logo
ಕನ್ನಡ ಸುದ್ದಿ  /  ಮನರಂಜನೆ  /  Bad Manners Trailer: ನೀವೇ ನೋಡ್ರಪ್ಪ ಯಾರು ಹೈಟು ಅಂತ.. ಅಭಿ, ಧನ್ವೀರ್‌, ವಿಕ್ಕಿಗಿಂತ್ಲೂ ನಾವೇ ಕುಳ್ಳರು! ದರ್ಶನ್‌ ಹಾಸ್ಯ ಕಚಗುಳಿ

Bad Manners Trailer: ನೀವೇ ನೋಡ್ರಪ್ಪ ಯಾರು ಹೈಟು ಅಂತ.. ಅಭಿ, ಧನ್ವೀರ್‌, ವಿಕ್ಕಿಗಿಂತ್ಲೂ ನಾವೇ ಕುಳ್ಳರು! ದರ್ಶನ್‌ ಹಾಸ್ಯ ಕಚಗುಳಿ

Nov 13, 2023 12:13 PM IST

Bad Manners Trailer: ನೀವೇ ನೋಡ್ರಪ್ಪ ಯಾರು ಹೈಟು ಅಂತ.. ಅಭಿ, ಧನ್ವೀರ್‌, ವಿಕ್ಕಿಗಿಂತ್ಲೂ ನಾವೇ ಕುಳ್ಳರು! ದರ್ಶನ್‌ ಹಾಸ್ಯ ಕಚಗುಳಿ

    • ದುನಿಯಾ ಸೂರಿ ನಿರ್ದೇಶನದ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾದ ಟ್ರೇಲರ್‌ ಬಿಡುಗಡೆ ಆಗಿದೆ. ಈ ಟ್ರೇಲರ್‌ ರಿಲೀಸ್‌ ಮಾಡಲು ನಟ ದರ್ಶನ್‌ ಆಗಮಿಸಿದ್ದರು. ಇದೇ ವೇಳೆ ಟ್ರೇಲರ್‌ ಮೆಚ್ಚಿ, ಅಭಿಷೇಕ್‌ ಅಂಬರೀಶ್‌ ಬಗ್ಗೆಯೂ ಮಾತನಾಡಿದರು. 
Bad Manners Trailer: ನೀವೇ ನೋಡ್ರಪ್ಪ ಯಾರು ಹೈಟು ಅಂತ.. ಅಭಿ, ಧನ್ವೀರ್‌, ವಿಕ್ಕಿಗಿಂತ್ಲೂ ನಾವೇ ಕುಳ್ಳರು! ದರ್ಶನ್‌ ಹಾಸ್ಯ ಕಚಗುಳಿ
Bad Manners Trailer: ನೀವೇ ನೋಡ್ರಪ್ಪ ಯಾರು ಹೈಟು ಅಂತ.. ಅಭಿ, ಧನ್ವೀರ್‌, ವಿಕ್ಕಿಗಿಂತ್ಲೂ ನಾವೇ ಕುಳ್ಳರು! ದರ್ಶನ್‌ ಹಾಸ್ಯ ಕಚಗುಳಿ

Bad Manners Trailer: ಸ್ಯಾಂಡಲ್‌ವುಡ್‌ ನಟ ಅಭಿಷೇಕ್‌ ಅಂಬರೀಶ್‌ ಸದ್ಯ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ ಗುಂಗಿನಲ್ಲಿದ್ದಾರೆ. ಇನ್ನೇನು ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ದುನಿಯಾ ಸೂರಿ ನಿರ್ದೇಶನದ ಸಿನಿಮಾ ಎಂಬ ಕಾರಣಕ್ಕೂ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ ನಿರೀಕ್ಷೆ ಹೆಚ್ಚಿಸಿಕೊಂಡಿದೆ. ಸಿನಿಮಾ ಮೇಕಿಂಗ್‌ ಸ್ಟೈಲ್‌ನಿಂದಲೇ ಸೂರಿ ಅವರ ಸಿನಿಮಾಗಳು ಹೆಚ್ಚೆಚ್ಚು ಸದ್ದು ಮಾಡಿದ ಉದಾಹರಣೆಗಳಿವೆ. ಇದೀಗ ಬ್ಯಾಡ್‌ ಮ್ಯಾನರ್ಸ್‌ ಸರದಿ. ಟ್ರೇಲರ್‌ ಮೂಲಕ ಮತ್ತೆ ಎಂದಿನಂತೆ ತಮ್ಮ ರಾ ಸ್ಟೈಲ್‌ ಹೊರಗೆಡವಿದ್ದಾರೆ ಸೂರಿ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಮತ್ತಷ್ಟು ಹಿರಿದಾಯ್ತು ಕಣ್ಣಪ್ಪ ಸಿನಿಮಾ ತಾರಾಬಳಗ; ಅಕ್ಷಯ್‌ ಕುಮಾರ್‌, ಪ್ರಭಾಸ್‌ ಬಳಿಕ ಕಾಜಲ್‌ ಅಗರ್ವಾಲ್ ಎಂಟ್ರಿ

ಹೀಗೆ ಮಾಸ್‌ ಅವತಾರದಲ್ಲಿಯೇ ಮೂಡಿಬಂದ ಬ್ಯಾಡ್‌ ಮ್ಯಾನರ್ಸ್‌ ಸಿನಿಮಾದ ಟ್ರೇಲರ್‌ಅನ್ನು ಸ್ಯಾಂಡಲ್‌ವುಡ್‌ ದಾಸ ದರ್ಶನ್‌ ಬಿಡುಗಡೆ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. ದರ್ಶನ್‌ ಜತೆಗೆ ನಟರಾದ ವಿನೋದ್‌ ಪ್ರಭಾಕರ್‌, ಧನ್ವೀರ್‌ ಗೌಡ, ರವಿಚಂದ್ರನ್‌ ಅವರ ಕಿರಿ ಮಗ ವಿಕ್ರಂ ಸಹ ವೇದಿಕೆ ಮೇಲಿದ್ದರು. ಈ ವೇಳೆ ಸಿನಿಮಾ ಸೇರಿ ಅಭಿಷೇಕ್‌ ಅಂಬರೀಷ್‌ ಬಗ್ಗೆಯೂ ಮಾತನಾಡಿದರು ದರ್ಶನ್‌. ಇನ್ಮೇಲೆ ಅಭಿ ಯಂಗ್‌ ರೆಬೆಲ್‌ ಸ್ಟಾರ್‌ ಅಲ್ಲ, ರಿಯಲ್‌ ರೆಬೆಲ್‌ ಸ್ಟಾರ್‌ ಎಂದು ಗುಣಗಾನ ಮಾಡಿದ್ದಾರೆ. ಹೀಗಿದೆ ದರ್ಶನ್‌ ಮಾತು.

ಯಂಗ್‌ ರೆಬೆಲ್‌ ಅಲ್ಲ.. ರಿಯಲ್‌ ರೆಬೆಲ್‌ ಸ್ಟಾರ್‌

ನೀವೆಲ್ಲ ಟ್ರೇಲರ್‌ ನೋಡಿದ್ದೀರಾ, ನಾನು ಸಿನಿಮಾನೇ ನೋಡಿದ್ದೇನೆ. ಸೂರಿ ಅವರ ಸಿನಿಮಾ ಪ್ಯಾಟರ್ನ್‌ ಬೇರೆಯೇ ಇರುತ್ತೆ. ಇವತ್ತಿನ ಪೀಳಿಗೆ ಕುರಿತ ಸಿನಿಮಾ ಇದು. ಈ ಸಿನಿಮಾದಲ್ಲಿ ಹೆಚ್ಚು ಗನ್‌ ನೋಡ್ತೀರಾ. ಇಲ್ಲಿಯವರೆಗೂ ನೀವು ನೋಡಿದ ಅಭಿಷೇಕ್‌ ಬೇರೆ. ಇನ್ಮೇಲೆ ನೋಡುವುದು ಬೇರೆ. ಈ ವರೆಗೂ ಅವರನ್ನು ಯಂಗ್ ರೆಬೆಲ್‌ ಸ್ಟಾರ್‌ ಎಂದೇ ಕರೆಯುತ್ತಿದ್ದರು. ಮೊದಲ ಸಿನಿಮಾಕ್ಕೂ, ಈ ಸಿನಿಮಾಕ್ಕೂ ತುಂಬ ಬದಲಾಗಿದ್ದಾರೆ. ನಾವಿಲ್ಲಿ ರಿಯಲ್‌ ರೆಬೆಲ್‌ಸ್ಟಾರ್‌ ಅವರನ್ನೇ ನೋಡಬಹುದು. ನಟನೆ, ಆಕ್ಟಿಂಗ್‌ ಸ್ಟೈಲ್‌ ಎಲ್ಲವೂ ಬದಲಾಗಿದೆ. ಅದೆಲ್ಲದಕ್ಕೂ ಕಾರಣ ಸೂರಿಯವರು. ಅವರೇ ಚೆನ್ನಾಗಿ ಕೆಲಸ ತೆಗೆಸಿದ್ದಾರೆ" ಎಂದರು.

ಯಾರು ಹೈಟ್‌ ನೀವೇ ಹೇಳ್ರಪ್ಪ..

ಟ್ರೇಲರ್‌ ಲಾಂಚ್‌ ವೇಳೆ ದರ್ಶನ್‌ ಜತೆಗೆ ನಟರಾದ ವಿನೋದ್‌ ಪ್ರಭಾಕರ್‌, ಧನ್ವೀರ್‌ ಗೌಡ, ರವಿಚಂದ್ರನ್‌ ಅವರ ಕಿರಿ ಮಗ ವಿಕ್ರಂ ಸಹ ವೇದಿಕೆ ಮೇಲಿದ್ದರು. ಇವರೆಲ್ಲರ ಬಗ್ಗೆಯೂ ದರ್ಶನ್‌ ಮಾತನಾಡಿದರು. "ಮೊದಲೆಲ್ಲ ನಮ್ಮನ್ನು ನೋಡಿದವರು ಹೈಟ್‌ ಹೈಟ್‌ ಅನ್ನೋರು. ಈಗ ನೋಡಿ ಯಾರು ಹೈಟ್‌ ಇದಾರೆ ನೋಡಿ ಹೇಳಿ ಸ್ವಾಮಿ. ಇವರ ಮುಂದೆ ನಾವೇ ಕುಳ್ಳಕಿಲ್ವಾ. ಅಭಿ ನನಗಿಂತ ಎರಡು ಇಂಚು ಉದ್ದ ಇದ್ದಾನೆ ಸ್ವಾಮಿ. ವಿಕ್ಕಿನೂ ನನಗಿಂತ ಹೈಟ್‌ ಇದಾನೆ. ಧನ್ವೀರ್‌ ಸಹ ಹೈಟ್‌. ನಾನು ಮತ್ತೆ ಟೈಗರ್‌ ಮಾತ್ರ ಇಲ್ಲಿ ಕುಳ್ಳರು" ಎಂದು ಕಿಚಾಯಿಸಿದ್ದಾರೆ.

ಬ್ಯಾಡ್‌ ಮ್ಯಾನರ್ಸ್‌ ಸಿನಿಮಾದ ಹೆಸರಲ್ಲಷ್ಟೇ ಬ್ಯಾಡ್‌ ಇದೆ. ಸಿನಿಮಾದಲ್ಲಿ ಒಳ್ಳೆಯ ಅಂಶಗಳೂ ಸಾಕಷ್ಟಿದೆ. ಇದೇ ನ. 24ರಂದು ಬ್ಯಾಡ್‌ ಮ್ಯಾನರ್ಸ್‌ ಸಿನಿಮಾ ಬಿಡುಗಡೆ ಆಗುತ್ತಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿ ಹರಸಿ. ಅದೇ ರೀತಿ ಧನ್ವೀರ್‌ದು ಕೈವ ಬರ್ತಿದೆ. ಟೈಗರ್ ನಟನೆಯ ಲಂಕಾಸುರ, ವಿಕ್ಕಿದು ಮುಧೋಳ ಬರ್ತಿದೆ.. ಎಲ್ಲ ಸಿನಿಮಾಗಳಿಗೂ ಹರಸಿ ಎಂದರು ದರ್ಶನ್.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ