logo
ಕನ್ನಡ ಸುದ್ದಿ  /  ಮನರಂಜನೆ  /  Pushpa Poster: ಕೈಯಲ್ಲಿ ಗನ್‌ ಹಿಡಿದು ಕಾಳಿಯಾದ ಅಲ್ಲು ಅರ್ಜುನ್‌!; ವಿವಾದಕ್ಕೆ ಒಗ್ಗರಣೆ ಹಾಕುತ್ತಾ ‘ಪುಷ್ಪ’ ಹೊಸ ಪೋಸ್ಟರ್?

Pushpa Poster: ಕೈಯಲ್ಲಿ ಗನ್‌ ಹಿಡಿದು ಕಾಳಿಯಾದ ಅಲ್ಲು ಅರ್ಜುನ್‌!; ವಿವಾದಕ್ಕೆ ಒಗ್ಗರಣೆ ಹಾಕುತ್ತಾ ‘ಪುಷ್ಪ’ ಹೊಸ ಪೋಸ್ಟರ್?

Apr 08, 2023 12:25 PM IST

ಕೈಯಲ್ಲಿ ಗನ್‌ ಹಿಡಿದು ಕಾಳಿಯಾದ ಅಲ್ಲು ಅರ್ಜುನ್‌!; ವಿವಾದಕ್ಕೆ ಒಗ್ಗರಣೆ ಹಾಕುತ್ತಾ ‘ಪುಷ್ಪ’ ಹೊಸ ಪೋಸ್ಟರ್?

    • ಗನ್‌ ಹಿಡಿದು ಕಾಳಿ ವೇಷದಲ್ಲಿ ಅಲ್ಲು ಅರ್ಜುನ್ ಎದುರಾಗಿದ್ದಾರೆ. ವಿವಾದಕ್ಕೆ ಕಾರಣವಾಗುತ್ತಾ ಪುಷ್ಪ ಚಿತ್ರದ ಹೊಸ ಲುಕ್? ನೆಟ್ಟಿಗ ವಲಯದಲ್ಲಿ ಶುರುವಾಗಿದೆ ಚರ್ಚೆ.   
ಕೈಯಲ್ಲಿ ಗನ್‌ ಹಿಡಿದು ಕಾಳಿಯಾದ ಅಲ್ಲು ಅರ್ಜುನ್‌!; ವಿವಾದಕ್ಕೆ ಒಗ್ಗರಣೆ ಹಾಕುತ್ತಾ ‘ಪುಷ್ಪ’ ಹೊಸ ಪೋಸ್ಟರ್?
ಕೈಯಲ್ಲಿ ಗನ್‌ ಹಿಡಿದು ಕಾಳಿಯಾದ ಅಲ್ಲು ಅರ್ಜುನ್‌!; ವಿವಾದಕ್ಕೆ ಒಗ್ಗರಣೆ ಹಾಕುತ್ತಾ ‘ಪುಷ್ಪ’ ಹೊಸ ಪೋಸ್ಟರ್?

Pushpa Poster: ಅಲ್ಲು ಅರ್ಜುನ್‌ ನಟನೆಯ ಬಹುನಿರೀಕ್ಷಿತ ‘ಪುಷ್ಪ; ದಿ ರೂಲ್’‌ ಚಿತ್ರ ಇದೀಗ ಟೀಸರ್‌ ಮೂಲಕ ಪ್ರೇಕ್ಷಕರ ಮುಂದೆ ಬಂದಿದೆ. ಕಳೆದ ವರ್ಷ ಬಿಡುಗಡೆ ಆಗಿದ್ದ ಚಿತ್ರದ ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿತ್ತು. ಬಾಕ್ಸ್‌ ಆಫೀಸ್‌ನಲ್ಲಿ 400 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು. ಅಲ್ಲು ಅರ್ಜುನ್‌ ವೃತ್ತಿ ಜೀವನಕ್ಕೂ ಇದು ದೊಡ್ಡ ಮೈಲೇಜ್‌ ತಂದುಕೊಟ್ಟಿತ್ತು. ಇದೀಗ ‘ಪುಷ್ಪ’ ಚಿತ್ರದ ಎರಡನೇ ಭಾಗದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಟೀಸರ್‌ ಜತೆಗೆ ಹೊರಬಂದ ಕಾಳಿ ಅವತಾರದ ಲುಕ್‌ ಸಹ ಎಲ್ಲರ ಕಣ್ಣರಳಿಸಿದೆ.

ಟ್ರೆಂಡಿಂಗ್​ ಸುದ್ದಿ

Huu ಅಂತೀಯಾ...Uhuu ಅಂತೀಯಾ; ಸ್ಟಾರ್‌ ಸುವರ್ಣದಲ್ಲಿ ಹೊಸ ರಿಯಾಲಿಟಿ ಶೋ, ಗೆದ್ದವರಿಗೆ ಲಕ್ಷ ಲಕ್ಷ ಬಹುಮಾನ

OTT News: ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್‌ 2 ವೆಬ್‌ಸಿರೀಸ್‌ನ ಟ್ರೈಲರ್ ಬಿಡುಗಡೆ; ಜಿಯೊಸಿನಿಮಾ ಮೂಲಕ ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

10 ವರ್ಷಗಳಲ್ಲಿ ಭಾರತ ಬದಲಾಗಿದೆ ಎಂದಿದ್ದ ರಶ್ಮಿಕಾ ಮಂದಣ್ಣಗೆ ಪರೋಕ್ಷವಾಗಿ ‘ಅಜ್ಞಾನಿ’ ಎಂದು ತಿವಿದ ಚೇತನ್‌ ಅಹಿಂಸಾ

ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರು ಬಂದರೂ ಅದು ಮಹಾಪಾಪ! ಮೋದಿ ವಿರುದ್ಧ ತಿರುಗಿ ಬಿದ್ದ ಕಿಶೋರ್‌

ರಕ್ತಚಂದನ ಕಳ್ಳ ಸಾಗಾಣಿಕೆ ಕಥಾಹಂದರದ ‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್ ಅಬ್ಬರಿಸಿ ಬೊಬ್ಬಿರಿದ್ದರು. ಅಲ್ಲು ಆಕ್ಟಿಂಗ್, ಸುಕುಮಾರ್ ಟೀಕಿಂಗ್ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿತ್ತು. ಬೆಳ್ಳಿಪರದೆಯಲ್ಲಿ ಅಖಂಡ ಗೆಲುವು ಕಂಡ ‘ಪುಷ್ಪ’ ಚಿತ್ರದ ಪಾರ್ಟ್-2 ಮೇಲೆ ನಿರೀಕ್ಷೆ ಹೆಚ್ಚಿದೆ. ‘ಪುಷ್ಪ’ ಸೀಕ್ವೆಲ್ ಹೇಗಿರುತ್ತದೆ ಎಂಬ ಕೌತುಕದ ನಡುವೆ ‘ಪುಷ್ಪ -2’ ಅಂಗಳದಿಂದ ಇದೀಗ ಟೀಸರ್ ಹೊರಬಿದ್ದಿದ್ದು, ಕೌತುಕ ಇಮ್ಮಡಿಯಾಗಿದೆ.

ಕಾಳಿ ವೇಷದಲ್ಲಿ ಅಲ್ಲು ಅರ್ಜುನ್..‌

ಅಲ್ಲು ಅರ್ಜುನ್‌ ಅವರ ಬರ್ತ್‌ಡೇ ಪ್ರಯುಕ್ತ ‘ಪುಷ್ಪ; ದಿ ರೂಲ್’‌ ಸಿನಿಮಾದ ಹೊಸ ಹೊಸ ಅಪ್‌ಡೇಟ್‌ಗಳು ಹೊರಬಿದ್ದಿವೆ. ಟೀಸರ್‌ ನೋಡಿದ ಅಭಿಮಾನಿಗಳು, ‘ಪುಷ್ಪ; ದಿ ರೂಲ್’‌ ಚಿತ್ರದ ಹೊಸ ಪೋಸ್ಟರ್‌ಗೂ ಮನಸೋತಿದ್ದಾರೆ. ನೆಚ್ಚಿನ ನಟನ ಕಾಳಿ ಅವತಾರ ಕಂಡು ಹುಬ್ಬೇರಿಸಿದ್ದಾರೆ. ನೀಲಿ ವರ್ಣದ ಮೈ ಬಣ್ಣ, ಕೊರಳಿಗೆ ನಿಂಬೆ ಹಣ್ಣಿನ ಮಾಲೆ, ಹೂವಿನ ಮಾಲೆ ಜತೆಗೊಂದಿಷ್ಟು ಆಭರಣ ಧರಿಸಿ ಪೋಸ್‌ ನೀಡಿದ್ದಾರೆ. ಕೈಯಲ್ಲಿ ಗನ್‌ ಹಿಡಿದು ರೋಷಾವೇಶದ ಭಂಗಿಯಲ್ಲಿ ಎದುರಾಗಿದ್ದಾರೆ.

ವಿವಾದ ಸೃಷ್ಟಿಸುತ್ತಾ ಈ ಲುಕ್‌?

ಕಳೆದ ವರ್ಷ ನಿರ್ದೇಶಕಿ ಲೀನಾ ಮಣಿಮೇಕಲೈ ಸಿಗರೇಟ್‌ ಸೇದುತ್ತಿರುವ ಭಂಗಿಯ ಕಾಳಿ ಫೋಟೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿ ವಿವಾದಕ್ಕೆ ತುಪ್ಪ ಸುರಿದಿದ್ದರು. ಉತ್ತರ ಪ್ರದೇಶದ ಹಜರತ್‌ಗಂಜ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪಿತೂರಿ, ಪೂಜಾ ಸ್ಥಳದಲ್ಲಿ ಅಪರಾಧ, ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪ ಮತ್ತು ಶಾಂತಿ ಕದಡುವ ಉದ್ದೇಶದ ಆರೋಪದ ಮೇಲೆ ಎಫ್‌ಐಆರ್ ಸಹ ದಾಖಲಿಸಲಾಗಿತ್ತು. ಇದೀಗ ಅಲ್ಲು ಅರ್ಜುನ್‌ ಅವರ ಕಾಳಿ ಫೋಟೋ ಸಹ ಹೊರಬಿದ್ದಿದ್ದು, ಕೈಯಲ್ಲಿ ಗನ್‌ ನೀಡಿದ್ದಾರೆ. ಇದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.

ಸುಕುಮಾರ್‌ ನಿರ್ದೇಶನದ ಪುಷ್ಪ 2 ಸಿನಿಮಾ ಈಗಾಗಲೇ ದೊಡ್ಡ ಮಟ್ಟದ ಹೈಪ್‌ ಸೃಷ್ಟಿ ಮಾಡಿದೆ. ಅಲ್ಲು ಅರ್ಜುನ್‌ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು, ಫಹಾದ್ ಫಾಸಿಲ್, ಅನುಸೂಯ, ಸುನಿಲ್ ಮತ್ತು ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಪ್ರೊಡಕ್ಷನ್ ನಡಿ ಮೂಡಿಬರುತ್ತಿರುವ ಪುಷ್ಪ-2 ಸಿನಿಮಾಗೆ ರಾಕ್‌ಸ್ಟಾರ್ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾ‌ಡುತ್ತಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ