Harshika Poonacha in Market: ಸೊಪ್ಪಮ್ಮ ಸೊಪ್ಪು... ಸಾರಕ್ಕಿ ಮಾರ್ಕೇಟ್‌ನಲ್ಲಿ ತರಕಾರಿ ಮಾರಿದ ನಟಿ ಹರ್ಷಿಕಾ ಪೂಣಚ್ಚ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Harshika Poonacha In Market: ಸೊಪ್ಪಮ್ಮ ಸೊಪ್ಪು... ಸಾರಕ್ಕಿ ಮಾರ್ಕೇಟ್‌ನಲ್ಲಿ ತರಕಾರಿ ಮಾರಿದ ನಟಿ ಹರ್ಷಿಕಾ ಪೂಣಚ್ಚ

Harshika Poonacha in Market: ಸೊಪ್ಪಮ್ಮ ಸೊಪ್ಪು... ಸಾರಕ್ಕಿ ಮಾರ್ಕೇಟ್‌ನಲ್ಲಿ ತರಕಾರಿ ಮಾರಿದ ನಟಿ ಹರ್ಷಿಕಾ ಪೂಣಚ್ಚ

  • Kasina Sara movie Promotion: ಹೆಬ್ಬೆಟ್ ರಾಮಕ್ಕ ಖ್ಯಾತಿಯ ನಿರ್ದೇಶಕ ಎನ್.ಆರ್. ನಂಜುಂಡೇಗೌಡ ಅವರ ನಿರ್ದೇಶನದ ‘ಕಾಸಿನ ಸರ’ ಚಿತ್ರ ಮಾ.3ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ವಿಜಯ ರಾಘವೇಂದ್ರ ಪ್ರಗತಿಪರ ರೈತನಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಛ ನಾಯಕಿಯಾಗಿ ನಟಿಸಿದ್ದಾರೆ. ಹಾಡು, ಟ್ರೇಲರ್‌ ಮೂಲಕ ಗಮನ ಸೆಳೆದ ಈ ಸಿನಿಮಾ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದೆ. ಇದೀಗ ಚಿತ್ರದ ನಾಯಕಿ ಸಿನಿಮಾ ಪ್ರಚಾರಕ್ಕಾಗಿ ಬೆಂಗಳೂರಿನ ಸಾರಕ್ಕಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡಿದ್ದಾರೆ.

ಕಾಸಿನ ಸರ ಸಿನಿಮಾ ಇದೇ ಶುಕ್ರವಾರ (ಮಾ. 3) ಈ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ನಾಯಕಿ ಹರ್ಷಿಕಾ ಪೂಣಚ್ಚ ಬೆಂಗಳೂರಿನ ಜೆಪಿ ನಗರದ ಸಾರಕ್ಕಿ ಮಾರುಕಟ್ಟೆಯಲ್ಲಿ ತರಕಾರಿ ಮಾರಿದ್ದಾರೆ.
icon

(1 / 5)

ಕೆಂಪು ಹಸಿರು ವರ್ಣದ ಲಂಗ ದಾವಣಿ ಧರಿಸಿ ಕೊತ್ತಂಬರಿ, ಟೊಮೇಟೊ ಮಾರಾಟ ಮಾಡಿ, ‘ಕಾಸಿನ ಸರ’ ಸಿನಿಮಾ ಪ್ರಚಾರ ಮಾಡಿದ್ದಾರೆ.  
icon

(2 / 5)

ಗ್ರಾಮೀಣ ಸೊಗಡಿನಲ್ಲಿ ನಡೆಯುವ ಕೌಟುಂಬಿಕ ಸಂಬಂಧಗಳ ಸುತ್ತ ಹೆಣೆಯಲಾದ ಕಥಾಹಂದರ ಇರುವ ‘ಕಾಸಿನ ಸರ’ ಚಿತ್ರದಲ್ಲಿ ಸಾವಯುವ ಕೃಷಿಯ ಬಗ್ಗೆ ನಿರ್ದೇಶಕರು ಹೇಳಹೊರಟಿದ್ದಾರೆ.  
icon

(3 / 5)

ಈ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ ಕೃಷಿ ವಿದ್ಯಾರ್ಥಿನಿ ಸಂಪಿಗೆಯ ಪಾತ್ರ ಮಾಡಿದ್ದಾರೆ. ಪದವಿ ಮುಗಿಸಿ ಗಂಡನಿಗೆ ಬೆಂಬಲವಾಗಿ ನಿಲ್ಲುವ ‌ಪಾತ್ರ ಅವರದ್ದು.
icon

(4 / 5)

'ಇಲ್ಲಿ ಕಾಸಿನ ಸರಕ್ಕೆ ಅದರದೇ ಮೌಲ್ಯ, ಪರಂಪರೆ, ಸಂಪ್ರದಾಯವಿದೆ. ಅದೇ ರೀತಿ ಕೃಷಿಗೂ ತನ್ನದೇ ಆದ ಪರಂಪರೆ ಸಂಪ್ರದಾಯವಿದೆ. ಈ ಚಿತ್ರದ ಮೂಲಕ ಅದನ್ನು ಹೇಳಿದ್ದೇವೆ ಎಂಬುದು ನಿರ್ಮಾಪಕ ದೊಡ್ಡನಾಗಯ್ಯ ಮಾತು.
icon

(5 / 5)

ಇತರ ಗ್ಯಾಲರಿಗಳು