logo
ಕನ್ನಡ ಸುದ್ದಿ  /  Karnataka  /  Aap Urges Cm Bommai To Extend Deadline Of 50% Exemption On Payment Of Outstanding Traffic Fine

AAP: ದಂಡದ ಬಾಕಿ ಮೊತ್ತ ಪಾವತಿಗೆ 50% ವಿನಾಯಿತಿ: ಕಾಲಮಿತಿ ವಿಸ್ತರಿಸಿ ಬಡ ವಾಹನ ಸವಾರರಿಗೆ ನೆರವಾಗಲು ಸಿಎಂಗೆ ಎಎಪಿ ಪತ್ರ

HT Kannada Desk HT Kannada

Feb 05, 2023 07:32 PM IST

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ

    • ರಸ್ತೆ ನಿಯಮ ಉಲ್ಲಂಘನೆಯ ದಂಡದ ಬಾಕಿ ಮೊತ್ತ ಪಾವತಿಯ ಶೇ. 50 ವಿನಾಯಿತಿಯ ಕಾಲಮಿತಿಯನ್ನು ಮೂರು ತಿಂಗಳು ವಿಸ್ತರಿಸಬೇಕೆಂದು ಆಗ್ರಹಿಸಿ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ ಆಗ್ರಹಿಸಿದ್ದಾರೆ.
ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ
ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ

ಬೆಂಗಳೂರು: ರಸ್ತೆ ನಿಯಮ ಉಲ್ಲಂಘನೆಯ ದಂಡದ ಬಾಕಿ ಮೊತ್ತ ಪಾವತಿಯ ಶೇ. 50 ವಿನಾಯಿತಿಯ ಕಾಲಮಿತಿಯನ್ನು ಮೂರು ತಿಂಗಳು ವಿಸ್ತರಿಸಬೇಕೆಂದು ಆಗ್ರಹಿಸಿ ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ ಆಗ್ರಹಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬೀದರ್‌ನಲ್ಲಿ ಭೀಕರ ಅಪಘಾತ; ವಿದ್ಯುತ್ ಕಂಬಕ್ಕೆ ಕ್ರೂಸರ್ ವಾಹನ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಸಾವು, ಇಬ್ಬರ ಸ್ಥಿತಿ ಗಂಭೀರ

ಬೆಂಗಳೂರಿನಲ್ಲಿ ಏರಿಯೇಟರ್‌ ಅಳವಡಿಕೆ ಗಡುವು ಮೇ 7 ರವರೆಗೆ ವಿಸ್ತರಣೆ; ಮರುದಿನದಿಂದಲೇ ದಂಡ ವಿಧಿಸುವ ಪ್ರಕ್ರಿಯೆಗೆ ಚಾಲನೆ

Mangalore News: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ 52ನೇ ವರ್ಷದ ಸಾಮೂಹಿಕ ವಿವಾಹ; ದಾಂಪತ್ಯ ಜೀವನಕ್ಕೆ ಕಾಲಿಟ್ಟ 123 ಜೋಡಿಗಳು

Bengaluru Crime News: ಸಹಪಾಠಿ ಬಳಿ 35 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿದ ಆರೋಪ; 10ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ಬಂಧನ

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದ ಜಗದೀಶ್‌ ವಿ ಸದಂ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಶಿಫಾರಸಿನಂತೆ, ವಾಹನ ಸವಾರರು ಬಾಕಿ ಉಳಿಸಿಕೊಂಡಿರುವ ದಂಡವನ್ನು ಫೆಬ್ರವರಿ 11ರೊಳಗೆ ಪಾವತಿಸಿದಲ್ಲಿ ಶೇ. 50% ವಿನಾಯಿತಿ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೀಗೆ ವಿನಾಯಿತಿ ನೀಡುವ ಮೂಲಕ ವಾಹನ ಸವಾರರಿಗೆ ನೆರವಾಗುವುದು ಸ್ವಾಗತಾರ್ಹ. ಆದರೆ ಅತ್ಯಲ್ಪ ಅವಧಿಯ ಕಾಲಮಿತಿ ನಿಗದಿಪಡಿಸುವ ಮೂಲ ಕೇವಲ ಶ್ರೀಮಂತ ವಾಹನ ಸವಾರರಿಗೆ ಮಾತ್ರ ನೆರವಾಗಲು ರಾಜ್ಯ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ಹೇಳಿದ್ದಾರೆ.

ಕೇವಲ ಒಂದು ವಾರಗಳ ಸಮಯಾವಕಾಶ ನೀಡುವುದರಿಂದ ಬಡ ಮತ್ತು ಮಧ್ಯಮ ವರ್ಗದ ವಾಹನ ಸವಾರರಿಗೆ ಹಣ ಹೊಂದಿಸಲು ಕಷ್ಟವಾಗುತ್ತದೆ. ಅಲ್ಲದೇ, ಅನೇಕ ವಾಹನ ಸವಾರರು ತಮ್ಮ ಮಕ್ಕಳ ಶಾಲಾ ಶುಲ್ಕ ಪಾವತಿಸುವುದು ಸೇರಿದಂತೆ ನಾನಾ ರೀತಿಯ ಅಗತ್ಯ ಖರ್ಚುಗಳು ಈ ಸಮಯದಲ್ಲಿರುತ್ತದೆ. ವಿನಾಯಿತಿಯನ್ನು ಯೋಜನೆಯನ್ನು ದಿಢೀರ್‌ ಘೋಷಿಸಿರುವುದರಿಂದ ಮೊದಲೇ ಹಣವನ್ನು ಕೂಡಿಟ್ಟುಕೊಳ್ಳಲೂ ವಾಹನ ಸವಾರರಿಗೆ ಅವಕಾಶ ಸಿಕ್ಕಿರುವುದಿಲ್ಲ. ಆದ್ದರಿಂದ ಮುಖ್ಯಮಂತ್ರಿಯವರು ಈ ವಿನಾಯಿತಿ ಯೋಜನೆಯ ಕಾಲಮಿತಿಯನ್ನು ಮೂರು ತಿಂಗಳ ತನಕ ವಿಸ್ತರಿಸಬೇಕು. ಈ ಮೂಲಕ ಬಡ ಹಾಗೂ ಮಧ್ಯಮ ವರ್ಗದ ವಾಹನ ಸವಾರರಿಗೂ ವಿನಾಯಿತಿಯ ಫಲಾನುಭವ ಸಿಗುವಂತೆ ಮಾಡಬೇಕು ಎಂದು ಜಗದೀಶ್‌ ವಿ ಸದಂ ಕೇಳಿಕೊಂಡಿದ್ದಾರೆ.

ಮೊನ್ನೆ ಶುಕ್ರವಾರ ಮತ್ತು ಶನಿವಾರ ಈ ಎರಡು ದಿನಗಳಲ್ಲಿ ರಾಜ್ಯದಾದ್ಯಂತ ಒಟ್ಟು 14.6 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದ್ದದೆ. ಈ ಪೈಕಿ ಬೆಂಗಳೂರಿನಲ್ಲೇ 6.8 ಕೋಟಿ ರೂಪಾಯಿಗಳ ದಂಡ ಸಂಗ್ರಹವಾಗಿದೆ. ಸಂಚಾರಿ ನಿಯಮ ಉಲ್ಲಂಘನೆಯ ದಂಡ ಪಾವತಿ ಅವಧಿಯನ್ನು ವಿಸ್ತರಿಸಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಈ ಹಿನ್ನೆಲೆ ಆಮ್​ ಆದ್ಮಿ ಪಾರ್ಟಿ ಸರ್ಕಾರಕ್ಕೆ ಒತ್ತಾಯಿಸಿದೆ.

ಶಾಸಕ ಎನ್‌.ಎ.ಹ್ಯಾರಿಸ್‌ ಬೆಂಬಲಿಗರ ಬಂಧನಕ್ಕೆ ಎಎಪಿ ಒತ್ತಾಯ

ಇನ್ನು ಸರ್ಕಾರಿ ಶಾಲೆಯ ಮೂಲಸೌಕರ್ಯಗಳ ಪರಿಶೀಲನೆ ಸಂದರ್ಭದಲ್ಲಿ ಶಾಸಕ ಎನ್‌.ಎ.ಹ್ಯಾರಿಸ್‌ ಜೊತೆಗೆ ಆಗಮಿಸಿದ ಅವರ ಬೆಂಬಲಿಗರು ನಿಂದಿಸಿ ಬೆದರಿಕೆ ಹಾಕಿರುವ ಆರೋಪ ಶಾಂತಿನಗರದಲ್ಲಿ ಕೇಳಿ ಬಂದಿದೆ. ಈ ಸಂಬಂಧ ಆರೋಪಿಗಳನ್ನು ಶೀಘ್ರ ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಆಮ್‌ ಆದ್ಮಿ ಪಾರ್ಟಿ ರಾಜ್ಯ ಕಾರ್ಯದರ್ಶಿ ಹಾಗೂ ಶಾಂತಿನಗರ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಕೆ.ಮಥಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ಆಶೋಕನಗರ ಪೊಲೀಸ್‌ ಠಾಣೆಗೆ ದೂರು ನೀಡಿ ಮಾತನಾಡಿದ ಕೆ.ಮಥಾಯಿ, ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಆಮ್‌ ಆದ್ಮಿ ಪಾರ್ಟಿ ಪರ ಮನೆ ಮನೆ ಪ್ರಚಾರ ಮಾಡಿದ ಸಂದರ್ಭದಲ್ಲಿ, ಇಲ್ಲಿನ ಸರ್ಕಾರಿ ಶಾಲೆಗಳು ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಕನಿಷ್ಠ ಮೂಲಸೌಕರ್ಯಗಳು ಕೂಡ ಸರಿಯಾಗಿಲ್ಲ ಎಂದು ಜನರು ಅಳಲು ತೋಡಿಕೊಂಡರು.

ಈ ಕುರಿತು ಪರಿಶೀಲನೆಗೆ ಮುಂದಾದೆವು. ನೀಲಸಂದ್ರದ ಸರ್ಕಾರಿ ಉರ್ದು ಶಾಲೆಗೆ ಶಾಸಕ ಎನ್.ಎ.ಹ್ಯಾರಿಸ್‌ರವರೇ ಅಧ್ಯಕ್ಷರಾಗಿದ್ದು, ಅಲ್ಲಿ ಬಾಲಕಿಯರ ಶೌಚಾಲಯಕ್ಕೆ ಸರಿಯಾದ ಬಾಗಿಲಿಲ್ಲದೇ ಹೆಣ್ಣುಮಕ್ಕಳು ಮುಜುಗರ ಅನುಭವಿಸುತ್ತಿದ್ದಾರೆ. ಶಾಂತಿನಗರದ ಇನ್ನೂ ಹಲವು ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಶೌಚಾಲಯಕ್ಕೆ ಹೋಗಬೇಕಾದ ಸಂದರ್ಭ ಬಂದರೆ, ಪಾಠ ಕೇಳುವುದನ್ನು ಅರ್ಧಕ್ಕೆ ನಿಲ್ಲಿಸಿ ತಮ್ಮ ಮನೆಗೆ ಹೋಗಿಬರಬೇಕಾಗಿದೆ. ಆಸ್ಪತ್ರೆಯೊಂದರ ಕಟ್ಟಡವು ಸಂಜೆ-ರಾತ್ರಿ ವೇಳೆ ಗಾಂಜಾ ಸೇವನೆ, ಮದ್ಯ ಸೇವನೆ ಬಳಕೆಯಾಗುತ್ತಿದೆ ಎಂಬ ಆರೋಪದ ಕುರಿತು ಪರಿಶೀಲಿಸಿದಾಗ, ಅಲ್ಲಿ ಸಾಲುಸಾಲು ಮದ್ಯದ ಬಾಟಲಿಗಳು ಕಂಡುಬಂದವು ಎಂದು ಹೇಳಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು