logo
ಕನ್ನಡ ಸುದ್ದಿ  /  ಮನರಂಜನೆ  /  28th April 2023 Movies: ರಾಘು , ರಾಘವೇಂದ್ರ ಸ್ಟೋರ್ಸ್‌ ಹೊರತುಪಡಿಸಿ ಇಂದು ಬಿಡುಗಡೆ ಆಗುತ್ತಿರುವ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ

28th April 2023 Movies: ರಾಘು , ರಾಘವೇಂದ್ರ ಸ್ಟೋರ್ಸ್‌ ಹೊರತುಪಡಿಸಿ ಇಂದು ಬಿಡುಗಡೆ ಆಗುತ್ತಿರುವ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ

Rakshitha Sowmya HT Kannada

Apr 28, 2023 06:15 AM IST

ಏಪ್ರಿಲ್‌ 28 ರಂದು ತೆರೆ ಕಾಣುತ್ತಿರುವ 'ರಾಘು' , 'ರಾಘವೇಂದ್ರ ಸ್ಟೋರ್ಸ್‌' ಸಿನಿಮಾಗಳು

  •  ವಿಶೇಷ ಎಂದರೆ ಇದೊಂದು ರೀತಿ ಸೋಲೋ ಆಕ್ಟಿಂಗ್‌ ಸಿನಿಮಾ ಎಂದರೆ ತಪ್ಪಾಗಲಾರದು. ಏಕೆಂದರೆ ಈ ಚಿತ್ರದಲ್ಲಿ ನಟಿಸಿರುವುದು ವಿಜಯ ರಾಘವೇಂದ್ರ ಮಾತ್ರ.  ಇತ್ತೀಚೆಗೆ ಈ ಸಿನಿಮಾ ಟ್ರೇಲರ್‌ ರಿಲೀಸ್‌ ಆಗಿತ್ತು. ಹೊಸ ಬಗೆಯ ಥ್ರಿಲ್ ನೀಡುವ ಚಿತ್ರದಲ್ಲಿ ಚಿನ್ನಾರಿ ಮುತ್ತನಿಗೆ ಶಿವಣ್ಣ ಸಾಥ್ ಕೊಟ್ಟಿದ್ದಾರೆ.

ಏಪ್ರಿಲ್‌ 28 ರಂದು ತೆರೆ ಕಾಣುತ್ತಿರುವ 'ರಾಘು' , 'ರಾಘವೇಂದ್ರ ಸ್ಟೋರ್ಸ್‌' ಸಿನಿಮಾಗಳು
ಏಪ್ರಿಲ್‌ 28 ರಂದು ತೆರೆ ಕಾಣುತ್ತಿರುವ 'ರಾಘು' , 'ರಾಘವೇಂದ್ರ ಸ್ಟೋರ್ಸ್‌' ಸಿನಿಮಾಗಳು

ಶುಕ್ರವಾರ ಬಂತೆಂದರೆ ಚಿತ್ರರಂಗದವರಿಗೆ ವಿಶೇಷ ದಿನ. ಅದು ಅಭಿಮಾನಿಗಳ ಪಾಲಿಗೂ ಸ್ಪೆಷಲ್‌ ಡೇ ಎಂದೇ ಹೇಳಬೇಕು. ಕೆಲವೊಂದು ಸಿನಿಮಾಗಳು ಗುರುವಾರ ತೆರೆ ಕಂಡರೆ ಬಹುತೇಕ ಎಲ್ಲಾ ಸಿನಿಮಾಗಳು ಶುಕ್ರವಾರವೇ ಬಿಡುಗಡೆ ಆಗುತ್ತವೆ. ಕಳೆದ ವಾರ 8 ಕನ್ನಡ ಸಿನಿಮಾಗಳು ತೆರೆ ಕಂಡಿದ್ದವು. ಆದರೆ ಇಂದು ರಿಲೀಸ್‌ ಆಗುತ್ತಿರುವುದು 2 ಕನ್ನಡ ಸಿನಿಮಾಗಳು ಮಾತ್ರ.

ಟ್ರೆಂಡಿಂಗ್​ ಸುದ್ದಿ

Bhagyalakshmi Serial: 10ನೇ ತರಗತಿ ಪಾಸ್‌ ಆದ ಖುಷಿಗೆ ಮೊದಲ ದಿನವೇ ಕೆಲಸಕ್ಕೆ ತಡವಾಗಿ ಹೊರಟ ಭಾಗ್ಯಾ, ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

Amruthadhaare: ರೌಡಿಗಳ ಕೈಯಿಂದ ಮಲ್ಲಿಯನ್ನು ಬಚಾವ್‌ ಮಾಡಿದ್ಲು ಮಹಿಮಾ; ಡುಮ್ಮ ಸರ್‌ ಟೈಟಾದ್ರು, ಐ ಅಂದ್ರು, ಲವ್‌ ಯು ಹೇಳ್ತಾರ

ಬರಲಿದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಯೋಪಿಕ್‌; ಮೋದಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಬಾಹುಬಲಿಯ ಕಟ್ಟಪ್ಪ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

ಇಂದು (ಏ.28)ಕ್ಕೆ 2 ಕನ್ನಡ ಸಿನಿಮಾಗಳು ಮಾತ್ರ ತೆರೆ ಕಾಣುತ್ತಿವೆ. ಜಗ್ಗೇಶ್‌ ಅಭಿನಯದ 'ರಾಘವೇಂದ್ರ ಸ್ಟೋರ್ಸ್‌' ಹಾಗೂ ವಿಜಯ ರಾಘವೇಂದ್ರ ಅಭಿನಯದ 'ರಾಘು' ಸಿನಿಮಾಗಳು ಇಂದು ರಿಲೀಸ್‌ ಆಗುತ್ತಿವೆ. ಇದನ್ನು ಹೊರತು ಪಡಿಸಿ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ಪೊನ್ನಿಯಿನ್‌ ಸೆಲ್ವನ್‌ 2, ತೆಲುಗಿನ ಏಜೆಂಟ್‌, ಮಲಯಾಳಂನ ಪಚುವುಂ ಅದ್ಭುತ ವಿಳಕ್ಕುಂ ಸಿನಿಮಾಗಳು ತೆರೆಗೆ ಅಪ್ಪಳಿಸುತ್ತಿವೆ.

ರಾಘು (ಕನ್ನಡ)

ರಾಘು, ವಿಜಯ ರಾಘವೇಂದ್ರ ಅಭಿನಯದ ಸಿನಿಮಾ. ಇದೊಂದು ಪ್ರಯೋಗಾತ್ಮಕ ಚಿತ್ರವಾಗಿದ್ದು ಡಿಕೆಎಸ್ ಸ್ಟುಡಿಯೋ, ಕೋಟಾ ಫಿಲ್ಮ್‌ ಫ್ಯಾಕ್ಟರಿ ಪ್ರೊಡಕ್ಷನ್ ಅಡಿ ರನ್ವಿತ್ ಶಿವಕುಮಾರ್ ಹಾಗೂ ಅಭಿಷೇಕ ಕೋಟ ನಿರ್ಮಿಸಿದ್ದಾರೆ. ಎಂ. ಆನಂದ್ ರಾಜ್, 'ರಾಘು'ವಿಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿ ನಟಿಸಿರುವುದು ವಿಜಯ ರಾಘವೇಂದ್ರ ಮಾತ್ರ. ಇದೊಂದು ರೀತಿ ಸೋಲೋ ಆಕ್ಟಿಂಗ್‌ ಸಿನಿಮಾ ಎಂದರೆ ತಪ್ಪಾಗಲಾರದು. ಇತ್ತೀಚೆಗೆ ಈ ಸಿನಿಮಾ ಟ್ರೇಲರ್‌ ರಿಲೀಸ್‌ ಆಗಿತ್ತು. ಹೊಸ ಬಗೆಯ ಥ್ರಿಲ್ ನೀಡುವ ಚಿತ್ರದಲ್ಲಿ ಚಿನ್ನಾರಿ ಮುತ್ತನಿಗೆ ಶಿವಣ್ಣ ಸಾಥ್ ಕೊಟ್ಟಿದ್ದಾರೆ. 'ರಾಘು' ಟ್ರೇಲರ್‌ಗೆ ಶಿವಣ್ಣನ ಪವರ್ ಫುಲ್ ವಾಯ್ಸ್ ಸಿಕ್ಕಿದ್ದು, ಚಿತ್ರದ ಖದರ್ ಮತ್ತಷ್ಟು ಹೆಚ್ಚಿದೆ.

ರಾಘವೇಂದ್ರ ಸ್ಟೋರ್ಸ್‌ (ಕನ್ನಡ)

ಬಹುನಿರೀಕ್ಷಿತ 'ರಾಘವೇಂದ್ರ ಸ್ಟೋರ್ಸ್‌' ಸಿನಿಮಾ ಇಂದು ತೆರೆ ಕಾಣುತ್ತಿದೆ. ಈ ಸಿನಿಮಾ ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬದ ಸಮಯದಲ್ಲೇ ತೆರೆ ಕಾಣಬೇಕಿತ್ತು. ಆದರೆ ಕಾರಣಾಂತರಗಳಿಂದ ರಿಲೀಸ್‌ ತಡವಾಯ್ತು. ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ಅಡಿಯಲ್ಲಿ ವಿಜಯ್‌ ಕಿರಗಂದೂರು ನಿರ್ಮಿಸಿದ್ದು ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನವಿದೆ. ಹೋಟೆಲ್‌ನಲ್ಲಿ ಕೆಲಸ ಮಾಡುವ 40 ವರ್ಷ ದಾಟಿದರೂ ಅವಿವಾಹಿತನಾಗಿರುವ ನಾಯಕ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಏನೆಲ್ಲಾ ಸಮಸ್ಯೆ ಎದುರಿಸುತ್ತಾನೆ ಎಂಬುದನ್ನು ಚಿತ್ರದಲ್ಲಿ ಹೇಳಲಾಗಿದೆ. ಚಿತ್ರದಲ್ಲಿ ಜಗ್ಗೇಶ್‌, ಶ್ವೇತಾ ಶ್ರೀವಾತ್ಸವ್‌, ರವಿಶಂಕರ್‌ ಗೌಡ ಹಾಗೂ ಇನ್ನಿತರರು ನಟಿಸಿದ್ದಾರೆ.

ಪೊನ್ನಿಯಿನ್‌ ಸೆಲ್ವನ್‌ 2 (ತಮಿಳು-ಪ್ಯಾನ್‌ ಇಂಡಿಯಾ ಸಿನಿಮಾ)

ಲೈಕಾ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿಯಲ್ಲಿ ಮಣಿರತ್ನಂ ಆಕ್ಷನ್‌ ಕಟ್‌ ಹೇಳಿರುವ 'ಪೊನ್ನಿಯಿನ್‌ ಸೆಲ್ವನ್‌-2' ಸಿನಿಮಾ ಇಂದು ಬೆಳ್ಳಿತೆರೆಗೆ ಅಪ್ಪಳಿಸುತ್ತಿದೆ. ಕಳೆದ ವರ್ಷ ಮೊದಲ ಭಾಗ ರಿಲೀಸ್‌ ಆಗಿತ್ತು. ಚಿತ್ರದಲ್ಲಿ ಐಶ್ವರ್ಯ ರೈ ಬಚ್ಚನ್‌, ತ್ರಿಷಾ, ಐಶ್ವರ್ಯ ಲಕ್ಷ್ಮಿ, ಶೋಭಿತಾ ಧುಲಿಪಾಲ, ವಿಕ್ರಮ್‌, ಜಯಂ ರವಿ, ಕಾರ್ತಿ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಈ ಸಿನಿಮಾಹಾಡುಗಳಿಗೆ ಎ.ಆರ್.‌ ರೆಹಮಾನ್‌ ಸಂಗೀತ ನೀಡಿದ್ದಾರೆ.

ಏಜೆಂಟ್ (ತೆಲುಗು)

ಅಖಿಲ್‌ ಅಕ್ಕಿನೇನಿ ಅಭಿನಯಿಸಿರುವ 'ಏಜೆಂಟ್‌' ಇಂದು ತೆರೆಗೆ ಬರುತ್ತಿದೆ. ನಿರ್ದೇಶಕ ಸುರೇಂದರ್ ರೆಡ್ಡಿ 'ಏಜೆಂಟ್' ಚಿತ್ರವನ್ನು ಇತರೆ ಸ್ಪೈ ಥ್ರಿಲ್ಲರ್ ಸಿನಿಮಾಗಳಿಗಿಂತಲೂ ವಿಭಿನ್ನವಾಗಿ ತೆರೆ ಮೇಲೆ ತರುತ್ತಿದ್ದು ಇಬ್ಬರ ಕಾಂಬಿನೇಶನ್ ಮೇಲೆ ಸಿನಿ ಪ್ರೇಮಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದಲ್ಲಿ ಸಾಕ್ಷಿ ವೈದ್ಯ, ಅಖಿಲ್ ಅಕ್ಕಿನೇನಿಗೆ ನಾಯಕಿಯಾಗಿ ನಟಿಸಿದ್ದು, ಖ್ಯಾತ ಮಲಯಾಳಂ ನಟ ಮಮ್ಮುಟ್ಟಿ, ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎಕೆ ಎಂಟರ್ಟೈನ್ಮೆಂಟ್ಸ್ ಹಾಗೂ ಸುರೇಂದ್ರ 2 ಸಿನಿಮಾ ಬ್ಯಾನರ್ ಅಡಿ ರಾಮಬ್ರಹ್ಮಂ ಸುಂಕರ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಪಚುವುಂ ಅದ್ಭುತ ವಿಳಕ್ಕುಂ (ಮಲಯಾಳಂ)

ಫಹಾದ್‌ ಫಾಸಿಲ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಮಲಯಾಳಂ ಸಿನಿಮಾ 'ಪಚುವುಂ ಅದ್ಭುತ ವಿಳಕ್ಕುಂ' ಈ ದಿನ ರಿಲೀಸ್‌ ಆಗುತ್ತಿದೆ. ಸೇತು ಮನ್ನಾರ್ಕಾಡ್ ನಿರ್ಮಿಸಿರುವ ಈ ಚಿತ್ರಕ್ಕೆ ಅಖಿಲ್ ಸತ್ಯನ್ ಆಕ್ಷನ್‌ ಕಟ್‌ ಹೇಳಿದ್ದಾರೆ. ಅಂಜನಾ ಜಯಪ್ರಕಾಶ್‌, ಅಭಿರಾಮ್‌ ರಾಧಾಕೃಷ್ಣ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ