logo
ಕನ್ನಡ ಸುದ್ದಿ  /  ಮನರಂಜನೆ  /  Pallavi Prashanth: ಶಾಂತಿ ಕದಡಿದ ಆರೋಪ; ಬಿಗ್‌ಬಾಸ್‌ ತೆಲುಗು ಸೀಸನ್‌ 7ರ ವಿನ್ನರ್‌ ಪಲ್ಲವಿ ಪ್ರಶಾಂತ್‌ ಬಂಧನ

Pallavi Prashanth: ಶಾಂತಿ ಕದಡಿದ ಆರೋಪ; ಬಿಗ್‌ಬಾಸ್‌ ತೆಲುಗು ಸೀಸನ್‌ 7ರ ವಿನ್ನರ್‌ ಪಲ್ಲವಿ ಪ್ರಶಾಂತ್‌ ಬಂಧನ

Praveen Chandra B HT Kannada

Dec 21, 2023 06:37 AM IST

ಬಿಗ್‌ಬಾಸ್‌ ತೆಲುಗು ಸೀಸನ್‌ 7ರ ವಿನ್ನರ್‌ ಪಲ್ಲವಿ ಪ್ರಶಾಂತ್‌ ಬಂಧನ

    • Pallavi Prashanth Arrest: ಈ ಬಾರಿ ಬಿಗ್‌ಬಾಸ್‌ ತೆಲುಗು ಸೀಸನ್‌ 7ರಲ್ಲಿ ಗೆಲುವು ಪಡೆದಿದ್ದ ರೈತನ ಮಗ ಪಲ್ಲವಿ ಪ್ರಶಾಂತ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬಿಗ್‌ಬಾಸ್‌ ವಿನ್ನರ್‌ನನ್ನು ಪೊಲೀಸರು ಬಂಧಿಸಿರುವ ವಿಡಿಯೋಗಳು ಹೊರಬಿದ್ದಿವೆ.
ಬಿಗ್‌ಬಾಸ್‌ ತೆಲುಗು ಸೀಸನ್‌ 7ರ ವಿನ್ನರ್‌ ಪಲ್ಲವಿ ಪ್ರಶಾಂತ್‌ ಬಂಧನ
ಬಿಗ್‌ಬಾಸ್‌ ತೆಲುಗು ಸೀಸನ್‌ 7ರ ವಿನ್ನರ್‌ ಪಲ್ಲವಿ ಪ್ರಶಾಂತ್‌ ಬಂಧನ

Pallavi Prashanth Arrest: ಈ ಬಾರಿ ಬಿಗ್‌ಬಾಸ್‌ ತೆಲುಗು ಸೀಸನ್‌ 7ರ ಫಲಿತಾಂಶದ ಬಳಿಕ ಸಾಕಷ್ಟು ನಾಟಕೀಯ ಬೆಳವಣಿಗೆಗಳು ನಡೆದಿವೆ. ಇದೀಗ ಬಿಗ್‌ಬಾಸ್‌ ತೆಲುಗು ಸೀಸನ್‌ 7ರ ವಿಜೇತ ಪಲ್ಲವಿ ಪ್ರಶಾಂತ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸರಕಾರಿ ಮತ್ತು ಖಾಸಗಿ ವಾಹನಗಳನ್ನು ಪಲ್ಲವಿ ಪ್ರಶಾಂತ್‌ ಹಿಂಬಾಲಕರು ಧ್ವಂಸ ಮಾಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಪೊಲೀಸರ ಆದೇಶ ಪಾಲಿಸದ ಆರೋಪದಡಿ ಪಲ್ಲವಿ ಪ್ರಶಾಂತ್‌ನನ್ನು ಜುಬಿಲಿ ಹಿಲ್ಸ್‌ ಪೊಲೀಸರು ಬಂಧಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಗಾಯಗೊಂಡ ನಟಿ ಐಶ್ವರ್ಯಾ ರೈ ಕೈಬಿಟ್ಟು ನಡೆಯಲೊಪ್ಪದ ಆರಾಧ್ಯ ಬಚ್ಚನ್‌; ಮಗಳೆಂದರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

Cannes: ಚಿನ್ನದ ಬಣ್ಣದ ಉಡುಗೆಯಲ್ಲಿ ಆಸ್ಕರ್‌ ಟ್ರೋಫಿ ರೀತಿ ಕಾಣಿಸ್ತಾರಂತೆ ಶೋಭಿತಾ ಧೂಳಿಪಾಲ, ನಿಮಗೂ ಹಾಗೇ ಕಾಣಿಸ್ತಾರ ನೋಡಿ

ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅದೃಷ್ಟ ಕಣ್ರೋ, ಅಪಶಕುನ ಅಲ್ಲ; ಐಪಿಎಲ್‌ನಲ್ಲಿ ಆರ್‌ಸಿಬಿ ಹೊಸ ಅಧ್ಯಾಯ, ತುಚ್ಛ ಪದ ಬಳಸಿದವರಿಗೆ ಚಾಟಿಯೇಟು

Bhagyalakshmi Serial: 10ನೇ ತರಗತಿ ಪಾಸ್‌ ಆದ ಖುಷಿಗೆ ಮೊದಲ ದಿನವೇ ಕೆಲಸಕ್ಕೆ ತಡವಾಗಿ ಹೊರಟ ಭಾಗ್ಯಾ, ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

ತೆಲಂಗಾಣದ ಗಜ್ವೇಲ್‌ ಮಂಡಲದ ಕೋಲುಗೂರು ಗ್ರಾಮಕ್ಕೆ ತೆರಳಿದ ಪೊಲೀಸರು ಬಿಗ್‌ಬಾಸ್‌ ವಿನ್ನರ್‌ನನ್ನು ಆತನ ಮನೆಯಲ್ಲಿಯೇ ಬಂಧಿಸಿದ್ದಾರೆ. ಈ ಬಾರಿಯ ಬಿಗ್‌ಬಾಸ್‌ ತೆಲುಗು ಸೀಸನ್‌ 7ನಲ್ಲಿ ವಿಜೇತನಾಗಿ ಪಲ್ಲವಿ ಪ್ರಶಾಂತ್‌ ಹೊರಹೊಮ್ಮಿದ್ದರು. ಈ ಕುರಿತು ಘೋಷಣೆಯಾಗುತ್ತಿದ್ದಂತೆ ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋ (ಬಿಗ್‌ಬಾಸ್‌ ನಡೆಯುತ್ತಿರುವ ಸ್ಥಳ) ಹೊರಗಡೆ ಜಗಳ, ಪುಂಡಾಟ ನಡೆದಿತ್ತು. ಈ ಸಂದರ್ಭದಲ್ಲಿ ಪಲ್ಲವಿ ಪ್ರಶಾಂತ್‌ ಹಿಂಬಾಲಕರು ಹಲವು ಆರ್‌ಟಿಸಿ ಬಸ್‌ಗಳು, ಖಾಸಗಿ ವಾಹನಗಳಿಗೆ ಹಾನಿ ಮಾಡಿದ್ದರು.

ಪಲ್ಲವಿ ಪ್ರಶಾಂತ್‌ ಅಭಿಮಾನಿಗಳೇ ಈ ಕೃತ್ಯ ಎಸಗಿದ್ದಾರೆ. ಈ ಪುಂಡಾಟ ನಡೆಯುತ್ತಿರುವ ಸಮಯದಲ್ಲಿ ಜಗಳ ನಡೆಯುವ ಸ್ಥಳಕ್ಕೆ ಹೋಗಬೇಡಿ ಎಂದು ಪೊಲೀಸರು ಆದೇಶ ನೀಡಿದ್ದರು. ಬಿಗ್‌ಬಾಸ್‌ ನಡೆಯುತ್ತಿರುವ ಸ್ಟುಡಿಯೋದ ಹಿಂಬಾಗಿಲಿನಿಂದ ಹೊರಹೋಗಲು ತಿಳಿಸಲಾಗಿತ್ತು. ಆದರೆ, ಪೊಲೀಸರ ಮತ್ತು ಬಿಗ್‌ಬಾಸ್‌ ಆಯೋಜಕರ ಆದೇಶ, ಮನವಿ ಧಿಕ್ಕರಿಸಿ ಪಲ್ಲವಿ ಪ್ರಶಾಂತ್‌ ಅವರು ಜಗಳ ನಡೆಯುವ ಸ್ಥಳಕ್ಕೆ ಹೋಗಿದ್ದರು.

ಡಿಸೆಂಬರ್‌ 17ರಂದು ಬಿಗ್‌ಬಾಸ್‌ ತೆಲುಗು ಸೀಸನ್‌ 7ರ ವಿನ್ನರ್‌ ಆಗಿ ಪಲ್ಲವಿ ಪ್ರಶಾಂತ್‌ ಹೊರಹೊಮ್ಮಿದ್ದರು. ಅಮರ್‌ ದೀಪ್‌ ರನ್ನರ್‌ಅಪ್‌ ಆಗಿದ್ದರು. ಫಲಿತಾಂಶ ಪ್ರಕಟವಾಗುವ ಸಮಯದಲ್ಲಿ ಪ್ರಶಾಂತ್‌ ಮತ್ತು ಅಮರ್‌ ಅವರು ಅನ್ನಪೂರ್ಣ ಸ್ಟುಡಿಯೋಸ್‌ನ ಹೊರಗೆ ಬಂದಿದ್ದರು. ಇವರಿಬ್ಬರ ಅಭಿಮಾನಿಗಳು ಅಲ್ಲಿ ಸೇರಿದ್ದರು. ಈ ನಡುವೆ ಈ ಎರಡು ಅಭಿಮಾನಿಗಳ ಗುಂಪಿನ ನಡುವೆ ಜಗಳ ನಡೆದಿದೆ. ಈ ಸಮಯದಲ್ಲಿ ಕೆಲವರು ಅಲ್ಲಿದ್ದ ಕಾರುಗಳಿಗೆ ಹಾನಿ ಮಾಡಿದ್ದಾರೆ. ಆರ್‌ಟಿಸಿ ಬಸ್‌ಗಳಿಗೂ ಹಾನಿ ಮಾಡಿದ್ದರು.

ಸ್ಟುಡಿಯೋದಿಂದ ಹೊರಕ್ಕೆ ಬಂದ ಬಳಿಕ ಪಲ್ಲವಿ ಪ್ರಶಾಂತ್‌ ಪೊಲೀಸರ ಆದೇಶ ಧಿಕ್ಕರಿಸಿ ತೆರೆದ ವಾಹನದಲ್ಲಿ ಜಗಳ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ್ದರು. ಇದರಿಂದ ಜಗಳ ಮತ್ತಷ್ಟು ಹೆಚ್ಚಾಗಿದೆ. ಇದೀಗ ಸಮಾಜದ ಶಾಂತಿ ಕದಡಿದ ಆರೋಪದಡಿ ಪಲ್ಲವಿ ಪ್ರಶಾಂತ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪಲ್ಲವಿ ಪ್ರಶಾಂತ್‌ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಘಟನೆಗೆ ಸಂಬಂಧಪಟ್ಟಂತೆ ಪಲ್ಲವಿ ಪ್ರಶಾಂತ್‌ರನ್ನು ಮಾತ್ರವಲ್ಲದೆ ಇತರೆ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ತನ್ನನ್ನು ಬಂಧಿಸಲಿದ್ದಾರೆ ಎಂದು ತಿಳಿದ ತಕ್ಷಣ ನಿನ್ನೆಯಿಂದಲೇ ಪಲ್ಲವಿ ಪ್ರಶಾಂತ್‌ ತಲೆಮರೆಸಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು. ಪೊಲೀಸರು ತನ್ನನ್ನು ಬಂಧಿಸಲು ಹುಡುಕುತ್ತಿದ್ದಾರೆ ಎಂಬ ವಿಷಯ ತಿಳಿದ ಪಲ್ಲವಿ ಪ್ರಶಾಂತ್‌ ನಿನ್ನೆ ವಿಡಿಯೋವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. "ನಾನು ತಪ್ಪು ಮಾಡಿಲ್ಲ. ನನ್ನ ವಿಡಿಯೋಗಳನ್ನು ತಿರುಚಿ ಸೋಷಿಯಲ್‌ ಮೀಡಿಯಾದಲ್ಲಿ ಹರಡಲಾಗುತ್ತಿದೆ. ಪಲ್ಲವಿ ಪ್ರಶಾಂತ್‌ ರೈತನ ಮಗ, ಆತ ಎಂದಿಗೂ ತಪ್ಪು ಮಾಡುವುದಿಲ್ಲ" ಎಂದು ಅವರು ವಿಡಿಯೋದಲ್ಲಿ ಹೇಳಿಕೊಂಡಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ