logo
ಕನ್ನಡ ಸುದ್ದಿ  /  ಮನರಂಜನೆ  /  The Survivor Trailer: ಕನ್ನಡದಲ್ಲಿ ಸಿದ್ಧವಾಯ್ತು ಹಾಲಿವುಡ್‌ ಶೈಲಿಯ ಕಿರುಚಿತ್ರ; ಹಲವು ಭಾಷೆಗಳಲ್ಲಿ ‘ದಿ ಸರ್ವೈವರ್’‌ ಟ್ರೇಲರ್ ರಿಲೀಸ್‌

The survivor Trailer: ಕನ್ನಡದಲ್ಲಿ ಸಿದ್ಧವಾಯ್ತು ಹಾಲಿವುಡ್‌ ಶೈಲಿಯ ಕಿರುಚಿತ್ರ; ಹಲವು ಭಾಷೆಗಳಲ್ಲಿ ‘ದಿ ಸರ್ವೈವರ್’‌ ಟ್ರೇಲರ್ ರಿಲೀಸ್‌

HT Kannada Desk HT Kannada

Jan 30, 2023 12:53 PM IST

ಕನ್ನಡದಲ್ಲಿ ಸಿದ್ಧವಾಯ್ತು ಹಾಲಿವುಡ್‌ ಶೈಲಿಯ ಕಿರುಚಿತ್ರ; ಹಲವು ಭಾಷೆಗಳಲ್ಲಿ ‘ದಿ ಸರ್ವೈವರ್’‌ ಟ್ರೇಲರ್ ರಿಲೀಸ್‌

    • ಸಿನಿಮಾ ಮಾಡುವ ಕನಸನ್ನು ಹೊತ್ತು ಇಂಡಸ್ಟ್ರಿಗೆ ಬಂದಿರುವ ರಜತ್ ಮೊದಲ ಪ್ರಯತ್ನವಾಗಿ 'ದ ಸರ್ವೈವರ್' ಎಂಬ ಕಿರುಚಿತ್ರವನ್ನು ಸಿದ್ದಪಡಿಸಿದ್ದಾರೆ.
ಕನ್ನಡದಲ್ಲಿ ಸಿದ್ಧವಾಯ್ತು ಹಾಲಿವುಡ್‌ ಶೈಲಿಯ ಕಿರುಚಿತ್ರ; ಹಲವು ಭಾಷೆಗಳಲ್ಲಿ ‘ದಿ ಸರ್ವೈವರ್’‌ ಟ್ರೇಲರ್ ರಿಲೀಸ್‌
ಕನ್ನಡದಲ್ಲಿ ಸಿದ್ಧವಾಯ್ತು ಹಾಲಿವುಡ್‌ ಶೈಲಿಯ ಕಿರುಚಿತ್ರ; ಹಲವು ಭಾಷೆಗಳಲ್ಲಿ ‘ದಿ ಸರ್ವೈವರ್’‌ ಟ್ರೇಲರ್ ರಿಲೀಸ್‌

The survivor Trailer: ಯುವ ಪ್ರತಿಭೆಗಳು ತಮ್ಮನ್ನು ಚಿತ್ರರಂಗಕ್ಕೆ ಪರಿಚಯ ಮಾಡಿಕೊಳ್ಳಲು ಉತ್ತಮ ವೇದಿಕೆಯಾಗಿ ಕಿರುಚಿತ್ರಗಳು ಹಾಗೂ ಅಲ್ಬಮ್ ಸಾಂಗ್ ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇದೀಗ ಈ ಸಾಲಿಗೆ ಯುವ ಪ್ರತಿಭೆ ರಜತ್ ರಜನಿಕಾಂತ್ ಸೇರಿದ್ದಾರೆ. ಸಿನಿಮಾ ಮಾಡುವ ಕನಸನ್ನು ಹೊತ್ತು ಇಂಡಸ್ಟ್ರಿಗೆ ಬಂದಿರುವ ಇವರು ಮೊದಲ ಪ್ರಯತ್ನವಾಗಿ 'ದ ಸರ್ವೈವರ್' ಎಂಬ ಕಿರುಚಿತ್ರವನ್ನು ಸಿದ್ದಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬರಲಿದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಯೋಪಿಕ್‌; ಮೋದಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಬಾಹುಬಲಿಯ ಕಟ್ಟಪ್ಪ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

ಈ ಚಿತ್ರಕ್ಕೆ ರಜತ್ ರಜನಿಕಾಂತ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಂಕಲನ, ನಿರ್ದೇಶನದ ಜೊತೆಗೆ ನಾಯಕರಾಗಿ ನಟಿಸಿದ್ದಾರೆ. ಅಲ್ಲದೆ ರಜತ್ ಚಿತ್ರದ ಸಹ ನಿರ್ಮಾಪಕರು ಹೌದು. ಮೂಲತಃ ಇಂಗ್ಲೀಷ್‌ನಲ್ಲಿ ತಯಾರಾದ ಈ ಚಿತ್ರ ಕನ್ನಡ, ಹಿಂದಿ ಭಾಷೆಗಳಿಗೆ ಡಬ್ ಆಗಿ‌ ರಿಲೀಸ್ ಆಗುತ್ತಿದೆ. ಇತ್ತೀಚೆಗಷ್ಟೇ ಮೂರು ಭಾಷೆಯಲ್ಲಿ ಟ್ರೇಲರ್ ಬಿಡುಗಡೆಯಾಯಿತು. ಆ್ಯಕ್ಷನ್, ಥ್ರಿಲ್ಲರ್ ನಿಂದ ಕೂಡಿರುವ ಟ್ರೇಲರ್ ಕುತೂಹಲ ಮೂಡಿಸಿದ್ದು, ಹಾಲಿವುಡ್‌ ಸಿನಿಮಾ ಮಾದರಿಯಲ್ಲಿ ಸ್ಟ್ರಾಂಗ್ ಆಗಿದೆ.

ಯಾವ ಕಮರ್ಷಿಯಲ್ ಸಿನಿಮಾಗೆ ಕಡಿಮೆ ಇಲ್ಲದಂತೆ ಟ್ರೇಲರ್ ತಯಾರಾಗಿದೆ. A2 ಮ್ಯೂಸಿಕ್ ನಲ್ಲಿ ಟ್ರೇಲರ್‌ ರಿಲೀಸ್ ಆಗಿದ್ದು, ಸದ್ಯದಲ್ಲೇ ಈ ಕಿರುಚಿತ್ರ ಒಟಿಟಿ ಸೇರಿದಂತೆ ಖಾಸಗಿ ವಾಹಿನಿಗಳಲ್ಲಿ ಬಿಡುಗಡೆ ಆಗಲಿದೆಯಂತೆ. ಕನ್ನಡ ವರ್ಷನ್‌ನ ಟ್ರೇಲರ್ ಬಿಡುಗಡೆ ಮಾಡಿದ ಛಾಯಾಗ್ರಾಹಕ ಅಶೋಕ ಕಶ್ಯಪ್, 'ಈ ಟೈಟಲ್ ಕೇಳಿದಾಗ ಹಾಲಿವುಡ್‌ ಸಿನಿಮಾ ನೆನಪಿಗೆ ಬಂತು. ಆ್ಯಕ್ಷನ್ ಚೆನ್ನಾಗಿ ಬಂದಿದ್ದು, ಟ್ರೇಲರ್ ನೋಡಿದಾಗ ಶಾರ್ಟ್ ಫಿಲ್ಮ ಅನಿಸಲ್ಲ. ಇಂದು ಹೊಸತನದ ಸಿನಿಮಾಗಳು ಗೆಲ್ಲುತ್ತಿವೆ. ಈ ಕಿರುಚಿತ್ರದ ಮೇಕಿಂಗ್‌ ಚೆನ್ನಾಗಿದೆ. ನನಗೆ ವಿದೇಶಿ ಸಿನಿಮಾ ನೋಡಿದ ಫಿಲ್ ಆಯ್ತು' ಎಂದರು.

'ದ ಸರ್ವೈವರ್' ಕಿರುಚಿತ್ರ ತಂಡ

ಚಿತ್ರದ ಸೂತ್ರಧಾರಿ ರಜತ್ ರಜನಿಕಾಂತ್ ಸಹ ಅನುಭವ ಹೇಳಿಕೊಂಡರು. 'ಇದು ನನ್ನ ಮೊದಲ ಪ್ರಯತ್ನ. ಒಂದುವರೆ ವರ್ಷದ ಶ್ರಮವಿದೆ. ಚಿತ್ರವನ್ನು ನಾನೇ ಎಡಿಟ್ ಮಾಡಿದ್ದರಿಂದ ಏನಿಲ್ಲ ಅಂದರೂ 60-70 ಸಲ ಸಿನಿಮಾ ನೋಡಿದ್ದೇನೆ. ಈ ಸಿನಿಮಾ ತಯಾರಾಗಲು ತಂಡ ತುಂಬಾ ಸಪೋರ್ಟ್ ಮಾಡಿದೆ. ನಮ್ಮ ಟ್ಯಾಲೆಂಟ್ ಚಿತ್ರರಂಗದವರಿಗೆ, ಜನರಿಗೆ ತೋರಿಸಲು ಈ ಪ್ರಯತ್ನ ಮಾಡಲಾಗಿದೆ' ಎಂದು ಹೇಳಿದರು.

ಚಿತ್ರಕ್ಕೆ ಛಾಯಾಗ್ರಹಣ ಮಾಡಿರುವ ಸೂರಜ್, 'ಒಳ್ಳೆ ಪ್ರಯತ್ನದಿಂದ ರಜತ್ ಇದನ್ನು ಮಾಡಿದ್ದಾನೆ. ಅವನದೇ ಕಥೆಗೆ ಅವನೇ ಹಣ ಹಾಕಿದ್ದು ನಿಮ್ಮಗಳ ಸಹಕಾರವಿರಲಿ' ಎಂದರು. ಸಿನಿಮಾ ನಿರ್ಮಾಪಕ ಜಸ್ಟಿನ್ ಸಮುಲ ಜೇಮ್ಸ್ ಮಾತನಾಡಿ, 'ಇದು ನಮ್ಮ ಬ್ಯಾನರ್ ನ ಮೊದಲ ಶಾರ್ಟ್ ಫಿಲ್ಮ. ಇದು ಸದ್ಯದಲ್ಲೇ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ನಾನು ತಂಡಕ್ಕೆ ಸಹಾಯ ಅಷ್ಟೇ ಮಾಡಿದ್ದೇನೆ. ಒಳ್ಳೆ ಪ್ರಯತ್ನದಿಂದ ಸುಂದರವಾಗಿ ಸಿನಿಮಾ ಬಂದಿದೆ' ಎಂದರು. ಇದೇ ಸಂದರ್ಭದಲ್ಲಿ ಇಂಗ್ಲಿಷ್ ಟ್ರೇಲರ್ ಬಿಡುಗಡೆ ಮಾಡಿದ ವಿಕ್ರಮ್, ಹಿಂದಿ ಟ್ರೇಲರ್ ರಿಲೀಸ್ ಮಾಡಿದ ಡಿಸಿಪಿ ಶಿವಶಂಕರ ತಮ್ಮ ಅನುಭವ ಹಂಚಿಕೊಂಡರು.

ವಿಭಾಗ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ