logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರಿನ ಬಿಎಂಎಸ್‌ ಕಾಲೇಜುಗಳ ಸಾರ್ವಜನಿಕ ಶಿಕ್ಷಣ ದತ್ತಿ ಟ್ರಸ್ಟ್‌ನಿಂದ ಅಕ್ರಮ, ಎಚ್‌.ಡಿ. ಕುಮಾರಸ್ವಾಮಿ ಹೇಳಿದ 10 ಅಂಶಗಳಿವು

ಬೆಂಗಳೂರಿನ ಬಿಎಂಎಸ್‌ ಕಾಲೇಜುಗಳ ಸಾರ್ವಜನಿಕ ಶಿಕ್ಷಣ ದತ್ತಿ ಟ್ರಸ್ಟ್‌ನಿಂದ ಅಕ್ರಮ, ಎಚ್‌.ಡಿ. ಕುಮಾರಸ್ವಾಮಿ ಹೇಳಿದ 10 ಅಂಶಗಳಿವು

HT Kannada Desk HT Kannada

Sep 22, 2022 10:18 PM IST

ಬಿಎಂಎಸ್‌ ಕಾಲೇಜಿನ ಸಾರ್ವಜನಿಕ ಶಿಕ್ಷಣ ದತ್ತಿ ಟ್ರಸ್ಟ್‌ನಿಂದ ಅಕ್ರಮ: ಎಚ್‌.ಡಿ.ಕೆ

    • ಬೆಂಗಳೂರಿನ BMS ಸಾರ್ವಜನಿಕ ಶಿಕ್ಷಣ ದತ್ತಿ ಟ್ರಸ್ಟ್ ಗೆ ದಾನಿ ಟ್ರಸ್ಟಿ ಮತ್ತು ಅಜೀವ ಟ್ರಸ್ಟಿ ನೇಮಕಾತಿ, ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಎಸಗಿದ ಅಕ್ರಮಗಳು, ಟ್ರಸ್ಟಿನ ಮೂಲ ಡೀಡ್ ನ ಷರತ್ತುಗಳ ಉಲ್ಲಂಘನೆ ಇತ್ಯಾದಿಗಳ ಕುರಿತಾದ ಮಹತ್ವದ ದಾಖಲೆಗಳನ್ನು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಶ್ರೀ ಹೆಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಇಂದು ಬಿಡುಗಡೆ ಮಾಡಿದ್ದಾರೆ.
ಬಿಎಂಎಸ್‌ ಕಾಲೇಜಿನ ಸಾರ್ವಜನಿಕ ಶಿಕ್ಷಣ ದತ್ತಿ ಟ್ರಸ್ಟ್‌ನಿಂದ ಅಕ್ರಮ: ಎಚ್‌.ಡಿ.ಕೆ
ಬಿಎಂಎಸ್‌ ಕಾಲೇಜಿನ ಸಾರ್ವಜನಿಕ ಶಿಕ್ಷಣ ದತ್ತಿ ಟ್ರಸ್ಟ್‌ನಿಂದ ಅಕ್ರಮ: ಎಚ್‌.ಡಿ.ಕೆ (HT_PRINT)

ಬೆಂಗಳೂರು: ಬೆಂಗಳೂರಿನ BMS ಸಾರ್ವಜನಿಕ ಶಿಕ್ಷಣ ದತ್ತಿ ಟ್ರಸ್ಟ್ ಗೆ ದಾನಿ ಟ್ರಸ್ಟಿ ಮತ್ತು ಅಜೀವ ಟ್ರಸ್ಟಿ ನೇಮಕಾತಿ, ಸರಕಾರದ ನಿಯಮಗಳನ್ನು ಉಲ್ಲಂಘಿಸಿ ಎಸಗಿದ ಅಕ್ರಮಗಳು, ಟ್ರಸ್ಟಿನ ಮೂಲ ಡೀಡ್ ನ ಷರತ್ತುಗಳ ಉಲ್ಲಂಘನೆ ಇತ್ಯಾದಿಗಳ ಕುರಿತಾದ ಮಹತ್ವದ ದಾಖಲೆಗಳನ್ನು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭೆಯಲ್ಲಿ ಇಂದು ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಸಿಎಂ ಹೇಳಿದ ಹತ್ತು ಅಂಶಗಳು ಈ ಮುಂದಿನಂತೆ ಇವೆ.

ಟ್ರೆಂಡಿಂಗ್​ ಸುದ್ದಿ

ಬರದ ನಡುವೆ ಗ್ಯಾರಂಟಿ ಜಾರಿ, ಪರಿಹಾರದ ಚೊಂಬು; ಸಿದ್ದರಾಮಯ್ಯ- ಡಿಕೆಶಿ ಜೋಡಿ ಸರ್ಕಾರಕ್ಕೆ ವರ್ಷ, ಹೇಗಿತ್ತು ಈ ಹಾದಿ, 10 ಅಂಶಗಳು

Hassan Scandal: ರೇವಣ್ಣಗೆ ಎರಡನೇ ಪ್ರಕರಣದಲ್ಲೂ ಜಾಮೀನು, ನ್ಯಾಯಾಧೀಶರ ಸೂಚನೆ ಏನು

ಗ್ಯಾರಂಟಿ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲೊಲ್ಲ, ಅದು ಬಿಜೆಪಿ ಅಪಪ್ರಚಾರವಷ್ಟೇ: ಸಿಎಂ ಸಿದ್ದರಾಮಯ್ಯ

ಕರ್ನಾಟಕದಲ್ಲಿ ಪೂರ್ವ ಮುಂಗಾರು; 18 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ, ಇತ್ತೀಚಿನ 10 ಸುದ್ದಿ ಮುಖ್ಯಾಂಶ

1. ಶ್ರೀ ಬಿ.ಎಂ.ಶ್ರೀನಿವಾಸಯ್ಯ ಅವರು ಸಮಾಜ ಸೇವೆ ಮಾಡಬೇಕು ಎಂಬ ಸ್ವಚ್ಛ ಮತ್ತು ಉನ್ನತ ಕನಸು ಕಟ್ಟಿಕೊಂಡು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಪುಂಗನೂರು ಪಟ್ಟಣದಿಂದ ಬೆಂಗಳೂರಿಗೆ ಬರುತ್ತಾರೆ.

2. ಶ್ರೀ ಶ್ರೀನಿವಾಸಯ್ಯ ಅವರ ಹೃದಯ ವೈಶಾಲ್ಯತೆ ಹೇಗಿರುತ್ತದೆ ಎಂದರೆ; ಅವರಿಗೆ ಸೇವೆ-ಉದಾರತೆ ಬಿಟ್ಟರೆ ಅವರಲ್ಲಿ ಏನೂ ಇರುವುದಿಲ್ಲ. ಆವತ್ತೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೇಡಿಯಾಲಜಿ ಬ್ಲಾಕ್ ಕಟ್ಟಬೇಕಾದರೆ, ಶ್ರೀನಿವಾಸಯ್ಯನವರೊಬ್ಬರೇ ಅಷ್ಟೂ ದೇಣಿಗೆ ನೀಡಿದ್ದರಂತೆ. ಅವರ ಸೇವಾ ತತ್ಪರತೆ ಮೈಸೂರು ಮಹಾರಾಜರಿಗೆ ಗೊತ್ತಾಗುತ್ತದೆ.

3. ನಮ್ಮ ಮಹಾರಾಜರ ಹೃದಯ ವೈಶಾಲ್ಯತೆ ಮತ್ತು ಜನಪರ ಕಾಳಜಿಯ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಮಹಾರಾಜರು, ಶ್ರೀನಿವಾಸಯ್ಯ ಅವರನ್ನು ಗುರುತಿಸುತ್ತಾರೆ. “ಧರ್ಮಪ್ರಕಾಶ ರಾಜಕಾರ್ಯಪ್ರಸಕ್ತ” ಎಂಬ ಬಿರುದು ನೀಡಿ ಗೌರವಿಸುತ್ತಾರೆ. ಅಷ್ಟಕ್ಕೇ ನಿಲ್ಲದ ಶ್ರೀನಿವಾಸಯ್ಯ ಅವರು, ತಮ್ಮ ಸಮಾಜ ಸೇವಾ ಕೈಂಕರ್ಯವನ್ನೂ ಮುಂದುವರಿಸುತ್ತಾರೆ.

4. ಮೈಸೂರು ಮಹಾರಾಜರ ಪ್ರೋತ್ಸಾಹದಿಂದ 1946ರಲ್ಲಿ ಶ್ರೀನಿವಾಸಯ್ಯ ಅವರು ʼBMS ಎಂಜಿನಿರಿಂಗ್ ಕಾಲೇಜ್ʼ ಅನ್ನು ಸ್ಥಾಪನೆ ಮಾಡುತ್ತಾರೆ.

5. ಈ ಕಾಲೇಜಿನ ಹೆಗ್ಗಳಿಕೆ ಎಂದರೆ; ಇದು ಇಡೀ ಭಾರತದಲ್ಲಿ ಸ್ಥಾಪನೆಯಾದ ಮೊತ್ತ ಮೊದಲ ಖಾಸಗಿ ಎಂಜಿನಿಯರಿಂಗ್ ಕಾಲೇಜು. ಅದೂ ಕರ್ನಾಟಕದಲ್ಲಿ, ಅಂದಿನ ಮೈಸೂರು ರಾಜ್ಯದಲ್ಲಿ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವುದಕ್ಕೆ ಕೇವಲ ಒಂದೇ ವರ್ಷಕ್ಕೆ ಮೊದಲು ಆರಂಭವಾಗಿತ್ತು. ಅಲ್ಲಿಗೆ, ಈ ಕಾಲೇಜಿನ ಹೆಗ್ಗಳಿಕೆ, ಪರಂಪರೆ ಎಂಥದ್ದು ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

6. ಇಂಥ ಶ್ರೀನಿವಾಸಯ್ಯನವರು 1953ರಲ್ಲಿ ಮರಣ ಹೊಂದುತ್ತಾರೆ. ಅವರು ಕೇವಲ 50 ವರ್ಷ ವಯಸ್ಸಾಗುವುದಕ್ಕೆ ಮೊದಲೇ ಜೀವ ಬಿಡುತ್ತಾರೆ.

7. ಶ್ರೀ ಶ್ರೀನಿವಾಸಯ್ಯ ಅವರಿಗೆ ಇಬ್ಬರು ಪತ್ನಿಯರು, ಒಬ್ಬರು; ಲಕ್ಷ್ಮಮ್ಮ, ಇನ್ನೊಬ್ಬರು; ಲಕ್ಷ್ಮೀದೇವಮ್ಮ. ಅವರಿಗೆ ಒಬ್ಬರೇ ಪುತ್ರರು, ಅವರೇ ಬಿ.ಎಸ್.ನಾರಾಯಣ್.

8. ತಂದೆಯ ನಿಧನದ ನಂತರ ಕಾಲೇಜಿನ ಜವಾಬ್ದಾರಿ ವಹಿಸಿಕೊಳ್ಳುವ ಬಿ.ಎಸ್.ನಾರಾಯಣ್ ಅವರು, BMS ಎಂಜಿನಿಯರಿಂಗ್ ಕಾಲೇಜ್ʼನ ದಿನನಿತ್ಯದ ನಿರ್ವಹಣೆ, ಆಡಳಿತ ಇತ್ಯಾದಿಗಳನ್ನು ಸುಸೂತ್ರವಾಗಿ ನಡೆಸುವ ಉದ್ದೇಶದಿಂದ ಒಂದು ಟ್ರಸ್ಟ್ ರಚನೆ ಮಾಡುತ್ತಾರೆ. ಆ ಟ್ರಸ್ಟನ್ನು ತಮ್ಮ ತಂದೆಯವರ ಹೆಸರಿನಲ್ಲಿಯೇ ಸ್ಥಾಪನೆ ಮಾಡುತ್ತಾರೆ. ಹೀಗೆ ʼಧರ್ಮಪ್ರಕಾಶ ರಾಜಕಾರ್ಯಪ್ರಸಕ್ತ ಎಂ.ಶ್ರೀನಿವಾಸಯ್ಯ ಎಜ್ಯುಕೇಷನಲ್ ಟ್ರಸ್ಟ್ʼ 1957ರಲ್ಲಿ ಅಸ್ತಿತ್ವಕ್ಕೆ ಬರುತ್ತದೆ.

9. ಆಗ ಒಂದು ಟ್ರಸ್ಟ್ ಡೀಡ್ ಕೂಡ ತಯಾರು ಆಗುತ್ತದೆ. ಅದನ್ನು ನಮ್ಮ ಘನವೇತ್ತ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾಗಿದ್ದ (1993-1994)

ಶ್ರೀ ಎಂ.ಎನ್.ವೆಂಕಟಾಚಲಯ್ಯ ಅವರು 1957ರಲ್ಲಿಯೇ ಡೀಡ್ʼನ (ನಂಬಿಕೆಯ ಪತ್ರ) ಕರಡು ತಯಾರಿಸಿಕೊಟ್ಟು 2-12-1957ರಂದು ಅದನ್ನು ನೋಂದಣಿಯನ್ನೂ ಮಾಡಿಸಿದ್ದರು. ಅಲ್ಲಿಗೆ ಇದು ಅಧಿಕೃತ ದಾಖಲೆಯಾಗಿ ಪರಿಣಮಿಸಿತು. ಕೆಲ ದಿನಗಳ ಕಾಲ ಎಂ.ಎನ್.ವೆಂಕಟಾಚಲಯ್ಯ ಅವರು ಕೂಡ ಈ ಟ್ರಸ್ಟಿನ ಟ್ರಸ್ಟಿ ಆಗಿ ಕೆಲಸ ಮಾಡಿದ್ದರು.

10. ʼಧರ್ಮಪ್ರಕಾಶ ರಾಜಕಾರ್ಯಪ್ರಸಕ್ತ ಎಂ.ಶ್ರೀನಿವಾಸಯ್ಯ ಎಜ್ಯುಕೇಷನಲ್ ಟ್ರಸ್ಟ್ʼನ ಮೊದಲ ಅಧ್ಯಕ್ಷರಾಗಿ ದಿವಂಗತ ಬಿ.ವಿ.ನಾರಾಯಣ ರೆಡ್ಡಿ ಅವರು ನೇಮಕವಾಗುತ್ತಾರೆ. ಅವರು ಅಂದಿನ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ʼನ ಜನರಲ್ ಮ್ಯಾನೇಜರ್ ಆಗಿ ನಿವೃತ್ತರಾಗಿದ್ದರು. ಅವರ ನಂತರ ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಕಡಿದಾಳ್ ಮಂಜಪ್ಪ ಅವರೂ ಈ ಟ್ರಸ್ಟಿನ ಅಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿದ್ದರು.

ಧರ್ಮಪ್ರಕಾಶ ರಾಜಕಾರ್ಯಪ್ರಸಕ್ತ ಎಂ.ಶ್ರೀನಿವಾಸಯ್ಯ ಎಜ್ಯುಕೇಷನಲ್ ಟ್ರಸ್ಟ್‌ನಡಿಯಲ್ಲಿ ಕಾರ್ಯನಿರ್ವಹಿಸುವ ಶಿಕ್ಷಣ ಸಂಸ್ಥೆಗಳು

BMS ಎಂಜಿನೀಯರಿಂಗ್ ಕಾಲೇಜು- ಬುಲ್ ಟೆಂಪಲ್ ರಸ್ತೆ, ಬಸವನಗುಡಿ, BMS ಸಂಜೆ ಎಂಜಿನಿಯರಿಂಗ್ ಕಾಲೇಜ್, ಬುಲ್ ಟೆಂಪಲ್ ರಸ್ತೆ, ಬಸವನಗುಡಿ, BMS ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ (ಎಂಜಿನೀಯರಿಂಗ್ ಕಾಲೇಜು), ಯಲಹಂಕ, BMS ಮಹಿಳಾ ಕಾಲೇಜು, ಬಸವನಗುಡಿ, BMS ಕಾನೂನು ಕಾಲೇಜು, ಬಸವನಗುಡಿ, ಬೆಂಗಳೂರು

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ