logo
ಕನ್ನಡ ಸುದ್ದಿ  /  ಮನರಂಜನೆ  /  Actress Video: ಬೇರೆ ನಿರ್ಮಾಪಕರ ಸಿನಿಮಾ ಒಪ್ಪಿದ್ದಕ್ಕೆ ‌ಜಾಲತಾಣದಲ್ಲಿ ಖ್ಯಾತ ನಟಿಯ ಖಾಸಗಿ ವಿಡಿಯೋ, ಫೋಟೋ ಶೇರ್‌ ಮಾಡಿದ ನಿರ್ಮಾಪಕ ಭೂಪ!

Actress Video: ಬೇರೆ ನಿರ್ಮಾಪಕರ ಸಿನಿಮಾ ಒಪ್ಪಿದ್ದಕ್ಕೆ ‌ಜಾಲತಾಣದಲ್ಲಿ ಖ್ಯಾತ ನಟಿಯ ಖಾಸಗಿ ವಿಡಿಯೋ, ಫೋಟೋ ಶೇರ್‌ ಮಾಡಿದ ನಿರ್ಮಾಪಕ ಭೂಪ!

HT Kannada Desk HT Kannada

Jul 30, 2023 02:25 PM IST

ಬೇರೆ ನಿರ್ಮಾಪಕರ ಸಿನಿಮಾ ಒಪ್ಪಿದ್ದಕ್ಕೆ ಖ್ಯಾತ ನಟಿಯ ಖಾಸಗಿ ವಿಡಿಯೋ, ಫೋಟೋ ಜಾಲತಾಣದಲ್ಲಿ ಶೇರ್‌ ಮಾಡಿದ ನಿರ್ಮಾಪಕ!

    • ಲೀವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದ ನಟಿ, ನಿರ್ಮಾಪಕರ ವಿಚಾರ ಇದೀಗ ಮುನ್ನೆಲೆಗೆ ಬಂದಿದೆ. ತನ್ನ ಸಿನಿಮಾ ಒಪ್ಪಿಕೊಂಡಿಲ್ಲ ಎಂಬ ಕಾರಣಕ್ಕೆ ನಟಿಯ ಖಾಸಗಿ ವಿಡಿಯೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾನೆ ನಿರ್ಮಾಪಕ ದಯಾನಿಧಿ ದಹಿಮಾ. ಈ ಸಂಬಂಧ ನಟಿಯಿಂದ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ. 
ಬೇರೆ ನಿರ್ಮಾಪಕರ ಸಿನಿಮಾ ಒಪ್ಪಿದ್ದಕ್ಕೆ ಖ್ಯಾತ ನಟಿಯ ಖಾಸಗಿ ವಿಡಿಯೋ, ಫೋಟೋ ಜಾಲತಾಣದಲ್ಲಿ ಶೇರ್‌ ಮಾಡಿದ ನಿರ್ಮಾಪಕ!
ಬೇರೆ ನಿರ್ಮಾಪಕರ ಸಿನಿಮಾ ಒಪ್ಪಿದ್ದಕ್ಕೆ ಖ್ಯಾತ ನಟಿಯ ಖಾಸಗಿ ವಿಡಿಯೋ, ಫೋಟೋ ಜಾಲತಾಣದಲ್ಲಿ ಶೇರ್‌ ಮಾಡಿದ ನಿರ್ಮಾಪಕ!

Actress Video: ಖ್ಯಾತ ನಟಿಯೊಬ್ಬರ ಖಾಸಗಿ ವಿಡಿಯೋಗಳು ಮತ್ತು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಸೋರಿಕೆಯಾಗಿವೆ. ವಿಡಿಯೋ ಹರಿಬಿಟ್ಟ ಸಿನಿಮಾ ನಿರ್ಮಾಪಕನ ವಿರುದ್ಧ ಖ್ಯಾತ ನಟಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮಂಗ್ಲಿ ಕಂಠಕ್ಕೆ ಹುಚ್ಚೆದ್ದು ಕುಣಿದ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ, ಕಿಟ್ಟಿ, ರಚ್ಚು; ಇದು ಸಂಜು ವೆಡ್ಸ್ ಗೀತಾ-2 ಅಪ್‌ಡೇಟ್‌

ಈ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ ಪ್ರಶಾಂತ್‌ ನೀಲ್‌ ನಿರ್ದೇಶನದ ಜೂನಿಯರ್‌ ಎನ್‌ಟಿಆರ್‌ ಸಿನಿಮಾ; ಇದು ಹೇಗೆ ಸಾಧ್ಯ? ಅಭಿಮಾನಿಗಳಿಗೆ ಅಚ್ಚರಿ

ಬೆಂಗಳೂರಿನಲ್ಲಿ ಭರ್ಜರಿ ರೇವ್‌ ಪಾರ್ಟಿ; ತೆಲುಗಿನ ಖ್ಯಾತ ನಟ ನಟಿಯರು ಭಾಗಿ, ನಾನು ಫಾರ್ಮ್‌ ಹೌಸ್‌ನಲ್ಲಿದ್ದೇನೆ ಅಂದ್ರು ನಟಿ ಹೇಮಾ

ಗಂಡು ಮಗುವಿಗೆ ಜನ್ಮ ನೀಡಿದ ಯಾಮಿ ಗೌತಮ್‌; ಆರ್ಟಿಕಲ್‌ 370 ನಟಿಯ ಮಗುವಿನ ಹೆಸರು ವೇದವಿದ್‌, ಮಗುವಿನ ಹೆಸರಿನ ಅರ್ಥ ತಿಳಿಯಿರಿ

ಒಡಿಶಾದ ಭುವನೇಶ್ವರದ ಲಕ್ಷ್ಮೀ ಸಾಗರ್ ಪೊಲೀಸ್ ಠಾಣೆಯಲ್ಲಿ ನಟಿಯಿಂದ ದೂರು ದಾಖಲಾಗಿದ್ದು, ನಾನು ಕಳೆದ ಕೆಲ ವರ್ಷಗಳಿಂದ ನಿರ್ಮಾಪಕರ ಜತೆಗೆ ಅನ್ಯೋನ್ಯವಾಗಿದ್ದೆ. ಅದನ್ನೇ ಅವರು ಈ ರೀತಿ ಮೋಸಕ್ಕೆ ಬಳಸಿಕೊಂಡಿದ್ದಾರೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.

“ಆರಂಭದಲ್ಲಿ ನನ್ನ ಜತೆಗಿದ್ದಾಗ ಆಪ್ತ ಫೋಟೋ ಕ್ಲಿಕ್ಕಿಸಿ ವಿಡಿಯೋಗಳನ್ನು ರೆಕಾರ್ಡ್‌ ಮಾಡುತ್ತಿದ್ದ. ನಾನು ಆಗ ಏನೂ ಚಕಾರ ಎತ್ತಿರಲಿಲ್ಲ. ಉದ್ದೇಶಪೂರ್ವಕವಾಗಿ ಈ ರೀತಿ ಮಾಡುತ್ತಿರಬಹುದೆಂದೂ ನಾನು ಅಂದುಕೊಂಡಿರಲಿಲ್ಲ. ನಾನು ಆತನನ್ನು ಸಂಪೂರ್ಣವಾಗಿ ನಂಬಿದ್ದೆ. ಅವರೊಟ್ಟಿಗೆ ಸಿನಿಮಾ ಸಹ ಮಾಡಿದ್ದೆ. ಈ ನಡುವೆ ಚಿತ್ರದ ಸಂಭಾವನೆ ಕೇಳಿದರೆ ಕೊಟ್ಟಿರಲಿಲ್ಲ. ಅಂದಿನಿಂದ ನಮ್ಮಿಬ್ಬರ ನಡುವಿನ ಸಂಬಂಧ ಹಳಸಿತು” ಎಂದಿದ್ದಾರೆ.

“ಇದಾದ ನಂತರ ಆತ ನನ್ನನ್ನು ಅತ್ಯಂತ ಕ್ರೂರವಾಗಿ ನಿಂದಿಸಲು ಆರಂಭಿಸಿದ. ಇದೀಗ ನೋಡಿದರೆ ನನ್ನ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾನೆ” ಎಂದು ನಟಿ ದೂರಿನಲ್ಲಿ ನಮೂದಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ನಿರ್ಮಾಪಕ ದಯಾನಿಧಿ ದಹಿಮಾ ವಿರುದ್ಧ ಕೇಸ್‌ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಇಬ್ಬರ ಲೀವ್‌ ಇನ್‌ ರಿಲೇಶನ್‌ಶಿಪ್‌ ನಂಟು

ಈ ಪ್ರಕರಣದ ಮತ್ತೊಂದು ಮಗ್ಗಲು ನೋಡುವುದಾದರೆ, ನಟನೆಯ ಜತೆಗೆ ಈ ಜೋಡಿ ಕೆಲ ವರ್ಷಗಳಿಂದ ಒಂದೇ ಮನೆಯಲ್ಲಿಯೇ ವಾಸವಾಗಿದೆ. ಒಟ್ಟಿಗೆ ಹಲವು ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದಾರೆ. ಹೀಗಿರುವಾಗಲೇ ಬೇರೆ ಸಿನಿಮಾ ನಿರ್ಮಾಪಕರ ಜತೆಗೆ ನಟಿ ಸಿನಿಮಾ ಮಾಡಲು ಮುಂದಾಗಿದ್ದೇ ದಯಾನಿಧಿ ಕಣ್ಣು ಕೆಂಪಗಾಗಿತ್ತು.

ಬೇರೆ ನಿರ್ಮಾಪಕರ ಜತೆ ಸಿನಿಮಾ ಮಾಡುವುದು ಬೇಡ ಎಂದು ದಯಾನಿಧಿ ಕಿರಿಕ್‌ ತೆಗೆದಿದ್ದಾನೆ. ನನ್ನ ನಿರ್ಮಾಣದ ಸಿನಿಮಾದಲ್ಲಿ ಮಾತ್ರ ನಟಿಸುವಂತೆ ತಾಕೀತು ಹಾಕಿದ್ದಾನೆ. ಇದಕ್ಕೆ ಒಪ್ಪದ ನಟಿಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಕಳೆದ ಎರಡು ವರ್ಷಗಳಿಂದ ಇದು ನಡೆಯುತ್ತಲೇ ಬಂದಿದೆ. ಇದೀಗ ಇಂದು ಹೆಜ್ಜೆ ಮುಂದೆ ಹೋಗಿ ನಟಿಯ ಖಾಸಗಿ ವಿಡಿಯೋ ಶೇರ್‌ ಮಾಡಿದ್ದಾನೆ.

ಮನರಂಜನೆ ಕುರಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ವಿಭಾಗ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ