logo
ಕನ್ನಡ ಸುದ್ದಿ  /  ಮನರಂಜನೆ  /  Darshan: ಎರಡು ದಶಕಗಳ ಬಳಿಕ ಒಂದಾಯ್ತು ಕರಿಯ ಕಾಂಬೋ; ದರ್ಶನ್‌ ಹೊಸ ಚಿತ್ರಕ್ಕೆ ಪ್ರೇಮ್‌ ಡೈರೆಕ್ಷನ್‌

Darshan: ಎರಡು ದಶಕಗಳ ಬಳಿಕ ಒಂದಾಯ್ತು ಕರಿಯ ಕಾಂಬೋ; ದರ್ಶನ್‌ ಹೊಸ ಚಿತ್ರಕ್ಕೆ ಪ್ರೇಮ್‌ ಡೈರೆಕ್ಷನ್‌

Aug 25, 2023 10:56 AM IST

Darshan: ಎರಡು ದಶಕಗಳ ಬಳಿಕ ಒಂದಾಯ್ತು ಕರಿಯ ಕಾಂಬೋ; ದರ್ಶನ್‌ ಹೊಸ ಚಿತ್ರಕ್ಕೆ ಪ್ರೇಮ್‌ ಡೈರೆಕ್ಷನ್‌

    • ನಟ ದರ್ಶನ್‌ ಮತ್ತು ಪ್ರೇಮ್‌ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಘೋಷಣೆಯಾಗಿದೆ. 2003ರಲ್ಲಿ ಬಂದಿದ್ದ ಕರಿಯ ಸಿನಿಮಾ ಬಳಿಕ ಇದೀಗ ಸುದೀರ್ಘ 2 ದಶಕಗಳ ಬಳಿಕ ಈ ನಟ ಮತ್ತು ನಿರ್ದೇಶಕ ಜೋಡಿ ಒಂದಾಗಿದೆ. 
Darshan: ಎರಡು ದಶಕಗಳ ಬಳಿಕ ಒಂದಾಯ್ತು ಕರಿಯ ಕಾಂಬೋ; ದರ್ಶನ್‌ ಹೊಸ ಚಿತ್ರಕ್ಕೆ ಪ್ರೇಮ್‌ ಡೈರೆಕ್ಷನ್‌
Darshan: ಎರಡು ದಶಕಗಳ ಬಳಿಕ ಒಂದಾಯ್ತು ಕರಿಯ ಕಾಂಬೋ; ದರ್ಶನ್‌ ಹೊಸ ಚಿತ್ರಕ್ಕೆ ಪ್ರೇಮ್‌ ಡೈರೆಕ್ಷನ್‌

Darshan: ನಟ ದರ್ಶನ್‌ ಸದ್ಯ ತರುಣ್‌ ಸುಧೀರ್‌ ನಿರ್ದೇಶನದ ಕಾಟೇರ ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿದ್ದಾರೆ. ಈಗಾಗಲೇ ಕೆಲ ಭಾಗದ ಶೂಟಿಂಗ್‌ ಸಹ ಮುಗಿದಿದ್ದು, ಇನ್ನೇನು ಶೀಘ್ರದಲ್ಲಿ ಸಿನಿಮಾ ಬಿಡುಗಡೆಯ ದಿನಾಂಕವನ್ನೂ ಘೋಷಣೆ ಮಾಡಲಿದ್ದಾರೆ. ಈ ನಡುವೆ ಇದೀಗ ಹೊಸ ಸಿನಿಮಾಕ್ಕೂ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ ದರ್ಶನ್‌. ಅದೂ ನಿರ್ದೇಶಕ ಪ್ರೇಮ್‌ ಜತೆಗೆ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ದರ್ಶನ್‌ ಮತ್ತು ಪ್ರೇಮ್‌ ನಡುವೆ ಯಾವುದೂ ಸರಿಯಿಲ್ಲ. ಇಬ್ಬರ ನಡುವೆ ಮುನಿಸು ಮನೆ ಮಾಡಿದೆ ಎಂಬ ಸುದ್ದಿ ಈ ಹಿಂದಿನಿಂದಲೇ ಹರಿದಾಡುತ್ತಿತ್ತು. ಆದರೆ, ಇದೀಗ ಖುಷಿಯ ವಿಚಾರ ಏನೆಂದರೆ, ಆ ಮುನಿಸು ಮರೆತು ಇಬ್ಬರೂ ಎರಡು ದಶಕಗಳ ಬಳಿಕ ಮತ್ತೆ ಕೈ ಜೋಡಿಸಿದ್ದಾರೆ. ಈ ಜೋಡಿ ಸಿನಿಮಾ ಘೋಷಣೆಯಾಗುತ್ತಿದ್ದಂತೆ, ನಟಿ ರಕ್ಷಿತಾ ಪ್ರೇಮ್‌ ಸಹ ಕುಣಿದು ಕುಪ್ಪಳಿಸಿದ್ದಾರೆ.

ನಿರ್ದೇಶಕ ಪ್ರೇಮ್‌ ಮತ್ತು ದರ್ಶನ್‌ ಜೋಡಿ 2003ರಲ್ಲಿ ಕರಿಯ ಅನ್ನೋ ಬ್ಲಾಕ್‌ಬಸ್ಟರ್‌ ಹಿಟ್‌ ಸಿನಿಮಾ ನೀಡಿತ್ತು. ಅದಾದ ಬಳಿಕ ಈ ಜೋಡಿ ಮತ್ತೆ ಒಂದಾಗಿರಲಿಲ್ಲ. ಇದೀಗ ಸುದೀರ್ಘ ಎರಡು ದಶಕದ ಬಳಿಕ ಈ ನಟ ಮತ್ತು ನಿರ್ದೇಶಕ ಜೋಡಿ ಕೈ ಜೋಡಿಸಿದೆ. ಈ ಮೂಲಕ ಫ್ಯಾನ್ಸ್‌ ವಲಯದಲ್ಲಿ ಒಂದಷ್ಟು ಕುತೂಹಲದ ಜತೆಗೆ ನಿರೀಕ್ಷೆಯನ್ನೂ ಹುಟ್ಟುಹಾಕಿದ್ದಾರೆ ಪ್ರೇಮ್‌.

ಪ್ರೇಮ್‌ ಎಂದರೆ ಅಲ್ಲಿ ಕಮರ್ಷಿಯಲ್‌ ಜತೆಗೆ ಸೆಂಟಿಮೆಂಟ್‌ ಇದ್ದೇ ಇರುತ್ತೆ. ಇಲ್ಲಿಯೂ ಅದರ ಹೂರಣವನ್ನೇ ಪ್ರೇಮ್‌ ತುಂಬಿಸಲಿದ್ದಾರೆ ಎನ್ನಲಾಗುತ್ತದೆ. ಆದರೆ, ಸಿನಿಮಾ ಯಾವ ಶೈಲಿಯದ್ದು, ಹೇಗಿರಬಹುದು ಎಂಬ ಸಣ್ಣ ಸುಳಿವನ್ನೂ ನಿರ್ದೇಶಕರು ಬಿಟ್ಟುಕೊಟ್ಟಿಲ್ಲ. ಇನ್ನು ಕಳೆದ ಕೆಲ ದಿನಗಳಿಂದ ಕೆವಿಎನ್‌ ಯಾರ ಜತೆ ಸಿನಿಮಾ ಮಾಡಲಿದೆ ಎಂಬ ಗುಸು ಗುಸು ಗಾಂಧಿನಗರದಲ್ಲಿ ಹರಿದಾಡಿತ್ತು. ಅದಕ್ಕೆ ಉತ್ತರವೆಂಬಂತೆ, ಪ್ರೊಡ್ಯೂಸರ್‌ ವೆಂಕಟ್ ಕೋಣಂಕಿ ಹುಟ್ಟುಹಬ್ಬದ ಪ್ರಯುಕ್ತ ದರ್ಶನ್- ಪ್ರೇಮ್ ಜೋಡಿಯ ಸಿನಿಮಾ ಅಧಿಕೃತವಾಗಿ ಅನೌನ್ಸ್‌ ಆಗಿದೆ.

ಕೆವಿಎನ್‌ಗೆ ನಿರ್ಮಾಣದ ಹೊಣೆ..

ಹಾಗಾದರೆ ಈ ಹೈ ಬಜೆಟ್‌ ಸಿನಿಮಾ ನಿರ್ಮಾಣ ಮಾಡುವವರಾರು? ಇದಕ್ಕೂ ಉತ್ತರ ಸಿಕ್ಕಿದೆ. ಖ್ಯಾತ ಚಿತ್ರ ನಿರ್ಮಾಣ ಸಂಸ್ಥೆ ಕೆವಿಎನ್‌ ಸಂಸ್ಥೆ ದರ್ಶನ್‌ ಅವರ ಹೊಸ ಸಿನಿಮಾಕ್ಕೆ ಬಂಡವಾಳ ಹೂಡಲಿದೆ. ಈ ಹಿಂದೆ ಗಣೇಶ್‌ ನಟನೆಯ ಸಖತ್‌, ಬೈಟೂ ಲವ್‌ ಚಿತ್ರಗಳಿಗೆ ಹೂಡಿಕೆ ಮಾಡಿದ್ದ ಈ ಸಂಸ್ಥೆ, ಪರಭಾಷೆಯ ದೊಡ್ಡ ದೊಡ್ಡ ಸಿನಿಮಾಗಳನ್ನು ಕರ್ನಾಟಕದಲ್ಲಿ ವಿತರಣೆ ಮಾಡಿತ್ತು. ಸದ್ಯ ಧ್ರುವ ಸರ್ಜಾ ಜತೆಗಿನ ಕೆಡಿ ನಿರ್ಮಿಸುತ್ತಿದೆ. ಇದೀಗ ದರ್ಶನ್‌ ಮತ್ತು ಪ್ರೇಮ್‌ ಕಾಂಬೋಗೆ ಇದೇ ಕೆವಿಎನ್‌ ಸಂಸ್ಥೆ ಇನ್‌ವೆಸ್ಟ್‌ ಮಾಡಲಿದೆ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ