logo
ಕನ್ನಡ ಸುದ್ದಿ  /  ಕರ್ನಾಟಕ  /  Adiyogi Statue Karnataka: ಇಂದು ಚಿಕ್ಕಬಳ್ಳಾಪುರದಲ್ಲಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಅನಾವರಣ, 3ಡಿ ಲೇಸರ್‌ ಶೋನಲ್ಲಿ ದಿವ್ಯದರ್ಶನ

Adiyogi Statue Karnataka: ಇಂದು ಚಿಕ್ಕಬಳ್ಳಾಪುರದಲ್ಲಿ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಅನಾವರಣ, 3ಡಿ ಲೇಸರ್‌ ಶೋನಲ್ಲಿ ದಿವ್ಯದರ್ಶನ

Praveen Chandra B HT Kannada

Jan 15, 2023 09:51 AM IST

ಆದಿಯೋಗಿ ಪ್ರತಿಮೆಯ ಮೇಲೆ ಬೆಳಕಿನಾಟ (ಕೊಯಮತ್ತೂರು ಆದಿಯೋಗಿ ಪ್ರತಿಮೆ ಲೇಸರ್‌ ಶೋ)

    • ಇಂದು ಸಂಜೆ 6 ಗಂಟೆಯಿಂದ ಚಿಕ್ಕಬಳ್ಳಾಪುರದ ಅವಲಗುರ್ಕಿಯಲ್ಲಿ ಬೃಹತ್‌ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದೆ. . ಇಂದಿನಿಂದ ಪ್ರತಿದಿನ 3ಡಿ ಬೆಳಕು ಮತ್ತು ಧ್ವನಿ ವ್ಯವಸ್ಥೆಯಲ್ಲಿ ಆದಿಯೋಗಿ ಪ್ರತಿಮೆಯು ನೋಡುಗರನ್ನು ಹೊಸ ಲೋಕಕ್ಕೆ ಕೊಂಡೊಯ್ಯಲಿದೆ.
ಆದಿಯೋಗಿ ಪ್ರತಿಮೆಯ ಮೇಲೆ ಬೆಳಕಿನಾಟ (ಕೊಯಮತ್ತೂರು ಆದಿಯೋಗಿ ಪ್ರತಿಮೆ ಲೇಸರ್‌ ಶೋ)
ಆದಿಯೋಗಿ ಪ್ರತಿಮೆಯ ಮೇಲೆ ಬೆಳಕಿನಾಟ (ಕೊಯಮತ್ತೂರು ಆದಿಯೋಗಿ ಪ್ರತಿಮೆ ಲೇಸರ್‌ ಶೋ)

ಚಿಕ್ಕಬಳ್ಳಾಪುರ: ಇಂದು ಸಂಜೆ 6 ಗಂಟೆಯಿಂದ ಚಿಕ್ಕಬಳ್ಳಾಪುರದ ಅವಲಗುರ್ಕಿಯಲ್ಲಿ ಬೃಹತ್‌ ಆದಿಯೋಗಿ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದೆ. ತಮಿಳುನಾಡಿನ ಕೊಯಮತ್ತೂರಿನ ಪ್ರಮುಖ ಆಕರ್ಷಣೆಯಾಗಿದ್ದ ಆದಿಯೋಗಿ ಪ್ರತಿಮೆಯನ್ನು ಕರ್ನಾಟಕದಲ್ಲಿಯೂ ನೋಡುವ ಅವಕಾಶ ಇನ್ನುಮುಂದೆ ದೊರಕಲಿದೆ. ಇಂದಿನಿಂದ ಪ್ರತಿದಿನ 3ಡಿ ಬೆಳಕು ಮತ್ತು ಧ್ವನಿ ವ್ಯವಸ್ಥೆಯಲ್ಲಿ ಆದಿಯೋಗಿ ಪ್ರತಿಮೆಯು ನೋಡುಗರನ್ನು ಹೊಸ ಲೋಕಕ್ಕೆ ಕೊಂಡೊಯ್ಯಲಿದೆ.

ಟ್ರೆಂಡಿಂಗ್​ ಸುದ್ದಿ

Raghunandan S Kamath Death: ಐಸ್ ಕ್ರೀಮ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ನ್ಯಾಚುರಲ್ ಐಸ್ ಕ್ರೀಂನ ರಘುನಂದನ್ ಕಾಮತ್ ಇನ್ನಿಲ್ಲ

ಪ್ರಜ್ವಲ್‌ ರೇವಣ್ಣ ಕೇಸ್‌; ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ; ಕಾನೂನು ಕ್ರಮಕ್ಕೆ ತಕರಾರು ಇಲ್ಲ

ಬಂಟ್ವಾಳ: 3 ವರ್ಷದ ಮಗುವನ್ನು ರಕ್ಷಿಸಲು ಪ್ರಾಣದ ಹಂಗುತೊರೆದು ಬಾವಿಗಳಿದ ಯುವಕ, ಉಮೇಶ್ ಮಠದಬೆಟ್ಟು ಕಾರ್ಯಕ್ಕೆ ಶ್ಲಾಘನೆ

ಕರ್ನಾಟಕ ಹವಾಮಾನ ಮೇ 18; ಉತ್ತರ ಕನ್ನಡ, ತುಮಕೂರು, ಬೆಂಗಳೂರು ಸೇರಿ 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌, ಉತ್ತರ ಒಳನಾಡಲ್ಲಿ ಹಲವೆಡೆ ಮಳೆ

ಇಂದು ಅವಲಗುರ್ಕಿ ಸದ್ಗುರು ಸನ್ನಿಧಿಯಲ್ಲಿ ಮಕರ ಸಂಕ್ರಾಂತಿ ಆಚರಣೆ, ಆದಿಯೋಗಿ ದಿವ್ಯ ದರ್ಶನ ಮತ್ತು ಯೋಗೇಶ್ವರ ಲಿಂಗದ ಪ್ರತಿಷ್ಠಾಪನೆ ಕಾರ್ಯಕ್ರಮಗಳು ನಡೆಯಲಿವೆ. ಈಶಾ ಸಂಸ್ಕೃತಿ ವಿದ್ಯಾರ್ಥಿಗಳಿಂದ ವಿವಿಧ ಕಾರ್ಯಕ್ರಮಗಳೂ ನಡೆಯಲಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಪಸ್ಥಿತಿಯಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. "ನಿಮ್ಮನ್ನು ನೀವು ಪರಿವರ್ತಿಸಿಕೊಳ್ಳಲು ಮತ್ತು ನಿಮ್ಮ ಸ್ವಂತ ಹಣೆಬರಹವನ್ನು ಸೃಷ್ಟಿಸಿಕೊಳ್ಳಲು, ಆದಿಯೋಗಿಯು ಒಂದು ಸಂಕೇತ, ಸಾಧ್ಯತೆ ಮತ್ತು ಸಾಧನೆಗಳ ಮೂಲʼʼ ಎಂದು ಸದ್ಗುರು ಜಗ್ಗಿವಾಸುದೇವ್‌ ಹೇಳಿದ್ದಾರೆ.

ಎಲ್ಲಿದೆ ಆದಿಯೋಗಿ ಪ್ರತಿಮೆ?

ಚಿಕ್ಕಬಳ್ಳಾಪುರ ತಾಲೂಕಿನ ಕೌರನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳ ನಂತರ ಜಾಲಾರಿ ನರಸಿಂಹಸ್ವಾಮಿ ದೇವಾಲಯದ ನರಸಿಂಹದೇವರಬೆಟ್ಟದ ತಪ್ಪಲಿನಲ್ಲಿಈ ಬೃಹತ್‌ ಆದಿಯೋಗಿ ಪ್ರತಿಮೆಯಿದೆ. ಈಶಾ ಫೌಂಡೇಷನ್‌ ಈ 112 ಅಡಿ ಎತ್ತರದ ಆದಿಯೋಗಿ ಶಿವನ ಪ್ರತಿಮೆ ನಿರ್ಮಿಸಿದೆ.

ಇಂದು ನಡೆಯಲಿದೆ ಆಕರ್ಷಕ ಲೇಸರ್‌ ಶೋ

ಈ ಬೃಹತ್‌ ಶಿವನ ಪ್ರತಿಮೆಯ ಮೇಲೆ 3ಡಿ ಬೆಳಕು ಬೀರಿ, ಹಿನ್ನಲೆಯಲ್ಲಿ ಧ್ವನಿ ವ್ಯವಸ್ಥೆಯ ಮೂಲಕ ಹೊಸ ಲೋಕಕ್ಕೆ ಕೊಂಡೊಯ್ಯುವ ಲೇಸರ್‌ ಶೋ ಪ್ರಮುಖ ಆಕರ್ಷಣೆಯಾಗಲಿದೆ. ಸುಮಾರು ಹದಿನಾಲ್ಕು ನಿಮಿಷಗಳ ಕಾಲ ಈ ಲೇಸರ್‌ ಶೋ ನಡೆಯಲಿದೆ. ಪ್ರತಿದಿನ ಈ ಶೋ ನಡೆಯಲಿದೆ. ಈ ಶೋ ಟೈಮಿಂಗ್ಸ್‌ ಮಾಹಿತಿ ಸದ್ಯ ಲಭ್ಯವಿಲ್ಲ. ಕೊಯಮತ್ತೂರು ಆದಿಯೋಗಿ ಲೇಸರ್‌ ಶೋ ಹೇಗಿರುತ್ತದೆ ಎಂಬ ವಿಡಿಯೋ ಈ ಕೆಳಗಿದೆ ನೋಡಿ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸದ್ಗುರು ಜಗ್ಗಿ ವಾಸುದೇವ್‌ ಅವರು ನಾಗಪ್ರತಿಷ್ಠೆ ನಡೆಸಿದ್ದರು. ನಾಗಮಂಟಪ, ಆದಿಯೋಗಿ ಮತ್ತು ಯೋಗೇಶ್ವರ ಲಿಂಗದ ಜೊತೆಗೆ, ಸದ್ಗುರು ಸನ್ನಿಧಿಯಲ್ಲಿ ಲಿಂಗ ಭೈರವಿ ದೇವಾಲಯ ಮತ್ತುಎರಡು ತೀರ್ಥಕುಂಡಗಳನ್ನು ಕೂಡ ಮುಂದಿನ ದಿನಗಳಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.

"ಹದಿನೈದು ವರ್ಷಗಳ ಹಿಂದೆ ಮೊದಲ ಬಾರಿಗೆ ಆದಿಯೋಗಿ ಕಾಣಿಸಿಕೊಂಡಾಗ ಅವನ ಉಪಸ್ಥಿತಿಯು ಎಷ್ಟು ಅಗಾಧವಾಗಿತ್ತು ಎಂದರೆ ಜನರ ಅವನ ಮುಂದೆ ತಲೆಬಾಗಬೇಕಾಯಿತು. ಅವನು ಪೂಜೆ, ಪ್ರಾರ್ಥನೆ ಅಥವಾ ಅವನನ್ನು ಅನುಸರಿಸುವಂತೆ ಕೇಳಲಿಲ್ಲ. ನೀವು ಸಾಧನೆ ಮಾಡಲು ಸಿದ್ಧವಿದ್ದರೆ ಪ್ರಕೃತಿಯು ನಿಗದಿಪಡಿಸಿದ ಯಾವುದೇ ಮಿತಿಗಳನ್ನು ಮೀರಬಹುದಾದ ವಿಜ್ಞಾನಗಳನ್ನು ನೀಡಿದನು. ಆದಿಯೋಗಿ ಭೂತಕಾಲದವನಲ್ಲ. ಅವನು ಭವಿಷ್ಯಕ್ಕೆ ಸೇರಿದವನು. ಈ 112 ವಿಧಾನಗಳನ್ನು ನೆರವೇರಿಸುವ ಸಮಯ ಬಂದಿದೆ. ಅದನ್ನು ನಾವು ಸಾಕಾರಗೊಳಿಸೋಣʼʼ ಎಂದು ಸದ್ಗುರು ಅಭಿಪ್ರಾಯಪಟ್ಟಿದ್ದಾರೆ.

ಸುಮಾರು 110 ಎಕರೆ ವಿಶಾಲವಾದ ಪ್ರದೇಶದಲ್ಲಿ ಇಶಾ ಯೋಗ ಕೇಂದ್ರ ತಲೆ ಎತ್ತುತ್ತಿದ್ದು ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಿಂದ 9 ಕಿಲೋಮೀಟರ್ ದೂರದಲ್ಲಿದೆ.

ಆದಿಯೋಗಿ ಪ್ರತಿಮೆಗೆ ಕೋರ್ಟ್‌ ತಡೆ ನೀಡಿತ್ತು!

ಇಶಾ ಫೌಂಡೇಶನ್‌ ಚಿಕ್ಕಬಳ್ಳಾಪುರದ ಯೋಗ ಕೇಂದ್ರ ಮತ್ತು ಆದಿ ಯೋಗಿ ಪ್ರತಿಮೆ ಮತ್ತು ಇತರೆ ವಿಷಯಗಳಿಗೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿ ಯಥಾಸ್ಥಿತಿ ಕಾಯ್ದುಗೊಳ್ಳುವಂತೆ ಇತ್ತೀಚೆಗೆ ಸೂಚಿಸಿತ್ತು. ಇದರಿಂದ ಈ ಕಾರ್ಯಕ್ರಮ ನಡೆಯುವುದೇ ಇಲ್ಲವೇ ಎಂಬ ಆತಂಕ ಮೂಡಿತ್ತು. ಚಿಕ್ಕಬಳ್ಳಾಪುರದ ಕ್ಯಾತಪ್ಪ ಎಸ್‌ ಮತ್ತು ಇತರೆ ಕೆಲವು ಗ್ರಾಮಸ್ಥರು ಪಿಐಎಲ್‌ ದಾಖಲಿಸಿದ್ದು, ಅದರಲ್ಲಿ ಅರಣ್ಯ ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ನಿಯಮ ಉಲ್ಲಂಘಿಸಿ ಒದಗಿಸಲಾಗಿದೆ ಎಂಬ ಆರೋಪ ಮಾಡಲಾಗಿತ್ತು. ಬಳಿಕ ಅಂದರೆ, ಇದೇ ಶುಕ್ರವಾರ ಕೋರ್ಟ್‌ ಆದಿಯೋಗಿ ಪ್ರತಿಮೆ ಕಾರ್ಯಕ್ರಮ ನಡೆಸಲು ಅವಕಾಶ ನೀಡಿತ್ತು.

ನಂದಿ ಬೆಟ್ಟ, ನರಸಿಂಗ ದೇವರ ಬೆಟ್ಟಗಳ ಸಾಲುಗಳು ಈ ಭಾಗದ ಜಲ ಮೂಲಗಳಾಗಿದೆ. ಇಲ್ಲಿ ಔಷಧ ಸಸ್ಯಗಳು ದಟ್ಟವಾಗಿವೆ. ಸಾಲು ಬೆಟ್ಟಗಳ ಮಧ್ಯಭಾಗದಲ್ಲಿ ಇಶಾ ಪ್ರತಿಷ್ಠಾನಕ್ಕೆ ಅರಣ್ಯ ಸೇರಿ ನಾನಾ ಕಾಯಿದೆಗಳನ್ನು ಉಲ್ಲಂಘಿಸಿ ವಾಣಿಜ್ಯ ಉದೇಶಕ್ಕಾಗಿ ಸರಕಾರಿ ಭೂಮಿ ಮಂಜೂರು ಮಾಡಲಾಗಿದೆ. ಈ ಪ್ರದೇಶವನ್ನು ಗ್ರೀನ್‌ ಬೆಲ್ಟ್‌ ಎಂದು ಘೋಷಣೆ ಮಾಡಲಾಗಿದ್ದು, ವಾಣಿಜ್ಯ ಚಟುವಟಿಕೆಗೆ ಅವಕಾಶವಿಲ್ಲ. ಆದರೂ ಸಾರ್ವಜನಿಕ ಬಳಕೆ ಉದ್ದೇಶದ ಹೆಸರಿನಲ್ಲಿ ಸರಕಾರದ ಎ-ಖರಾಬು ಮತ್ತು ಬಿ-ಖರಾಬು ಭೂಮಿಯನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವುದಕ್ಕಾಗಿ ಜಿಲ್ಲಾಡಳಿತ ಹಸ್ತಾಂತರ ಮಾಡಿದೆ. ಇಶಾ ಪ್ರತಿಷ್ಠಾನ ಇಲ್ಲಿ ಕಾಮಗಾರಿ ಕೈಗೊಂಡಿದ್ದು, ನೈಸರ್ಗಿಕ ಸಂಪನ್ಮೂಲ ನಾಶವಾಗಲಿದೆ. ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳ ಬೆಂಬಲದಿಂದ ಸ್ಥಳೀಯ ನಿವಾಸಿಗಳ ವಿರೋಧದ ನಡುವೆಯೂ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣವಾಗಿದೆ. ಈ ಬಗ್ಗೆ ದೂರು ನೀಡಿದರೂ ದಾಖಲಿಸಿಕೊಂಡಿಲ್ಲ. ಈ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶ ನೀಡಬೇಕು ಎಂದು ಪಿಐಎಲ್‌ನಲ್ಲಿ ಕೋರಲಾಗಿತ್ತು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ