದಾರೆ. ಇನ್ನೇನು ಶೀಘ್ರದಲ್ಲಿ ಚಿತ್ರದ ಶೂಟಿಂಗ್‌ ಆರಂಭವಾಗಲಿದ್ದು, 2024ರಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಚಿತ್ರದಲ್ಲಿ ಇನ್ನುಳಿದ ತಾರಾಗಣದಲ್ಲಿ ಯಾರೆಲ್ಲ ಇರಲಿದ್ದಾರೆ? ತಾಂತ್ರಿಕ ಬಳಗದ ವಿಚಾರವನ್ನು ಮುಂದಿನ ದಿನಗಳಲ್ಲಿ ಒಂದೊಂದಾಗಿಯೇ ಘೋಷಿಸಲಿದೆಯಂತೆ ಚಿತ್ರತಂಡ.

ಸೂರ್ಯ ನಟಿಸಿದ್ದ ಜೈ ಭೀಮ್ ಚಿತ್ರವು ವಿಮರ್ಶಕರ ಮೆಚ್ಚುಗೆಯೊಂದಿಗೆ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಸಮಾಜದ ದೀನದಲಿತರು ಎದುರಿಸುತ್ತಿರುವ ಅನ್ಯಾಯವನ್ನು ನೈಜವಾಗಿ ತೆರೆದಿಟ್ಟಿರುವ ನಿರ್ದೇಶಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಜೈಭೀಮ್‌ನಂತೆಯೇ ಸಾಮಾಜಿಕ ಸಮಸ್ಯೆಯ ಕುರಿತಾದ ಕಥೆಯೂ ರಜನಿಕಾಂತ್‌ ಸಿನಿಮಾದಲ್ಲಿ ಇರಲಿದೆಯಂತೆ.

ರಜನಿಕಾಂತ್ ಸದ್ಯ ಜೈಲರ್ ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುರತ್ತಿರುವ ಈ ಚಿತ್ರದಲ್ಲಿ ಮಲಯಾಳಂ ನಟ ಮೋಹನ್‌ ಲಾಲ್‌, ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌, ಮಿಲ್ಕಿ ಬ್ಯೂಟಿ ತಮನ್ನಾ ಮತ್ತು ರಮ್ಯಾ ಕೃಷ್ಣ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಈ ಸುದ್ದಿಯನ್ನೂ ಓದಿ

FIR filed against Gauri Khan: ಆಸ್ತಿ ಖರೀದಿ ವಿಚಾರದಲ್ಲಿ ಮೋಸ; ಶಾರುಖ್‌ ಖಾನ್‌ ಪತ್ನಿ ಗೌರಿ ಖಾನ್‌ ವಿರುದ್ಧ ಎಫ್‌ಐಆರ್‌ ದಾಖಲು

ಬಾಲಿವುಡ್ ನಟ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ವಿರುದ್ಧ ಉತ್ತರ ಪ್ರದೇಶದ ಲಖನೌನಲ್ಲಿ ಎಫ್ಐಆರ್ ದಾಖಲಾಗಿದೆ. ಗೌರಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 409 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮುಂಬೈ ನಿವಾಸಿ ಜಸ್ವಂತ್ ಶಾ ಎಂಬುವರು ಗೌರಿ ಖಾನ್ ವಿರುದ್ಧ ದೂರು ದಾಖಲಿಸಿದ್ದು, ಗೌರಿ ಬ್ರಾಂಡ್ ಅಂಬಾಸಿಡರ್ ಆಗಿರುವ ಕಂಪನಿ 86 ಲಕ್ಷ ರೂಪಾಯಿ ತೆಗೆದುಕೊಂಡರೂ ಫ್ಲಾಟ್ ಹಸ್ತಾಂತರಿಸುವಲ್ಲಿ ವಿಫಲವಾಗಿದೆ ಎಂದು ಶಾ ದೂರಿನಲ್ಲಿ ಆರೋಪಿಸಿದ್ದಾರೆ. ಪೂರ್ತಿ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ