logo
ಕನ್ನಡ ಸುದ್ದಿ  /  ಮನರಂಜನೆ  /  Adipurush Re Shoot Update: ಸದ್ಯಕ್ಕೆ 'ಆದಿಪುರುಷ್‌' ಬಗ್ಗೆ ಯೋಚನೆ ಮಾಡ್ಲೇಬೇಡಿ ಅಂತಿವೆ ಮೂಲಗಳು..ಇಡೀ ಸಿನಿಮಾ ರೀ ಶೂಟ್‌ ಆಗಲಿದ್ಯಾ?

Adipurush Re shoot update: ಸದ್ಯಕ್ಕೆ 'ಆದಿಪುರುಷ್‌' ಬಗ್ಗೆ ಯೋಚನೆ ಮಾಡ್ಲೇಬೇಡಿ ಅಂತಿವೆ ಮೂಲಗಳು..ಇಡೀ ಸಿನಿಮಾ ರೀ ಶೂಟ್‌ ಆಗಲಿದ್ಯಾ?

HT Kannada Desk HT Kannada

Dec 19, 2022 11:29 AM IST

'ಆದಿಪುರುಷ್‌' ರಿಲೀಸ್‌ ಡೇಟ್‌ ಮುಂದೂಡಿಕೆ

    • 'ಆದಿಪುರುಷ್‌' ಸಿನಿಮಾ ಅನೌನ್ಸ್‌ ಆಗಿ 2 ವರ್ಷಗಳ ನಂತರ ಟೀಸರ್‌ ಬಿಡುಗಡೆ ಮಾಡಲಾಗಿತ್ತು. ಅಂತದ್ದರಲ್ಲಿ ಮತ್ತೆ ಇಡೀ ಸಿನಿಮಾವನ್ನು ರೀ ಶೂಟ್‌ ಮಾಡಿ ಬಿಡುಗಡೆ ಮಾಡಲು ಸದ್ಯಕ್ಕೆ ಸಾಧ್ಯವಾಗದ ಮಾತು ಎಂದೆಲ್ಲಾ ಮಾತುಗಳು ಕೇಳಿಬರುತ್ತಿವೆ.
'ಆದಿಪುರುಷ್‌' ರಿಲೀಸ್‌ ಡೇಟ್‌ ಮುಂದೂಡಿಕೆ
'ಆದಿಪುರುಷ್‌' ರಿಲೀಸ್‌ ಡೇಟ್‌ ಮುಂದೂಡಿಕೆ (PC: Om Raut)

ಪ್ರಭಾಸ್‌ ಅಭಿನಯದ 'ಆದಿಪುರುಷ್‌' ಸಿನಿಮಾ ಆರಂಭವಾದಾಗ ಸಿನಿಪ್ರಿಯರಿಗೆ ಈ ಚಿತ್ರದ ಮೇಲೆ ಬಹಳ ನಿರೀಕ್ಷೆ ಇತ್ತು. ಆದರೆ ಟೀಸರ್‌ ಬಿಡುಗಡೆಯಾದ ನಂತರವಂತೂ ಬಹಳಷ್ಟು ಮಂದಿಯ ಕುತೂಹಲ ಠುಸ್‌ ಎಂದು ಇಳಿದದ್ದಂತೂ ನಿಜ. ಅದಕ್ಕೆ ಕಾರಣ ಟೀಸರ್‌ನಲ್ಲಿ ಚಿತ್ರದ ಪಾತ್ರಗಳನ್ನು ತೋರಿಸಿದ್ದ ರೀತಿ.

ಟ್ರೆಂಡಿಂಗ್​ ಸುದ್ದಿ

Huu ಅಂತೀಯಾ...Uhuu ಅಂತೀಯಾ; ಸ್ಟಾರ್‌ ಸುವರ್ಣದಲ್ಲಿ ಹೊಸ ರಿಯಾಲಿಟಿ ಶೋ, ಗೆದ್ದವರಿಗೆ ಲಕ್ಷ ಲಕ್ಷ ಬಹುಮಾನ

OTT News: ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್‌ 2 ವೆಬ್‌ಸಿರೀಸ್‌ನ ಟ್ರೈಲರ್ ಬಿಡುಗಡೆ; ಜಿಯೊಸಿನಿಮಾ ಮೂಲಕ ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

ಅವ್ರಿಗೊಂದು ದೊಡ್ಡ ನಮಸ್ಕಾರ! ಈಜುಡುಗೆ ಬಗ್ಗೆ ತಮಗಿದ್ದ ಭಯ ಎಷ್ಟು ಎಂಬುದನ್ನು ಮುಚ್ಚುಮರೆಯಿಲ್ಲದೇ ಹೇಳಿದ ಮೀನಾ

10 ವರ್ಷಗಳಲ್ಲಿ ಭಾರತ ಬದಲಾಗಿದೆ ಎಂದಿದ್ದ ರಶ್ಮಿಕಾ ಮಂದಣ್ಣಗೆ ಪರೋಕ್ಷವಾಗಿ ‘ಅಜ್ಞಾನಿ’ ಎಂದು ತಿವಿದ ಚೇತನ್‌ ಅಹಿಂಸಾ

'ಆದಿಪುರುಷ್‌' ಸಿನಿಮಾ 2023 ಸಂಕ್ರಾಂತಿ ವೇಳೆಗೆ ರಿಲೀಸ್‌ ಆಗಲಿದೆ ಎಂದು ಮೊದಲು ಹೇಳಲಾಗಿತ್ತು. ಟೀಸರ್‌ಗೆ ವ್ಯಕ್ತವಾದ ನೆಗೆಟಿವ್‌ ಪ್ರತಿಕ್ರಿಯೆ ನೋಡಿದ ನಂತರ ಚಿತ್ರದಲ್ಲಿ ಗ್ರಾಫಿಕ್ಸ್‌ ಬದಲಿಸುವ ಪ್ಲಾನ್‌ ಮಾಡಿದ ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಜೂನ್‌ಗೆ ಮುಂದೂಡಿತ್ತು. ಆದರೆ ಮುಂದಿನ ವರ್ಷ ಜೂನ್‌ 16ಕ್ಕೆ ಕೂಡಾ ಸಿನಿಮಾ ರಿಲೀಸ್‌ ಆಗುವುದು ಅನುಮಾನ ಎಂದು ಮತ್ತೊಂದು ಮೂಲಗಳು ಹೇಳುತ್ತಿವೆ. 'ಆದಿಪುರುಷ್‌' ಸಿನಿಮಾದಲ್ಲಿ ಕೇವಲ ಗ್ರಾಫಿಕ್ಸ್‌ ಬದಲಿಸುವುದು ಮಾತ್ರವಲ್ಲ, ಈಗ ಚಿತ್ರೀಕರಣ ಮಾಡಿರುವ ಬಹುತೇಕ ಎಲ್ಲಾ ದೃಶ್ಯಗಳನ್ನು ರೀ ಶೂಟ್‌ ಮಾಡಬೇಕಿದೆ. ಆದ್ದರಿಂದ ಸದ್ಯಕ್ಕೆ ಈ ಸಿನಿಮಾವನ್ನು ಪ್ರಭಾಸ್‌ ಅಭಿಮಾನಿಗಳು ಮರೆತುಬಿಡುವುದು ಒಳ್ಳೆಯದು ಎಂಬ ಮಾತು ಕೂಡಾ ಕೇಳಿಬಂದಿದೆ.

ಇದೇ ವರ್ಷ ಅಕ್ಟೋಬರ್‌ 3 ರಂದು ಅಯೋಧ್ಯೆಯಲ್ಲಿ 'ಆದಿಪುರುಷ್‌' ಟೀಸರ್‌ ಬಿಡುಗಡೆ ಆಗಿತ್ತು. ಈ ಟೀಸರ್‌ನಲ್ಲಿ ರಾಮ, ಹನುಮಂತ ಮತ್ತು ರಾವಣನ ಪಾತ್ರಗಳನ್ನು ತೋರಿಸಿರುವ ರೀತಿಗೆ ಟೀಕೆಗಳು ವ್ಯಕ್ತವಾಗಿತ್ತು. ದೃಶ್ಯಗಳನ್ನು ಬದಲಿಸುವಂತೆ ಒತ್ತಡ ಹೆಚ್ಚಾಗಿತ್ತು. ಅದರಲ್ಲೂ ರಾವಣನ ಪಾತ್ರ ಮಾಡಿರುವ ಬಾಲಿವುಡ್‌ ನಟ ಸೈಫ್ ಅಲಿ ಖಾನ್‌ನನ್ನು ಸ್ಟೈಲಿಶ್ ಆಗಿ ಅನಾವರಣ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟಿಜನ್‌ಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಈ ಟೀಸರ್‌ನಲ್ಲಿ ರಾವಣನನ್ನು ಧಾರ್ಮಿಕ ವ್ಯಕ್ತಿಯಾಗಿ ತೋರದೆ, ಉದ್ದನೆಯ ಗಡ್ಡ ಮತ್ತು ಚರ್ಮದ ಜಾಕೆಟ್‌ನೊಂದಿಗೆ ಮುಸ್ಲಿಂ ದೊರೆಯಂತೆ ಚಿತ್ರಿಸಲಾಗಿದೆ ಎಂಬ ಕಾಮೆಂಟ್‌ಗಳು ವ್ಯಕ್ತವಾಗಿತ್ತು.

ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರತಂಡದ ವಿರುದ್ಧ ದೂರು ಕೂಡಾ ದಾಖಲಾಗಿತ್ತು. ಜೊತೆಗೆ ಬಾಯ್‌ಕಾಟ್‌ 'ಆದಿಪುರುಷ್‌' ಅಭಿಯಾನ ಕೂಡಾ ಶುರುವಾಗಿತ್ತು. ಆದ್ದರಿಂದ ನಿರ್ದೇಶಕ ಓಂ ರಾವುತ್‌, ಇಡೀ ಸಿನಿಮಾವನ್ನು ಮರು ಚಿತ್ರೀಕರಣ ಮಾಡಲು ನಿರ್ಧರಿಸಿದ್ದು ಇದಕ್ಕೆ ಮತ್ತೆ ಸಾಕಷ್ಟು ಸಮಯ ಬೇಕು. 2020 ಆಗಸ್ಟ್‌ನಲ್ಲಿ 'ಆದಿಪುರುಷ್‌' ಚಿತ್ರವನ್ನು ಅನೌನ್ಸ್‌ ಮಾಡಲಾಗಿತ್ತು. ಹಾಗೇ ಪ್ರೀ ಪ್ರೊಡಕ್ಷನ್‌ ಕೆಲಸಗಳ ನಂತರ 2021 ಜನವರಿಯಲ್ಲಿ ಚಿತ್ರೀಕರಣ ಶುರುವಾಯ್ತು. ಸಿನಿಮಾ ಅನೌನ್ಸ್‌ ಆಗಿ 2 ವರ್ಷಗಳ ನಂತರ ಟೀಸರ್‌ ಬಿಡುಗಡೆ ಮಾಡಲಾಗಿತ್ತು. ಅಂತದ್ದರಲ್ಲಿ ಮತ್ತೆ ಇಡೀ ಸಿನಿಮಾವನ್ನು ರೀ ಶೂಟ್‌ ಮಾಡಿ ಬಿಡುಗಡೆ ಮಾಡಲು ಸದ್ಯಕ್ಕೆ ಸಾಧ್ಯವಾಗದ ಮಾತು ಎಂದೆಲ್ಲಾ ಮಾತುಗಳು ಕೇಳಿಬರುತ್ತಿವೆ.

'ಆದಿಪುರುಷ್‌' ಚಿತ್ರವನ್ನು ಟೀ ಸೀರಿಸ್‌ ಫಿಲ್ಮ್ಸ್‌, ರೆಟ್ರೋಫಿಲಿಸ್‌ ಬ್ಯಾನರ್‌ ಅಡಿ ಓಂ ರಾವುತ್‌ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಮೂಲ ರಾಮಾಯಣದ ಕಥೆ ಆಧರಿಸಿದ 'ಆದಿಪುರುಷ್‌' ಚಿತ್ರವನ್ನು 550 ಕೋಟಿ ಬಜೆಟ್‌ನಲ್ಲಿ ಚಿತ್ರೀಕರಿಸಲಾಗುತ್ತಿದೆ. ಚಿತ್ರದ ಹಾಡುಗಳಿಗೆ ಅಜಯ್‌ ಹಾಗೂ ಅತುಲ್‌ ಮ್ಯೂಸಿಕ್‌ ನೀಡುತ್ತಿದ್ದಾರೆ. ಸಿನಿಮಾದಲ್ಲಿ ರಾಘವನಾಗಿ ಪ್ರಭಾಸ್‌, ಜಾನಕಿಯಾಗಿ ಕೃತಿ ಸನನ್‌, ಲಂಕೇಶನಾಗಿ ಸೈಫ್‌ ಅಲಿ ಖಾನ್‌, ಲಕ್ಷ್ಮಣನಾಗಿ ಸನ್ನಿ ಸಿಂಗ್‌, ಹನುಮಾನ್‌ ಆಗಿ ದೇವದತ್ತ ನಾಗೆ ಹಾಗೂ ಇನ್ನಿತರರು ನಟಿಸಿದ್ದಾರೆ. ಸಿನಿಮಾ ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ತಯಾರಾಗಿ ಕನ್ನಡ, ತಮಿಳು, ಮಲಯಾಳಂ ಭಾಷೆಗಳಿಗೆ ಡಬ್‌ ಆಗಿ ತೆರೆ ಕಾಣಲಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ