logo
ಕನ್ನಡ ಸುದ್ದಿ  /  ಮನರಂಜನೆ  /  Prakash Raj: ಚಂದ್ರಯಾನ 3ರ ಚಾಯ್‍ವಾಲಾ ಟ್ವೀಟ್‍ ಸಮರ್ಥಿಸಿದ ಪ್ರಕಾಶ್ ರಾಜ್‍

Prakash Raj: ಚಂದ್ರಯಾನ 3ರ ಚಾಯ್‍ವಾಲಾ ಟ್ವೀಟ್‍ ಸಮರ್ಥಿಸಿದ ಪ್ರಕಾಶ್ ರಾಜ್‍

HT Kannada Desk HT Kannada

Aug 22, 2023 09:27 PM IST

ಪ್ರಕಾಶ್ ರಾಜ್ ಆ.20ರಂದು ಮಾಡಿದ ಟ್ವೀಟ್‍

  • Prakash Raj: ಜಗತ್ತಿನ ಗಮನ ಚಂದ್ರಯಾನ 3ರ ಬಗ್ಗೆ 2 ದಿನಗಳ ಹಿಂದೆ ನಟ ಪ್ರಕಾಶ್ ರಾಜ್ ಮಾಡಿದ ಟ್ವೀಟ್‍ ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಅವರು “ಚಂದ್ರಯಾನದಿಂದ ಈಗಷ್ಟೆ ಬಂದ ಮೊದಲ ದೃಶ್ಯ’’ ಎಂದು ಚಾಯ್‍ವಾಲಾನ ಚಿತ್ರವನ್ನು ಟ್ವೀಟ್ ಮಾಡಿದ್ದರು. ವ್ಯಾಪಕ ಟೀಕೆ ಕಾರಣ ಪ್ರಕಾಶ್ ರಾಜ್‍ ತಮ್ಮ ಟ್ವೀಟ್ ಅನ್ನು ಸಮರ್ಥಿಸಿಕೊಂಡು ಇನ್ನು ಕೆಲವು ಟ್ವೀಟ್ ಮಾಡಿದ್ದಾರೆ. 

ಪ್ರಕಾಶ್ ರಾಜ್ ಆ.20ರಂದು ಮಾಡಿದ ಟ್ವೀಟ್‍
ಪ್ರಕಾಶ್ ರಾಜ್ ಆ.20ರಂದು ಮಾಡಿದ ಟ್ವೀಟ್‍

ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ 3ರ ಬಗ್ಗೆ ಎಲ್ಲರೂ ಬಹುನಿರೀಕ್ಷೆ ಇಟ್ಟುಕೊಂಡಿದ್ದಾರೆ. ಬಹುಸಂಖ್ಯಾತರು ಚಂದ್ರಯಾನ 3ರ ಯಶಸ್ಸಿಗಾಗಿ ಪ್ರಾರ್ಥಿಸುತ್ತಿದ್ದಾರೆ, ನಿರೀಕ್ಷಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಎರಡು ದಿನ ಹಿಂದೆ (ಆ.20) ನಟ ಪ್ರಕಾಶ್ ರಾಜ್ ಮಾಡಿದ ಟ್ವೀಟ್ ಎಲ್ಲರ ಗಮನಸೆಳೆಯಿತು. ಚಂದ್ರಯಾನವನ್ನು ಅವಹೇಳನ ಮಾಡಿದ್ದಾರೆ ಎಂಬ ಟೀಕೆ ವ್ಯಾಪಕವಾಗಿ ವ್ಯಕ್ತವಾಯಿತು.

ಟ್ರೆಂಡಿಂಗ್​ ಸುದ್ದಿ

ಮಂಗ್ಲಿ ಕಂಠಕ್ಕೆ ಹುಚ್ಚೆದ್ದು ಕುಣಿದ ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ, ಕಿಟ್ಟಿ, ರಚ್ಚು; ಇದು ಸಂಜು ವೆಡ್ಸ್ ಗೀತಾ-2 ಅಪ್‌ಡೇಟ್‌

ಈ ಆಗಸ್ಟ್‌ನಲ್ಲಿ ಸೆಟ್ಟೇರಲಿದೆ ಪ್ರಶಾಂತ್‌ ನೀಲ್‌ ನಿರ್ದೇಶನದ ಜೂನಿಯರ್‌ ಎನ್‌ಟಿಆರ್‌ ಸಿನಿಮಾ; ಇದು ಹೇಗೆ ಸಾಧ್ಯ? ಅಭಿಮಾನಿಗಳಿಗೆ ಅಚ್ಚರಿ

ಬೆಂಗಳೂರಿನಲ್ಲಿ ಭರ್ಜರಿ ರೇವ್‌ ಪಾರ್ಟಿ; ತೆಲುಗಿನ ಖ್ಯಾತ ನಟ ನಟಿಯರು ಭಾಗಿ, ನಾನು ಫಾರ್ಮ್‌ ಹೌಸ್‌ನಲ್ಲಿದ್ದೇನೆ ಅಂದ್ರು ನಟಿ ಹೇಮಾ

ಗಂಡು ಮಗುವಿಗೆ ಜನ್ಮ ನೀಡಿದ ಯಾಮಿ ಗೌತಮ್‌; ಆರ್ಟಿಕಲ್‌ 370 ನಟಿಯ ಮಗುವಿನ ಹೆಸರು ವೇದವಿದ್‌, ಮಗುವಿನ ಹೆಸರಿನ ಅರ್ಥ ತಿಳಿಯಿರಿ

ನಟ ಪ್ರಕಾಶ್ ರಾಜ್ ಈ ರೀತಿ ವಿವಾದಕ್ಕೆ ಒಳಗಾಗುತ್ತಿರುವುದು, ಟೀಕೆಗೆ ಒಳಗಾಗುತ್ತಿರುವುದು ಇದೇ ಮೊದಲಲ್ಲ. ಆದಾಗ್ಯೂ ಆ ಟ್ವೀಟ್‍ಗೆ ವ್ಯಾಪಕ ಟೀಕೆ, ಅಸಮಾಧಾನಗಳು ವ್ಯಕ್ತವಾದ ಬಳಿಕ ಪ್ರಕಾಶ್ ರಾಜ್‍, ಅದನ್ನು ಜೋಕ್ ಎಂದು ಮತ್ತೆ ಸಮರ್ಥನೆ ಮಾಡಿಕೊಂಡಿದ್ದಾರೆ. ಅಲ್ಲದೆ ಸುದ್ದಿ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದಾರೆ.

ದ್ವೇಷಕ್ಕೆ ದ್ವೇಷವೇ ಕಾಣಿಸೋದು, ಗ್ರೋ ಅಪ್‍ ಆಗಿ…

ಇದನ್ನು ಮತ್ತೆ ರೀಟ್ವೀಟ್ ಮಾಡಿದ ಪ್ರಕಾಶ್ ರಾಜ್‍, ದ್ವೇಷಕ್ಕೆ ಯಾವಾಗಲೂ ದ್ವೇಷವೇ ಕಾಣಿಸುತ್ತದೆ. ನಾನು ಆರ್ಮ್‍ಸ್ಟ್ರಾಂಗ್‍ ಟೈಮ್ಸ್ ಜೋಕ್ ಅನ್ನು ಉಲ್ಲೇಖಿಸಿದ್ದೆ… ನಮ್ಮ ಕೇರಳದ ಚಾಯ್‍ವಾಲಾ ಹೇಗೆ ಸೆಲೆಬ್ರೇಟ್ ಮಾಡ್ತಿದ್ದಾರೆ ನೋಡಿ ಅಂತ. ಯಾವ ಚಾಯ್‍ವಾಲಾ ಈ ಟ್ರೋಲ್ ಮಾಡಿದ್ದು, ನಿಮಗೆ ಜೋಕ್ ಅನ್ನು ಜೋಕ್ ಆಗಿ ಸ್ವೀಕರಿಸುವುದು ಸಾಧ್ಯವಾಗುತ್ತಿಲ್ಲವೇ… ಗ್ರೋ ಅಪ್ ಜಸ್ಟ್ ಆಸ್ಕಿಂಗ್ ಎಂದು ಟ್ವೀಟ್ ಮಾಡಿದ್ದಾರೆ.

ಒಬ್ಬನೇ ಒಬ್ಬ ಚಾಯ್‍ವಾಲಾನ ಗುರುತಿಸಿರುವ ಗೋದಿಮೀಡಿಯಾಕ್ಕೆ…

ಗಮನಿಸಿ – ಒಬ್ಬನೇ ಒಬ್ಬ ಚಾಯ್‍ವಾಲಾ ಬಗ್ಗೆ ಮಾತ್ರ ತಿಳಿದುಕೊಂಡಿರುವ ಪ್ರೀತಿಯ ಅನ್‍ಅಕಾಡೆಮಿ ಟ್ರೋಲ್ಸ್ ಮತ್ತು ಗೋದಿಮೀಡಿಯಾ, ಹೆಮ್ಮೆಯಿಂದ ಪ್ರಸ್ತುತಿ ಮಾಡ್ತಾ ಇದ್ದೇನೆ 1960ರಿಂದ ಎಂದೆಂದಿಗೂ ನಮ್ಮವರೇ ಆದ ಮಲಯಾಳಿ ಚಾಯ್‍ವಾಲಾ.. ನಿಮಗೆ ನಿಜವಾಗಿಯೂ ತಿಳಿದುಕೊಳ್ಳಬೇಕಾದರೆ ಇದನ್ನು ಓದಿ ಎಂದು ಮತ್ತೊಂದು ಲೇಖನವನ್ನು ಶೇರ್ ಮಾಡಿದ್ದಾರೆ.

ಇದಕ್ಕೆ ಕವಿತಾ ರೆಡ್ಡಿ ಎಂಬುವವರು ನೀಡಿದ ಪ್ರತಿಕ್ರಿಯೆ ಹೀಗಿದೆ..

ಮೊಹಮ್ಮದ್ ಜುಬೇರ್ ಟ್ವೀಟ್‍ ರೀಟ್ವೀಟ್ ಮಾಡಿದ ಪ್ರಕಾಶ್ ರಾಜ್‍

ಇದಲ್ಲದೆ ಮೊಹಮ್ಮದ್ ಜುಬೇರ್ ಇಂಡಿಯಾ ಟುಡೆಯನ್ನು ಟ್ಯಾಗ್ ಮಾಡಿ ಶೇರ್ ಮಾಡಿದ ಕಾರ್ಟೂನ್‍ ಅನ್ನು ಕೂಡ ಪ್ರಕಾಶ್‍ ರಾಜ್ ರೀಟ್ವೀಟ್ ಮಾಡಿದ್ದಾರೆ. ಜುಬೇರ್ ಈ ಟ್ವೀಟ್‍ನಲ್ಲಿ ಪ್ರಕಾಶ್ ರಾಜ್‍ ಅವರು ಇಸ್ರೋದ ಮಾಜಿ ಚೇರ್ಮನ್‍ ಮತ್ತು ಮೂನ್ ಮಿಷನ್ ಅನ್ನು ಅವಹೇಳನ ಮಾಡಿದ್ದಾರೆ ಎಂಬ ತೀರ್ಮಾನಕ್ಕೆ ಹೇಗೆ ಬಂದಿರಿ ಎಂದು ಪ್ರಶ್ನಿಸಿದ್ದಾರೆ.

ಪ್ರಕಾಶ್ ರಾಜ್ ಅವರು ಮಾಡಿದ ಚಾಯ್‍ವಾಲಾ ಟ್ವೀಟ್‍ ಹೀಗಿದೆ..

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ