logo
ಕನ್ನಡ ಸುದ್ದಿ  /  ಮನರಂಜನೆ  /  Prem Back To Acting: ಹಾಲಿವುಡ್‌ನಲ್ಲಿ ಮಾತ್ರವಲ್ಲ ಈಗ ಕನ್ನಡದಲ್ಲೂ ಬರ್ತಿದೆ ಆ ಕಾನ್ಸೆಪ್ಟ್‌...ಯುವ ನಿರ್ದೇಶಕನ ಚಿತ್ರದಲ್ಲಿ ಪ್ರೇಮ್‌

Prem Back to Acting: ಹಾಲಿವುಡ್‌ನಲ್ಲಿ ಮಾತ್ರವಲ್ಲ ಈಗ ಕನ್ನಡದಲ್ಲೂ ಬರ್ತಿದೆ ಆ ಕಾನ್ಸೆಪ್ಟ್‌...ಯುವ ನಿರ್ದೇಶಕನ ಚಿತ್ರದಲ್ಲಿ ಪ್ರೇಮ್‌

HT Kannada Desk HT Kannada

Oct 20, 2022 09:53 AM IST

ಶಶಿಧರ್‌ ನಿರ್ದೇಶನದಲ್ಲಿ ನಟಿಸಲಿರುವ ಪ್ರೇಮ್

    • ಶಶಿಧರ್‌, ಫಿಲ್ಮ್‌ ಮೇಕಿಂಗ್‌ ಜೊತೆಗೆ ವಿಎಫ್‌ಎಕ್ಸ್‌ನಲ್ಲಿ ಸಾಕಷ್ಟು ಪರಿಣಿತಿ ಹೊಂದಿದ್ದಾರಂತೆ. ಸಾಮಾನ್ಯವಾಗಿ ಹಾಲಿವುಡ್‌ನಲ್ಲಿ ಜೋಂಬಿ ಸಬ್ಜೆಕ್ಟ್‌ ಕಥೆಗಳನ್ನು ನಾವು ನೋಡಿದ್ದೇವೆ. ಭಾರತೀಯ ಚಿತ್ರರಂಗದಲ್ಲಿ ಇಂತಹ ಸಿನಿಮಾಗಳು ಬಂದಿರುವುದು ಬಹಳ ಕಡಿಮೆ. ಕನ್ನಡದಲ್ಲಿ ಇದೀಗ ಮೊದಲ ಬಾರಿಗೆ ಶಶಿಧರ್‌, ಜೋಂಬಿ ಕಾನ್ಸೆಪ್ಟ್‌ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದಾರೆ.
ಶಶಿಧರ್‌ ನಿರ್ದೇಶನದಲ್ಲಿ ನಟಿಸಲಿರುವ ಪ್ರೇಮ್
ಶಶಿಧರ್‌ ನಿರ್ದೇಶನದಲ್ಲಿ ನಟಿಸಲಿರುವ ಪ್ರೇಮ್ (‌PC: M Shashidhar , Prem S Facebook)

ಮೊದಲ ಪ್ರಯೋಗದಲ್ಲೇ 'ಕರಿಯ'ದಂತ ಹಿಟ್‌ ಸಿನಿಮಾವನ್ನು ನಿರ್ದೇಶಿಸಿದ ಜೋಗಿ ಪ್ರೇಮ್‌, ನಟನಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. 2007 ರಲ್ಲಿ 'ಈ ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರದ ಮೂಲಕ ಪ್ರೇಮ್‌ ನಾಯಕನಾಗಿ ಬಣ್ಣ ಹಚ್ಚಿದರು. ಸಿನಿಮಾ ನಿರೀಕ್ಷಿಸಿದ ಮಟ್ಟಿಗೆ ಯಶಸ್ಸು ಕಾಣದಿದ್ದರೂ ಪ್ರೇಮ್‌ ನಟನೆಯನ್ನು ಸಿನಿಪ್ರಿಯರು ಮೆಚ್ಚಿದ್ದರು.

ಟ್ರೆಂಡಿಂಗ್​ ಸುದ್ದಿ

Amruthadhaare: ರೌಡಿಗಳ ಕೈಯಿಂದ ಮಲ್ಲಿಯನ್ನು ಬಚಾವ್‌ ಮಾಡಿದ್ಲು ಮಹಿಮಾ; ಡುಮ್ಮ ಸರ್‌ ಟೈಟಾದ್ರು, ಐ ಅಂದ್ರು, ಲವ್‌ ಯು ಹೇಳ್ತಾರ

ಬರಲಿದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಯೋಪಿಕ್‌; ಮೋದಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಬಾಹುಬಲಿಯ ಕಟ್ಟಪ್ಪ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ನಂತರ ಪ್ರೇಮ್‌ ನಿರ್ದೇಶನದ ಜೊತೆ ಜೊತೆಗೆ ಕೆಲವು ಸಿನಿಮಾಗಳಲ್ಲಿ ನಟಿಸಿದರು. ಪ್ರೇಮ್‌ ಅಡ್ಡಾ, ದಾಸವಾಳ ಹಾಗೂ ಡಿಕೆ ಚಿತ್ರಗಳಲ್ಲಿ ಪ್ರೇಮ್‌ ನಾಯಕನಾದರು. ಆದರೆ 2015ರಲ್ಲಿ ತೆರೆ ಕಂಡ 'ಡಿಕೆ' ಚಿತ್ರದ ನಂತರ ಪ್ರೇಮ್‌ ಮತ್ತೆ ನಟಿಸಲಿಲ್ಲ. ಸಂಪೂರ್ಣ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದ ಪ್ರೇಮ್‌ ಈಗ 7 ವರ್ಷಗಳ ಬಳಿಕ ಮತ್ತೆ ನಟಿಸುತ್ತಿದ್ದಾರೆ. 'ಏಕ್‌ ಲವ್‌ ಯಾ' ಚಿತ್ರದ ನಂತರ ಪ್ರೇಮ್‌ ಮುಂದಿನ ಸಿನಿಮಾ ಯಾವುದಿರಬಹುದು ಎಂದು ಅವರ ಫ್ಯಾನ್ಸ್‌ ಕುತೂಹಲದಿಂದ ಕಾಯುತ್ತಿದ್ದರು. ಈ ನಡುವೆ ಪ್ರೇಮ್‌, ಧ್ರುವಾ ಜೊತೆ ಪ್ಯಾನ್‌ ಇಂಡಿಯಾ ಸಿನಿಮಾ ಅನೌನ್ಸ್‌ ಮಾಡಿದರು. 'ದಿ ವಿಲನ್‌' ಚಿತ್ರದ ಬಿಡುಗಡೆ ಸಮಯದಲ್ಲಿ 6 ಹೀರೋಗಳನ್ನು ಕರೆ ತರುತ್ತೇನೆ ಎಂದು ಹೇಳಿ ಟ್ರೋಲ್‌ ಆಗಿದ್ದ ಪ್ರೇಮ್‌ ಕೊನೆಗೂ ಆ 6 ಹೀರೋಗಳನ್ನು ಭೇಟಿ ಮಾಡಿ ಕುತೂಹಲ ಕೆರಳಿಸಿದ್ದಾರೆ.

ಇದೀಗ ಧ್ರುವ ಸರ್ಜಾಗೆ ಆಕ್ಷನ್‌ ಕಟ್‌ ಹೇಳೋದ್ರ ಜೊತೆ ಪ್ರೇಮ್‌, ಬೇರೊಬ್ಬರ ನಿರ್ದೇಶನದಲ್ಲಿ ನಟನೆ ಕೂಡಾ ಮಾಡಲು ಹೊರಟಿದ್ದಾರೆ. ಮೈಸೂರಿನ ಯುವ ನಿರ್ದೇಶಕ ಶಶಿಧರ್‌ ಎಂಬುವವರು ಈ ಚಿತ್ರವನ್ನು ಡೈರೆಕ್ಟ್‌ ಮಾಡ್ತಿದ್ದಾರಂತೆ. ಇದೊಂದು ಜೋಂಬಿ ಕಥೆಯಾಗಿದ್ದು ಈಗಾಗಲೇ ಸಿನಿಮಾಗೆ ಬೇಕಾದ ಎಲ್ಲಾ ತಯಾರಿ ಕೂಡಾ ಆಗಿದ್ಯಂತೆ. ಸಾಮಾನ್ಯವಾಗಿ ಹಾಲಿವುಡ್‌ನಲ್ಲಿ ಜೋಂಬಿ ಸಬ್ಜೆಕ್ಟ್‌ ಕಥೆಗಳನ್ನು ನಾವು ನೋಡಿದ್ದೇವೆ. ಭಾರತೀಯ ಚಿತ್ರರಂಗದಲ್ಲಿ ಇಂತಹ ಸಿನಿಮಾಗಳು ಬಂದಿರುವುದು ಬಹಳ ಕಡಿಮೆ. ಕನ್ನಡದಲ್ಲಿ ಇದೀಗ ಮೊದಲ ಬಾರಿಗೆ ಶಶಿಧರ್‌, ಜೋಂಬಿ ಕಾನ್ಸೆಪ್ಟ್‌ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುತ್ತಿದ್ದಾರೆ.

ಶಶಿಧರ್‌, ಫಿಲ್ಮ್‌ ಮೇಕಿಂಗ್‌ ಜೊತೆಗೆ ವಿಎಫ್‌ಎಕ್ಸ್‌ನಲ್ಲಿ ಸಾಕಷ್ಟು ಪರಿಣಿತಿ ಹೊಂದಿದ್ದಾರಂತೆ. ಇದಕ್ಕೂ ಮುನ್ನ 'ಘಾರ್ಗಾ' ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಜೋಗಿ ಚಿತ್ರವನ್ನು ನಿರ್ಮಿಸಿದ್ದ ಅಶ್ವಿನಿ ಪ್ರೊಡಕ್ಷನ್ಸ್‌ ಹಾಗೂ ಪ್ರೇಮ್‌ ಡ್ರೀಮ್ಸ್‌ ಪ್ರೊಡಕ್ಷನ್ಸ್‌ ಜೊತೆ ಸೇರಿ ಈ ಚಿತ್ರವನ್ನು ನಿರ್ಮಿಸುತ್ತಿದೆ. ಒಟ್ಟಿನಲ್ಲಿ ಈ ಸಿನಿಮಾ ಬಹಳ ಕುತೂಹಲ ಮೂಡಿಸಿದ್ದು ಪ್ರೇಮ್‌, ಈ ಚಿತ್ರದಲ್ಲಿ ಯಾವ ಪಾತ್ರದಲ್ಲಿ ಹಾಗೂ ಹೇಗೆ ನಟಿಸಲಿದ್ದಾರೆ ಎಂಬುದನ್ನು ನೋಡಲು ಸಿನಿಪ್ರಿಯರು ಕಾಯುತ್ತಿದ್ದಾರೆ.

ವಿವಿಧ ಭಾಷೆಗಳ ಖ್ಯಾತ ನಟರನ್ನು ಭೇಟಿ ಮಾಡಿರುವ ಪ್ರೇಮ್‌

ಇನ್ನು ಧ್ರುವ ಸರ್ಜಾ ಜೊತೆ ಪ್ಯಾನ್‌ ಇಂಡಿಯಾ ಸಿನಿಮಾ ಮಾಡುತ್ತಿರುವ ಪ್ರೇಮ್‌, ಇತ್ತೀಚೆಗಷ್ಟೇ ಮಾಲಿವುಡ್‌ ನಟ ಮೋಹನ್‌ಲಾಲ್‌ ಅವರನ್ನು ಭೇಟಿ ಮಾಡಿ ಬಂದಿದ್ದ ಪ್ರೇಮ್‌, ಇದೀಗ ಬಾಲಿವುಡ್‌ ಕಡೆ ಮುಖ ಮಾಡಿದ್ದಾರೆ. ಸಂಜಯ್‌ ದತ್‌ ಅವರನ್ನೂ ಭೇಟಿ ಮಾಡಿ, ಈ ಹಿಂದೆ ಹರಿದಾಡಿದ ಸುದ್ದಿಗೆ ಜೀವ ತುಂಬಿದ್ದಾರೆ. ಜೊತೆಗೆ ವಿಜಯ್‌ ಸೇತುಪತಿ, ಪೃಥ್ವಿರಾಜ್‌ ಸುಕುಮಾರನ್‌ ಅವರನ್ನೂ ಭೇಟಿ ಮಾಡಿದ್ದಾರೆ. ಪ್ರೇಮ್‌ ಇತ್ತೀಚೆಗೆ ಶಿವರಾಜ್‌ಕುಮಾರ್‌, ಬಾಲಿವುಡ್‌ ನಟ ಸಂಜಯ್‌ ದತ್‌, ತಮಿಳು ನಟ ವಿಜಯ್‌ ಸೇತುಪತಿ, ಮಲಯಾಳಂ ನಟರಾದ ಪೃಥ್ವಿರಾಜ್‌ ಸುಕುಮಾರನ್‌, ಮೋಹನ್‌ ಲಾಲ್‌ ಜೊತೆಗೆ ಇರುವ ಫೋಟೋಗಳು ವೈರಲ್‌ ಆಗುತ್ತಿದೆ. ಅದರಲ್ಲೂ ವಿಜಯ್‌ ಸೇತುಪತಿ ಅವರೊಂದಿಗೆ ಪ್ರೇಮ್‌ ಚಿತ್ರದ ಬಗ್ಗೆ ಚರ್ಚಿಸುತ್ತಿರುವ ಫೋಟೋ ಬಹಳ ಗಮನ ಸೆಳೆದಿದೆ. ಈ ಫೋಟೋದಲ್ಲಿ ಪ್ರೇಮ್‌ ಮಾತುಗಳನ್ನು ವಿಜಯ್‌ ಸೇತುಪತಿ ಬಹಳ ಆಸಕ್ತಿಯಿಂದ ಕೇಳುತ್ತಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ