logo
ಕನ್ನಡ ಸುದ್ದಿ  /  ಮನರಂಜನೆ  /  ಸೆ. 1ರಂದು ತೆರೆಕಾಣುತ್ತಿರುವ ಸಿನಿಮಾಗಳು ಹೀಗಿವೆ; ಕನ್ನಡದಿಂದ ಸಪ್ತಸಾಗರದಾಚೆ ಎಲ್ಲೋ ಮಾತ್ರ!

ಸೆ. 1ರಂದು ತೆರೆಕಾಣುತ್ತಿರುವ ಸಿನಿಮಾಗಳು ಹೀಗಿವೆ; ಕನ್ನಡದಿಂದ ಸಪ್ತಸಾಗರದಾಚೆ ಎಲ್ಲೋ ಮಾತ್ರ!

Aug 31, 2023 07:34 PM IST

ಸೆ. 1ರಂದು ತೆರೆಕಾಣುತ್ತಿರುವ ಸಿನಿಮಾಗಳು ಹೀಗಿವೆ; ಕನ್ನಡದಿಂದ ಸಪ್ತಸಾಗರದಾಚೆ ಎಲ್ಲೋ ಮಾತ್ರ!

    • ಈ ಶುಕ್ರವಾರ ಕನ್ನಡದ ಜತೆಗೆ ಹಲವು ಭಾಷೆಗಳ ಹೊಸ ಹೊಸ ಸಿನಿಮಾಗಳು ಬಿಡುಗಡೆ ಆಗುತ್ತುವೆ. ಆ ಪೈಕಿ ಕರ್ನಾಟಕದಲ್ಲಿ ರಕ್ಷಿತ್‌ ಶೆಟ್ಟಿ ನಟನೆಯ ಚಿತ್ರಕ್ಕೆ ಕ್ರೇಜ್‌ ಸೃಷ್ಟಿಯಾಗಿದೆ. ವಿಜಯ್‌ ದೇವರಕೊಂಡ ಮತ್ತು ಸಮಂತಾ ನಟನೆಯ ಖುಷಿ ಸಹ ಸೆ.1ರಂದೇ ಕನ್ನಡಕ್ಕೆ ಡಬ್‌ ಆಗಿ ಬಿಡುಗಡೆ ಆಗುತ್ತಿದೆ. 
ಸೆ. 1ರಂದು ತೆರೆಕಾಣುತ್ತಿರುವ ಸಿನಿಮಾಗಳು ಹೀಗಿವೆ; ಕನ್ನಡದಿಂದ ಸಪ್ತಸಾಗರದಾಚೆ ಎಲ್ಲೋ ಮಾತ್ರ!
ಸೆ. 1ರಂದು ತೆರೆಕಾಣುತ್ತಿರುವ ಸಿನಿಮಾಗಳು ಹೀಗಿವೆ; ಕನ್ನಡದಿಂದ ಸಪ್ತಸಾಗರದಾಚೆ ಎಲ್ಲೋ ಮಾತ್ರ!

Friday Movies: ಕಳೆದ ಕೆಲ ವಾರ ಸಿನಿಮಾ ಟ್ರಾಫಿಕ್‌ ಅಷ್ಟೊಂದು ಹೆಚ್ಚಿರಲಿಲ್ಲ. ಸ್ಟಾರ್‌ಗಳ ಸಿನಿಮಾಗಳಿದ್ದರೂ, ಉಸಿರಾಡುವಷ್ಟು ಗಾಳಿ ಸಿಗುತ್ತಿತ್ತು. ಇದೀಗ ಇನ್ನು ಮುಂದೆ ಸಾಲು ಸಾಲು ಸಿನಿಮಾಗಳ ಅಬ್ಬರ ಶುರುವಾಗಲಿದೆ. ಒಂದೇ ಭಾಷೆ ಮಾತ್ರವಲ್ಲದೆ, ತೆಲುಗು, ತಮಿಳು ಹಿಂದಿ ಸಿನಿಮಾಗಳ ಹಾವಳಿ ಮುಗಿಲು ಮುಟ್ಟಲಿದೆ. ಆ ಪೈಕಿ ಈ ವಾರ (ಸೆ.1) ಕನ್ನಡದಲ್ಲಿ ಹೇಳಿಕೊಳ್ಳುವಂತ ಸಿನಿಮಾ ಟ್ರಾಫಿಕ್‌ ಇಲ್ಲ. ಅರ್ಥಾತ್‌; ರಕ್ಷಿತ್‌ ಶೆಟ್ಟಿ ಅವರ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವೊಂದೆ ಬಿಡುಗಡೆ ಆಗುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಬರಲಿದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಯೋಪಿಕ್‌; ಮೋದಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಬಾಹುಬಲಿಯ ಕಟ್ಟಪ್ಪ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

ಸಪ್ತ ಸಾಗರದಾಚೆ ಎಲ್ಲೋ ಮಾತ್ರ

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಮೂಲಕ ಒಂದಾಗಿದ್ದ ಹೇಮಂತ್‌ ಕುಮಾರ್‌ ಮತ್ತು ರಕ್ಷಿತ್‌ ಶೆಟ್ಟಿ, ಈ ಸಿನಿಮಾ ಮೂಲಕ ಮತ್ತೆ ಜತೆಯಾಗಿದ್ದಾರೆ. ಈಗಾಗಲೇ ಪ್ರೀಮಿಯರ್‌ ಶೋನಲ್ಲಿ ಚಿತ್ರ ನೋಡಿದವರಿಂದ ಪಾಸಿಟಿವ್‌ ರೆಸ್ಪಾನ್ಸ್‌ ಸಿಕ್ಕಿದ್ದು, ಶುಕ್ರವಾರ ಕರ್ನಾಟಕ ಮಾತ್ರವಲ್ಲದೆ, ಪರಭಾಷೆಗಳಲ್ಲೂ ಕನ್ನಡದಲ್ಲಿಯೇ ರಿಲೀಸ್‌ ಆಗುತ್ತಿದೆ. ವಿದೇಶದ ಹಲವೆಡೆಗಳಲ್ಲೂ ಈ ಸಿನಿಮಾ ಪ್ರದರ್ಶನ ಕಾಣಲಿದೆ. ಅಚ್ಚರಿ ಏನೆಂದರೆ ಈ ವಾರ ರಿಲೀಸ್‌ ಆಗುತ್ತಿರುವ ಏಕೈಕ ಕನ್ನಡ ಸಿನಿಮಾ ಇದಾಗಿದೆ.

ತೆಲುಗಿನಲ್ಲಿ ದೇವರಕೊಂಡ ಖುಷಿ 

ಹೌದು, ಸ್ಯಾಂಡಲ್‌ವುಡ್‌ನಲ್ಲಿ ಈ ವಾರ ಕನ್ನಡದ ಒಂದೇ ಸಿನಿಮಾ ತೆರೆಗೆ ಬರುತ್ತಿದೆ. ಅದನ್ನು ಹೊರತುಪಡಿಸಿದರೆ, ತೆಲುಗಿನ ಖುಷಿ ಸಿನಿಮಾ ಕನ್ನಡಕ್ಕೆ ಡಬ್‌ ಆಗಿ ರಿಲೀಸ್‌ ಆಗಲಿದೆ. ಈ ಚಿತ್ರದಲ್ಲಿ ವಿಜಯ್‌ ದೇವರಕೊಂಡ ಮತ್ತು ಸಮಂತಾ ಜೋಡಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ತೆಲುಗು ನಾಡಲ್ಲಿ ಈ ಸಿನಿಮಾಕ್ಕೆ ದೊಡ್ಡ ಹೈಪ್‌ ಸಿಕ್ಕಿದ್ದು, ಕನ್ನಡದಲ್ಲಿ ಯಾವ ರೀತಿಯ ರೆಸ್ಪಾನ್ಸ್‌ ಸಿಗಲಿದೆ ಎಂಬುದನ್ನು ಕಾದು ನೋಡಬೇಕು.

ಬೆಂಗಳೂರಿನಲ್ಲಿ ಕನ್ನಡದ "ಖುಷಿ"ಗಿಲ್ಲ ಸ್ಥಾನ

ಹೆಸರಿಗಷ್ಟೇ ತೆಲುಗಿನ ಖುಷಿ ಸಿನಿಮಾವನ್ನು ಕನ್ನಡದಕ್ಕೆ ಡಬ್‌ ಮಾಡಿದಂತಿದೆ. ಅಂದರೆ, ಮೂಲ ತೆಲುಗು ಹೊರತುಪಡಿಸಿ ತಮಿಳು, ಹಿಂದಿ ಮತ್ತು ಕನ್ನಡದಲ್ಲಿ ಈ ಸಿನಿಮಾ ಡಬ್‌ ಆಗಿದೆ. ಆಯಾ ರಾಜ್ಯಗಳಲ್ಲಿ ಡಬ್‌ ಆದ ಭಾಷೆಗಳಲ್ಲಿಯೇ ಸಿನಿಮಾ ಬಿಡುಗಡೆ ಆಗುತ್ತಿದೆ. ಆದರೆ, ಕರ್ನಾಟಕದಲ್ಲಿ ಮಾತ್ರ ಆ ಪರಿಸ್ಥಿತಿ ಇಲ್ಲ. ಕನ್ನಡಕ್ಕೆ ಕೇವಲ ಬೆರಳೆಣಿಕೆ ಏಳು ಶೋ ನೀಡಿ ಮೂಲ ತೆಲುಗು ಅವತರಣಿಕೆಗೆ 350ಕ್ಕೂ ಅಧಿಕ ಶೋಗಳು ಬೆಂಗಳೂರಿನಲ್ಲಿ ಸಿಕ್ಕಿವೆ.

ತಮಿಳಿನಲ್ಲಿ ಯೋಗಿಯ ಲಕ್ಕಿಮ್ಯಾನ್‌

ತಮಿಳಿನಲ್ಲಿ ಲಕ್ಕಿಮ್ಯಾನ್‌ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಯೋಗಿ ಬಾಬು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಿಯಲ್‌ ಎಸ್ಟೇಟ್‌ ಬ್ರೋಕರ್‌ ಆಗಿ ಈ ಸಿನಿಮಾದಲ್ಲಿ ಯೋಗಿ ಬಾಬು ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಜತೆಗೆ ಕಿಕ್‌, ಪರಂಪೊರುಲ್‌, ರಂಗೋಲಿ, ಖುಷಿ, ಕರುಮೆಗಂಗಲ್‌ ಕಲೈಗಿಂದ್ರಾನ್‌ ಸಿನಿಮಾಗಳು ಈ ವಾರ ಬಿಡುಗಡೆಯಾಗುತ್ತಿವೆ.

ಇಂಗ್ಲಿಷ್‌ನಲ್ಲಿ ಗೋಲ್ಡ್‌ ಫಿಶ್‌

ದೀಪ್ತಿ ನವಲ್‌ ಮತ್ತು ಕಲ್ಕಿ ಕೊಚ್ಲಿನ್‌ ಮುಖ್ಯಭೂಮಿಕೆ ನಿಭಾಯಿಸಿರುವ ಗೋಲ್ಡ್‌ ಫಿಶ್‌ ಸಿನಿಮಾ ಶುಕ್ರವಾರ ತೆರೆಕಾಣಲಿದೆ. ಗೋಲ್ಡಾ, ಹಿಂದಿಗೆ ಡಬ್‌ ಆದ ದಿ ಇಕ್ವಿಲೈಜರ್‌ 3 ಸಿನಿಮಾ ಸಹ ಸೆ. 1ರಂದು ತೆರೆಗೆ ಬರಲಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ