logo
ಕನ್ನಡ ಸುದ್ದಿ  /  Karnataka  /  13.8 Crore Collected In Two Days After 50% Rebate On Traffic Fines In Karnataka

Karnataka traffic fine discount: ಡಿಸ್ಕೌಂಟ್‌ ದರದಲ್ಲಿ ಟ್ರಾಫಿಕ್‌ ಶುಲ್ಕ ಕಟ್ಟಲು ಮುಗಿಬಿದ್ದ ಜನರು, ಭರ್ಜರಿ ದಂಡ ಸಂಗ್ರಹ

Praveen Chandra B HT Kannada

Feb 05, 2023 10:35 AM IST

ಡಿಸ್ಕೌಂಟ್‌ ದರದಲ್ಲಿ ಟ್ರಾಫಿಕ್‌ ಶುಲ್ಕ ಕಟ್ಟಲು ಮುಗಿಬಿದ್ದ ಜನರು, ಭರ್ಜರಿ ದಂಡ ಸಂಗ್ರಹ

    • ನಿನ್ನೆ ಒಂದೇ ದಿನ 2.52 ಲಕ್ಷ ವಾಹನಗಳಿಂದ 6.80 ಕೋಟಿ ರೂ. ದಂಡ ಸಂಗ್ರಹವಾಗಿದೆ. ಎರಡು ದಿನಗಳಲ್ಲಿ ಒಟ್ಟು 13.81 ಕೋಟಿ ರೂ. ದಂಡ ಸಂಗ್ರಹವಾಗಿದೆ.
ಡಿಸ್ಕೌಂಟ್‌ ದರದಲ್ಲಿ ಟ್ರಾಫಿಕ್‌ ಶುಲ್ಕ ಕಟ್ಟಲು ಮುಗಿಬಿದ್ದ ಜನರು, ಭರ್ಜರಿ ದಂಡ ಸಂಗ್ರಹ
ಡಿಸ್ಕೌಂಟ್‌ ದರದಲ್ಲಿ ಟ್ರಾಫಿಕ್‌ ಶುಲ್ಕ ಕಟ್ಟಲು ಮುಗಿಬಿದ್ದ ಜನರು, ಭರ್ಜರಿ ದಂಡ ಸಂಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣದ ಬಾಕಿ ದಂಡ ಪಾವತಿಗೆ ರಾಜ್ಯ ಸರಕಾರವು ಶೇಕಡ 50ರಷ್ಟು ವಿನಾಯಿತಿ ಪ್ರಕಟಿಸಿದ್ದರಿಂದ ಕಳೆದ ಎರಡು ದಿನಗಳಲ್ಲಿ ಭರ್ಜರಿ ದಂಡ ಸಂಗ್ರಹವಾಗಿದೆ. ನಿನ್ನೆ ಒಂದೇ ದಿನ 2.52 ಲಕ್ಷ ವಾಹನಗಳಿಂದ 6.80 ಕೋಟಿ ರೂ. ದಂಡ ಸಂಗ್ರಹವಾಗಿದೆ. ಎರಡು ದಿನಗಳಲ್ಲಿ ಒಟ್ಟು 13.81 ಕೋಟಿ ರೂ. ದಂಡ ಸಂಗ್ರಹವಾಗಿದೆ.

ಟ್ರೆಂಡಿಂಗ್​ ಸುದ್ದಿ

Bangalore News: ಶೂನ್ಯ ಮಳೆಯೊಂದಿಗೆ ಏಪ್ರಿಲ್ ತಿಂಗಳು ಮುಗಿಸಿದ ಬೆಂಗಳೂರು; 1983ರ ಬಳಿಕ ಇದೇ ಮೊದಲು; ವರದಿ

Tumkur News: ತುಮಕೂರಲ್ಲಿ ಕಾಡು ಪ್ರಾಣಿಗಳಿಗೆ ನೀರು ಹಂಚುವ ಜಲದಾನಿಗಳು, ಅರಣ್ಯ ಇಲಾಖೆ ಸಾಥ್

ಕರ್ನಾಟಕ ಹವಾಮಾನ ಮೇ 2: ಬೆಂಗಳೂರು ಸೇರಿ ರಾಜ್ಯದಲ್ಲಿ ಇನ್ನೂ 3 ದಿನ ರಣ ಬಿಸಿಲು; ಇಂದು 25 ಜಿಲ್ಲೆಗಳಿಗೆ ಶಾಖದ ಅಲೆಯ ಎಚ್ಚರಿಕೆ

Kalburgi News: ಬಿಜೆಪಿ ಮೀಸಲಾತಿ ವಿರೋಧಿ, ಸುಳ್ಳು ಹೇಳುವ ನರೇಂದ್ರ ಮೋದಿಯವರ ನಿಜಬಣ್ಣ ಬಯಲು: ಸಿಎಂ ಸಿದ್ದರಾಮಯ್ಯ ಕಟುಟೀಕೆ

44 ಬಗೆಯ ಎಲ್ಲಾ ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಗೆ ವಿನಾಯಿತಿ ನೀಡಲಾಗಿತ್ತು. ಹೀಗಾಗಿ, ರಾಜ್ಯದಾದ್ಯಂತ ವಾಹನ ಸವಾರರು ತಮ್ಮ ವಾಹನಗಳ ಮೇಲೆ ವಿಧಿಸಲಾಗಿರುವ ದಂಡ ಪಾವತಿಗೆ ಮುಗಿ ಬಿದ್ದಿದ್ದಾರೆ. ಡಿಜಿಟಲ್‌ ಪಾವತಿ ಅನುಭವ ಇರುವವರು ಪೇಟಿಎಂ ಇತ್ಯಾದಿಗಳಲ್ಲಿ ಹಣ ಪಾವತಿಸಿದರೆ ಉಳಿದವರು ಸಂಚಾರ ಪೊಲೀಸರ ಮೂಲಕ, ಟ್ರಾಫಿಕ್‌ ಪೊಲೀಸ್‌ ಕಚೇರಿಗಳ ಮೂಲಕ ಸರತಿಯಲ್ಲಿ ನಿಂತು ದಂಡ ಪಾವತಿಸಿದ್ದಾರೆ.

ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಶಿಫಾರಸಿನ ಮೇರೆಗೆ ದಂಡದ ಮೊತ್ತದಲ್ಲಿ ಶೇಕಡ 50ರಷ್ಟು ರಿಯಾಯಿತಿ ನೀಡಲು ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಫೆಬ್ರವರಿ 11ರವರೆಗೆ ಮಾತ್ರ ಈ "ಆಫರ್‌" ಇರಲಿದೆ. ರಿಯಾಯಿತಿ ಆರಂಭಗೊಂಡ ‌ಮೊದಲ ದಿನದಂದು 5.6 ಕೋಟಿ ಸಂಗ್ರಹವಾಗಿತ್ತು. ಎರಡನೇ ದಿನ 6,80,72,500 ರೂಪಾಯಿ ದಂಡ ಸಂಗ್ರಹವಾಗಿದೆ. ಇಂದು ಭಾನುವಾರದ ಬಿಡುವಿನ ವೇಳೆಯಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ದಂಡ ಪಾವತಿಸುವ ನಿರೀಕ್ಷೆಯಿದ್ದು, ಸಂಜೆಯ ವೇಳೆಗೆ ಲೆಕ್ಕ ದೊರಕಲಿದೆ.

ನಿಗದಿತ ದಿನಾಂಕದಂದು ಬಾಕಿ ಪ್ರಕರಣಗಳನ್ನು ಇತ್ಯಾರ್ಥ ಮಾಡಿಕೊಳ್ಳುವರಿಗೆ ಮಾತ್ರ ಇದು ಅನ್ವಯ ಆಗಲಿದೆ. ಆನಂತರ ಬಂದವರಿಗೆ ವಿನಾಯಿತಿ ಸಿಗುವುದಿಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ. ರಿಯಾಯಿತಿಯ ಪಾವತಿಗೆ ರಾಜ್ಯ ಸರ್ಕಾರ ಫೆ.11ರವರೆಗೆ ಅವಕಾಶ ನೀಡಿದ್ದು ದಂಡ ಸಂಗ್ರಹವು 50 ಕೋಟಿಗೂ ಮಿಗಿಲಾಗುವ ಸಾಧ್ಯತೆಯಿದೆ.

ಬೆಂಗಳೂರು ನಗರದ ಸಂಚಾರ ಪೊಲೀಸ್‌ ಠಾಣೆಗಳು ಮಾತ್ರವಲ್ಲದೆ, ಇನ್ಫಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರ(ಟಿಎಂಸಿ)ದಲ್ಲಿ ಕೌಂಟರ್‌ ತೆರೆದು ಬಾಕಿ ದಂಡದ ಮೊತ್ತ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿ ರಾಜ್ಯದ ವಿವಿಧೆಡೆ ಹೆಚ್ಚುವರಿ ಕೌಂಟರ್‌ಗಳನ್ನು ತೆರೆದು ದಂಡ ಸ್ವೀಕಾರ ಮಾಡಲಾಗುತ್ತಿದೆ.

ಪಿಡಿಎ, ಪೇಟಿಎಂ, ಟಿಎಂಸಿ, ಬೆಂಗಳೂರು ಒನ್‌/ಕರ್ನಾಟಕ ಒನ್‌ಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಜನರು ದಂಡ ಪಾವತಿಸುತ್ತಿದ್ದಾರೆ. ಕೆಲವೊಮ್ಮೆ ಕರ್ನಾಟಕ ಒನ್‌ ವೆಬ್‌ ಸ್ಲೋ ಅಥವಾ ಅನ್‌ರೆಸ್ಪಾನ್ಸಿವ್‌ ಆಗಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ದಂಡ ಪಾವತಿಸುತ್ತಿರುವುದರಿಂದ ಸರ್ವರ್‌ಗೆ ಅಧಿಕ ಒತ್ತಡ ಬಿದ್ದು ಈ ರೀತಿಯಾಗುತ್ತದೆ. ಕೊಂಚ ಸಮಯ ಕಳೆದ ಬಳಿಕ ಪ್ರಯತ್ನಿಸಿದರೆ ದಂಡ ಪಾವತಿಸಲು ಸಾಧ್ಯವಾಗುತ್ತದೆ. ಫೆಬ್ರವರಿ 11ರವರೆಗೆ ಕಾಯದೆ ಅದಕ್ಕೂ ಮೊದಲೇ ದಂಡ ಪಾವತಿಸುವುದು ಉತ್ತಮ. ಏಕೆಂದರೆ, ರಿಯಾಯಿತಿ ಮುಗಿಯುವ ದಿನಗಳಲ್ಲಿ ಸರ್ವರ್‌ ಮೇಲೆ ಹೆಚ್ಚಿನ ಹೊರೆ ಬೀಳಲಿದೆ.

ದಂಡದ ಮೊತ್ತ ಬಾಕಿ ಉಳಿಸಿಕೊಂಡಿರುವವರು ಇದೇ ಫೆಬ್ರವರಿ 11ರೊಳಗೆ ದಂಡ ಕಟ್ಟಿದರೆ ಅವರಿಗೆ ರಿಯಾಯಿತಿ ದೊರಕಲಿದೆ. ಫೆಬ್ರವರಿ 11ರಂದು ರಾಜ್ಯಾದ್ಯಂತ ರಾಷ್ಟ್ರೀಯ ಲೋಕ ಅದದಾಲತ್‌ ನಡೆಯಲಿದ್ದು, ಆ ಹಿನ್ನಲೆಯಲ್ಲಿ ಈ ಡಿಸ್ಕೌಂಟ್‌ ನೀಡಲಾಗಿದೆ. ದಂಡದ ಮೊತ್ತ ಬಾಕಿ ಉಳಿಸಿಕೊಂಡವರು ಈ ಅವಕಾಶವನ್ನು ಬಳಸಿಕೊಂಡು ಶೇಕಡ 50ರಷ್ಟು ಹಣ ಉಳಿಸಿಕೊಳ್ಳಬಹುದಾಗಿದೆ.

2022ರಲ್ಲಿ ತೆಲಂಗಾಣದಲ್ಲಿಯೂ ಇಂತಹ ಕೊಡುಗೆ ಪ್ರಕಟಿಸಲಾಗಿತ್ತು. ಅಲ್ಲಿ ವಿನಾಯಿತಿ ದೊರಕಿದ್ದರಿಂದ ಜನರು ಸರದಿಯಲ್ಲಿ ನಿಂತು ಬಾಕಿ ಪಾವತಿಸಿದ್ದರು. ಅಲ್ಲಿನ ಆದೇಶಗಳ ಪ್ರತಿ ತರಿಸಿಕೊಂಡು ನ್ಯಾಯಮೂರ್ತಿ ವೀರಪ್ಪರವರ ಅಧ್ಯಕ್ಷತೆಯಲ್ಲಿ ಈ ಕುರಿತು ಚರ್ಚಿಸಿ ವಿನಾಯಿತಿ ಪ್ರಕಟಿಸಲಾಗಿದೆ.

ಬಾಕಿ ಇರುವ ದಂಡದ ವಿವರಗಳನ್ನು ವೀಕ್ಷಿಸುವ ಮತ್ತು ಪಾವತಿಸುವ ವಿಧಾನ

  • ಕರ್ನಾಟಕ ಒನ್‌ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ.
  • ಪೇ ಟಿಎಂ ಆಪ್ ಮುಖಾಂತರವು ಉಲ್ಲಂಘನೆಯ ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ.
  • ಹತ್ತಿರ ಸಂಚಾರ ಪೊಲೀಸ್ ಠಾಣೆಗಳಲ್ಲಿ ನಿಮ್ಮ ವಾಹನದ ನೊಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ ಪಡೆಯಬಹುದಾಗಿರುತ್ತದೆ, ದಂಡವನ್ನು ಮೊತ್ತವನ್ನು ಪಾವತಿಸಿ ರಶೀದಿಯನ್ನು ಪಡೆದುಕೊಳ್ಳಬಹುದಾಗಿದೆ.
  • ಬೆಂಗಳೂರು ಸಂಚಾರ ನಿರ್ವಹಣ ಕೇಂದ್ರದ ಮೊದಲನೆ ಮಹಡಿಯಲ್ಲೂ ಸಹ ಪಾವತಿಸಬಹುದಾಗಿದೆ.

    ಹಂಚಿಕೊಳ್ಳಲು ಲೇಖನಗಳು