logo
ಕನ್ನಡ ಸುದ್ದಿ  /  ಮನರಂಜನೆ  /  Rrr In Japan: ಜಪಾನಿನಲ್ಲಿ ಹೊಸ ದಾಖಲೆ ಬರೆದ 'ಆರ್‌ಆರ್‌ಆರ್‌'... ರಜನಿಕಾಂತ್‌ ಸಿನಿಮಾ ರೆಕಾರ್ಡ್‌ ಬ್ರೇಕ್‌ ಮಾಡಿದ ರಾಜಮೌಳಿ!

RRR in Japan: ಜಪಾನಿನಲ್ಲಿ ಹೊಸ ದಾಖಲೆ ಬರೆದ 'ಆರ್‌ಆರ್‌ಆರ್‌'... ರಜನಿಕಾಂತ್‌ ಸಿನಿಮಾ ರೆಕಾರ್ಡ್‌ ಬ್ರೇಕ್‌ ಮಾಡಿದ ರಾಜಮೌಳಿ!

HT Kannada Desk HT Kannada

Feb 15, 2023 10:03 PM IST

ಜಪಾನಿನಲ್ಲಿ ಹೊಸ ದಾಖಲೆ ಬರೆದ 'ಆರ್‌ಆರ್‌ಆರ್‌' ಚಿತ್ರತಂಡ

    • ಕಳೆದ ವರ್ಷದ ಅಂತ್ಯದಲ್ಲಿ ಜಪಾನ್‌ನಲ್ಲಿ ಕೂಡಾ ಸಿನಿಮಾ ರಿಲೀಸ್‌ ಆಗಿತ್ತು. ಈ ಸಮಯದಲ್ಲಿ ನಿರ್ದೇಶಕ ರಾಜಮೌಳಿ ಜೊತೆಗೆ ಜ್ಯೂ. ಎನ್‌ಟಿಆರ್ ಹಾಗೂ ರಾಮ್‌ ಚರಣ್ ಹೋಗಿ ಪ್ರಚಾರ ನಡೆಸಿದ್ದು ಗೊತ್ತೇ ಇದೆ. ಇಂದಿಗೂ ಜಪಾನ್‌ನಲ್ಲಿ ಈ ಚಿತ್ರದ ಅಬ್ಬರ ಮಾತ್ರ ಕಡಿಮೆ ಆಗಿಲ್ಲ. ಈ ಸಿನಿಮಾ ಜಪಾನಿನಲ್ಲಿ ಕೂಡಾ ಭಾರೀ ಲಾಭ ಮಾಡುತ್ತಿದೆ.
ಜಪಾನಿನಲ್ಲಿ ಹೊಸ ದಾಖಲೆ ಬರೆದ 'ಆರ್‌ಆರ್‌ಆರ್‌' ಚಿತ್ರತಂಡ
ಜಪಾನಿನಲ್ಲಿ ಹೊಸ ದಾಖಲೆ ಬರೆದ 'ಆರ್‌ಆರ್‌ಆರ್‌' ಚಿತ್ರತಂಡ

'ಆರ್‌ಆರ್‌ಆರ್‌' ಸಿನಿಮಾ ತಂಡ ಎಲ್ಲಿ ಹೋದರೂ ವಿಜಯಲಕ್ಷ್ಮಿ ಹಿಂಬಾಲಿಸುತ್ತಿದ್ದಾಳೆ ಅನ್ನೋದಕ್ಕೆ ಮತ್ತೊಂದು ಉದಾಹರಣೆ ದೊರೆತಿದೆ. ಬಿಡುಗಡೆಯಾಗಿ ಭಾರತದಲ್ಲಿ ಭಾರೀ ಲಾಭ ಮಾಡಿದ್ದ ಈ ಚಿತ್ರ ಅಂತಾರಾಷ್ಟ್ರೀಯ ಸಿನಿ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತ್ತು. ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ಪಡೆದ ನಂತರ ಆಸ್ಕರ್‌ಗೆ ನಾಮಿನೇಟ್‌ ಆಗಿತ್ತು. ಇದೀಗ ಈ ಚಿತ್ರ ಜಪಾನಿನಲ್ಲಿ ಹೊಸ ದಾಖಲೆ ಬರೆದಿದೆ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಮತ್ತಷ್ಟು ಹಿರಿದಾಯ್ತು ಕಣ್ಣಪ್ಪ ಸಿನಿಮಾ ತಾರಾಬಳಗ; ಅಕ್ಷಯ್‌ ಕುಮಾರ್‌, ಪ್ರಭಾಸ್‌ ಬಳಿಕ ಕಾಜಲ್‌ ಅಗರ್ವಾಲ್ ಎಂಟ್ರಿ

ಎಸ್‌.ಎಸ್‌. ರಾಜಮೌಳಿ, ತಾವು ನಿರ್ದೇಶಿಸಿದ ಎಲ್ಲಾ ಸಿನಿಮಾಗಳಲ್ಲೂ ಸಕ್ಸಸ್‌ ಕಂಡಿದ್ದಾರೆ. ಜ್ಯೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಬಹುತಾರಾಗಣದ ಸಿನಿಮಾ, ವಿಶ್ವಾದ್ಯಂತ ಸಿನಿಪ್ರಿಯರ ಮೆಚ್ಚುಗೆ ಗಳಿಸಿದೆ. ಅನೇಕ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿಗಳನ್ನೂ ಬಾಚಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸಾವಿರ ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದ 'ಆರ್‌ಆರ್‌ಆರ್‌' ಸಿನಿಮಾ, ಯುಸ್‌ ಮತ್ತು ಚೀನಾದಲ್ಲಿ ಖೂಡಾ ಅದ್ಭುತ ಪ್ರತಿಕ್ರಿಯೆ ಪಡೆದಿದೆ. ಕಳೆದ ವರ್ಷದ ಅಂತ್ಯದಲ್ಲಿ ಜಪಾನ್‌ನಲ್ಲಿ ಕೂಡಾ ಸಿನಿಮಾ ರಿಲೀಸ್‌ ಆಗಿತ್ತು. ಈ ಸಮಯದಲ್ಲಿ ನಿರ್ದೇಶಕ ರಾಜಮೌಳಿ ಜೊತೆಗೆ ಜ್ಯೂ. ಎನ್‌ಟಿಆರ್ ಹಾಗೂ ರಾಮ್‌ ಚರಣ್ ಹೋಗಿ ಪ್ರಚಾರ ನಡೆಸಿದ್ದು ಗೊತ್ತೇ ಇದೆ. ಇಂದಿಗೂ ಜಪಾನ್‌ನಲ್ಲಿ ಈ ಚಿತ್ರದ ಅಬ್ಬರ ಮಾತ್ರ ಕಡಿಮೆ ಆಗಿಲ್ಲ. ಈ ಸಿನಿಮಾ ಜಪಾನಿನಲ್ಲಿ ಕೂಡಾ ಭಾರೀ ಲಾಭ ಮಾಡುತ್ತಿದೆ.

'ಆರ್‌ಆರ್‌ಆರ್‌' ಜಪಾನೀಸ್ ಆವೃತ್ತಿಯನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಜಪಾನಿ ಸಿನಿ ಪ್ರೇಮಿಗಳು ಈ ಚಿತ್ರವನ್ನು ಬಹಳ ಎಂಜಾಯ್ ಮಾಡುತ್ತಿದ್ದಾರೆ. ಜಪಾನ್‌ನಲ್ಲಿ, ಸೂಪರ್‌ಸ್ಟಾರ್ ರಜನಿಕಾಂತ್ ಅವರ 'ಮುತ್ತು' ಚಿತ್ರದ, 24 ವರ್ಷಗಳ ಹಳೆಯ ದಾಖಲೆಯನ್ನು 'ಆರ್‌ಆರ್‌ಆರ್‌' ಸಿನಿಮಾ ಬ್ರೇಕ್‌ ಮಾಡಿದೆ. ಈ ಮೂಲಕ ಜಪಾನ್‌ ದೇಶದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವರದಿಗಳ ಪ್ರಕಾರ ಈ ಸಿನಿಮಾ ಜಪಾನಿನಲ್ಲಿ ಇದುವರೆಗೆ 950 ಮಿಲಿಯನ್ ಜಪಾನೀಸ್ ಯೆನ್ ಸಂಗ್ರಹಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಒಂದು ಬಿಲಿಯನ್ ಗಡಿ ದಾಟಲಿದೆ. ಈ ಸುದ್ದಿ ಚಿತ್ರತಂಡಕ್ಕೆ ಬಹಳ ಖುಷಿ ನೀಡಿದೆ. ಸಿನಿಮಾ, ಕಲೆಕ್ಷನ್‌ನಲ್ಲಿ 1 ಬಿಲಿಯನ್ ಗಡಿ ದಾಟಿದರೆ, ಈ ದಾಖಲೆ ಮಾಡಿದ ಮೊದಲ ಭಾರತೀಯ ಚಿತ್ರವಾಗಲಿದೆ.

'ಆರ್‌ಆರ್‌ಆರ್‌' ಚಿತ್ರವನ್ನು ಡಿವಿವಿ ಎಂಟರ್ಟೈನ್ಮೆಂಟ್‌ ಬ್ಯಾನರ್‌ ಅಡಿ ದಾನಯ್ಯ ನಿರ್ಮಿಸಿದ್ದು ರಾಜಮೌಳಿ ಆಕ್ಷನ್‌ ಕಟ್‌ ಹೇಳಿದ್ದಾರೆ. ಜೂನಿಯರ್ ಎನ್‌ಟಿಆರ್ ಮತ್ತು ರಾಮಚರಣ್ ಜೊತೆಗೆ ಅಜಯ್ ದೇವಗನ್, ಒಲಿವಿಯಾ ಮೋರಿಸ್ ಮತ್ತು ಆಲಿಯಾ ಭಟ್ , ಶ್ರಿಯಾ ಸರನ್‌ ಹಾಗೂ ಇನ್ನಿತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಂ.ಎಂ. ಕೀರವಾಣಿ, ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್‌ 'ಆರ್‌ಆರ್‌ಆರ್‌' ಚಿತ್ರದ ಕಥೆ ಬರೆದಿದ್ದಾರೆ. ಈ ಸಿನಿಮಾ ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆ ಮಾಡಲಿ ಎಂದು ತೆಲುಗು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ