logo
ಕನ್ನಡ ಸುದ್ದಿ  /  ಮನರಂಜನೆ  /  Tagaru Palya Trailer: ನಾಗಭೂಷಣ್‌ ಅಮೃತಾ ನಟನೆಯ ಟಗರು ಪಲ್ಯ ಟ್ರೇಲರ್‌ ರಿಲೀಸ್;‌ ಬನ್ನಿ ಒಂದ್‌ ಸಾರಿ ನೋಡ್ಕಂಡ್‌ ಬರುಮ

Tagaru Palya Trailer: ನಾಗಭೂಷಣ್‌ ಅಮೃತಾ ನಟನೆಯ ಟಗರು ಪಲ್ಯ ಟ್ರೇಲರ್‌ ರಿಲೀಸ್;‌ ಬನ್ನಿ ಒಂದ್‌ ಸಾರಿ ನೋಡ್ಕಂಡ್‌ ಬರುಮ

HT Kannada Desk HT Kannada

Oct 19, 2023 06:15 AM IST

ನಾಗಭೂಷಣ್‌, ಅಮೃತಾ ಪ್ರೇಮ್‌ ನಟನೆಯ ಟಗರು ಪಲ್ಯ ಟ್ರೇಲರ್‌ ರಿಲೀಸ್

  • Tagaru Palya Trailer Released: ಧನಂಜಯ್‌ ನಿರ್ಮಾಣದ ಟಗರು ಪಲ್ಯ ಟ್ರೇಲರ್‌ ರಿಲೀಸ್‌ ಆಗಿದೆ. ನಿರ್ದೇಶಕ ಉಮೇಶ್‌ ಕೃಪ, ಈ ಚಿತ್ರದಲ್ಲಿ ಗ್ರಾಮೀಣ ಆಚರಣೆ  ಕಥೆಯನ್ನು ತೋರಿಸುವ ಪ್ರಯತ್ನ ಮಾಡಿದ್ದಾರೆ. 

ನಾಗಭೂಷಣ್‌, ಅಮೃತಾ ಪ್ರೇಮ್‌ ನಟನೆಯ ಟಗರು ಪಲ್ಯ ಟ್ರೇಲರ್‌ ರಿಲೀಸ್
ನಾಗಭೂಷಣ್‌, ಅಮೃತಾ ಪ್ರೇಮ್‌ ನಟನೆಯ ಟಗರು ಪಲ್ಯ ಟ್ರೇಲರ್‌ ರಿಲೀಸ್ (PC: @Dhananjayaka)

Tagaru Palya Trailer Released: ನಾಗಭೂಷಣ್‌ ಹಾಗೂ ಅಮೃತಾ ಪ್ರೇಮ್‌ ನಟನೆಯ 'ಟಗರು ಪಲ್ಯ' ಸಿನಿಮಾ ಟ್ರೇಲರ್‌ ರಿಲೀಸ್‌ ಆಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ವೊಂದಲ್ಲಿ ನಡೆದ ಸಮಾರಂಭದಲ್ಲಿ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌, ಟಗರು ಪಲ್ಯ ಚಿತ್ರದ ಟ್ರೇಲರ್‌ ರಿಲೀಸ್‌ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹಿಂದಿ ಚಿತ್ರರಂಗ ಫೇಕ್‌, ನಾನು ಅಲ್ಲಿರಲಾರೆ; ಲೋಕಸಭಾ ಚುನಾವಣೆ ಬಳಿಕ ಬಾಲಿವುಡ್‌ಗೆ ಗುಡ್‌ಬೈ ಹೇಳ್ತಾರಂತೆ ಕಂಗನಾ ರಣಾವತ್‌

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಗ್ರಾಮೀಣ ಆಚರಣೆ ಹಿನ್ನೆಲೆಯ ಕಥೆ ಹೊಂದಿರುವ ಸಿನಿಮಾ

ಟ್ರೇಲರ್‌ನಲ್ಲಿ ಬರುವ ಡೈಲಾಗ್‌ಗಳು ಮಂಡ್ಯ ಸೊಗಡನ್ನು ಹೈಲೈಟ್‌ ಮಾಡಿದೆ. ಗ್ರಾಮೀಣ ಬದುಕಿನ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಚಿತ್ರದ ಟೈಟಲ್‌ ಹೇಳುವಂತೆ ಸಿನಿಮಾದಲ್ಲಿ ಟಗರು ಹೈಲೈಟ್.‌ ಸಾಮಾನ್ಯವಾಗಿ ಟಗರನ್ನು ಬಲಿ ಕೊಡುವ ಸಮಯದಲ್ಲಿ ಅದು ತಲೆ ಅಲುಗಾಡಿಸಬೇಕು ಎಂಬುದು ಗ್ರಾಮೀಣ ಜನರ ನಂಬಿಕೆ. ಆದರೆ ಚಿತ್ರದಲ್ಲಿ ಬಲಿ ಕೊಡಬೇಕಾಗಿರುವ ಟಗರು ಎಷ್ಟು ಹೊತ್ತಾದರೂ ತಲೆ ಅಲುಗಾಡಿಸಿದ ಕಾರಣ ಊರಿನವರೆಲ್ಲಾ ಕಾದು ಕೂರುತ್ತಾರೆ. ಆದರೆ ಟಗರನ್ನು ಬಲಿ ಕೊಡಲಾಗದೆ ಮಾಂಸಾಹಾರ ಅಡುಗೆ ಮಾಡಲಾಗದೆ, ಕಾರ್ಯಕ್ರಮಕ್ಕೆ ಬಂದ ಊರಿನವರಿಗೆ ವೆಜ್‌ ಅಡುಗೆ ಮಾಡುವುದನ್ನು ಟ್ರೇಲರ್‌ನಲ್ಲಿ ಗಮನಿಸಬಹುದು. ಗ್ರಾಮೀಣ ಆಚರಣೆ ಜೊತೆಗೆ ಚಿತ್ರದಲ್ಲಿ ಪ್ರೀತಿ ಪ್ರೇಮದ ಎಳೆ ಕೂಡಾ ಇದೆ. ನೆನಪಿರಲಿ ಪ್ರೇಮ್‌ ಪುತ್ರಿ ಅಮೃತಾ, ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಟ್ರೇಲರ್‌ನಲ್ಲಿ ಮಂಡ್ಯ ಭಾಷೆ, ರಂಗಾಯಣ ರಘು ಬಿರಾದಾರ್‌ ನಡುವಿನ ಸಂಭಾಷಣೆ, ನಾಯಕಿಯ ಲವ್‌ ಸ್ಟೋರಿ ಎಲ್ಲವೂ ನೋಡುಗರ ಗಮನ ಸೆಳೆದಿದೆ.

ಟ್ರೇಲರ್‌ನಲ್ಲಿ ನಗುವಿನ ಕಚಗುಳಿ

ಟಗರು ಪಲ್ಯ ಟ್ರೇಲರ್‌ಗೆ ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ರೇಲರ್‌ ನೋಡಿ ನಮಗೆ ನಗು ತಡೆಯಲಾಗುತ್ತಿಲ್ಲ, ಇನ್ನು ಸಿನಿಮಾದಲ್ಲಿ ನಗುವಿನ ಕಚಗುಳಿ ಗ್ಯಾರಂಟಿ, ಸಿನಿಮಾ ನೋಡಲು ಕಾಯುತ್ತಿದ್ದೇವೆ. ಡಾಲಿ ಧನಂಜಯ್‌ ಇಂತಹ ಇನ್ನಷ್ಟು ಸಿನಿಮಾಗಳನ್ನು ಮಾಡಲಿ, ಟಗರು ಪಲ್ಯ ಸಿನಿಮಾ 100 ದಿನಗಳನ್ನು ಪೂರೈಸಲಿ ಎಂದೆಲ್ಲಾ ಸಿನಿಪ್ರಿಯರು ಕಾಮೆಂಟ್‌ ಮಾಡುತ್ತಿದ್ದಾರೆ. 'ಟಗರು ಪಲ್ಯ' ಚಿತ್ರವನ್ನು ಡಾಲಿ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ನಟ ಧನಂಜಯ್‌ ನಿರ್ಮಿಸಿದ್ದು ಉಮೇಶ್‌ ಕೃಪ ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್‌ ಸಂಗೀತ ನೀಡಿದ್ದು ಚಿತ್ರದಲ್ಲಿ ಅವರೂ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ನಾಗಭೂಷಣ್‌, ಅಮೃತಾ ಪ್ರೇಮ್‌, ರಂಗಾಯಣ ರಘು, ತಾರಾ ಅನುರಾಧಾ, ಶರತ್‌ ಲೋಹಿತಾಶ್ವ, ವಾಸುಕಿ ವೈಭವ್‌, ಚಿತ್ರ ಶೆಣೈ, ವೈಜನಾಥ್‌ ಬಸಪ್ಪ ಬಿರಾದಾರ್‌, ರವಿ ಹುಣಸೂರು ಹಾಗೂ ಇನ್ನಿತರರು ನಟಿಸಿದ್ದಾರೆ.

ಅಕ್ಟೋಬರ್‌ 27ಕ್ಕೆ ಟಗರು ಪಲ್ಯ ರಿಲೀಸ್

'ಟಗರು ಪಲ್ಯ' ಅಕ್ಟೋಬರ್‌ 27 ರಂದು ತೆರೆ ಕಾಣುತ್ತಿದೆ. ಸಿನಿಮಾ ನೋಡಲು ಸಿನಿಪ್ರಿಯರು ಎಕ್ಸೈಟ್‌ ಆಗಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್‌ ಚಿತ್ರವನ್ನು ಹಂಚಿಕೆ ಮಾಡುತ್ತಿದೆ. ಟ್ರೇಲರ್‌ ರಿಲೀಸ್‌ ಕಾರ್ಯಕ್ರಮದಲ್ಲಿ ದರ್ಶನ್‌, ಧನಂಜಯ್‌, ತಾರಾ ಅನುರಾಧಾ, ವಾಸುಕಿ ವೈಭವ್‌, ಅಮೃತಾ ಪ್ರೇಮ್‌, ನಟ ಪ್ರೇಮ್‌ ಹಾಗೂ ಕುಟುಂಬ ಸೇರಿದಂತೆ ಇನ್ನಿತರರು ಹಾಜರಿದ್ದರು.‌

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ