logo
ಕನ್ನಡ ಸುದ್ದಿ  /  ಮನರಂಜನೆ  /  ನನ್ನ ಮಗನಿಗೇ ರಾಷ್ಟ್ರ ಪ್ರಶಸ್ತಿ ಸಿಕ್ಕಷ್ಟು ಖುಷಿಯಾಯ್ತು; ತೆಲುಗು ಸ್ಟಾರ್‌ ನಟನ ಬಗ್ಗೆ ಪ್ರಕಾಶ್‌ ರಾಜ್‌ ಮೆಚ್ಚುಗೆ ಮಾತು

ನನ್ನ ಮಗನಿಗೇ ರಾಷ್ಟ್ರ ಪ್ರಶಸ್ತಿ ಸಿಕ್ಕಷ್ಟು ಖುಷಿಯಾಯ್ತು; ತೆಲುಗು ಸ್ಟಾರ್‌ ನಟನ ಬಗ್ಗೆ ಪ್ರಕಾಶ್‌ ರಾಜ್‌ ಮೆಚ್ಚುಗೆ ಮಾತು

Oct 23, 2023 09:16 AM IST

ನನ್ನ ಮಗನಿಗೇ ರಾಷ್ಟ್ರ ಪ್ರಶಸ್ತಿ ಸಿಕ್ಕಷ್ಟು ಖುಷಿಯಾಯ್ತು; ತೆಲುಗು ಸ್ಟಾರ್‌ ನಟನ ಬಗ್ಗೆ ಪ್ರಕಾಶ್‌ ರಾಜ್‌ ಮೆಚ್ಚುಗೆ ಮಾತು

    • Prakash Raj: ನನ್ನ ಸಿನಿಮಾ ಶೂಟಿಂಗ್‌ ಸಮಯದಲ್ಲಿ ಆತ, ಒಂದು ಮರೆಯಲ್ಲಿ ನಿಂತು ನನ್ನ ನಟನೆಯನ್ನು ರೆಕಾರ್ಡ್‌ ಮಾಡುತ್ತಿದ್ದ. ಅದಾದ ಮೇಲೆ ಆತನ ಮೊದಲ ಸಿನಿಮಾ ನೋಡಿದ ಮೇಲೆ, ಈತ ಮುಂದೊಂದಿನ ದೊಡ್ಡ ಸ್ಟಾರ್‌ ಆಗ್ತಾನೆ ಎಂದು ಆವತ್ತೇ ಹೇಳಿದ್ದೆ ಎಂದು ಪ್ರಕಾಶ್‌ ರಾಜ್‌ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಯಾರು ಆ ನಟ?
ನನ್ನ ಮಗನಿಗೇ ರಾಷ್ಟ್ರ ಪ್ರಶಸ್ತಿ ಸಿಕ್ಕಷ್ಟು ಖುಷಿಯಾಯ್ತು; ತೆಲುಗು ಸ್ಟಾರ್‌ ನಟನ ಬಗ್ಗೆ ಪ್ರಕಾಶ್‌ ರಾಜ್‌ ಮೆಚ್ಚುಗೆ ಮಾತು
ನನ್ನ ಮಗನಿಗೇ ರಾಷ್ಟ್ರ ಪ್ರಶಸ್ತಿ ಸಿಕ್ಕಷ್ಟು ಖುಷಿಯಾಯ್ತು; ತೆಲುಗು ಸ್ಟಾರ್‌ ನಟನ ಬಗ್ಗೆ ಪ್ರಕಾಶ್‌ ರಾಜ್‌ ಮೆಚ್ಚುಗೆ ಮಾತು

Prakash Raj on Allu Arjun: ಪೋಷಕ ನಟರಾಗಿ, ಖಳನಟನಾಗಿ ಒಂದೇ ಭಾಷೆಗೆ ಸೀಮಿತವಾಗದೇ, ದೇಶದ ಹಲವು ಭಾಷೆಗಳ ಚಿತ್ರೋದ್ಯಮಗಳಲ್ಲಿ ಗುರುತಿಸಿಕೊಂಡವರು ಕನ್ನಡಿಗ ಪ್ರಕಾಶ್‌ ರಾಜ್.‌ ಇಂದಿಗೂ ಅದೇ ಚಾರ್ಮ್‌ ಉಳಿಸಿಕೊಂಡು, ಚಿತ್ರರಂಗದಲ್ಲಿ ಸಕ್ರಿಯ ಮತ್ತು ಬೇಡಿಕೆ ಇಟ್ಟುಕೊಂಡಿದ್ದಾರೆ. ನಟನೆ ಮಾತ್ರವಲ್ಲದೆ, ಪ್ರಸ್ತುತ ರಾಜಕಾರಣದ ಬಗ್ಗೆಯೂ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ತೆಲುಗು ಚಿತ್ರರಂಗದ ಸಾಧನೆ ಬಗ್ಗೆ ಮಾತನಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಂಭವಾಮಿ ಯುಗೇಯುಗೇ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆ; ಥ್ರಿಲ್ಲರ್, ಆಕ್ಷನ್, ಲವ್, ಸೆಂಟಿಮೆಂಟ್ ಗ್ಯಾರಂಟಿ

ಕಲರ್ಸ್‌ ಕನ್ನಡದ ನಿನಗಾಗಿ ಧಾರಾವಾಹಿ ಪ್ರಸಾರ ದಿನಾಂಕ ಪ್ರಕಟ; ದಿವ್ಯ ಉರುಡುಗ ನಟನೆಯ ಈ ಸೀರಿಯಲ್‌ ಕುರಿತು ಇಲ್ಲಿದೆ ಸಂಪೂರ್ಣ ವಿವರ

Blink Movie: ಬ್ಲಿಂಕ್‌ ಸಿನಿಮಾದ ಕುರಿತು ಮುಗಿಯದ ವಿಮರ್ಶೆ; ತೆಲುಗು, ತಮಿಳು, ಮಲಯಾಳಂ, ಹಿಂದಿಗೂ ಡಬ್‌ ಆಗುತ್ತಂತೆ ಬ್ಲಿಂಕ್‌

ಗಾಯಗೊಂಡ ನಟಿ ಐಶ್ವರ್ಯಾ ರೈ ಕೈಬಿಟ್ಟು ನಡೆಯಲೊಪ್ಪದ ಆರಾಧ್ಯ ಬಚ್ಚನ್‌; ಮಗಳೆಂದರೆ ಹೀಗಿರಬೇಕು ಅಂದ್ರು ಫ್ಯಾನ್ಸ್‌

ಇತ್ತೀಚೆಗಷ್ಟೇ ದೆಹಲಿಯಲ್ಲಿ 63ನೇ ರಾಷ್ಟ್ರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಟಾಲಿವುಡ್‌ನ ಪುಷ್ಪ ದಿ ರೈಸ್‌ ಸಿನಿಮಾ ಮಡಿಲಿಗೆ ಹಲವು ರಾಷ್ಟ್ರ ಪ್ರಶಸ್ತಿಗಳು ಒಲಿದವು. ಅಲ್ಲು ಅರ್ಜುನ್‌ ಅತ್ಯುತ್ತಮ ನಟ ಅವಾರ್ಡ್‌ ಪಡೆದುಕೊಂಡರು. ಇದೀಗ ಇದೇ ಖುಷಿಯನ್ನು ಪುಷ್ಪ ಸಿನಿಮಾ ನಿರ್ಮಿಸಿದ ಮೈತ್ರಿ ಮೂವಿ ಮೇಕರ್ಸ್‌ ಸಂಸ್ಥೆ ಅದ್ದೂರಿಯಾಗಿಯೇ ಸೆಲೆಬ್ರೇಟ್‌ ಮಾಡಿದೆ. ಇದೇ ಸಮಯದಲ್ಲಿ ನಟ ಪ್ರಕಾಶ್‌ ರಾಜ್‌ ಸಹ ಈ ಸಮಾರಂಭದಲ್ಲಿ ಭಾಗವಹಿಸಿ, ಈ ಖುಷಿಯಲ್ಲಿ ತಾವೂ ಪಾಲುದಾರರಾದರು.

ರಾಷ್ಟ್ರಪ್ರಶಸ್ತಿ ಎಂಬುದೇ ದೊಡ್ಡ ಗೌರವ

ಈ ವರೆಗೂ ತಮ್ಮ ಸಿನಿಮಾ ವೃತ್ತಿ ಜೀವನದಲ್ಲಿ ಒಟ್ಟು ಐದು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದಿರುವ ಪ್ರಕಾಶ್‌ ರಾಜ್‌, ಅಲ್ಲು ಅರ್ಜುನ್‌ ಬಗ್ಗೆ ಹಾಡು ಹೊಗಳಿದ್ದಾರೆ. “ರಾಷ್ಟ್ರ ಪ್ರಶಸ್ತಿ ಪಡೆದ ಅಲ್ಲು ಅರ್ಜುನ್‌ ಅವರನ್ನು ಸನ್ಮಾನಿಸಲು ಸಿನಿಮಾ ಇಂಡಸ್ಟ್ರಿ ಏಕೆ ಒಗ್ಗೂಡುತ್ತದೆ? ಅಲ್ಲು ಅರ್ಜುನ್‌ ರಾಷ್ಟ್ರಪ್ರಶಸ್ತಿ ಪಡೆದರೆ ಅದು ಎಲ್ಲ ನಟರಿಗೂ ಹೆಮ್ಮೆಯ ವಿಷಯ. ರಾಜಮೌಳಿ ಆಸ್ಕರ್‌ಗೆ ಹೋದರೆ, ಅದು ತೆಲುಗು ಇಂಡಸ್ಟ್ರಿಗೆ ಮತ್ತು ತೆಲುಗು ಜನರಿಗೆ ಹೆಮ್ಮೆಯ ವಿಷಯ" ಎಂದಿದ್ದಾರೆ.

ಪ್ರಶಸ್ತಿ ನನ್ನ ಮಗನಿಗೆ ಸಿಕ್ಕಷ್ಟೇ ಖುಷಿ

"ಬನ್ನಿಯನ್ನು ನಾನು ಚಿಕ್ಕ ವಯಸ್ಸಿನಿಂದಲೇ ನೋಡಿಕೊಂಡು ಬಂದಿದ್ದೇನೆ. ಶೂಟಿಂಗ್‌ ಸಂದರ್ಭದಲ್ಲಿ ನನ್ನ ನಟನೆಯನ್ನು ತನ್ನ ಸಣ್ಣ ಕ್ಯಾಮರಾದಲ್ಲಿ ಒಂದು ಬದಿಯಲ್ಲಿ ನಿಂತು ರೆಕಾರ್ಡ್‌ ಮಾಡ್ತಿದ್ದ. ಗಂಗೋತ್ರಿ ಸಿನಿಮಾ ಸಮಯದಲ್ಲಿ ಈ ಹುಡುಗ ತುಂಬ ಎತ್ತರಕ್ಕೆ ಬೆಳೆಯುತ್ತಾನೆ ಎಂದು ಆವತ್ತೇ ಹೇಳಿದ್ದೆ. ಹೊಸದನ್ನು ನೀಡಬೇಕೆಂಬ ಅವನಲ್ಲಿರುವ ಹಸಿವು ಇದೀಗ ಇಲ್ಲಿಗೆ ತಂದು ನಿಲ್ಲಿಸಿದೆ. ನನ್ನ ಮಗನೇ ಈ ಪ್ರಶಸ್ತಿ ಪಡೆದಷ್ಟು ಖುಷಿಯಾಗ್ತಿದೆ" ಎಂದು ಪ್ರಕಾಶ್‌ ರಾಜ್‌ ಹೇಳಿಕೊಂಡಿದ್ದಾರೆ.

ಹೊಸಬರನ್ನೂ ಗೌರವಿಸಬೇಕು..

“ನಾವು ರಾಷ್ಟ್ರೀಯ ಪ್ರಶಸ್ತಿಗಳ ಇತಿಹಾಸವನ್ನು ನೋಡಿದರೆ, ತೆಲುಗು ಸಿನಿಮಾಗಳಿಗೆ ಅಷ್ಟಾಗಿ ಈ ಗೌರವ ಸಿಕ್ಕಿದ್ದು ಕಡಿಮೆ. ಆದರೆ ಈಗ ರಾಷ್ಟ್ರದ ಅತ್ಯುತ್ತಮ ನಟ ತೆಲುಗಿನವರು, ಸಂಗೀತ ನಿರ್ದೇಶಕರು ತೆಲುಗಿನವರು, ನಿರ್ದೇಶಕರು ತೆಲುಗಿನವರೇ. ಇಂದು ನಾವು ಅವರ ಸಾಧನೆಯ ಬಗ್ಗೆ ಹೆಮ್ಮೆ ಪಡಬೇಕಾಗಿದೆ. ಇಲ್ಲಿ ಯುವ ನಿರ್ದೇಶಕರು ಇದ್ದಾರೆ, ಆದರೆ ದೊಡ್ಡವರು ಎಲ್ಲಿದ್ದಾರೆ? ತೆಲುಗು ಚಿತ್ರರಂಗ ಎಲ್ಲೆ ಮೀರುತ್ತಿದೆ. ಹಾಗಾಗಿ ಅವರನ್ನು ಮೊದಲು ನಾವು ಗೌರವಿಸಬೇಕು" ಎಂದಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ