logo
ಕನ್ನಡ ಸುದ್ದಿ  /  ಮನರಂಜನೆ  /  ಅಭಿಮಾನಿಗಳಿಗೆ ಖುಷಿ ನೀಡಿದ ಖುಷಿ ಸಿನಿಮಾ; ಸ್ಟಾರ್‌ ನಟರಿಂದಲೂ ಚಿತ್ರತಂಡಕ್ಕೆ ಶುಭ ಹಾರೈಕೆ

ಅಭಿಮಾನಿಗಳಿಗೆ ಖುಷಿ ನೀಡಿದ ಖುಷಿ ಸಿನಿಮಾ; ಸ್ಟಾರ್‌ ನಟರಿಂದಲೂ ಚಿತ್ರತಂಡಕ್ಕೆ ಶುಭ ಹಾರೈಕೆ

HT Kannada Desk HT Kannada

Sep 01, 2023 09:41 AM IST

'ಖುಷಿ' ಸಿನಿಮಾ ಟ್ವಿಟ್ಟರ್‌ ರಿವ್ಯೂ

  • ಟ್ವಿಟ್ಟರ್‌ನಲ್ಲಿ ವಿಜಯ್‌ ದೇವರಕೊಂಡ ಅಭಿಮಾನಿಗಳು #BlockbusterKushi ಹ್ಯಾಷ್‌ಟ್ಯಾಗ್‌ ಬಳಸಿ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾ ಲಂಡನ್‌ನಲ್ಲಿ ಕೂಡಾ ರಿಲೀಸ್‌ ಆಗಿದ್ದು ಅಲ್ಲಿ ಪ್ರೀಮಿಯರ್‌ ಶೋ ನೋಡಿದವರು ಕೂಡಾ ಚಿತ್ರದ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

'ಖುಷಿ' ಸಿನಿಮಾ ಟ್ವಿಟ್ಟರ್‌ ರಿವ್ಯೂ
'ಖುಷಿ' ಸಿನಿಮಾ ಟ್ವಿಟ್ಟರ್‌ ರಿವ್ಯೂ

ವಿಜಯ್‌ ದೇವರಕೊಂಡ ಹಾಗೂ ಸಮಂತಾ ಅಭಿನಯದ 'ಖುಷಿ' ಸಿನಿಮಾ ಇಂದು ( ಸೆಪ್ಟೆಂಬರ್‌ 1) ತೆರೆ ಕಂಡಿದೆ. ಫಸ್ಟ್‌ ಶೋ ನೋಡಿ ಬಂದ ಅಭಿಮಾನಿಗಳು ಥಿಯೇಟರ್‌ ಮುಂದೆ ಸಂಭ್ರಮ ಹಂಚಿಕೊಂಡಿದ್ದಾರೆ. ಜೊತೆಗೆ ಚಿತ್ರದ ಬಗ್ಗೆ ಟ್ವಿಟ್ಟರ್‌ನಲ್ಲಿ ಖುಷಿ ಹಂಚಿಕೊಂಡಿದ್ದಾರೆ.‌

ಟ್ರೆಂಡಿಂಗ್​ ಸುದ್ದಿ

Amruthadhaare: ರೌಡಿಗಳ ಕೈಯಿಂದ ಮಲ್ಲಿಯನ್ನು ಬಚಾವ್‌ ಮಾಡಿದ್ಲು ಮಹಿಮಾ; ಡುಮ್ಮ ಸರ್‌ ಟೈಟಾದ್ರು, ಐ ಅಂದ್ರು, ಲವ್‌ ಯು ಹೇಳ್ತಾರ

ಬರಲಿದೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಬಯೋಪಿಕ್‌; ಮೋದಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಬಾಹುಬಲಿಯ ಕಟ್ಟಪ್ಪ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

ಮ್ಯೂಸಿಕಲ್‌ ಹಿಟ್‌ ಎಂದ ಅಭಿಮಾನಿಗಳು

'ಖುಷಿ' ಸಿನಿಮಾ ಬಹಳ ಚೆನ್ನಾಗಿದೆ, ಮ್ಯೂಸಿಕ್‌ ಅಂತೂ ಅಲ್ಟಿಮೇಟ್‌, ಸಮಂತಾ ಹಾಗೂ ವಿಜಯ್‌ ದೇವರಕೊಂಡ ನಟನೆ ಬಹಳ ಚೆನ್ನಾಗಿದೆ. ಇಬ್ಬರಿಗೂ ಈ ಸಿನಿಮಾ ಬ್ರೇಕ್‌ ನೀಡಲಿದೆ. ಸಿನಿಮಾ ಯುವ ಜನತೆಗೆ ಬಹಳ ಕನೆಕ್ಟ್‌ ಆಗುತ್ತದೆ. ಇಂಥಹ ಸಿನಿಮಾ ನೋಡಿ ಬಹಳ ದಿನಗಳಾಯ್ತು, ನಿಜಕ್ಕೂ ಟಾಲಿವುಡ್‌ನಲ್ಲಿ ಇಂತಹ ಸಿನಿಮಾಗಳು ನಮಗೆ ಬೇಕು. ಖುಷಿ ಸಿನಿಮಾ ಬ್ಲಾಕ್‌ ಬಸ್ಟರ್‌ ಎಂದೆಲ್ಲಾ ಅಭಿಮಾನಿಗಳು ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ಧಾರೆ. ನಾನು ಹಾಡುಗಳನ್ನು ನೋಡಲೆಂದೇ ಸಿನಿಮಾ ನೋಡಲು ಬಂದೆ ಎಂದು ಇನ್ನೂ ಕೆಲವರು ಹೇಳುತ್ತಿದ್ದಾರೆ. ಥಿಯೇಟರ್‌ ಮುಂದೆ ವಿಜಯ್‌ ದೇವರಕೊಂಡಗೆ ಅಭಿಮಾನಿಗಳು ಜೈಕಾರ ಹಾಕುತ್ತಿದ್ದಾರೆ.

ಟ್ವಿಟ್ಟರ್‌ನಲ್ಲಿ ವಿಜಯ್‌ ದೇವರಕೊಂಡ ಅಭಿಮಾನಿಗಳು #BlockbusterKushi ಹ್ಯಾಷ್‌ಟ್ಯಾಗ್‌ ಬಳಸಿ ಪೋಸ್ಟ್‌ ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾ ಲಂಡನ್‌ನಲ್ಲಿ ಕೂಡಾ ರಿಲೀಸ್‌ ಆಗಿದ್ದು ಅಲ್ಲಿ ಪ್ರೀಮಿಯರ್‌ ಶೋ ನೋಡಿದವರು ಕೂಡಾ ಚಿತ್ರದ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ಬ್ಲಾಕ್‌ ಬಸ್ಟರ್‌ ಬಹಳ ದಿನಗಳ ನಂತರ ವಿಜಯ್‌ ದೇವರಕೊಂಡಗೆ ಮತ್ತೆ ಬ್ರೇಕ್‌ ಸಿಕ್ಕಿದೆ ಎನ್ನುತ್ತಿದ್ದಾರೆ. ಥಿಯೇಟರ್‌ಗಳಲ್ಲಿ ಅಭಿಮಾನಿಗಳು ಚಿತ್ರದ ಹಾಡುಗಳು ಹಾಗೂ ಕೆಲವೊಂದು ದೃಶ್ಯಗಳಿಗೆ ಹೂವು, ಪೇಪರ್‌ ತುಂಡುಗಳನ್ನು ಎರಚಾಡಿ ಸಂಭ್ರಮಿಸಿದ್ದಾರೆ. ನಟ ಸಾಯಿ ಧರಮ್‌ ತೇಜ ಗುರುವಾರ ಚಿತ್ರತಂಡಕ್ಕೆ ವಿಶ್‌ ಮಾಡಿ ಖುಷಿ ಸಿನಿಮಾ ಸಕ್ಸಸ್‌ ಆಗಲಿ, ನಾನೂ ಸಿನಿಮಾ ನೋಡುತ್ತೇನೆ ಎಂದು ಶುಭ ಕೋರಿದ್ದರು.

ಚಿತ್ರತಂಡಕ್ಕೆ ಶುಭ ಹಾರೈಸಿದ ಪ್ರಭಾಸ್ ಅಭಿಮಾನಿಗಳು

''ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ಗೀತಗೋವಿಂದಂ ನಂತರ ವಿಜಯ್‌ ದೇವರಕೊಂಡ ಕಂಪ್ಲೀಟ್‌ ಹಿಟ್‌ ಸಿನಿಮಾ ನೀಡಿದ್ಧಾರೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ'' ಎಂದು ಸ್ಟಾರ್‌ ನಟ ಪ್ರಭಾಸ್‌ ಅಭಿಮಾನಿಗಳು ಕೂಡಾ ಖುಷಿ ಸಿನಿಮಾ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ. ವಿಜಯ್‌ ದೇವರಕೊಂಡ ಸಹೋದರ ಆನಂದ್‌ ದೇವರಕೊಂಡ ಕೂಡಾ ಅಣ್ಣನ ಸಿನಿಮಾ ನೋಡಿ ಸಂತೋಷ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ 'ಖುಷಿ' ಸಿನಿಮಾ ಅಭಿಮಾನಿಗಳಿಗೆ ಖುಷಿ ನೀಡಿರುವುದಂತೂ ನಿಜ.

'ಖುಷಿ' ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ ಬ್ಯಾನರ್‌ ಅಡಿ ನವೀನ್‌ ಯರನೇನಿ, ರವಿಶಂಕರ್‌ ನಿರ್ಮಿಸಿದ್ದು ಶಿವ ನಿರ್ವಾಣ ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದ ಹಾಡುಗಳಿಗೆ ಹೇಷಮ್‌ ಅಬ್ದುಲ್‌ ವಾಹಬ್‌ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಸಚಿನ್‌ ಖೇಡೇಕರ್‌, ಮುರಳಿ ಶರ್ಮಾ, ವೆನ್ನಿಲಾ ಕಿಶೋರ್‌, ಜಯರಾಮ್‌, ಆಲಿ ಹಾಗೂ ಇನ್ನಿತರರು ನಟಿಸಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ