logo
ಕನ್ನಡ ಸುದ್ದಿ  /  ಮನರಂಜನೆ  /  ಉಪೇಂದ್ರ ಯುಐ Vs ಬನಾರಸ್‌ ಟ್ರೋಲ್‌ ಸಾಂಗ್‌; ಅಲ್ಲಿತ್ತು ಹೌದು ಹುಲಿಯಾ, ಇಲ್ಲಿ ತಗಡು ಗುಮ್ಮಿಸ್ಕೋತೀಯಾ

ಉಪೇಂದ್ರ ಯುಐ vs ಬನಾರಸ್‌ ಟ್ರೋಲ್‌ ಸಾಂಗ್‌; ಅಲ್ಲಿತ್ತು ಹೌದು ಹುಲಿಯಾ, ಇಲ್ಲಿ ತಗಡು ಗುಮ್ಮಿಸ್ಕೋತೀಯಾ

Praveen Chandra B HT Kannada

Mar 05, 2024 12:33 PM IST

ಉಪೇಂದ್ರ ಯುಐ vs ಬನಾರಸ್‌ ಟ್ರೋಲ್‌ ಸಾಂಗ್‌; ಅಲ್ಲಿತ್ತು ಹೌದು ಹುಲಿಯಾ, ಇಲ್ಲಿ ತಗಡು

    • ಕನ್ನಡ ಸಿನಿಮಾಗಳಲ್ಲಿ ಟ್ರೋಲ್‌ ಹಾಡುಗಳ ಟ್ರೆಂಡ್‌ ಸೃಷ್ಟಿಯಾಗಿದೆ. ಉಪೇಂದ್ರ ಯುಐ ಸಿನಿಮಾದ ಟ್ರೋಲಾಗುತ್ತೆ ಇದು ಟ್ರೋಲಾಗುತ್ತೆ ಹಾಡು ಬಿಡುಗಡೆಯಾಗಿದೆ. 2022ರ ಬನಾರಸ್‌ ಸಿನಿಮಾದಲ್ಲೂ ಟ್ರೋಲ್‌ ಹಾಡಿತ್ತು.
ಉಪೇಂದ್ರ ಯುಐ vs ಬನಾರಸ್‌ ಟ್ರೋಲ್‌ ಸಾಂಗ್‌; ಅಲ್ಲಿತ್ತು ಹೌದು ಹುಲಿಯಾ, ಇಲ್ಲಿ ತಗಡು
ಉಪೇಂದ್ರ ಯುಐ vs ಬನಾರಸ್‌ ಟ್ರೋಲ್‌ ಸಾಂಗ್‌; ಅಲ್ಲಿತ್ತು ಹೌದು ಹುಲಿಯಾ, ಇಲ್ಲಿ ತಗಡು

ಸದ್ಯ ಉಪೇಂದ್ರ ಯುಐ ಸಿನಿಮಾದ ಟ್ರೋಲಾಗುತ್ತೆ ಇದು ಟ್ರೋಲಾಗುತ್ತೆ ಹಾಡು ಸದ್ದು ಮಾಡುತ್ತಿದೆ. ಇತ್ತೀಚಿನ ಬೆಳ್ಳುಳ್ಳಿ ಕಬಾಬ್‌, ತಗಡು ಇತ್ಯಾದಿ ಟ್ರೋಲ್‌ ವಿಷಯಗಳನ್ನು ಒಳಗೊಂಡ ಈ ಹಾಡು ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಸೆಟ್‌ ಮಾಡುತ್ತಿದೆ. ಇದೇ ಸಮಯದಲ್ಲಿ 2022ರಲ್ಲಿ ಬಿಡುಗಡೆಯಾದ ಝೈದ್‌ ಖಾನ್‌ ನಟನೆಯ ಬನಾರಸ್‌ ಸಿನಿಮಾದಲ್ಲೂ ಇದ್ದ "ಟ್ರೋಲ್‌ ಸಾಂಗ್‌" ಮತ್ತೆ ಸುದ್ದಿಯಲ್ಲಿದೆ. ವಿಶೇಷವೆಂದರೆ ಬನಾರಸ್‌ ಸಿನಿಮಾದ ಟ್ರೋಲ್‌ ಹಾಡಿಗೂ ಅಜನೀಶ್‌ ಲೋಕನಾಥ್‌ ಸಂಗೀತವಿದೆ. ಉಪೇಂದ್ರ ಯುಐ ಸಿನಿಮಾದ ಟ್ರೋಲಾಗುತ್ತೆ ಎಂಬ ಟ್ರೋಲ್‌ ಹಾಡಿನ ಹಿಂದೆಯೂ ಇದೇ ಅಜನೀಶ್‌ ಇದ್ದಾರೆ.

ಟ್ರೆಂಡಿಂಗ್​ ಸುದ್ದಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಮತ್ತಷ್ಟು ಹಿರಿದಾಯ್ತು ಕಣ್ಣಪ್ಪ ಸಿನಿಮಾ ತಾರಾಬಳಗ; ಅಕ್ಷಯ್‌ ಕುಮಾರ್‌, ಪ್ರಭಾಸ್‌ ಬಳಿಕ ಕಾಜಲ್‌ ಅಗರ್ವಾಲ್ ಎಂಟ್ರಿ

ಬನಾರಸ್‌ ಸಿನಿಮಾದ ಟ್ರೋಲ್‌ ಹಾಡು

ಎಲ್ಲಾ ಟ್ರೋಲು, ಎಲ್ಲಾ ಟ್ರೋಲು, ಸಿಕ್ಕಾಪಟ್ಟೆ ಕೊಲೆಸ್ಟ್ರಾಲು, ಮಾತನಾಡುವಾಗ ಟೈಮ್‌ ಜಾಗ ನೋಡ್ಕೋಬೇಕು ಎಂಬ ಸಾಲುಗಳನ್ನು ಬನಾರಸ್‌ ಹಾಡು ಹೊಂದಿತ್ತು. ದಿಸ್‌ ಮಿ ದಟ್‌ ಮೀ ಎಂಬ ಹಾಡು ಪಾರ್ಟಿ ಹಿನ್ನಲೆಯಲ್ಲಿ ಮೂಡಿಬಂದಿತ್ತು. "ಒನ್‌ ಟೀಚರ್‌ ಕೆನಾಟ್‌ ರೈಟ್‌ ಆಲ್‌ ಸಬ್ಜೆಕ್ಟ್‌, ಹೌ ಒನ್‌ ಸ್ಟುಡೆಂಟ್‌ ರೀಡ್‌ ಆಲ್‌ ಸಬ್ಜೆಕ್ಟ್‌... ನೋವೇ" ಎಂಬ ಟ್ರೊಲ್‌ ಸಾಲು ಈ ಹಾಡಿನಲ್ಲಿದೆ. "ಒನ್‌ ವಿಷಯ ಹೇಳೋಕ್ಕೆ ಇಷ್ಟಪಡ್ತೆನೆ. ನಿಮ್ಮ ಫ್ರೆಂಡ್ಸ್‌ ನಿಮಗೆ ಯಾವತ್ತೂ ಟ್ರೀಟ್‌ ಮಾತ್ರ ಕೊಡ್ಸೊಲ್ಲ ಸರ್‌" ಎಂಬ ಮೋಟಿವೇಷನಲ್‌ ಸ್ಪೀಕರ್‌ವೊಬ್ಬರ ಟ್ರೋಲಿಂಗ್‌ ಮಾತೂ ಇದೆ. ಹೀಗೆ ಆ ಸಮಯದ ಹಲವು ಟ್ರೋಲಿಂಗ್‌ ಮಾತುಗಳು ಈ ಹಾಡಿನಲ್ಲಿದೆ. ಹಾಡಿನ ಕೊನೆಗೆ ಹೌದು ಹುಲಿಯಾ ಇತ್ಯಾದಿ ಟ್ರೋಲ್‌ ವಿಷಯಗಳೂ ಇವೆ.

ಯುಐ ಸಿನಿಮಾದ ಟ್ರೋಲ್‌ ಹಾಡು

ಉಪೇಂದ್ರ ನಿರ್ದೇಶನ ಮತ್ತು ನಟನೆಯ ಯುಐ ಹಾಡಿನ ಟ್ರೋಲ್‌ ಹಾಡು ಇನ್ನಷ್ಟು ಭಿನ್ನವಾಗಿದೆ. ಬನಾರಸ್‌ನಲ್ಲಿ ಹೀರೋ ಟ್ರೋಲ್‌ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಯುಐನಲ್ಲಿ ಹೀರೋಯಿನ್‌ ರೀಷ್ಮಾ ನಾಣಯ್ಯ "ಟ್ರೋಲಾಗುತ್ತೆ ಇದು ಟ್ರೋಲಾಗುತ್ತೆ" ಎಂದು ಡ್ಯಾನ್ಸ್‌ ಮಾಡಿದ್ದಾರೆ. ದರ್ಶನ್‌, ಯಶ್‌, ಉಮಾಪತಿ ಮುಂತಾದ ಸೆಲೆಬ್ರಿಟಿಗಳನ್ನೂ ಈ ಹಾಡು ಪರೋಕ್ಷವಾಗಿ ನೆನಪಿಸಿದೆ. ಒಂದೆಡೆ ಲವ್ವಲ್ಲಿ ಗುಮ್ಮಿಸ್ಕೊಂಡು ತಗಡಾಗೋದ ಎಂಬ ಸಾಲನ್ನು ಕೇಳಿದಾಗ ಇತ್ತೀಚೆಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು "ತಗಡು" "ಗುಮ್ಮಿಸ್ಕೋತೀಯಾ" ಎಂಬ ಪದಗಳನ್ನು ಬಳಸಿದ್ದು ನೆನಪಿಗೆ ಬರಬಹುದು. ಇದೇ ರೀತಿ "ಒಟ್ಟಾಗಿ ನಿಂತ್ರೆ ಜೋಡೆತ್ತಿನಂಗೆ ಗೆಲುವು ನಮ್ದೆ" ಎಂದು ಯಶ್‌ ಮತ್ತು ದರ್ಶನ್‌ರನ್ನು ಮತ್ತೆ ಈ ಹಾಡು ನೆನಪಿಸಿಕೊಂಡಿದೆ.

ಬನಾರಸ್‌ ಮತ್ತು ಯುಐ ಟ್ರೋಲ್‌ ಹಾಡುಗಳು ಒಂದಕ್ಕಿಂತ ಒಂದು ಸಖತ್‌ ಇವೆ. ಅಂದಹಾಗೆ ಯುಐ ಸಿನಿಮಾದ ಟ್ರೋಲ್‌ ಹಾಡನ್ನು ಫಸ್ಟ್‌ ರ್ಯಾಂಕ್‌ ರಾಜು ಸಿನಿಮಾದ ನಿರ್ದೇಶಕರಾದ ನರೇಶ್‌ ಕುಮಾರ್‌ ಬರೆದಿದ್ದಾರೆ. ಉಪ್ಪಿ ಟ್ರೋಲ್‌ ಸಾಂಗ್‌ಗೆ ಪ್ರೇಕ್ಷಕರು ಖುಷಿಪಟ್ಟಿದ್ದಾರೆ. ಯೂಟ್ಯೂಬ್‌ನಲ್ಲಿ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. "ಮಹಾನ್ ಕಲಾವಿದ ಕಣಪ್ಪ ನಮ್ ಉಪ್ಪಿ ಸರ್‌. ಅವ್ರ್ನ ಟಚ್ ಮಾಡೋಕ್ ಯಾವನಿಂದನು ಆಗಲ್ಲಾ ಬಿಡಿ" "ಈ ಹಾಡಿನಲ್ಲಿ ಉಪೇಂದ್ರ ಅವ್ರು ಎಲ್ರಿಗೂ ಬಟ್ಟೆ ಸುತ್ತಿ ಹೊಡೆದಿದ್ದಾರೆ. ಟ್ರೊಲ್ ಅಂದ್ರೆ ಇದು ಗುರು ಸಾಂಗ್" "ಒಂದು ಸಾರಿ ನೋಡು ಅಂತ ಸಾಂಗ್ ಅಲ್ಲ ಇದು ಪದೇ ಪದೇ ನೋಡ್ಬೇಕು ಅನ್ನಿಸೋ ಸಾಂಗು. ನಾನಂತೂ ಕಂಟಿನ್ಯೂಸ್ಲಿ ನೋಡ್ತಾನೇ ಇದೀನಿ" " ಅದಕ್ಕೆ ಹೇಳೋದು ಉಪೇಂದ್ರ ಮಲ್ಟಿ ಟ್ಯಾಲೆಂಟ್ ಅಂತ. ಈ ಹಾಡನ್ನ ಮೂರು ಬಾರಿ ಕೇಳಿದ್ರೆ ಸಾಕು ಹಾಡಿನ ಸಾಲು ಸಲೀಸಾಗಿ ಅರ್ಥ ಆಗುತ್ತೆ" "ಟ್ರೊಲ್ ಟ್ರೊಲ್ ಅನೋರಿಗೆ ನಿಜವಾಗಿ ಟ್ರೊಲ್ ಮಾಡಿಬಿಟ್ರಿ ಉಪೇಂದ್ರ ಸರ್ ನೀವು ಸೂಪರ್ ಸರ್ ಹ್ಯಾಟ್ಸಪ್ ಸರ್" ಎಂದೆಲ್ಲ ಉಪ್ಪಿ ಟ್ರೋಲ್‌ ಸಾಂಗ್‌ಗೆ ನೂರಾರು ಕಾಮೆಂಟ್‌ಗಳು ಬಂದಿವೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ