logo
ಕನ್ನಡ ಸುದ್ದಿ  /  ಮನರಂಜನೆ  /  Sara Ali Khan: 'ಸಾಕು ನಿಲ್ಲಿಸಮ್ಮ ನಿನ್ನ ಅತಿರೇಕವಾ!'; ಸಾರಾ ರ್ಯಾಂಪ್‌ ವಾಕ್‌ಗೆ ನೆಟ್ಟಿಗರು ಕೆಂಡಾಮಂಡಲ..

Sara Ali Khan: 'ಸಾಕು ನಿಲ್ಲಿಸಮ್ಮ ನಿನ್ನ ಅತಿರೇಕವಾ!'; ಸಾರಾ ರ್ಯಾಂಪ್‌ ವಾಕ್‌ಗೆ ನೆಟ್ಟಿಗರು ಕೆಂಡಾಮಂಡಲ..

Jul 30, 2022 07:39 PM IST

'ಸಾಕು ನಿಲ್ಲಿಸಮ್ಮ ನಿನ್ನ ಅತಿರೇಕವಾ!'; ಸಾರಾ ರ್ಯಾಂಪ್‌ ವಾಕ್‌ಗೆ ನೆಟ್ಟಿಗರು ಕೆಂಡಾಮಂಡಲ..

    • ಸೋಷಿಯಲ್‌ ಮೀಡಿಯಾದಲ್ಲಿ ಸದಾ ಒಂದಲ್ಲ ಒಂದು ವಿಚಾರಕ್ಕೆ ಟ್ರೋಲ್‌ ಆಗುವ ಸ್ಟಾರ್‌ ನಟ- ನಟಿಯರ ಸಂಖ್ಯೆಗೇನೂ ಕಮ್ಮಿ ಇಲ್ಲ. ಹಂಚಿಕೊಳ್ಳುವ ಫೋಟೋ ಮೂಲಕವೋ, ಕ್ಯಾಮರಾ ಮುಂದೆ ವರ್ತಿಸುವ ರೀತಿಯೋ, ಧರಿಸುವ ಬಟ್ಟೆಯಿಂದಲೋ, ಸಿನಿಮಾದಲ್ಲಿನ ಕೆಲ ಭಾವ ಭಂಗಿಗಳಿಂದಲೋ ನೆಟ್ಟಿಗರ ಕೈಗೆ ಸಿಕ್ಕು ಹಣ್ಣಾಗಿರುತ್ತಾರೆ.
'ಸಾಕು ನಿಲ್ಲಿಸಮ್ಮ ನಿನ್ನ ಅತಿರೇಕವಾ!'; ಸಾರಾ ರ್ಯಾಂಪ್‌ ವಾಕ್‌ಗೆ ನೆಟ್ಟಿಗರು ಕೆಂಡಾಮಂಡಲ..
'ಸಾಕು ನಿಲ್ಲಿಸಮ್ಮ ನಿನ್ನ ಅತಿರೇಕವಾ!'; ಸಾರಾ ರ್ಯಾಂಪ್‌ ವಾಕ್‌ಗೆ ನೆಟ್ಟಿಗರು ಕೆಂಡಾಮಂಡಲ..

ಮುಂಬೈ: ಸೋಷಿಯಲ್‌ ಮೀಡಿಯಾದಲ್ಲಿ ಸದಾ ಒಂದಲ್ಲ ಒಂದು ವಿಚಾರಕ್ಕೆ ಟ್ರೋಲ್‌ ಆಗುವ ಸ್ಟಾರ್‌ ನಟ- ನಟಿಯರ ಸಂಖ್ಯೆಗೇನೂ ಕಮ್ಮಿ ಇಲ್ಲ. ಹಂಚಿಕೊಳ್ಳುವ ಫೋಟೋ ಮೂಲಕವೋ, ಕ್ಯಾಮರಾ ಮುಂದೆ ವರ್ತಿಸುವ ರೀತಿಯೋ, ಧರಿಸುವ ಬಟ್ಟೆಯಿಂದಲೋ, ಸಿನಿಮಾದಲ್ಲಿನ ಕೆಲ ಭಾವ ಭಂಗಿಗಳಿಂದಲೋ ನೆಟ್ಟಿಗರ ಕೈಗೆ ಸಿಕ್ಕು ಹಣ್ಣಾಗಿರುತ್ತಾರೆ. ಅದು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಮುನ್ನೆಲೆಗೆ ಬಂದು ಚರ್ಚೆಯ ವಿಷಯವಾಗಿ ಮಾರ್ಪಾಡಾದ ಉದಾಹರಣೆಗಳೂ ಸಾಕಷ್ಟಿವೆ. ಇದೀಗ ನಟಿ ಸಾರಾ ಅಲಿ ಖಾನ್‌ ಸರದಿ.

ಟ್ರೆಂಡಿಂಗ್​ ಸುದ್ದಿ

OTT News: ಹೌಸ್ ಆಫ್ ದಿ ಡ್ರ್ಯಾಗನ್ ಸೀಸನ್‌ 2 ವೆಬ್‌ಸಿರೀಸ್‌ನ ಟ್ರೈಲರ್ ಬಿಡುಗಡೆ; ಜಿಯೊಸಿನಿಮಾ ಮೂಲಕ ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

ಅವ್ರಿಗೊಂದು ದೊಡ್ಡ ನಮಸ್ಕಾರ! ಈಜುಡುಗೆ ಬಗ್ಗೆ ತಮಗಿದ್ದ ಭಯ ಎಷ್ಟು ಎಂಬುದನ್ನು ಮುಚ್ಚುಮರೆಯಿಲ್ಲದೇ ಹೇಳಿದ ಮೀನಾ

10 ವರ್ಷಗಳಲ್ಲಿ ಭಾರತ ಬದಲಾಗಿದೆ ಎಂದಿದ್ದ ರಶ್ಮಿಕಾ ಮಂದಣ್ಣಗೆ ಪರೋಕ್ಷವಾಗಿ ‘ಅಜ್ಞಾನಿ’ ಎಂದು ತಿವಿದ ಚೇತನ್‌ ಅಹಿಂಸಾ

ನಿಮ್ಮಂಥವರ ಬಾಯಲ್ಲಿ ಮರ್ಯಾದಾ ಪುರುಷೋತ್ತಮ ರಾಮನ ಹೆಸರು ಬಂದರೂ ಅದು ಮಹಾಪಾಪ! ಮೋದಿ ವಿರುದ್ಧ ತಿರುಗಿ ಬಿದ್ದ ಕಿಶೋರ್‌

ಸಿನಿಮಾದ ಜತೆಗೆ ಫ್ಯಾಷನ್‌ ಕ್ಷೇತ್ರದಲ್ಲಿಯೂ ಸಾರಾ ಅಲಿ ಖಾನ್‌ ಮುಂದಿದ್ದಾರೆ. ಬಗೆಬಗೆ ವಿನ್ಯಾಸದ ದಿರಿಸುಗಳನ್ನು ತೊಟ್ಟು, ರ್ಯಾಂಪ್‌ ವಾಕ್‌ ಮಾಡುತ್ತಿರುತ್ತಾರೆ. ಇನ್ನು ಕೆಲ ಬಟ್ಟೆ ಬ್ರಾಂಡ್‌ಗಳಿಗೂ ಅವರು ಅಂಬಾಸಿಡರ್‌ ಸಹ ಆಗಿದ್ದಾರೆ. ಹೀಗಿರುವಾಗಲೇ ಇತ್ತೀಚೆಗೆ ಮುಂಬೈನಲ್ಲಿ ನಡೆದ ಬಟ್ಟೆ ಬ್ರಾಂಡಿಂಗ್‌ ಫ್ಯಾಷನ್‌ ಶೋದಲ್ಲಿ ಸಾರಾ ರ್ಯಾಂಪ್‌ ವಾಕ್‌ ಮಾಡಿದ್ದಾರೆ. ಆ ರ್ಯಾಂಪ್‌ ವಾಕ್‌ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ಟ್ರೋಲರ್ಸ್‌ ಅವರನ್ನು ಹಿಗ್ಗಾ ಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

Over Acting ಸಾಕು ಮಾಡಮ್ಮ... ಎಂದ ನೆಟ್ಟಿಗರು..

ಸಾರಾ ಅಲಿ ಖಾನ್‌ ಫ್ಯಾಷನ್‌ ಶೋದಲ್ಲಿನ ರ್ಯಾಂಪ್‌ ವಾಕ್‌ ವಿಡಿಯೋ ಹರಿದಾಡುತ್ತಿದ್ದಂತೆ, ಬಗೆಬಗೆ ರೀತಿಯಲ್ಲಿ ಕಮೆಂಟ್‌ ಮಾಡಿದ ನೆಟ್ಟಿಗರು, "ಓವರ್‌ ಆಕ್ಟಿಂಗ್‌" ಎಂದು ಜರಿದರೆ, "ನಿನ್ನ ಈ ಅತಿರೇಕವನ್ನು ನೋಡಲು ನಮ್ಮಿಂದ ಆಗುವುದಿಲ್ಲ..ʼ ಎಂದೂ ಕಮೆಂಟ್‌ ಮಾಡಿದ್ದಾರೆ. ʼಆಕೆಯ ನಡಿಗೆಯೋ, ವಾಕ್‌ ಮಾಡುವ ಭಂಗಿಯೋ.. ತುಂಬ ಅತಿರೇಕ" ಎಂದಿದ್ದಾರೆ. ಇನ್ನು ಕೆಲವರು "ಓವರ್‌ ಆಕ್ಟಿಂಗ್‌ನ ಅಂಗಡಿಯಿದು" ಎಂದು ಟೀಕೆ ಮಾಡಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಅಕ್ಷಯ್‌ ಕುಮಾರ್‌ ಜತೆ ನಟಿಸಿದ "ಅತರಂಗಿ ರೇ" ಸಿನಿಮಾ ಹೊರತುಪಡಿಸಿ ಬೇರಾವ ಸಿನಿಮಾ ಬಿಡುಗಡೆ ಆಗಿಲ್ಲ. ಲಕ್ಷ್ಮಣ ಉತೇಕರ್‌ ನಿರ್ದೇಶನದ ಚಿತ್ರದಲ್ಲಿ ನಟಿಸಿದ್ದರಾದರೂ, ಆ ಚಿತ್ರದ ಶೀರ್ಷಿಕೆ ಇನ್ನೂ ಬಿಡುಗಡೆ ಆಗಿಲ್ಲ. ಈ ನಡುವೆ "ಗ್ಯಾಸ್‌ ಲೈಟ್‌" ಹೆಸರಿನ ಸಿನಿಮಾಕ್ಕೆ ಸಹಿ ಮಾಡಿದ್ದು, ಅದರ ಶೂಟಿಂಗ್‌ನಲ್ಲಿ ಬಿಜಿಯಾಗಿದ್ದಾರೆ.

<p>ಸಾರಾ ಬೆಕ್ಕಿನ ನಡಿಗೆಗೆ ಬಗೆಬಗೆ ಕಮೆಂಟ್ಸ್‌…&nbsp;</p>

ಧನುಷ್‌ ಡಿವೋರ್ಸ್‌ಗೆ ಸಾರಾ ಕಾರಣನಾ?

ಇದೇ ವರ್ಷದ ಜನವರಿ 17 ರಂದು ತಮಿಳು ಖ್ಯಾತ ನಟ ಧನುಷ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಮೊದಲ ಪುತ್ರಿ ಐಶ್ವರ್ಯ ಡೈವೋರ್ಸ್ ಘೋಷಿಸಿದ್ದರು. ಇಬ್ಬರೂ ಬೇರೆಯಾಗುತ್ತಿರುವ ವಿಚಾರ ಕೇಳಿ ಅಭಿಮಾನಿಗಳಿಗೆ ಶಾಕ್ ಆಗಿತ್ತು. 18 ವರ್ಷಗಳು ಸಂತೋಷದಿಂದ ಜೀವನ ಸಾಗಿಸುತ್ತಿದ್ದ ನೀವು ಈಗ ಬೇರೆಯಾಗಲು ಕಾರಣ ಏನು ಎಂದು ಇಂದಿಗೂ ಅಭಿಮಾನಿಗಳು ಕೇಳುತ್ತಲೇ ಇದ್ದಾರೆ. ಈ ನಡುವೆ ಇವರಿಬ್ಬರ ವಿಚ್ಛೇದನಕ್ಕೆ ಬಾಲಿವುಡ್​​​ ನಟಿಯೊಬ್ಬರು ಕಾರಣ ಎಂಬ ಮಾತು ಕೇಳಿಬಂದಿದೆ.

ಧನುಷ್, ಸಾರಾ ಅಲಿ ಖಾನ್​​ಗಾಗಿ ಪತ್ನಿ ಐಶ್ವರ್ಯಗೆ ಡೈವೋರ್ಸ್ ನೀಡಿದ್ದು ಎಂಬ ಮಾತು ಕಾಲಿವುಡ್​​ ಅಂಗಳದಲ್ಲಿ ಕೇಳಿಬರುತ್ತಿದೆ. ಧನುಷ್ ತಮಿಳು ಮಾತ್ರವಲ್ಲದೆ ತೆಲುಗು, ಹಿಂದಿ, ಹಾಲಿವುಡ್ ಸಿನಿಮಾಗಳಲ್ಲಿ ಕೂಡಾ ನಟಿಸಿದ್ದಾರೆ. ಬಾಲಿವುಡ್​​​​ನ ಅತ್ರಂಗಿ ರೇ ಚಿತ್ರದಲ್ಲಿ ಸಾರಾ ಅಲಿ ಖಾನ್ ದ್ವಿಪಾತ್ರದಲ್ಲಿ ನಟಿಸಿದ್ದು ಒಂದು ಪಾತ್ರದಲ್ಲಿ ಧನುಷ್ ಜೋಡಿಯಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ನಟಿಸಿದ ನಂತರ ಇಬ್ಬರ ನಡುವೆ ಗೆಳೆತನ ಶುರುವಾಗಿ ನಂತರ ಇವರಿಬ್ಬರೂ ಮತ್ತಷ್ಟು ಹತ್ತಿರವಾಗಿದ್ದರು. ಈ ಕಾರಣದಿಂದಲೇ ಧನುಷ್, ಐಶ್ವರ್ಯರಿಂದ ದೂರಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದರಲ್ಲಿ ಎಷ್ಟು ನಿಜವಿದೆಯೋ, ಅಥವಾ ಇದು ಬರೀ ಗಾಸಿಪ್ ಮಾತ್ರವೋ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ