logo
ಕನ್ನಡ ಸುದ್ದಿ  /  ಮನರಂಜನೆ  /  ತ್ರಿಷಾಳನ್ನು ಅತ್ಯಾಚಾರ ಮಾಡುವ ಚಾನ್ಸ್‌ ಸಿಗಲೇಯಿಲ್ಲ!‌ ನಟ ಮನ್ಸೂರ್‌ ಅಲಿಖಾನ್ ಉದ್ಧಟತನದ ಮಾತಿಗೆ ನಟಿ ಗರಂ

ತ್ರಿಷಾಳನ್ನು ಅತ್ಯಾಚಾರ ಮಾಡುವ ಚಾನ್ಸ್‌ ಸಿಗಲೇಯಿಲ್ಲ!‌ ನಟ ಮನ್ಸೂರ್‌ ಅಲಿಖಾನ್ ಉದ್ಧಟತನದ ಮಾತಿಗೆ ನಟಿ ಗರಂ

Nov 19, 2023 04:20 PM IST

google News

ಛೇ.. ತ್ರಿಷಾಳನ್ನು ಅತ್ಯಾಚಾರ ಮಾಡುವ ಚಾನ್ಸ್‌ ಸಿಗಲೇಯಿಲ್ಲ!‌ ನಟ ಮನ್ಸೂರ್‌ ಅಲಿಖಾನ್ ಉದ್ಧಟತನದ ಮಾತಿಗೆ ನಟಿ ಗರಂ

    • ಸೌತ್‌ನ ಸ್ಟಾರ್‌ ನಟಿ ತ್ರಿಷಾ ಕೃಷ್ಣನ್‌ ಬಗ್ಗೆ ನಟ ಮನ್ಸೂರ್‌ ಅಲಿಖಾನ್‌ ಉದ್ಧಟತನದ ಹೇಳಿಕೆ ನೀಡಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ನಡುವೆ ಇನ್ಯಾವತ್ತೂ ಆತನ ಜತೆಗೆ ನಾನು ನಟಿಸಲ್ಲ ಎಂದಿದ್ದಾರೆ. 
ಛೇ.. ತ್ರಿಷಾಳನ್ನು ಅತ್ಯಾಚಾರ ಮಾಡುವ ಚಾನ್ಸ್‌ ಸಿಗಲೇಯಿಲ್ಲ!‌ ನಟ ಮನ್ಸೂರ್‌ ಅಲಿಖಾನ್ ಉದ್ಧಟತನದ ಮಾತಿಗೆ ನಟಿ ಗರಂ
ಛೇ.. ತ್ರಿಷಾಳನ್ನು ಅತ್ಯಾಚಾರ ಮಾಡುವ ಚಾನ್ಸ್‌ ಸಿಗಲೇಯಿಲ್ಲ!‌ ನಟ ಮನ್ಸೂರ್‌ ಅಲಿಖಾನ್ ಉದ್ಧಟತನದ ಮಾತಿಗೆ ನಟಿ ಗರಂ

Trisha Krishnan: ಸೌತ್‌ನ ಸ್ಟಾರ್‌ ನಟಿ ತ್ರಿಷಾ ಕೃಷ್ಣನ್‌ ಇತ್ತೀಚೆಗಷ್ಟೇ ದಳಪತಿ ವಿಜಯ್‌ ಅವರ ಲಿಯೋ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಸಿನಿಮಾ ಒಳ್ಳೆಯ ವಿಮರ್ಶೆ ಜತೆಗೆ ಕಲೆಕ್ಷನ್‌ ವಿಚಾರದಲ್ಲೂ ಸದ್ದು ಮಾಡಿತ್ತು. ಇದೀಗ ಇದೇ ಚಿತ್ರದಲ್ಲಿ ನಟಿಸಿದ್ದ ಮತ್ತೋರ್ವ ನಟ ಮನ್ಸೂರ್‌ ಅಲಿಖಾನ್‌, ತ್ರಿಷಾ ಕೃಷ್ಣನ್‌ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾರೆ. ತುಚ್ಯವಾಗಿ ನಟಿಯ ಬಗ್ಗೆ ಮಾತನಾಡಿ, ಹೀನಾಯ ಟೀಕೆಗೆ ಗುರಿಯಾಗಿದ್ದಾರೆ.

ಸಿನಿಮಾಗಳಲ್ಲಿ ಖಳನಟನಾಗಿಯೇ ಹೆಚ್ಚು ಗುರುತಿಸಿಕೊಂಡಿದ್ದಾರೆ ಮನ್ಸೂರ್‌ ಅಲಿಖಾನ್‌. ಲಿಯೋ ಸಿನಿಮಾದಲ್ಲೂ ಖಳನ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದಾರೆ. ಖಳನ ಪಾತ್ರದಲ್ಲಿ ನಟಿಸುತ್ತಿದ್ದಾಗ ನಾಯಕಿಯರ ಜತೆಗೆ ಅತ್ಯಾಚಾರ ದೃಶ್ಯಗಳಲ್ಲೂ ಇವರು ಹೆಚ್ಚು ನಟಿಸಿದ್ದಾರೆ. ಇದೀಗ ಆ ಬಯಕೆ ಲಿಯೋ ಸಿನಿಮಾದಲ್ಲಿ ಸಿಗಲಿಲ್ಲ ಎಂದಿದ್ದಾರೆ. ತ್ರಿಷಾ ಅವರನ್ನೇ ಗುರಿಯಾಗಿಸಿಕೊಂಡು ಮನ್ಸೂರ್‌ ಅಲಿಖಾನ್‌ ಆಡಿದ ಮಾತು ಸದ್ಯ ಸಂಚಲನ ಸೃಷ್ಟಿಸಿದೆ.

ತ್ರಿಷಾ ಜತೆ ಅತ್ಯಾಚಾರದ ದೃಶ್ಯ ಮಿಸ್‌ ಆಯ್ತು..

“ಲಿಯೋ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂದು ತಿಳಿದಾಗ ತ್ರಿಷಾ ಜೊತೆ ಅತ್ಯಾಚಾರದ ದೃಶ್ಯ ಬರಬಹುದೆಂಬ ನಿರೀಕ್ಷೆಯಲ್ಲಿದ್ದೆ. ತ್ರಿಷಾಳನ್ನು ನನ್ನ ತೋಳುಗಳಲ್ಲಿ ಎತ್ತಿಕೊಂಡು ಬರುವ ದೃಶ್ಯವೊಂದು ಬರಬಹುದೆಂದು ಊಹಿಸಿದ್ದೆ. ಆಕೆಯ ಜತೆಗೆ ಬೆಡ್‌ರೂಮ್‌ ದೃಶ್ಯಗಳಲ್ಲಿ ನಟಿಸುವೆ ಎಂದುಕೊಂಡಿದ್ದೆ. ಆದರೆ ನಿರ್ದೇಶಕ ಲೋಕೇಶ್ ಕನಕರಾಜ್, ಕನಿಷ್ಠ ಪಕ್ಷ ತ್ರಿಷಾ ಅವರನ್ನೂ ತೋರಿಸಲಿಲ್ಲ. ನಾನು ಈಗಾಗಲೇ ಸಾಕಷ್ಟು ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ. ಆದರೆ, ತ್ರಿಷಾ ಜತೆಗೆ ಇದು ನನಗೆ ಹೊಸದು ಎಂದು ನಾನು ಭಾವಿಸಿದ್ದೆ" ಎಂದು ಮನ್ಸೂರ್‌ ಅಲಿಖಾನ್‌ ಹೇಳಿಕೆ ನೀಡಿದ್ದರು.

ಮನ್ಸೂರ್‌ ಮಾತಿಗೆ ತ್ರಿಷಾ ಕೆಂಡ

ಮನ್ಸೂರ್‌ ಆಲಿಖಾನ್‌ ಆಡಿದ ಮಾತುಗಳು ವೈರಲ್‌ ಆಗುತ್ತಿದ್ದಂತೆ, ಇದು ತ್ರಿಷಾ ಗಮನಕ್ಕೂ ಬಂದಿದೆ. ಕೊಂಚ ಖಾರವಾಗಿಯೇ ಮಾತನಾಡಿರುವ ತ್ರಿಷಾ, ಇನ್ನೊಮ್ಮೆ ಆ ವ್ಯಕ್ತಿ ಜತೆಗೆ ಯಾವುದೇ ಸಿನಿಮಾ ಮಾಡುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸುದೀರ್ಘವಾದ ಬರಹವೊಂದನ್ನು ಬರೆದುಕೊಂಡಿದ್ದಾರೆ.

"ಮನ್ಸೂರ್ ಅಲಿ ಖಾನ್ ನನ್ನ ಬಗ್ಗೆ ಅಸಹ್ಯವಾಗಿ ಮತ್ತು ಕೆಟ್ಟದಾಗಿ ಮಾತನಾಡಿರುವ ವೀಡಿಯೊವನ್ನು ನಾನು ನೋಡಿದ್ದೇನೆ. ಆ ಮಾತುಗಳನ್ನು ನಾನು ಖಂಡಿಸುತ್ತೇನೆ. ಇದು ಕೆಟ್ಟತನದ ಪರಮಾವಧಿ, ಅಗೌರವ, ಸ್ತ್ರೀದ್ವೇಷ ಮತ್ತು ಅಷ್ಟೇ ಅಸಹ್ಯಕರ. ಇನ್ಮೇಲೆ ನಾನು ಎಂದಿಗೂ ಆ ನೀಚ ವ್ಯಕ್ತಿಯೊಂದಿಗೆ ತೆರೆ ಹಂಚಿಕೊಳ್ಳುವುದಿಲ್ಲ. ಅವರಂಥವರು ಮನುಕುಲಕ್ಕೇ ಕೆಟ್ಟ ಹೆಸರು" ಎಂದು ಕಿಡಿ ಕಾರಿದ್ದಾರೆ. ನಟಿಯ ಈ ಕಾಮೆಂಟ್‌ಗೆ ಚಿತ್ರರಂಗದ ಸಾಕಷ್ಟು ಮಂದಿ ಬೆಂಬಲ ಸೂಚಿಸಿ, ಮನ್ಸೂರ್‌ ಅಲಿಖಾನ್‌ ಮಾತಿನ ಬಗ್ಗೆ ಅಸಮಾಧಾನ ಹೊರಹಾಕುತ್ತಿದ್ದಾರೆ.

ಮನ್ಸೂರ್‌ ಅಲಿಖಾನ್‌ ಪ್ರತಿಕ್ರಿಯೆ

"ನಾನು ನನ್ನ ಮಹಿಳಾ ಸಹ- ನಟರನ್ನು ಗೌರವಿಸುತ್ತೇನೆ. ತ್ರಿಶಾ ಅವರು ಎಡಿಟ್ ಮಾಡಿದ ವಿಡಿಯೋ ನೋಡಿದ್ದಾರೆ. ಯಾರಾದರೂ ಅನುಚಿತವಾಗಿ ವರ್ತಿಸಿದರೆ, ನಾನು ಹೆದರುವವನಲ್ಲ. ನಾನು ಅಂತಹ ಕೆಲಸವನ್ನು ಮಾಡುವವನಲ್ಲ. ಏಕೆಂದರೆ ನನ್ನ ಮಗಳು ತ್ರಿಷಾ ಅವರ ದೊಡ್ಡ ಅಭಿಮಾನಿ. ಇವುಗಳನ್ನು ಬಿಟ್ಟು ಬೇರೆ ವಿಚಾರಗಳತ್ತ ಗಮನ ಹರಿಸಿ" ಎಂದು ಮನ್ಸೂರ್ ಅಲಿ ಖಾನ್ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ