logo
ಕನ್ನಡ ಸುದ್ದಿ  /  ಮನರಂಜನೆ  /  ‘ಖುಷಿ’ಯ ಅಲೆಯ ನಡುವೆ ರಕ್ಷಿತ್‌ ಶೆಟ್ಟಿಯ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಖಜಾನೆಗೆ ಬಂದ ಹಣವೆಷ್ಟು?

‘ಖುಷಿ’ಯ ಅಲೆಯ ನಡುವೆ ರಕ್ಷಿತ್‌ ಶೆಟ್ಟಿಯ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಖಜಾನೆಗೆ ಬಂದ ಹಣವೆಷ್ಟು?

Sep 03, 2023 03:50 PM IST

‘ಖುಷಿ’ಯ ಅಲೆಯ ನಡುವೆ ರಕ್ಷಿತ್‌ ಶೆಟ್ಟಿಯ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಖಜಾನೆಗೆ ಬಂದ ಹಣವೆಷ್ಟು?

    • ರಕ್ಷಿತ್‌ ಶೆಟ್ಟಿ ಮತ್ತು ರುಕ್ಮಿಣಿ ವಸಂತ್‌ ಜೋಡಿಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಿಡುಗಡೆ ಬಳಿಕ ಪಾಸಿಟಿಕ್‌ ಪ್ರತಿಕ್ರಿಯೆ ಪಡೆದು ಮುನ್ನುಗ್ಗುತ್ತಿದೆ. ಗಳಿಕೆ ವಿಚಾರದಲ್ಲಿಯೂ ಏರಿಕೆಗತಿಯಲ್ಲಿದೆ. ಎರಡು ದಿನಗಳಲ್ಲಿ ಡಿಸೆಂಟ್‌ ನಂಬರ್‌ ಸಂಪಾದಿಸಿದೆ. 
‘ಖುಷಿ’ಯ ಅಲೆಯ ನಡುವೆ ರಕ್ಷಿತ್‌ ಶೆಟ್ಟಿಯ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಖಜಾನೆಗೆ ಬಂದ ಹಣವೆಷ್ಟು?
‘ಖುಷಿ’ಯ ಅಲೆಯ ನಡುವೆ ರಕ್ಷಿತ್‌ ಶೆಟ್ಟಿಯ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಖಜಾನೆಗೆ ಬಂದ ಹಣವೆಷ್ಟು?

SSE Day 2 box office: ರಕ್ಷಿತ್‌ ಶೆಟ್ಟಿ ಮತ್ತು ನಿರ್ದೇಶಕ ಹೇಮಂತ್‌ ಎಂ ರಾವ್‌ ಕಾಂಬಿನೇಷನ್‌ನ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಮೊನ್ನೆ (ಸೆ. 1) ಶುಕ್ರವಾರವಷ್ಟೇ ಬಿಡುಗಡೆಯಾಗಿದೆ. ಚಿತ್ರಕ್ಕೆ ಎಲ್ಲೆಡೆಯಿಂದ ಪಾಸಿಟಿವ್‌ ರೆಸ್ಪಾನ್ಸ್‌ ಸಿಗುತ್ತಿದೆ. ದಿನದಿಂದ ದಿನಕ್ಕೆ ವೀಕ್ಷಕರ ಜತೆಗೆ ಸ್ಕ್ರೀನ್‌ಗಳ ಸಂಖ್ಯೆಯನ್ನೂ ಹೆಚ್ಚಿಸಿಕೊಳ್ಳುತ್ತಿದೆ ಈ ಸಿನಿಮಾ. ಆರಂಭದಿಂದಲೂ ನಿರೀಕ್ಷೆ ಮೂಡಿಸುತ್ತಲೇ ಬಂದಿದ್ದ ಈ ಸಿನಿಮಾ ಬಿಡುಗಡೆ ಬಳಿಕವೂ ಆ ನಿರೀಕ್ಷೆಯನ್ನು ಉಳಿಸಿಕೊಂಡಿದೆ. ಕಲೆಕ್ಷನ್‌ ವಿಚಾರದಲ್ಲಿಯೂ ಮುಂದಡಿಯನ್ನೇ ಇರಿಸಿದೆ ಈ ಸಿನಿಮಾ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ಬಳಿಕ ಅಂದರೆ ಸುದೀರ್ಘ 7 ವರ್ಷಗಳ ಬಳಿಕ ಈ ಜೋಡಿ ಪ್ರೇಮ ಕಥೆಯ ಮೂಲಕ ಆಗಮಿಸಿದೆ. ಆಫ್‌ಬೀಟ್‌ ಸಿನಿಮಾವಾದರೂ ನೋಡುಗರಿಂದ ಮೆಚ್ಚುಗೆಯನ್ನು ಪಡೆದು, ಬಾಕ್ಸ್‌ ಆಫೀಸ್‌ನಲ್ಲಿಯೂ ಒಳ್ಳೆಯ ಕಮಾಯಿಯನ್ನೇ ಮಾಡುತ್ತಿದೆ. ಹಾಗಾದರೆ ಈ ವರೆಗೂ ರಕ್ಷಿತ್‌ ಶೆಟ್ಟಿಯ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಗಳಿಸಿದ್ದು ಎಷ್ಟು? ಇಲ್ಲಿದೆ ಉತ್ತರ.

ಕಲೆಕ್ಷನ್‌ ಎಷ್ಟು?

ಈ ವಾರ ಸಿನಿಮಾಗಳ ವಿಚಾರದಲ್ಲಿ ಹೆಚ್ಚು ಪೈಪೋಟಿ ಇರಲಿಲ್ಲ. ವಿಜಯ್‌ ದೇವರಕೊಂಡ ಮತ್ತು ಸಮಂತಾ ನಟನೆಯ ಖುಷಿ ಸಿನಿಮಾ ಕನ್ನಡಕ್ಕೂ ಡಬ್‌ ಆಗಿ ಬಿಡುಗಡೆಯಾದರೂ, ಬಾಕ್ಸ್‌ ಆಫೀಸ್‌ನಲ್ಲಿ ಅದಕ್ಕೆ ಪ್ರತಿಸ್ಪರ್ಧಿಯಾಗಿ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ತೆರೆಕಂಡಿದೆ.. ಮೊದಲ ದಿನದ ಮೊದಲ ಶೋದಿಂದಲೇ ಪಾಸಿಟಿವ್‌ ರೆಸ್ಪಾನ್ಸ್‌ ಪಡೆದುಕೊಂಡ ಹಿನ್ನೆಲೆಯಲ್ಲಿ ಗಳಿಕೆ ವಿಚಾರದಲ್ಲೂ ಮುಂದೆ ಸಾಗುತ್ತಿದೆ ರಕ್ಷಿತ್‌ ಸಿನಿಮಾ. ಮೊದಲ ಎರಡು ದಿನಗಳ ಕೆಲೆಕ್ಷನ್‌ ಲೆಕ್ಕ ಹಾಕಿದರೆ, 6ರಿಂದ 7 ಕೋಟಿ ಗಳಿಕೆ ಕಂಡಿದೆ ಎಂದು ಬಾಕ್ಸ್‌ ಆಫೀಸ್‌ ಪಂಡಿತರು ಹೇಳುತ್ತಿದ್ದಾರೆ.

ಭಾನುವಾರ ಮತ್ತಷ್ಟು ಅಧಿಕ

ಇನ್ನು ಭಾನುವಾರದ ಕಲೆಕ್ಷನ್‌ ಲೆಕ್ಕಾಚಾರ ಮೊದಲ ಎರಡು ದಿನಗಳಿಂತ ಜಾಸ್ತಿಯೇ ಇರುತ್ತದೆ. ವೀಕೆಂಡ್‌ ಆಗಿರುವುದರಿಂದ ಭಾನುವಾರ ಒಂದೇ ದಿನ 5 ಕೋಟಿ ಕಲೆಕ್ಷನ್‌ ಆಗುವ ಸಾಧ್ಯತೆ ಇದೆ. ಕರ್ನಾಟಕದಲ್ಲಿ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್‌ ಸಿಗುತ್ತಿರುವುದು ಒಂದೆಡೆಯಾದರೆ, ಸೋಷಿಯಲ್‌ ಮೀಡಿಯಾದಲ್ಲಿ ಈ ಸಿನಿಮಾ ಪಾಸಿಟಿಕ್‌ ಟಾಕ್‌ ಪಡೆದುಕೊಂಡಿದ್ದೇ ಹೆಚ್ಚು. ಈ ಮೂಲಕ ವಾರಾಂತ್ಯದಷ್ಟೊತ್ತಿಗೆ 14 ಕೋಟಿ ಸನಿಹಕ್ಕೆ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಂದು ನಿಲ್ಲಲಿದೆ ಎಂದು ಊಹಿಸಲಾಗಿದೆ.

ಮನರಂಜನೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ