logo
ಕನ್ನಡ ಸುದ್ದಿ  /  ಮನರಂಜನೆ  /  Bigg Boss Kannada: ಪ್ರೇಕ್ಷಕರೇ ನೀವೀಗ ಬಾಸ್‌, ಬಿಗ್‌ಬಾಸ್‌ ಕನ್ನಡ ಸ್ಪರ್ಧಿಗಳ ಭವಿಷ್ಯ ನಿರ್ಧರಿಸಲು ತಕ್ಷಣ ಈ ರೀತಿ ಮತ ಚಲಾಯಿಸಿ

Bigg Boss Kannada: ಪ್ರೇಕ್ಷಕರೇ ನೀವೀಗ ಬಾಸ್‌, ಬಿಗ್‌ಬಾಸ್‌ ಕನ್ನಡ ಸ್ಪರ್ಧಿಗಳ ಭವಿಷ್ಯ ನಿರ್ಧರಿಸಲು ತಕ್ಷಣ ಈ ರೀತಿ ಮತ ಚಲಾಯಿಸಿ

HT Kannada Desk HT Kannada

Oct 13, 2023 06:31 PM IST

ಬಿಗ್‌ಬಾಸ್‌ ಕನ್ನಡ ಸ್ಪರ್ಧಿಗಳ ಭವಿಷ್ಯ ನಿರ್ಧರಿಸಲು ಜಿಯೋ ಸಿನಿಮಾದಲ್ಲಿ ಮತ ಚಲಾಯಿಸಲು ಪ್ರೇಕ್ಷಕರಿಗೆ ಅವಕಾಶ

    • Bigg Boss Kannada Voting: ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಆರಂಭವಾಗಿ ಒಂದು ವಾರವಾಗುತ್ತ ಬಂದಿದ್ದು, ಈ ಸಮಯದಲ್ಲಿ ಬಿಗ್‌ಬಾಸ್‌ ಸ್ಪರ್ಧಿಗಳ ಭವಿಷ್ಯ ನಿರ್ಧರಿಸಲು ಪ್ರೇಕ್ಷಕರಿಗೆ ಮತ ಚಲಾಯಿಸುವ ಅವಕಾಶವನ್ನು ನೀಡಲಾಗಿದೆ. ಈ ಕುರಿತು ಹೆಚ್ಚಿನ ವಿವರ ಇಲ್ಲಿದೆ.
ಬಿಗ್‌ಬಾಸ್‌ ಕನ್ನಡ ಸ್ಪರ್ಧಿಗಳ ಭವಿಷ್ಯ ನಿರ್ಧರಿಸಲು ಜಿಯೋ ಸಿನಿಮಾದಲ್ಲಿ ಮತ ಚಲಾಯಿಸಲು ಪ್ರೇಕ್ಷಕರಿಗೆ ಅವಕಾಶ
ಬಿಗ್‌ಬಾಸ್‌ ಕನ್ನಡ ಸ್ಪರ್ಧಿಗಳ ಭವಿಷ್ಯ ನಿರ್ಧರಿಸಲು ಜಿಯೋ ಸಿನಿಮಾದಲ್ಲಿ ಮತ ಚಲಾಯಿಸಲು ಪ್ರೇಕ್ಷಕರಿಗೆ ಅವಕಾಶ

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಆರಂಭವಾಗಿ ಒಂದು ವಾರವಾಗುತ್ತ ಬಂದಿದ್ದು, ನಾಳೆ ಕಿಚ್ಚ ಸುದೀಪ್‌ ಜತೆಗೆ ಸ್ಪರ್ಧಿಗಳ ಮುಖಾಮುಖಿ ಇರಲಿದೆ. ಈ ಸಂದರ್ಭದಲ್ಲಿ ಈ ವಾರ ಯಾವ ಸ್ಪರ್ಧಿ ಮನೆಯಿಂದ ಹೊರಕ್ಕೆ ನಡೆಯುತ್ತಾರೆ ಎಂಬ ಕುತೂಹಲವೂ ಜನರಲ್ಲಿದೆ. ಈ ರೀತಿ ಮನೆಯಿಂದ ಹೊರಕ್ಕೆ ನಡೆಯುವ ಅಭ್ಯರ್ಥಿಗಳ ಭವಿಷ್ಯವನ್ನು ಪ್ರೇಕ್ಷಕರು ನಿರ್ಧರಿಸುತ್ತಾರೆ. ನೀವು ಕೂಡ ಈ ರೀತಿ ಆ ಸ್ಪರ್ಧಿಗಳ ಭವಿಷ್ಯ ನಿರ್ಧರಿಸಲು ಬಯಸಿದರೆ ಅದಕ್ಕೆ ಅನುಸರಿಸಬೇಕಾದ ವಿಧಾನಗಳ ಕುರಿತು ಜಿಯೋ ಸಿನಿಮಾ ಮಾಹಿತಿ ನೀಡಿದೆ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಬಿಗ್‌ಬಾಸ್‌: ಮತ ಚಲಾಯಿಸುವುದು ಹೇಗೆ?

ಬಿಗ್‌ಬಾಸ್‌ ಸೀಸನ್‌10 ಹಲವು ರೀತಿಯಲ್ಲಿ ಭಿನ್ನವೂ, ವಿಶಿಷ್ಟವೂ ಆಗಿದೆ. ಹಲವು ಹೊಸ ಸಂಗತಿಗಳಿವೆ ಎಂಬುದು ಮೊದಲ ದಿನದಿಂದಲೇ ಸ್ಪಷ್ಟವಾಗಿತ್ತು. ಈ ಸಲ ಪ್ರೇಕ್ಷಕರ ಭಾಗವಹಿಸುವಿಕೆಗೂ ಸಾಕಷ್ಟು ಅವಕಾಶಗಳಿರುವುದು ಇನ್ನೊಂದು ವಿಶೇಷ. ಬರೀ ಭಾಗವಹಿಸುವುದಷ್ಟೇ ಅಲ್ಲ, ಬಿಗ್‌ಬಾಸ್‌ ತೆಗೆದುಕೊಳ್ಳುವ ಹಲವು ಬಹುಮುಖ್ಯ ನಿರ್ಧಾರಗಳನ್ನು ಪ್ರಭಾವಿಸುವ, ನಿರ್ಣಯಿಸುವ ಪವರ್‍‌ಫುಲ್‌ ಅಧಿಕಾರವೂ ಪ್ರೇಕ್ಷಕರಿಗೆ ಇದೆ.

ಬಿಗ್‌ಬಾಸ್‌ ಕನ್ನಡ ಜಿಯೋಸಿನಿಮಾ 4ಗಂಟೆ ಉಚಿತ ಪ್ರಸಾರದಲ್ಲಿ ‘ನೀವೀಗ ಬಾಸ್‌’ ಸೆಗ್ಮೆಂಟ್‌ ಇಂಥದೊಂದು ಪವರ್‍‌ಪುಲ್‌ ಅಧಿಕಾರವನ್ನು ಪ್ರೇಕ್ಷಕರಿಗೆ ನೀಡುತ್ತಿದೆ. ಇದರಲ್ಲಿ ಕೇಳಲಾಗುವ ಪ್ರಶ್ನೆಗೆ ಜನರು ವೋಟ್‌ಗಳು ಮನೆಯೊಳಗಿನ ಹಲವು ಮುಖ್ಯ ಸಂಗತಿಗಳನ್ನು ನಿರ್ಣಯಿಸುತ್ತವೆ. ಈಗ ‘ನೀವೀಗ ಬಾಸ್‌’ ಸೆಗ್ಮೆಂಟ್‌ನಲ್ಲಿ ಪ್ರಶ್ನೆಯೊಂದನ್ನು ಜನಮತಕ್ಕಾಗಿ ಇಡಲಾಗಿದೆ. ಇದರ ಮೂಲಕ ಬಿಗ್‌ಬಾಸ್‌ ಮನೆಯೊಳಗಿನ ‘ಅಸಮರ್ಥ’ರ ಭವಿಷ್ಯ ನಿರ್ಧರಿಸುವ ಅಧಿಕಾರವನ್ನು ಪ್ರೇಕ್ಷಕರಿಗೆ ನೀಡಲಾಗಿದೆ.

ಮನೆಯೊಳಗೆ ಎರಡು ಗುಂಪುಗಳಾಗಿರುವುದು ಗೊತ್ತೇ ಇದೆ. ಜನರ ವೋಟ್‌ನಿಂದ ನೇರವಾಗಿ ಮನೆಯೊಳಗೆ ಪ್ರವೇಶಿಸಿದ ಹತ್ತು ‘ಸಮರ್ಥ’ ಸ್ಪರ್ಧಿಗಳ ಗುಂಪು ಒಂದೆಡೆಯಿದೆ. ಜನರು ಹೋಲ್ಡ್‌ನಲ್ಲಿ ಇಟ್ಟಿರುವ ಏಳು ‘ಅಸಮರ್ಥ’ ಸ್ಪರ್ಧಿಗಳ ಗುಂಪು ಇನ್ನೊಂದೆಡೆ ಇದೆ. ಈ ಏಳು ಸ್ಪರ್ಧಿಗಳಿಗೆ ಮನೆಯೊಳಗಿನ ಕೆಲವು ಸೌಲಭ್ಯಗಳನ್ನು ಮೊಟಕುಗೊಳಿಸಲಾಗಿದೆ. ಈಗ ಅವರಲ್ಲಿ ಸಮರ್ಥರು ಯಾರು ಎಂಬುದನ್ನು ತೀರ್ಮಾನಿಸುವ ಸಂದರ್ಭ ಬಂದಿದೆ. ಅದರ ಅಧಿಕಾರವನ್ನು ಜನರಿಗೆ ನೀಡಲಾಗಿದೆ.

ಮೊದಲ ಪ್ರಶ್ನೆ ಹೀಗಿದೆ: ಈ ಏಳು ಮಂದಿ ಅಸಮರ್ಥರಲ್ಲಿ ಯಾರೆಲ್ಲ ಸಮರ್ಥರಾಗಲು ಅರ್ಹರು? ಈ ಪ್ರಶ್ನೆಯನ್ನು ‘ನೀವೀಗ ಬಾಸ್‌’ ಸೆಗ್ಮೆಂಟ್‌ನಲ್ಲಿ ಜನಮತಕ್ಕಾಗಿ ಇಡಲಾಗಿದೆ. ಇಂದು (ಅ.13)ರಾತ್ರಿ ಹನ್ನೊಂದು ಗಂಟೆಯವರೆಗೆ ಪ್ರೇಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಗಳಿಗೆ ಮತ ಹಾಕಬಹುದು. ಅತಿಹೆಚ್ಚು ಮತ ಪಡೆದ ಸ್ಪರ್ಧಿ ಎಲ್ಲರಿಗಿಂತ ಮೊದಲು ‘ಸಮರ್ಥ’ರ ಗುಂಪಿಗೆ ಸೇರಿಕೊಳ್ಳುತ್ತಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ