logo
ಕನ್ನಡ ಸುದ್ದಿ  /  Entertainment  /  Tamil Small Screen Actor Lokesh Rajendran Committed Suicide

Small Screen Actor Committed Suicide: ಬಾಲನಟನಾಗಿ ಬಣ್ಣದ ಬದುಕು ಆರಂಭಿಸಿದ್ದ ಖ್ಯಾತ ನಟ ಆತ್ಮಹತ್ಯೆ

HT Kannada Desk HT Kannada

Oct 06, 2022 10:38 AM IST

ಲೋಕೇಶ್‌ ರಾಜೇಂದ್ರನ್

    • ''ಲೋಕೇಶ್‌ ಮನೆಗೂ ಹೋಗದೆ ಎಷ್ಟೋ ಬಾರಿ ಚೆನ್ನೈನ ಬಸ್‌ ನಿಲ್ದಾಣದಲ್ಲಿ ಮಲಗುತ್ತಿದ್ದರು. ಅದೇ ರೀತಿ ಸೋಮವಾರ ರಾತ್ರಿ ಲೋಕೇಶ್‌ ಬಸ್‌ ನಿಲ್ದಾಣದಲ್ಲಿ ಕಂಡುಬಂದಿದ್ದಾರೆ. ಆದರೆ ಆತ ಒದ್ದಾಡುತ್ತಿದ್ದನ್ನು ನೋಡಿದ ಕೆಲವು ಪ್ರಯಾಣಿಕರು ಆಂಬುಲೆನ್ಸ್‌ಗೆ ಕರೆ ಮಾಡಿ ನಮಗೆ ಸುದ್ದಿ ಮುಟ್ಟಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಲೋಕೇಶ್‌ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ'' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಲೋಕೇಶ್‌ ರಾಜೇಂದ್ರನ್
ಲೋಕೇಶ್‌ ರಾಜೇಂದ್ರನ್

ನಟನಾ ಕ್ಷೇತ್ರದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲಿಲ್ಲ ಎಂಬ ಖಿನ್ನತೆಯಿಂದ ಹಾಗೂ ವೈಯಕ್ತಿಕ ಸಮಸ್ಯೆಗಳಿಂದ ಅನೇಕ ನಟ-ನಟಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಖ್ಯಾತ ತಮಿಳು ಕಿರುತೆರೆ ನಟ ಲೋಕೇಶ್‌ ರಾಜೇಂದ್ರನ್‌ ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಲೋಕೇಶ್‌ಗೆ 34 ವರ್ಷ ವಯಸ್ಸಾಗಿತ್ತು.

ಟ್ರೆಂಡಿಂಗ್​ ಸುದ್ದಿ

‘ಸೆಲೆಬ್ರಿಟಿ ಬದುಕೇ ಜೈಲುವಾಸ, ಅದು ಒಂಟಿ ಭಿಕ್ಷುಕನ ಜೀವನ’; ನವರಸ ನಾಯಕ ಜಗ್ಗೇಶ್‌ ಮಾತಿನ ಮರ್ಮವೇನು?

‘ಕರಾಳ ರಾತ್ರಿಯಲ್ಲೂ ಮಿನುಗುವ ಬೆಳಕು ನೀನು’; ಪತಿ ಚಿರು ಸರ್ಜಾಗೆ ವಿಶೇಷ ವಿಶ್‌ ಮಾಡಿದ ಪತ್ನಿ ಮೇಘನಾ ರಾಜ್‌

Janaki Samsara: ‘ಜಾನಕಿ ಸಂಸಾರ’ಕ್ಕೆ ಹುಳಿ ಹಿಂಡಲು ಬಂದ ಕಾವ್ಯಾ ಶಾಸ್ತ್ರಿ! ಹೊಸ ಧಾರಾವಾಹಿಯಲ್ಲಿ ಖಳನಾಯಕಿಯಾದ ‘ರಾಧಿಕಾ’

Kaagaz 2 OTT release: ಅನುಪಮ್‌ ಖೇರ್‌, ಸತೀಶ್‌ ಕೌಶಿಕ್‌ ನಟನೆಯ ಕಾಗಜ್‌ 2 ಒಟಿಟಿಗೆ; ಎಲ್ಲಿ ನೋಡಬಹುದು ಈ ಸಿನಿಮಾ

ಲೋಕೇಶ್‌ ರಾಜೇಂದ್ರನ್‌ ಬಾಲನಟನಾಗಿ ಚಿತ್ರರಂಗಕ್ಕೆ ಬಂದವರು. 1996 ರಲ್ಲಿ ಪ್ರಸಾರವಾಗಿದ್ದ 'ವಿಡತು ಕರುಪು' ಧಾರಾವಾಹಿಯಲ್ಲಿ ಲೋಕೇಶ್‌ ನಟಿಸಿದ್ದ 'ರಾಸು' ಎಂಬ ಪಾತ್ರವೂ ಇಂದಿಗೂ ವೀಕ್ಷಕರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ಲೋಕೇಶ್‌ ಇದುವರೆಗೂ 150ಕ್ಕೂ ಹೆಚ್ಚು ಧಾರಾವಾಹಿಗಳು ಹಾಗೂ 15 ಸಿನಿಮಾಗಳಲ್ಲಿ ನಟಿಸಿದ್ದಾರೆ ಎನ್ನಲಾಗಿದೆ. ಪ್ರಭು, ವಿಜಯಕಾಂತ್‌ ಸೇರಿದಂತೆ ಅನೇಕ ಸ್ಟಾರ್‌ ನಟರೊಂದಿಗೆ ಲೋಕೇಶ್‌ ನಟಿಸಿದ್ದರು. ''ಲೋಕೇಶ್‌ಗೆ ಮದುವೆಯಾಗಿ ಇಬ್ಬರು ಮಕ್ಕಳು ಇದ್ದರು. ಪತ್ನಿ ಹಾಗೂ ಲೊಕೇಶ್‌ ನಡುವೆ ಮನಸ್ತಾಪ ಇತ್ತು. ಇತ್ತೀಚೆಗೆ ಪತ್ನಿಯಿಂದ ಆತನಿಗೆ ಡೈವೋರ್ಸ್‌ ನೋಟೀಸ್‌ ಬಂದಿತ್ತು. ಇದೇ ವಿಚಾರಕ್ಕೆ ಲೋಕೇಶ್‌ ಬಹಳ ಖಿನ್ನತೆಗೆ ಒಳಗಾಗಿದ್ದ. ಕಳೆದ ಶುಕ್ರವಾರ ಲೋಕೇಶ್‌ ನನ್ನನ್ನು ಭೇಟಿ ಆಗಿ ಹಣ ಪಡೆದು ಹೊಸ ಕೆಲಸ ಆರಂಭಿಸುವುದಾಗಿ ತಿಳಿಸಿದ್ದ'' ಎಂದು ಲೋಕೇಶ್‌ ತಂದೆ ಹೇಳಿದ್ದಾರೆ.

''ಕೌಟುಂಬಿಕ ಕಲಹದಿಂದ ಭಾರೀ ಖಿನ್ನತೆಗೆ ಒಳಗಾಗಿದ್ದ ಲೋಕೇಶ್‌ ಕೆಲವು ದಿನಗಳಿಂದ ಡ್ರಿಂಕ್ಸ್‌ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದರು. ಮನೆಗೂ ಹೋಗದೆ ಎಷ್ಟೋ ಬಾರಿ ಚೆನ್ನೈನ ಬಸ್‌ ನಿಲ್ದಾಣದಲ್ಲಿ ಮಲಗುತ್ತಿದ್ದರು. ಅದೇ ರೀತಿ ಸೋಮವಾರ ರಾತ್ರಿ ಲೋಕೇಶ್‌ ಬಸ್‌ ನಿಲ್ದಾಣದಲ್ಲಿ ಕಂಡುಬಂದಿದ್ದಾರೆ. ಆದರೆ ಆತ ಒದ್ದಾಡುತ್ತಿದ್ದನ್ನು ನೋಡಿದ ಕೆಲವು ಪ್ರಯಾಣಿಕರು ಆಂಬುಲೆನ್ಸ್‌ಗೆ ಕರೆ ಮಾಡಿ ನಮಗೆ ಸುದ್ದಿ ಮುಟ್ಟಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಲೋಕೇಶ್‌ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ'' ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಲೋಕೇಶ್‌ ನಿಧನದ ಸುದ್ದಿ ತಿಳಿದು ತಮಿಳು ಕಿರುತೆರೆ, ಸಿನಿಮಾ ಸಹಕಲಾವಿದರು ಬೇಸರ ವ್ಯಕ್ತಪಡಿಸಿದ್ದಾರೆ. ಲೋಕೇಶ್‌ ನಿಧನಕ್ಕೆ ಎಲ್ಲರೂ ಸಂತಾಪ ಸೂಚಿಸುತ್ತಿದ್ದಾರೆ. ಇತ್ತೀಚೆಗಷ್ಟೇ 'ವಿದಾತು ಕರುಪು' ಧಾರಾವಾಹಿ ತಂಡವು, 25 ವರ್ಷಗಳ ವಾರ್ಷಿಕೋತ್ಸವ ಆಚರಣೆಗಾಗಿ ಒಟ್ಟಿಗೆ ಸೇರಿದ್ದರು. ಲೋಕೇಶ್‌ ಕೂಡಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ ಈಗ ಲೋಕೇಶ್‌ ಕೌಟುಂಬಿಕ ಸಮಸ್ಯೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ಎಲ್ಲರಿಗೂ ಶಾಕ್‌ ಎನಿಸಿದೆ.

ಇತ್ತೀಚೆಗೆ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ ತಮಿಳು ನಟಿ ದೀಪಾ

ಕಳೆದ ತಿಂಗಳು ನಟಿ ದೀಪಾ ಡೆತ್‌ ನೋಟ್‌ ಬರೆದಿತ್ತು ಆತ್ಮಹತ್ಯೆ ಮಾಡಿಕೊಂಡಿದ್ದರು. ದೀಪಾ ಕೆಲವು ದಿನಗಳಿಂದ ಯಾವುದೇ ಕರೆಗಳನ್ನು ಸ್ವೀಕರಿಸುತ್ತಿರಲಿಲ್ಲವಾದ್ದರಿಂದ ಆತನ ಸ್ನೇಹಿತರೊಬ್ಬರು ಚೆನ್ನೈನ ವಿರುಗಂಬಾಕ್ಕಂನಲ್ಲಿರುವ ಆಕೆಯ ಅಪಾರ್ಟ್‌ಮೆಂಟ್‌ ಬಳಿ ತೆರಳಿ ಪರಿಶೀಲಿಸಿದಾಗ ದೀಪಾ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ದೀಪಾ ಕೆಲವು ವರ್ಷಗಳಿಂದ ಒಂಟಿ ಜೀವನ ನಡೆಸುತ್ತಿದ್ದು ಪ್ರೇಮ ವೈಫಲ್ಯವೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿತ್ತು.

2020 ರಲ್ಲಿ ದೊಡ್ಡ ಸುದ್ದಿಯಾಗಿದ್ದ ನಟಿ ಚಿತ್ರಾ ಆತ್ಮಹತ್ಯೆ

9 ಡಿಸೆಂಬರ್​​​​ 2020 ರಂದು ತಮಿಳು ನಟಿ, ನಿರೂಪಕಿ ಚಿತ್ರಾ ನಜರತ್​ಪೇಟ್​ನ ಫೈವ್​​ಸ್ಟಾರ್ ಹೋಟೆಲ್​​ನಲ್ಲಿಆತ್ಮಹತ್ಯೆ ಮಾಡಿಕೊಂಡಿದ್ದರು. ಚಿತ್ರಾ ಇನ್ನಿಲ್ಲ ಎಂದು ತಿಳಿದಾಗ ಅಭಿಮಾನಿಗಳು ಶಾಕ್ ಆಗಿದ್ದರು. ನಿರೂಪಕಿಯಾಗಿ ಬಣ್ಣದ ಲೋಕದಲ್ಲಿ ಕರಿಯರ್ ಆರಂಭಿಸಿದ್ದ ಚಿತ್ರಾ, ಸ್ಟಾರ್ ವಿಜಯ್​ ತಮಿಳು ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪಾಂಡಿಯನ್ ಸ್ಟೋರ್ಸ್' ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಚಿತ್ರಾ ಅಭಿನಯಿಸುತ್ತಿದ್ದ ಮುಲ್ಳೈ ಎಂಬ ಪಾತ್ರ ಅವರಿಗೆ ದೊಡ್ಡ ಹೆಸರು ತಂದುಕೊಟ್ಟಿತ್ತು. ಸಾಯುವ ಕೆಲವು ದಿನಗಳ ಹಿಂದಷ್ಟೇ ಚಿತ್ರಾಗೆ ಹೇಮನಾಥನ್ ಎಂಬುವವರೊಂದಿಗೆ ನಿಶ್ಚಿತಾರ್ಥ ಕೂಡಾ ಆಗಿತ್ತು. ಆದರೆ ಡಿಸೆಂಬರ್​​ 9 ರಂದು ಚಿತ್ರಾ ಶೂಟಿಂಗ್ ಮುಗಿಸಿ ಬಂದವರೇ ಹೋಟೆಲ್ ರೂಮ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೇಮನಾಥನ್‌ ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು