logo
ಕನ್ನಡ ಸುದ್ದಿ  /  ಕರ್ನಾಟಕ  /  World Yoga Sports: ಯುವಕರು ಕ್ರೀಡೆ ಜೊತೆಗೆ ಯೋಗಕ್ಕೂ ಆಸಕ್ತಿ ತೋರಿದರೆ ಸಾಧನೆಯ ಮಟ್ಟ ಅತ್ಯುತ್ತಮಗೊಳಿಸಿಕೊಳ್ಳಬಹುದು: ಸಿಎಂ ಬೊಮ್ಮಾಯಿ

World Yoga Sports: ಯುವಕರು ಕ್ರೀಡೆ ಜೊತೆಗೆ ಯೋಗಕ್ಕೂ ಆಸಕ್ತಿ ತೋರಿದರೆ ಸಾಧನೆಯ ಮಟ್ಟ ಅತ್ಯುತ್ತಮಗೊಳಿಸಿಕೊಳ್ಳಬಹುದು: ಸಿಎಂ ಬೊಮ್ಮಾಯಿ

HT Kannada Desk HT Kannada

Dec 04, 2022 06:44 AM IST

ಬೆಂಗಳೂರಿನ ಎಸ್-ವ್ಯಾಸ ವಿಶ್ವವಿದ್ಯಾಲಯದಲ್ಲಿ ಅಯೋಜಿಸಲಾಗಿದ್ದ ವಿಶ್ವ ಯೋಗಾಸನ ಕ್ರೀಡೆಗಳ ವಿಶ್ವಕಪ್ 2022ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರು ಭಾಗವಹಿಸಿ ಮಾತನಾಡಿದರು

  • ಕ್ರೀಡೆಯಲ್ಲಿ ಗೆಲುವು ಸೋಲು ಎರಡೂ ಇದೆ. ಆದರೆ ಯೋಗದಲ್ಲಿ ಸದಾ ಗೆಲುವೇ ಸಿಗುತ್ತದೆ. ಯೋಗವನ್ನು ಶ್ರದ್ಧೆಯಿಂದ ಮಾಡುವವರಿಗೆ ಅನೇಕ ಉಪಯೋಗಗಳು ಆಗುತ್ತದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. 

ಬೆಂಗಳೂರಿನ ಎಸ್-ವ್ಯಾಸ ವಿಶ್ವವಿದ್ಯಾಲಯದಲ್ಲಿ ಅಯೋಜಿಸಲಾಗಿದ್ದ ವಿಶ್ವ ಯೋಗಾಸನ ಕ್ರೀಡೆಗಳ ವಿಶ್ವಕಪ್ 2022ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ  ಬೊಮ್ಮಾಯಿ ಅವರು ಭಾಗವಹಿಸಿ ಮಾತನಾಡಿದರು
ಬೆಂಗಳೂರಿನ ಎಸ್-ವ್ಯಾಸ ವಿಶ್ವವಿದ್ಯಾಲಯದಲ್ಲಿ ಅಯೋಜಿಸಲಾಗಿದ್ದ ವಿಶ್ವ ಯೋಗಾಸನ ಕ್ರೀಡೆಗಳ ವಿಶ್ವಕಪ್ 2022ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರು ಭಾಗವಹಿಸಿ ಮಾತನಾಡಿದರು

ಬೆಂಗಳೂರು: ಯೋಗಾಸನ ಮತ್ತು ಕ್ರೀಡೆಯ ಸಮ್ಮಿನಲದಿಂದ ಹೊಸ ಆಯಾಮ ದೊರಕಿದೆ. ಯುವಕರಿಗೆ ಕ್ರೀಡೆ ಆಸಕ್ತಿದಾಯಕ ವಿಷಯ. ಅದರ ಜತೆ ಯೋಗ ಸೇರಿದರೆ ಸಾಧನೆಯ ಮಟ್ಟವನ್ನು ಅತ್ಯುತ್ತಮಗೊಳಿಸಿಕೊಳ್ಳಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

MLC Election 2024: ಪ್ರಜ್ವಲ್ ಪ್ರಕರಣ ನಡುವೆಯೇ ವಿಧಾನ ಪರಿಷತ್ 6 ಸ್ಥಾನಗಳಿಗೆ ಜೂನ್ 3 ರಂದು ಚುನಾವಣೆ; ಜೂ 6 ಕ್ಕೆ ಫಲಿತಾಂಶ

Hassan Scandal; ಹಾಸನ ಹಗರಣದ ಸಂತ್ರಸ್ತೆ ನಾಪತ್ತೆ ಆತಂಕಕಾರಿ, ಪ್ರಜ್ವಲ್‌ ರೇವಣ್ಣ ಬಂಧನ ಯಾವಾಗ, ಫೇಸ್‌ಬುಕ್ ಪೋಸ್ಟಲ್ಲಿ ವಾಸು ಎಚ್‌ವಿ ಕಳವಳ

Bengaluru Rains: ದಾಖಲೆಯ ಬಿಸಿ ಕಂಡ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ; ರಣ ಬಿಸಿಲಿಗೆ ಬೆಂದ ಜನ ಫುಲ್ ಖುಷ್

NEP ಅಥವಾ SEP: ಪದವಿ ಕೋರ್ಸ್ ಪ್ರವೇಶ ಗೊಂದಲ ರಾಜ್ಯವ್ಯಾಪಿ; ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿದ್ಯಾರ್ಥಿಗಳ ಹಪಾಹಪಿ

ಬೆಂಗಳೂರಿನ ಎಸ್-ವ್ಯಾಸ ವಿಶ್ವವಿದ್ಯಾಲಯದಲ್ಲಿ ನಿನ್ನೆ ಆಯೋಜಿಸಲಾಗಿದ್ದ ವಿಶ್ವ ಯೋಗಾಸನ ಕ್ರೀಡೆಗಳ ವಿಶ್ವಕಪ್ 2022ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ, ಯೋಗ ಅಂದರೆ ದೈಹಿಕ ವ್ಯಾಯಾಮ ಅಥವಾ ದೈಹಿಕ ಶಿಸ್ತು ಅಂದುಕೊಂಡಿದ್ದೇವೆ. ಆದರೆ ಯೋಗದಲ್ಲಿ ಹಲವು ಆಯಾಮಗಳಿವೆ. ಒಂದೊಂದಕ್ಕೂ ಅದರದ್ದೇ ಆದ ಉದ್ದೇಶಗಳಿವೆ. ಕೆಲವು ವ್ಯಾಯಾಮಗಳು ಸಾಮಾನ್ಯ ಉದ್ದೇಶದವುಗಳು. ಆದರೆ ಯೋಗದ ಪ್ರತಿಯೊಂದು ಆಸನ ಸ್ಪಷ್ಟ ಉದ್ದೇಶಗಳಿಗಾಗಿ ಅನ್ವೇಷಣೆ ಮಾಡಲಾಗಿದೆ. ಇದೇ ಯೋಗದ ಸೌಂದರ್ಯ ಎಂದಿದ್ದಾರೆ.

ಮಾನವ ದೇಹವು ದೇವರ ಅತ್ಯದ್ಬುತ ಸೃಷ್ಟಿ

ಮಾನವ ದೇಹವು ದೇವರ ಅತ್ಯದ್ಬುತ ಸೃಷ್ಟಿ. ಹೊರಪ್ರಪಂಚದಲ್ಲಿರುವುದಕ್ಕಿಂತ ಹೆಚ್ಚು ನಮ್ಮ ದೇಹದೊಳಗಿದೆ. ಬಯೋಲಜಿ, ಕೆಮಿಸ್ಟ್ರಿ, ಫಿಸಿಯೋಲಜಿ, ಎಲೆಕ್ಟ್ರಿಕಲ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಎಲ್ಲವೂ ಮಾನವನ ದೇಹದಲ್ಲಿದೆ. ಭೂಮಿಯ ಬೇರೆಲ್ಲಾ ಜೀವಿಗಿಂತ ಮಾನವನಿಗೆ ಹೆಚ್ಚು ಸಾಮರ್ಥ್ಯವಿದೆ. ಜತೆಗೆ ಯಾವುದೇ ಹವಾಗುಣಕ್ಕೂ ಹೊಂದಿಕೊಳ್ಳುವ ಗುಣವಿದೆ. ಇದು ನಮ್ಮ ದೇಹದ ಆಂತರಿಕ ಸಾಮರ್ಥ್ಯದಿಂದ ಆಗಿದೆ. ಮಾನವನ ದೇಹದ ಸಂಪೂರ್ಣ ಸಾಮರ್ಥ್ಯವನ್ನು ಇದುವರೆಗೂ ಅಳೆಯಲು ಸಾಧ್ಯವಾಗಿಲ್ಲ. ಯೋಗ ಒಂದು ವಿಜ್ಞಾನವಾಗಿದ್ದು ಇದು ಮನುಷ್ಯನ ಸಾಮರ್ಥ್ಯವನ್ನು ಅಳೆಯುವ ಒಂದು ಸಾಧನವಾಗಿದೆ ಎಂದು ಹೇಳಿದ್ದಾರೆ.

ಯೋಗ ಒಂದು ವಿಜ್ಞಾನ

ಇಲ್ಲಿ ಯೋಗ ಮಾಡಿದವರು ತಮ್ಮ ಮೂಳೆಗಳನ್ನು ಸ್ಪ್ರಿಂಗ್ ಮಾಡಿಕೊಂಡಿದ್ದಾರೆ. ಅದೂ ಒಂದು ವಿಜ್ಞಾನ. ನಮ್ಮ ದೇಹದಲ್ಲಿರುವ ಮಾಂಸಖಂಡಗಳನ್ನು ಸಹ ಕೃಷಿಮಾಡಿಕೊಂಡು ಬಂದಿದ್ದಾರೆ. ಇದೂ ಸಹ ಒಂದು ವಿಜ್ಞಾನ. ಇದನ್ನು ಜೀವಂತವಾಗಿಡಲು ರಕ್ತ ಸದಾ ಪರಿಚಲನೆಯಲ್ಲಿರುತ್ತದೆ. ಈ ಮೂಲಕ ನಮ್ಮ ಮೆದುಳಿನ ಸಾಮರ್ಥ್ಯವೂ ಹೆಚ್ಚಾಗುತ್ತದೆ. ಅತ್ಯುತ್ತಮ ಐಕ್ಯೂ ಹೊಂದಿರುವ ಮನುಷ್ಯ ಅತಿಹೆಚ್ಚು ಅಂದರೆ ಶೇ 20 ರಷ್ಟು ಸಾಮರ್ಥ್ಯವನ್ನು ಮಾತ್ರ ಉಪಯೋಗ ಮಾಡಿಕೊಳ್ಳುತ್ತಾನೆ. 75 ರಷ್ಟು ಸಾಮರ್ಥ್ಯ ಇನ್ನೂ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದ ಆವಿಷ್ಕಾರಗಳನ್ನು ವಿಶ್ವದಲ್ಲಿ ನೋಡಬಹುದಾಗಿದೆ. ಇದು ಯೋಗದ ಮೂಲಕ ಸಾಧ್ಯವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಆಧ್ಯಾತ್ಮ - ವಿಜ್ಞಾನ ಒಂದೇ ನ್ಯಾಣದ ಎರಡು ಮುಖಗಳು

ಯೋಗ ಮಾನವನ ಸಾಮರ್ಥ್ಯವನ್ನು ಅಭಿವೃದ್ಧಿ ಮಾಡುತ್ತಿದೆ. ಈ ವಿಜ್ಞಾನಕ್ಕೆ ಆಧ್ಯಾತ್ಮ ಸ್ಪೂರ್ತಿಯಾಗಿದೆ. ಆಧ್ಯಾತ್ಮ - ವಿಜ್ಞಾನ ಒಂದೇ ನ್ಯಾಣದ ಎರಡು ಮುಖಗಳು. ಈ ಮೂಲಕ ವಿಜ್ಞಾನವು ಆಧ್ಯಾತ್ಮದ ಶಕ್ತಿಯನ್ನು ತೋರಿಸುತ್ತದೆ. ಇದೇ ಈ ವ್ಯಾಸ ವಿಶ್ವವಿದ್ಯಾಲಯದಲ್ಲಿ ಜರುಗುತ್ತಿದೆ. ವಿಜ್ಞಾನ ಮತ್ತು ಆಧ್ಯಾತ್ಮ ಒಂದಾಗಿ ಯೋಗ ವಿಜ್ಞಾನವಾಗಿ ಹೊರಹೊಮ್ಮಿದೆ. ಈ ಸಂಬಂಧವಾಗಿ ಅನೇಕ ಪ್ರಯೋಗಗಳು ಆಗುತ್ತಿದೆ. ಆದ್ದರಿಂದ ಯೋಗವನ್ನು ಬೇರೆ ಆಯಾಮಗಳಲ್ಲಿ ಕಲಿಯುವವರಿಗೆ ವ್ಯಾಸ ವಿಶ್ವವಿದ್ಯಾಲಯ ಸೂಕ್ತ ಸ್ಥಳವಾಗಿದೆ ಎಂದು ಸಿಎಂ ಹೇಳಿದ್ದಾರೆ.

ಯೋಗದಲ್ಲಿ ಸೋಲಿಲ್ಲ, ಎಲ್ಲಾ ಗೆಲುವುಗಳೇ

ಕ್ರೀಡೆಯಲ್ಲಿ ಗೆಲುವು ಸೋಲು ಎರಡೂ ಇದೆ. ಆದರೆ ಯೋಗದಲ್ಲಿ ಸದಾ ಗೆಲುವೇ ಸಿಗುತ್ತದೆ. ಯೋಗವನ್ನು ಶ್ರದ್ಧೆಯಿಂದ ಮಾಡುವವರಿಗೆ ಅನೇಕ ಉಪಯೋಗಗಳು ಆಗುತ್ತದೆ. ಅವರು ಜೀವನದಲ್ಲಿ ಯಶಸ್ಸನ್ನೂ ಕಾಣುತ್ತಾರೆ. ಕ್ರೀಡೆಯಲ್ಲಿ ಯೋಗ ಸೇರಿಸುವುದರ ಮೂಲಕ ತಮ್ಮ ಸಾಧನೆಯ ಮಟ್ಟವನ್ನು ಹೆಚ್ಚು ಮಾಡಿಕೊಳ್ಳಲು ಸಹಾಯಕಾರಿಯಾಗುತ್ತದೆ. ತಳಮಟ್ಟದ ಯೋಗ ಮಾಡಿದಾಗ ನಮ್ಮ ಶಕ್ತಿ ವೃದ್ಧಿಯಾಗುತ್ತದೆ. ಅದೇ ರೀತಿ ಕ್ರೀಡೆಯೊಂದಿಗೆ ಯೋಗ ಮಾಡಿದಾಗ ನಮ್ಮ ಸಾಮರ್ಥ್ಯ ಹೆಚ್ಚಾಗುತ್ತದೆ. ಇಲ್ಲಿನವರು ಮಾಡಿದ ಯೋಗ ನೋಡಿದಾಗ ನಾನೂ ಸಹ ಏನಾದರೂ ಮಾಡಬಹುದು ಎಂಬ ಪ್ರೇರಣೆ ನೀಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನಮ್ಮ ಪ್ರಧಾನಿಗಳಿಂದ ಯೋಗ ವಿಶ್ವಮಟ್ಟಕ್ಕೆ ಹೋಗಿದೆ

ಪ್ರಧಾನಿ ನರೇಂದ್ರ ಮೋದಿ ಅವರು ಯೋಗವನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಯೋಗ ದಿನವನ್ನು ವಿಶ್ವದ ಎಲ್ಲ ದೇಶಗಳೂ ಆಚರಣೆ ಮಾಡುತ್ತವೆ. ಇದಕ್ಕಾಗಿ ನಮ್ಮ ಪ್ರಧಾನಮಂತ್ರಿಗಳಿಗೆ ಧನ್ಯವಾದಗಳು. ಕಳೆದ ಬಾರಿ ಅವರು ಯೋಗವನ್ನು ನಮ್ಮ ಮೈಸೂರಿನಲ್ಲಿ ಆಚರಣೆ ಮಾಡಿ ಯೋಗ ವಿಶ್ವಕ್ಕಾಗಿ ಎಂಬ ಸಂದೇಶ ಸಾರಿದರು. ನಮ್ಮ ಪ್ರಧಾನಿಗಳಿಂದ ಮುಂದಿನ ಒಲಿಂಪಿಕ್ಸ್ನಲ್ಲಿ ಯೋಗವನ್ನು ಕ್ರೀಡೆಯಾಗಿ ಸೇರಿಸುವುದಕ್ಕೆ ಸಾಧ್ಯವಾಗಬಹುದು ಎಂದರು.

ಇದೇ ಮೊದಲ ಬಾರಿಗೆ ಎಸ್.ವ್ಯಾಸ ವಿಶ್ವವಿದ್ಯಾಲಯದ ನೇತೃತ್ವದಲ್ಲಿ ಭಾರತದಲ್ಲಿ ವಿಶ್ವ ಯೋಗಾಸನ ಸ್ಪರ್ಧೆ ನಡೆಯುತ್ತಿದೆ. ಸ್ಪರ್ಧೆ ಮಾಡುತ್ತಿರುವ ಸುಮಾರು 18 ರಾಷ್ಟ್ರದ 148ಕ್ಕೂ ಹೆಚ್ಚು ಪರಿಣತಿ ಹೊಂದಿದ ಯೋಗ ಕ್ರೀಡಾಪಟುಗಳಿಗೆ ಶುಭಾಶಯ ಕೋರಿದ ಸಿಎಂ ಬಸವರಾಜ ಬೊಮ್ಮಾಯಿ‌ ಎಸ್. ವ್ಯಾಸ ವಿಶ್ವವಿದ್ಯಾಲಯಕ್ಕೆ ಅಭಿನಂದನೆ ಸಲ್ಲಿಸಿದರು.

    ಹಂಚಿಕೊಳ್ಳಲು ಲೇಖನಗಳು