logo
ಕನ್ನಡ ಸುದ್ದಿ  /  ಮನರಂಜನೆ  /  Sanjay Dutt In Kd: ಧ್ರುವ ಸರ್ಜಾ ‘ಕೆಡಿ’ ಸೆಟ್‌ಗೆ ಎಂಟ್ರಿಕೊಟ್ಟ ಸಂಜಯ್‌ ದತ್‌!; ಆಗಮನದ Video ಇಲ್ಲಿದೆ...

Sanjay Dutt in KD: ಧ್ರುವ ಸರ್ಜಾ ‘ಕೆಡಿ’ ಸೆಟ್‌ಗೆ ಎಂಟ್ರಿಕೊಟ್ಟ ಸಂಜಯ್‌ ದತ್‌!; ಆಗಮನದ VIDEO ಇಲ್ಲಿದೆ...

Jan 31, 2023 06:21 AM IST

ಧ್ರುವ ಸರ್ಜಾ ‘ಕೆಡಿ’ ಸೆಟ್‌ಗೆ ಎಂಟ್ರಿಕೊಟ್ಟ ಸಂಜಯ್‌ ದತ್‌!; ಆಗಮನದ VIDEO ಇಲ್ಲಿದೆ...

    • ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾ ಶೂಟಿಂಗ್‌ ಸೆಟ್‌ಗೆ ಬಾಲಿವುಡ್‌ ನಟ ಸಂಜಯ್‌ ದತ್‌ ಎಂಟ್ರಿಯಾಗಿದ್ದಾರೆ. 
ಧ್ರುವ ಸರ್ಜಾ ‘ಕೆಡಿ’ ಸೆಟ್‌ಗೆ ಎಂಟ್ರಿಕೊಟ್ಟ ಸಂಜಯ್‌ ದತ್‌!; ಆಗಮನದ VIDEO ಇಲ್ಲಿದೆ...
ಧ್ರುವ ಸರ್ಜಾ ‘ಕೆಡಿ’ ಸೆಟ್‌ಗೆ ಎಂಟ್ರಿಕೊಟ್ಟ ಸಂಜಯ್‌ ದತ್‌!; ಆಗಮನದ VIDEO ಇಲ್ಲಿದೆ...

Sanjay Dutt in KD: ಚಂದನವನದ ನಟ ಧ್ರುವ ಸರ್ಜಾ ಮತ್ತು ನಿರ್ದೇಶಕ ಪ್ರೇಮ್‌ ಕಾಂಬಿನೇಷನ್‌ ಸಿನಿಮಾ ಬರ್ತಿದೆ ಎಂದಾಗಲೇ ಒಂದಷ್ಟು ಕುತೂಹಲಗಳು ಗರಿಗೆದರಿದ್ದವು. ನಿರೀಕ್ಷೆಯೂ ಅಷ್ಟೇ ಜೋರಾಗಿತ್ತು. ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಪ್ರೇಮ್‌, ಅದ್ದೂರಿಯಾಗಿಯೇ ತಮ್ಮ ಮುಂದಿನ ಹೊಸ ಸಿನಿಮಾ ‘ಕೆಡಿ’ ಶೀರ್ಷಿಕೆ ಟೀಸರ್‌ಅನ್ನು ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ್ದರು. ಅದಾದ ಮೇಲೆ ಒಂದಿಲ್ಲೊಂದು ಅಪ್‌ಡೇಟ್‌ ಮಾಹಿತಿಯನ್ನು ಹಂಚಿಕೊಳ್ಳುತ್ತಲೇ ಇದ್ದಾರೆ ಪ್ರೇಮ್.‌

ಟ್ರೆಂಡಿಂಗ್​ ಸುದ್ದಿ

Bhagyalakshmi Serial: 10ನೇ ತರಗತಿ ಪಾಸ್‌ ಆದ ಖುಷಿಗೆ ಮೊದಲ ದಿನವೇ ಕೆಲಸಕ್ಕೆ ತಡವಾಗಿ ಹೊರಟ ಭಾಗ್ಯಾ, ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

Amruthadhaare: ರೌಡಿಗಳ ಕೈಯಿಂದ ಮಲ್ಲಿಯನ್ನು ಬಚಾವ್‌ ಮಾಡಿದ್ಲು ಮಹಿಮಾ; ಡುಮ್ಮ ಸರ್‌ ಟೈಟಾದ್ರು, ಐ ಅಂದ್ರು, ಲವ್‌ ಯು ಹೇಳ್ತಾರ

ಬರಲಿದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಯೋಪಿಕ್‌; ಮೋದಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಬಾಹುಬಲಿಯ ಕಟ್ಟಪ್ಪ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

ಮೊನ್ನೆ ಹೊಸ ವರ್ಷಕ್ಕೆ ‘ಕೆಡಿ’ ಚಿತ್ರದಲ್ಲಿನ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಲುಕ್‌ ಬಹಿರಂಗಪಡಿಸಿದ್ದರು. ರೌಡಿಸಂ ಹಿನ್ನೆಲೆಯ ಸಿನಿಮಾದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅಣ್ಣಯ್ಯಪ್ಪ ಅನ್ನೋ ಪಾತ್ರದಲ್ಲಿ ರವಿಮಾಮನ ಎಂಟ್ರಿಯಾಗಿತ್ತು. ಫಸ್ಟ್‌ ಲುಕ್‌ನಲ್ಲಿ ರೆಟ್ರೊ ಶೈಲಿಯಲ್ಲಿಯೇ ಅವರನ್ನು ತೋರಿಸಲಾಗಿತ್ತು. ಈಗ ಇದೇ ಸಿನಿಮಾ ಸೆಟ್‌ಗೆ ಬಾಲಿವುಡ್‌ ನಟ ಸಂಜಯ್‌ ದತ್‌ ಆಗಮಿಸಿದ್ದಾರೆ.

‘ಕೆಡಿ’ ಅಖಾಡಕ್ಕೆ ಸಂಜಯ್‌ ದತ್‌..

‘ಕೆಜಿಎಫ್‌ 2’ ಸಿನಿಮಾದಲ್ಲಿನ ಅಧೀರ ಪಾತ್ರ ನಟ ಸಂಜಯ್‌ ದತ್‌ಗೆ ದೊಡ್ಡ ಮಟ್ಟದ ಹಿಟ್‌ ನೀಡಿತ್ತು. ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಚೊಚ್ಚಲ ಚಿತ್ರವೂ ಅವರ ಕೆರಿಯರ್‌ಗೆ ಹೊಸ ಮೆರುಗು ನೀಡಿತ್ತು. ಅದಾದ ಬಳಿಕ ಕನ್ನಡದ ಬೇರೆ ಬೇರೆ ಸಿನಿಮಾಗಳಲ್ಲಿ ಸಂಜಯ್‌ ದತ್‌ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತಾದರೂ, ಯಾವುದೂ ಅಧಿಕೃತವಾಗಿರಲಿಲ್ಲ. ಇತ್ತ ನಿರ್ದೇಶಕ ಪ್ರೇಮ್‌ ‘ಕೆಡಿ’ ಸಿನಿಮಾಗಾಗಿ ಅವರನ್ನು ಕರೆತಂದಿದ್ದಾರೆ.

ಅಂದಹಾಗೆ, ಈವರೆಗಿನ ಚಿತ್ರದ ಕೆಲ ಪೋಸ್ಟರ್‌ಗಳನ್ನು ಗಮನಿಸಿದರೆ, 70-80ರ ಕಾಲಘಟ್ಟದಲ್ಲಿ ನಡೆಯುವ ಈ ಕಥೆ ಭೂಗತ ಜಗತ್ತಿನ ಹಿನ್ನೆಲೆಯುಳ್ಳದ್ದು. ಇದೀಗ ಈ ಚಿತ್ರದ ಅಂಗಳಕ್ಕೆ ಸಂಜಯ್‌ ದತ್‌ ಎಂಟ್ರಿಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಸಂಜಯ್‌ ದತ್‌ ಪಾತ್ರವೇನು? ಅವರ ಲುಕ್‌ ಹೇಗಿರಲಿದೆ? ಇದ್ಯಾವುದರ ಸಣ್ಣ ಸುಳಿವನ್ನೂ ನಿರ್ದೇಶಕರು ಬಹಿರಂಗಪಡಿಸಿಲ್ಲ.

ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ‘ಕೆಡಿ’ ಸಿನಿಮಾ ಬಿಡುಗಡೆ ಆಗಲಿದೆ. ಕೆವಿಎನ್‌ ಪ್ರೊಡಕ್ಷನ್‌ನಲ್ಲಿ ಮೂಡಿಬರುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ. ಪ್ರೇಮ್ ಅವರ 9ನೇ ಸಿನಿಮಾ ಈ ಕೆಡಿ. ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಲಿದ್ದು, ವಿಕ್ರಾಂತ್ ರೋಣ ಖ್ಯಾತಿಯ ವಿಲಿಯಂ ಡೇವಿಡ್‌ ಛಾಯಾಗ್ರಹಣ ಮಾಡಲಿದ್ದಾರೆ. ಬಹುತೇಕ ಸೆಟ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಅದಕ್ಕಾಗಿ ದೊಡ್ಡ ದೊಡ್ಡ ಸೆಟ್‌ಗಳನ್ನು ಹಾಕಲಾಗುತ್ತಿದೆ.

ಚಿತ್ರಕ್ಕಾಗಿ 18ಕೆಜಿ ತೂಕ ಇಳಿಸಿದ ಧ್ರುವ

ಧ್ರುವ ಸದ್ಯಕ್ಕೆ 'ಕೆಡಿ' ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರಕ್ಕಾಗಿ ಮತ್ತೆ ಧ್ರುವ ತೂಕ ಇಳಿಸಿಕೊಂಡಿದ್ದಾರಂತೆ. ಈ ವಿಚಾರವನ್ನು ಸ್ವತ: ನಿರ್ದೇಶಕ ಪ್ರೇಮ್‌ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ''ಧ್ರುವ ಸರ್ಜಾ 23 ದಿನಗಳಲ್ಲಿ 18 ಕಿಲೋ ತೂಕ ಇಳಿಸಿಕೊಂಡು ಕೆಡಿ ವಾರ್‌ ಫೀಲ್ಡ್‌ಗೆ ಎಂಟ್ರಿ ಕೊಡಲು'' ರೆಡಿ ಆಗಿದ್ದಾರೆ ಎಂದು ಪ್ರೇಮ್‌ ಬರೆದುಕೊಂಡಿದ್ದಾರೆ. ''ಕೆಡಿ ಚಿತ್ರಕ್ಕೆ ಮುನ್ನ ಕೆಡಿ ಚಿತ್ರದ ನಂತರ'' ಎಂದು ಕ್ಯಾಪ್ಷನ್‌ ಕೊಟ್ಟು ಧ್ರುವ ಜೊತೆಗೆ ಅಂದು-ಇಂದು ತೆಗೆಸಿಕೊಂಡಿರುವ ಫೋಟೋ ಹಂಚಿಕೊಂಡಿದ್ದಾರೆ. ಮೊದಲ ಫೋಟೋಗೆ ಹೋಲಿಸಿದರೆ ಈಗಿನ ಫೋಟೋದಲ್ಲಿ ಧ್ರುವ ಸರ್ಜಾ ಎಷ್ಟು ಬದಲಾಗಿದ್ದಾರೆ ಎಂಬುದನ್ನು ಗಮನಿಸಬಹುದು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ