logo
ಕನ್ನಡ ಸುದ್ದಿ  /  ಕರ್ನಾಟಕ  /  Adiyogi Statue: ಸಂಕ್ರಾಂತಿಗೆ ಚಿಕ್ಕಬಳ್ಳಾಪುರದ ಆದಿಯೋಗಿ ಪ್ರತಿಮೆ ಅನಾವರಣ ಆಗಲಿದೆಯೇ?; ಯಥಾಸ್ಥಿತಿಗೆ ಕೋರ್ಟ್‌ ಆದೇಶ - ಶುಕ್ರವಾರ ವಿಚಾರಣೆ

Adiyogi statue: ಸಂಕ್ರಾಂತಿಗೆ ಚಿಕ್ಕಬಳ್ಳಾಪುರದ ಆದಿಯೋಗಿ ಪ್ರತಿಮೆ ಅನಾವರಣ ಆಗಲಿದೆಯೇ?; ಯಥಾಸ್ಥಿತಿಗೆ ಕೋರ್ಟ್‌ ಆದೇಶ - ಶುಕ್ರವಾರ ವಿಚಾರಣೆ

HT Kannada Desk HT Kannada

Jan 12, 2023 09:48 AM IST

ಆದಿಯೋಗಿ ಪ್ರತಿಮೆ

  • Adiyogi statue: ರಾಜ್ಯ ಹೈಕೋರ್ಟ್‌ ನಿನ್ನೆ ಈ ಮಧ್ಯಂತರ ತಡೆ ಆದೇಶ ನೀಡಿದ್ದು, ರಾಜ್ಯ ಸರ್ಕಾರ ಮತ್ತು ಯೋಗ ಕೇಂದ್ರ ಮತ್ತು 14 ಇತರರಿಗೆ ನೋಟಿಸ್‌ ಜಾರಿಗೊಳಿಸಿದೆ. ಕೆಲವು ಗ್ರಾಮಸ್ಥರು ಪಿಐಎಲ್‌ ದಾಖಲಿಸಿದ್ದು, ಅದರಲ್ಲಿ ಅರಣ್ಯ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ನಿಯಮ ಉಲ್ಲಂಘಿಸಿ ಒದಗಿಸಲಾಗಿದೆ ಎಂಬ ಆರೋಪ ಮಾಡಲಾಗಿದೆ.

ಆದಿಯೋಗಿ ಪ್ರತಿಮೆ
ಆದಿಯೋಗಿ ಪ್ರತಿಮೆ

ಚಿಕ್ಕಬಳ್ಳಾಪುರದ ಗಿರಿಬೆಟ್ಟಗಳ ತಪ್ಪಲಲ್ಲಿ ಇಶಾ ಯೋಗ ಕೇಂದ್ರ (ಈಶಾ ಯೋಗ ಕೇಂದ್ರ) ಉದ್ಘಾಟನೆ ಮತ್ತು ಆದಿಯೋಗಿಯ ಪ್ರತಿಮೆ ಅನಾವರಣ ಕಾರ್ಯಕ್ರಮ ಈ ಮಕರ ಸಂಕ್ರಾಂತಿ ಸಮೀಪ (ಜ.15) ನಿಗದಿಯಾಗಿದೆ. ಆದರೆ ಈ ಕಾರ್ಯಕ್ರಮ ನಡೆಯಲಿದೆಯೇ ಅಥವಾ ಇಲ್ಲವೇ ಎಂಬ ಸಂದೇಹ ಈಗ ಉಂಟಾಗಿದೆ. ಇದಕ್ಕೆ ಕಾರಣ ಕರ್ನಾಟಕ ಹೈಕೋರ್ಟ್‌ನ ಯಥಾಸ್ಥಿತಿ ಕಾಪಾಡಬೇಕು ಎಂಬ ಆದೇಶ.

ಟ್ರೆಂಡಿಂಗ್​ ಸುದ್ದಿ

ಎಸ್‌ಎಸ್‌ಎಲ್‌ಸಿ ಕಡಿಮೆ ಫಲಿತಾಂಶ ಬಂದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಗರಂ; ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ರದ್ದು, ಮಹತ್ವದ ತೀರ್ಮಾನ

ಲೈಂಗಿಕ ದೌರ್ಜನ್ಯಕ್ಕೊಳದ ಮಹಿಳೆ ಅಪಹರಣ ಆರೋಪ ಪ್ರಕರಣ; ಮೇ 20ಕ್ಕೆ ಹೆಚ್‌ಡಿ ರೇವಣ್ಣ ಜಾಮೀನು ತೀರ್ಪು ಕಾಯ್ದಿರಿಸಿದ ಕೋರ್ಟ್

HD Revanna: ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆ ಅಪಹರಣ ಆರೋಪ ಪ್ರಕರಣ; ಮಾಜಿ ಪ್ರಧಾನಿ ದೇವೇಗೌಡರ ಮನೆಯಲ್ಲೇ ಉಳಿದಿರುವ ಹೆಚ್‌ಡಿ ರೇವಣ್ಣ

ಬೆಂಗಳೂರು: ನಿಷೇಧಿತ ಮಾದಕ ವಸ್ತು ಗಾಂಜಾ, ಇ-ಸಿಗರೇಟ್, ವಿದೇಶಿ ಸಿಗರೆಟ್‌, ಎಂಡಿಎಂಎ ಮಾರಾಟಗಾರರ ಬಂಧನ, ಮಾದಕ ವಸ್ತುಗಳ ಜಪ್ತಿ

ರಾಜ್ಯ ಹೈಕೋರ್ಟ್‌ ನಿನ್ನೆ ಈ ಮಧ್ಯಂತರ ತಡೆ ಆದೇಶ ನೀಡಿದ್ದು, ರಾಜ್ಯ ಸರ್ಕಾರ ಮತ್ತು ಯೋಗ ಕೇಂದ್ರ ಮತ್ತು 14 ಇತರರಿಗೆ ನೋಟಿಸ್‌ ಜಾರಿಗೊಳಿಸಿದೆ. ಚಿಕ್ಕಬಳ್ಳಾಪುರದ ಕ್ಯಾತಪ್ಪ ಎಸ್‌ ಮತ್ತು ಇತರೆ ಕೆಲವು ಗ್ರಾಮಸ್ಥರು ಪಿಐಎಲ್‌ ದಾಖಲಿಸಿದ್ದು, ಅದರಲ್ಲಿ ಅರಣ್ಯ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ನಿಯಮ ಉಲ್ಲಂಘಿಸಿ ಒದಗಿಸಲಾಗಿದೆ ಎಂಬ ಆರೋಪ ಮಾಡಲಾಗಿದೆ.

ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರ್ಲೆ ಮತ್ತು ನ್ಯಾಯಮೂರ್ತಿ ಆಶೋಕ್‌ ಎಸ್‌.ಕಿಣಗಿ ಅವರಿದ್ದ ವಿಭಾಗೀಯ ಪೀಠವು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿತು. ಪ್ರತಿವಾದಿಗಳಾದ ಕೇಂದ್ರ ಪರಿಸರ ಇಲಾಖೆ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಗಣಿ ಮತ್ತು ಭೂಗರ್ಭ ಇಲಾಖೆಯ ನಿರ್ದೇಶಕರು ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಡಳಿತಕ್ಕೆ ನೋಟಿಸ್‌ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿದೆ.

ಪಿಐಎಲ್‌ನಲ್ಲಿ ಏನಿದೆ?

ನಂದಿ ಬೆಟ್ಟ, ನರಸಿಂಗ ದೇವರ ಬೆಟ್ಟಗಳ ಸಾಲುಗಳು ಈ ಭಾಗದ ಜಲ ಮೂಲಗಳಾಗಿದೆ. ಇಲ್ಲಿ ಔಷಧ ಸಸ್ಯಗಳು ದಟ್ಟವಾಗಿವೆ. ಸಾಲು ಬೆಟ್ಟಗಳ ಮಧ್ಯಭಾಗದಲ್ಲಿ ಇಶಾ ಪ್ರತಿಷ್ಠಾನಕ್ಕೆ ಅರಣ್ಯ ಸೇರಿ ನಾನಾ ಕಾಯಿದೆಗಳನ್ನು ಉಲ್ಲಂಘಿಸಿ ವಾಣಿಜ್ಯ ಉದೇಶಕ್ಕಾಗಿ ಸರಕಾರಿ ಭೂಮಿ ಮಂಜೂರು ಮಾಡಲಾಗಿದೆ. ಈ ಪ್ರದೇಶವನ್ನು ಗ್ರೀನ್‌ ಬೆಲ್ಟ್‌ ಎಂದು ಘೋಷಣೆ ಮಾಡಲಾಗಿದ್ದು, ವಾಣಿಜ್ಯ ಚಟುವಟಿಕೆಗೆ ಅವಕಾಶವಿಲ್ಲ. ಆದರೂ ಸಾರ್ವಜನಿಕ ಬಳಕೆ ಉದ್ದೇಶದ ಹೆಸರಿನಲ್ಲಿ ಸರಕಾರದ ಎ-ಖರಾಬು ಮತ್ತು ಬಿ-ಖರಾಬು ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವುದಕ್ಕಾಗಿ ಜಿಲ್ಲಾಡಳಿತ ಹಸ್ತಾಂತರ ಮಾಡಿದೆ. ಇಶಾ ಪ್ರತಿಷ್ಠಾನ ಇಲ್ಲಿ ಕಾಮಗಾರಿ ಕೈಗೊಂಡಿದ್ದು, ನೈಸರ್ಗಿಕ ಸಂಪನ್ಮೂಲ ನಾಶವಾಗಲಿದೆ. ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳ ಬೆಂಬಲದಿಂದ ಸ್ಥಳೀಯ ನಿವಾಸಿಗಳ ವಿರೋಧದ ನಡುವೆಯೂ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣವಾಗಿದೆ. ಈ ಬಗ್ಗೆ ದೂರು ನೀಡಿದರೂ ದಾಖಲಿಸಿಕೊಂಡಿಲ್ಲ. ಈ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶ ನೀಡಬೇಕು ಎಂದು ಪಿಐಎಲ್‌ನಲ್ಲಿ ಕೋರಲಾಗಿದೆ.

ನಾಳೆ ವಿಸ್ತೃತ ವಿಚಾರಣೆ
ಇಶಾ ಫೌಂಡೇಶನ್‌ ಚಿಕ್ಕಬಳ್ಳಾಪುರದ ಯೋಗ ಕೇಂದ್ರ ಮತ್ತು ಆದಿ ಯೋಗಿ ಪ್ರತಿಮೆ ಅನಾವರಣದ ಕಾರ್ಯಕ್ರಮವನ್ನು ಜನವರಿ 15ಕ್ಕೆ ಇಟ್ಟುಕೊಂಡಿದೆ. ಈಗ ಕೋರ್ಟ್‌ ಬುಧವಾರ ಮಧ್ಯಂತರ ತಡೆ ನೀಡಿ ಯಥಾಸ್ಥಿತಿ ಆದೇಶ ಪ್ರಕಟಿಸಿರುವ ಕಾರಣ, ಕಾರ್ಯಕ್ರಮಕ್ಕೆ ತೊಂದರೆ ಆಗಿದೆ. ಈ ತಡೆ ತೆರವುಗೊಳಿಸಬೇಕು ಎಂದು ನ್ಯಾಯಪೀಠಕ್ಕೆ ಇಶಾ ಯೋಗ ಕೇಂದ್ರವು ಮಧ್ಯಂತರ ಅರ್ಜಿ ಸಲ್ಲಿಸಿದೆ.

ಇಶಾ ಯೋಗ ಕೇಂದ್ರದ ಪರವಾಗಿ ಹಿರಿಯ ನ್ಯಾಯವಾದಿ ಉದಯ್‌ ಹೊಳ್ಳ ಬುಧವಾರ ಮಧ್ಯಾಹ್ನವೇ ಕೋರ್ಟ್‌ಗೆ ಈ ಮಧ್ಯಂತರ ಅರ್ಜಿ ಸಲ್ಲಿಸಿದರು. ಅಲ್ಲದೆ, ಈ ಮಧ್ಯಂತರ ಅರ್ಜಿಯನ್ನು ತುರ್ತು ವಿಚಾರಣೆಗೆ ಪರಿಗಣಿಸಬೇಕು. ಜ.15ರಂದು ಬೃಹತ್‌ ಕಾರ್ಯಕ್ರಮ ಆಯೋಜನೆ ಆಗಿದೆ. ಯಥಾಸ್ಥಿತಿ ಆದೇಶದ ಕಾರಣ ಕಾರ್ಯಕ್ರಮಕ್ಕೆ ತೊಂದರೆ ಆಗುವ ಸಾಧ್ಯತೆ ಇದೆ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿದರು. ಇದಕ್ಕೆ ಸ್ಪಂದಿಸಿದ ವಿಭಾಗೀಯ ಪೀಠವು, ಈ ಅರ್ಜಿಯ ವಿಸ್ತೃತ ವಿಚಾರಣೆ ಶುಕ್ರವಾರ ನಡೆಸುವುದಾಗಿ ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ