logo
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ 17ನಲ್ಲಿ ಇಂದು ಗೆಲ್ಲೋದು ಮುನಾವರ್‌ ಫಾರೂಕಿ; ಎಚ್‌ಟಿ ಓದುಗರ ಸಮೀಕ್ಷೆಯಲ್ಲಿ ಬಹಿರಂಗ

ಬಿಗ್‌ಬಾಸ್‌ 17ನಲ್ಲಿ ಇಂದು ಗೆಲ್ಲೋದು ಮುನಾವರ್‌ ಫಾರೂಕಿ; ಎಚ್‌ಟಿ ಓದುಗರ ಸಮೀಕ್ಷೆಯಲ್ಲಿ ಬಹಿರಂಗ

Praveen Chandra B HT Kannada

Jan 28, 2024 05:14 PM IST

ಬಿಗ್‌ಬಾಸ್‌ 17ನಲ್ಲಿ ಇಂದು ಗೆಲ್ಲೋದು ಮುನಾವರ್‌ ಫಾರೂಕಿ; ಎಚ್‌ಟಿ ಓದುಗರ ಸಮೀಕ್ಷೆಯಲ್ಲಿ ಬಹಿರಂಗ

    • Bigg Boss 17 winner: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಗ್ರ್ಯಾಂಡ್‌ ಫಿನಾಲೆ ನಡೆಯುವ ಸಮಯದಲ್ಲಿಯೇ ಬಿಗ್‌ಬಾಸ್‌ 17 ಹಿಂದಿ ಗ್ರ್ಯಾಂಡ್‌ ಫಿನಾಲೆಯೂ ನಡೆಯಲಿದೆ. ಈ ಬಾರಿ ಬಿಗ್‌ಬಾಸ್‌ 17ನಲ್ಲಿ ಗೆಲ್ಲೋದು ಯಾರು ಎಂಬ ಹಿಂದೂಸ್ತಾನ್‌ ಟೈಮ್ಸ್‌ನ ಟ್ವಿಟ್ಟರ್‌ ಸಮೀಕ್ಷೆಯಲ್ಲಿ ಹಲವು ಆಸಕ್ತಿದಾಯಕ ಅಂಶಗಳು ಬಹಿರಂಗಗೊಂಡಿವೆ.
ಬಿಗ್‌ಬಾಸ್‌ 17ನಲ್ಲಿ ಇಂದು ಗೆಲ್ಲೋದು ಮುನಾವರ್‌ ಫಾರೂಕಿ; ಎಚ್‌ಟಿ ಓದುಗರ ಸಮೀಕ್ಷೆಯಲ್ಲಿ ಬಹಿರಂಗ
ಬಿಗ್‌ಬಾಸ್‌ 17ನಲ್ಲಿ ಇಂದು ಗೆಲ್ಲೋದು ಮುನಾವರ್‌ ಫಾರೂಕಿ; ಎಚ್‌ಟಿ ಓದುಗರ ಸಮೀಕ್ಷೆಯಲ್ಲಿ ಬಹಿರಂಗ

ಬೆಂಗಳೂರು: ಒಂದೆಡೆ ಕನ್ನಡ ಕಿರುತೆರೆ ಪ್ರೇಕ್ಷಕರು ಬಿಗ್‌ಬಾಸ್‌ ಸೀಸನ್‌ 10 ಕನ್ನಡ ರಿಯಾಲಿಟಿ ಶೋನಲ್ಲಿ ಯಾರು ವಿನ್ನರ್‌ ಆಗ್ತಾರೆ ಎಂಬ ಕುತೂಹಲದಲ್ಲಿ ಇದ್ದಾರೆ. ಇದೇ ಸಮಯದಲ್ಲಿ ಹಿಂದಿ ಕಿರುತೆರೆ ಪ್ರೇಕ್ಷಕರಿಗೆ ಹಿಂದಿ ಬಿಗ್‌ಬಾಸ್‌ನಲ್ಲಿ ಯಾರು ಗೆಲ್ಲಬಹುದು ಎಂಬ ಕುತೂಹಲ ಮನೆಮಾಡಿದೆ. ಹೌದು, ಇಂದೇ ಬಿಗ್‌ಬಾಸ್‌ ಸೀಸನ್‌ 17 ಹಿಂದಿ ರಿಯಾಲಿಟಿ ಶೋದ ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ. ಹಿಂದೂಸ್ತಾನ್‌ ಟೈಮ್ಸ್‌ ಟ್ವಿಟ್ಟರ್‌ನಲ್ಲಿ ಈ ಬಾರಿ ಬಿಗ್‌ಬಾಸ್‌ ಹಿಂದಿಯಲ್ಲಿ ಯಾರು ಗೆಲ್ಲಬಹುದು ಎಂಬ ಪೋಲ್‌ ರಚಿಸಿತ್ತು. ಅದಕ್ಕೆ ಸಾಕಷ್ಟು ಟ್ವಿಟ್ಟರ್‌ ಬಳಕೆದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಕನ್ನಡದಲ್ಲಿ ಕಿಚ್ಚ ಸುದೀಪ್‌ ರೀತಿ ಹಿಂದಿಯಲ್ಲಿ ಸಲ್ಮಾನ್‌ ಖಾನ್‌ ಅವರು ಬಿಗ್‌ಬಾಸ್‌ 17 ನಡೆಸಿಕೊಡುತ್ತಿದ್ದಾರೆ. ಬಿಗ್‌ಬಾಸ್‌ 17 ವಿನ್ನರ್‌ ಯಾರು ಎಂಬ ಮಾಹಿತಿಯನ್ನು ಸಲ್ಮಾನ್‌ ಖಾನ್‌ ಇನ್ನೂ ಘೋಷಿಸಿಲ್ಲ. ಆದರೆ, ಈ ಬಾರಿ ಯಾರು ಬಿಗ್‌ಬಾಸ್‌ ಟ್ರೋಫಿ ಗೆಲ್ಲಬಹುದು ಎಂಬ ಕೆಲವೊಂದು ಹಿಂಟ್‌ಗಳು ದೊರಕಿವೆ. ಹಿಂದೂಸ್ತಾನ್‌ ಟೈಮ್ಸ್‌ ರೀಡರ್ಸ್‌ ಸಮೀಕ್ಷೆಯಲ್ಲಿ ಈ ಬಾರಿ ಮುನಾವರ್‌ ಫಾರೂಕಿ ಗೆಲ್ಲಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಿಗ್‌ಬಾಸ್‌ 17ನಲ್ಲಿ ಗೆಲುವು ಯಾರಿಗೆ?

ಹಿಂದೂಸ್ತಾನ್‌ ಟೈಮ್ಸ್‌ ನಡೆಸಿದ ಎಕ್ಸ್‌ (ಟ್ವಿಟ್ಟರ್‌) ಮತಗಣನೆಯಲ್ಲಿ ಮುನಾವರ್‌ ಅವರು ಅಂಕಿತಾ ಲೊಖಾಂಡೆಗಿಂತ ಹೆಚ್ಚು ಮತ ಪಡೆದಿದ್ದಾರೆ. ಮುನಾವರ್‌ ಶೇಕಡ 61 ಮತ ಪಡೆದರೆ, ಅಂಕಿತಾರಿಗೆ ಶೇಕಡ 19.8 ಮತಗಳು ಬಂದಿವೆ. ಅಭಿಷೇಕ್‌ಗೆ ಶೇಕಡ 12.4 ಮತ ದೊರಕಿದೆ.

ಭಾನುವಾರ ಬೆಳಗ್ಗಿನಿಂದಲೇ ಓದುಗರಿಗೆ ಈ ರೀತಿ ಮತ ಚಲಾಯಿಸಲು ಅವಕಾಶ ನೀಡಲಾಗಿತ್ತು. ಆರಂಭದಲ್ಲಿ ಅಂಕಿತಾರಿಗೆ ಶೇಕಡ 48ರಷ್ಟು ಮತಗಳು ಬಂದಿದ್ದವು. ಮುನಾವರ್‌ ಫಾರೂಕಿ ಅವರಿಗೆ ಶೇಕಡ 28 ಮತಗಳು ದೊರಕಿದ್ದವು. ಅಭಿಷೇಕ್‌ ಕುಮಾರ್‌ಗೆ ಶೇಕಡ 14 ಮತಗಳು ಬಿದ್ದಿದ್ದವು. ಆದರೆ, ಇದಾರ ಬಳಿಕ ಈ ಟ್ರೆಂಡ್‌ ಬದಲಾಗಿದೆ. ಈಗ ಮುನಾವರ್‌ ಫಾರೂಕಿ ಮುನ್ನಡೆ ಸಾಧಿಸಿದ್ದಾರೆ.

ಮುನಾವರ್‌ ಫಾರೂಕಿ ಗೆಲ್ಲಬಹುದೇ?

ಬಿಗ್‌ಬಾಸ್‌ 17ನಲ್ಲಿ ಈ ಬಾರಿ ಯಾರು ಗೆಲ್ಲಬಹುದು ಎಂದು ಹಲವು ಮತಗಣನೆ ಸಮೀಕ್ಷೆ ನಡೆದಿದೆ. ಬಿಗ್‌ಬಾಸ್‌ ಫ್ಯಾನ್‌ ಪೇಜ್‌ಗಳಲ್ಲಿ ನಡೆದ ಸಮೀಕ್ಷೆಯಲ್ಲಿಯೂ ಮುನಾವರ್‌ ಅವರು ಮುನ್ನಡೆಯಲ್ಲಿದ್ದಾರೆ. ಸೋಷಿಯಲ್‌ ಮೀಡಿಯಾದ ಟ್ರೆಂಡ್‌ಗಳನ್ನು ಗಮನಿಸಿದರೆ ಮುನಾವರ್‌ ಗೆಲ್ಲುವ ಹಾದಿಯಲ್ಲಿದ್ದಾರೆ ಎಂದೆನಿಸುತ್ತದೆ. ಇಂದು ಮುನಾವರ್‌ ಫಾರೂಕಿ ಹುಟ್ಟುಹಬ್ಬವೂ ಹೌದು. ಎಲ್ಲಾದರೂ ಮುನಾವರ್‌ ಇಂದು ಬಿಗ್‌ಬಾಸ್‌ನಲ್ಲಿ ಗೆಲುವು ಪಡೆದರೆ ಹುಟ್ಟುಹಬ್ಬಕ್ಕೆ ಅದ್ಭುತ ಉಡುಗೊರೆ ಇದಾಗಲಿದೆ. ಈ ಹಿಂದೆ ಲಾಕ್‌ ಅಪ್‌ ಎಂಬ ರಿಯಾಲಿಟಿ ಶೋನಲ್ಲೂ ಇವರು ಗೆಲುವು ಪಡೆದಿದ್ದಾರೆ. ಬಿಗ್‌ಬಾಸ್‌ನಲ್ಲೂ ಗೆಲುವು ಪಡೆದರೆ ಇದು ಇವರ ಎರಡನೇ ರಿಯಾಲಿಟಿ ಶೋ ಗೆಲುವು ಆಗಲಿದೆ.

ಬಿಗ್‌ಬಾಸ್‌ ಕನ್ನಡದಲ್ಲಿ ವಿನ್ನರ್‌ ಯಾರು?

ಹಿಂದಿ ಬಿಗ್‌ಬಾಸ್‌ನಂತೆ ಕನ್ನಡ ಬಿಗ್‌ಬಾಸ್‌ನಲ್ಲಿ ಈ ಬಾರಿ ಯಾರು ಗೆಲುವು ಪಡೆಯಲಿದ್ದಾರೆ ಎಂಬ ಕುತೂಹಲ ಕನ್ನಡಿಗರಲ್ಲಿ ಮೂಡಿದೆ. ವಿನಯ್‌ ಗೌಡ, ವರ್ತೂರು ಸಂತೋಷ್‌, ಕಾರ್ತಿಕ್‌ ಮಹೇಶ್‌, ಡ್ರೋನ್‌ ಪ್ರತಾಪ್‌ ಮತ್ತು ಸಂಗೀತಾ ಶೃಂಗೇರಿ ಎಂಬ ಐವರು ಸ್ಟ್ರಾಂಗ್‌ ಸ್ಪರ್ಧಿಗಳಲ್ಲಿ ಗೆಲುವಿನ ಕಿರೀಟ ಯಾರಿಗೆ ದೊರಕಲಿದೆ ಎಂಬ ಪ್ರಶ್ನೆಗೆ ಉತ್ತರ ಇಂದು ದೊರಕಲಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ