logo
ಕನ್ನಡ ಸುದ್ದಿ  /  Karnataka  /  Alipa Narayana Bhagavata Passes Away: Tenkuthittu Yakshagana Bhishma

Balipa Narayana Bhagavata passes away: ಯಕ್ಷರಂಗದ ಭೀಷ್ಮ ಬಲಿಪ ನಾರಾಯಣ ಭಾಗವತ ನಿಧನ, ಯಕ್ಷರಂಗದ ಕಂಬನಿ

HT Kannada Desk HT Kannada

Feb 16, 2023 09:09 PM IST

Balipa Narayana Bhagavata passes away: ಯಕ್ಷರಂಗದ ಭೀಷ್ಮ ಬಲಿಪ ನಾರಾಯಣ ಭಾಗವತ ನಿಧನ

    • Balipa Narayana Bhagavata: ಕಟೀಲು ಶ್ರೀದುರ್ಗಾ ಪರಮೇಶ್ವರಿ ಯಕ್ಷಗಾನ ಮೇಳದ ಪ್ರಧಾನ ಭಾಗವತ, ತೆಂಕುತಿಟ್ಟು ಯಕ್ಷರಂಗದ ಭೀಷ್ಮನೆಂದು ಖ್ಯಾತಿ ಪಡೆದಿದ್ದ ಬಲಿಪ ನಾರಾಯಣ ಭಾಗವತರು (85) ಇಂಧು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
Balipa Narayana Bhagavata passes away: ಯಕ್ಷರಂಗದ ಭೀಷ್ಮ ಬಲಿಪ ನಾರಾಯಣ ಭಾಗವತ ನಿಧನ
Balipa Narayana Bhagavata passes away: ಯಕ್ಷರಂಗದ ಭೀಷ್ಮ ಬಲಿಪ ನಾರಾಯಣ ಭಾಗವತ ನಿಧನ (Photo: Facebook)

ಮಂಗಳೂರು: ಕಟೀಲು ಶ್ರೀದುರ್ಗಾ ಪರಮೇಶ್ವರಿ ಯಕ್ಷಗಾನ ಮೇಳದ ಪ್ರಧಾನ ಭಾಗವತ, ತೆಂಕುತಿಟ್ಟು ಯಕ್ಷರಂಗದ ಭೀಷ್ಮನೆಂದು ಖ್ಯಾತಿ ಪಡೆದಿದ್ದ ಬಲಿಪ ನಾರಾಯಣ ಭಾಗವತರು ಇಂದು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಟ್ರೆಂಡಿಂಗ್​ ಸುದ್ದಿ

Bangalore Crime: ಬೆಂಗಳೂರಲ್ಲಿ ವಾಯುವಿಹಾರ ಹೊರಟಿದ್ದ ದಂಪತಿ ಮೇಲೆ ಹಲ್ಲೆ, ನಾಲ್ವರು ಆರೋಪಿಗಳು ಪರಾರಿ

Shimoga News: ರಾಹುಲ್‌ ಗಾಂಧಿ ಫಿಟ್ನೆಸ್‌ಗೆ ನಟ ಶಿವಣ್ಣ ಫಿದಾ, ಪ್ರಧಾನಿಯಾದರೆ ದೇಶ ಫಿಟ್‌ ಇಡಲಿದ್ದಾರೆ ಎಂದ್ರು ಹ್ಯಾಟ್ರಿಕ್‌ ಹೀರೋ

Hassan Scandal: ಪ್ರಜ್ವಲ್‌ ರೇವಣ್ಣ ಸಾಮೂಹಿಕ ಅತ್ಯಾಚಾರಿ, ಆತನನ್ನು ದೇಶದಿಂದ ಹೊರ ಹೋಗಲು ಹೇಗೆ ಬಿಟ್ಟಿರಿ, ರಾಹುಲ್‌ ಗಾಂಧಿ ಪ್ರಶ್ನೆ

ಬೆಂಗಳೂರಿನಲ್ಲಿ ರಾತ್ರಿಯ ತಾಪಮಾನ 25 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ; ಏಪ್ರಿಲ್ ತಿಂಗಳಲ್ಲಿ ದಶಕದ ದಾಖಲೆ, ಜನ ಹೈರಾಣ -Bangalore Weather

ಇಂದು ಸಂಜೆ ಮೂಡಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ಇವರು ನಿಧನರಾದರು. ಕಳೆದ ಎರಡು ವಾರಗಳಿಂದ ಇವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ 60 ವರ್ಷಗಳಿಂದ ಇವರು ಯಕ್ಷ ಲೋಕದಲ್ಲಿ ಕಲಾ ಸೇವೆ ಮಾಡುತ್ತಿದ್ದರು.

ಇವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಗಂಟಾಲಕಟ್ಟೆ ಸಮೀಪ ನೂಯಿಯಲ್ಲಿ ವಾಸವಾಗಿದ್ದರು. ಇವರು ಕಟೀಲು ಮೇಳದಲ್ಲಿ 42 ವರ್ಷಗಳ ಕಾಲ ಭಾಗವತರಾಗಿ ಸೇವೆ ಸಲ್ಲಿಸಿದ್ದಾರೆ. ತನ್ನ ಹದಿನಾಲ್ಕನೇ ವಯಸ್ಸಿನಲ್ಲಿ ಬಲಿಪ ನಾರಾಯಣ ಭಾಗವತರು ಭಾಗವತಿಕೆ ಆರಂಭಿಸಿದ್ದರು.

ಅಂತಿಮ ವಿಧಿವಿಧಾನಗಳು ರಾತ್ರಿ 1.30 ಗಂಟೆ ಸುಮಾರಿಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇವರು 1938ರ ಮಾರ್ಚ್‌ 13ರಂದು ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದಲ್ಲಿ ಜನಿಸಿದರು. ಬಲಿಪ ಮಾದವ ಭಟ್‌ ಮತ್ತು ಸರಸ್ವತಿ ದಂಪತಿಯ ಪುತ್ರರಾಗಿದ್ದು, ಮೂಡಬಿದಿರೆಯಲ್ಲಿ ನೆಲೆಸಿದ್ದರು.

ಇವರು ಭಾಗವತರಾಗಿ ಮಾತ್ರವಲ್ಲದೆ ಹಲವು ಯಕ್ಷಗಾನ ಪ್ರಸಂಗಗಳನ್ನೂ ರಚಿಸಿದ್ದಾರೆ. ಯಕ್ಷಗಾನದ ಹಾಡುಗಳನ್ನೂ ರಚಿಸಿದ್ದಾರೆ. ಯಕ್ಷಗಾನದಲ್ಲಿ ಅನಗತ್ಯ ಆಲಾಪನೆ ಇಲ್ಲದೆ ಹಾಡುತ್ತಿದ್ದದ್ದು ವಿಶೇಷ.

ಬಲಿಪ ನಾರಾಯಣ ಭಾಗವತರು ಇವರ ಅಜ್ಜ. ಅಜ್ಜ ಕೂಡ ಜನಪ್ರಿಯ ಭಾಗವತರು. ಹೀಗಾಗಿ, ಇವರಿಗೆ ಅಜ್ಜನೇ ಪ್ರಮುಖ ಆಕರ್ಷಣೆ ಮತ್ತು ಸ್ಪೂರ್ತಿಯಾಗಿದ್ದರು. ಅಜ್ಜನ ಯಕ್ಷಗಾನ ಪರಂಪರೆಯನ್ನು ಮೊಮ್ಮಗನಾಗಿ ಇವರು ಮುಂದುವರೆಸಿದರು. ನಾರಾಯಣ ಭಾಗವತರ ಇಬ್ಬರು ಪುತ್ರರೂ ಭಾಗವತರಾಗಿ ಜನಪ್ರಿಯರು.

ಸುದೀರ್ಘವಾಗಿ ಯಕ್ಷಲೋಕಕ್ಕೆ ಇವರು ಸಲ್ಲಿಸಿದ ಸೇವೆಗಾಗಿ ಯಕ್ಷಭಿಮಾನಿಗಳು ಇವರ ಹೆಸರಿನಲ್ಲಿ ಬಲಿಮ ಅಮೃತ ಭವನ ನಿರ್ಮಿಸಿದ್ದಾರೆ. ಐದು ದಿನದ ದೇವಿ ಮಹಾತ್ಮೆಯನ್ನು ಇವರು ನಿರ್ಮಿಸಿದ್ದಾರೆ. ಇದು ಮಹಾ ಪ್ರಸಂಗವಾಗಿದೆ.

ಇವರ ಕಲಾ ಸೇವೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಮಗ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ‘ಜ್ಞಾನ ಪ್ರಶಸ್ತಿ’, ಕರ್ನಾಟಕ ಜಾನಪದ ಪರಿಷತ್ತು ದೊಡ್ಡಮನೆ ಲಿಂಗೇಗೌಡ ಪ್ರಶಸ್ತಿ, ೭೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಕರ್ನಾಟಕಶ್ರೀ ಪ್ರಶಸ್ತಿ, ಅಗರಿ ಪ್ರಶಸ್ತಿ, ಶೇಣಿ ಪ್ರಶಸ್ತಿ, ಕವಿ ಮುದ್ದಣ ಪುರಸ್ಕಾರ, ಕರ್ನಾಟಕ ಸಂಘ ದುಬೈಯಲ್ಲಿ ಸನ್ಮಾನ, ಕೇರಳ ಸಂಗೀತ ನಾಟಕ ಅಕಾಡೆಮಿಯ ತ್ರಿಶೂರು ಗುರುಪೂಜಾ ಪ್ರಶಸ್ತಿ ಸೇರಿದಂತೆ ನೂರಾರು ಬಿರುದು, ಸನ್ಮಾನಗಳು ಸಂದ ಗೌರವ ಸಿಕ್ಕಿದೆ

ತೆಂಕುತಿಟ್ಟಿನ ಹಿರಿಯ ಭಾಗವತ ಶ್ರೀ ಬಲಿಪ ನಾರಾಯಣ ಭಾಗವತರು ನಮ್ಮನ್ನು ಇಂದು ಸಂಜೆ ಅಗಲಿರುವರು ಅವರಿಗೆ ಶ್ರದ್ಧಾಂಜಲಿ ಎಂದು ಹಲವು ಯಕ್ಷಾಭಿಮಾನಿಗಳು ಫೇಸ್‌ಬುಕ್‌, ಟ್ವಿಟ್ಟರ್‌ಗಳಲ್ಲಿ ಬರೆದುಕೊಂಡಿದ್ದು, ಹಿರಿಯ ಕಲಾವಿದರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು