logo
ಕನ್ನಡ ಸುದ್ದಿ  /  ಕರ್ನಾಟಕ  /  Bagalkot News: ಚುನಾವಣೆಗೆ ಹೊರಟ ಸಿಬ್ಬಂದಿ ಮುಧೋಳದಲ್ಲಿ ಕುಸಿದು ಬಿದ್ದು ಸಾವು

Bagalkot News: ಚುನಾವಣೆಗೆ ಹೊರಟ ಸಿಬ್ಬಂದಿ ಮುಧೋಳದಲ್ಲಿ ಕುಸಿದು ಬಿದ್ದು ಸಾವು

HT Kannada Desk HT Kannada

May 06, 2024 04:19 PM IST

ಮುಧೋಳದಲ್ಲಿ ಮೃತಪಟ್ಟ ಗೋವಿಂದಪ್ಪ ಸಿದ್ದಾಪುರ

    • ಬಾಗಲಕೋಟೆ ಜಿಲ್ಲೆಯ ಮುಧೋಳದಿಂದ ಚುನಾವಣೆ ಕಾರ್ಯಕ್ಕೆಂದು ಹೊರಟಿದ್ದ ಶಿಕ್ಷಕರು ಮೃತಪಟ್ಟ ಘಟನೆ ನಡೆದಿದೆ. 
ಮುಧೋಳದಲ್ಲಿ ಮೃತಪಟ್ಟ ಗೋವಿಂದಪ್ಪ ಸಿದ್ದಾಪುರ
ಮುಧೋಳದಲ್ಲಿ ಮೃತಪಟ್ಟ ಗೋವಿಂದಪ್ಪ ಸಿದ್ದಾಪುರ

ಬಾಗಲಕೋಟೆ: ಮೊದಲ ಹಂತದ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿತ್ತು.ಈಗ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಚುನಾವಣೆಗೆ ಹೊರಟಿದ್ದ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಮುಧೋಳ ಬಸ್‌ ನಿಲ್ದಾಣಕ್ಕೆ ಬಂದು ಮತದಾನ ಕಾರ್ಯಕ್ಕೆ ಹೊರಡಬೇಕಾಗಿದ್ದ ವೇಳೆ ಈ ಘಟನೆ ನಡೆದಿದೆ. ಏಕಾಏಕಿ ಕುಸಿದು ಬಿದ್ದ ಅವರನ್ನು ಅಲ್ಲಿದ್ದವರು ಆರೈಕೆ ಮಾಡಿದರು. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ತೀವ್ರ ಹೃದಯಾಘಾತದಿಂದ ಅವರು ಮೃತಪಟ್ಟಿರುವುದಾಗಿ ಮುಧೋಳ ಆಸ್ಪತ್ರೆಯ ವೈದ್ಯಾಧಿಕಾರಿಗಳು ಪ್ರಕಟಿಸಿದರು.

ಟ್ರೆಂಡಿಂಗ್​ ಸುದ್ದಿ

ಅಂಜಲಿ ಅಂಬಿಗೇರ ಸಹೋದರಿ ಯಶೋದಾ ಆತ್ಮಹತ್ಯೆ ಯತ್ನ, ಹುಬ್ಬಳ್ಳಿ ಅಂಜಲಿ ಹತ್ಯೆ ಕೇಸ್‌ ಸಂಬಂಧಿಸಿದ ಇತ್ತೀಚಿನ 10 ವಿದ್ಯಮಾನಗಳು

ಕರ್ನಾಟಕ ಹವಾಮಾನ ಮೇ 19; ರಾಜ್ಯದಲ್ಲಿ ಮಳೆ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಲ್ಲಿ ಆರೆಂಜ್ ಅಲರ್ಟ್‌, 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

ಮುಧೋಳ ತಾಲ್ಲೂಕಿನ ಬಿದರಿ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದ ಗೋವಿಂದಪ್ಪ ಸಿದ್ದಾಪುರ ಅವರು ಮುಧೋಳ ಪಟ್ಟಣದಲ್ಲಿಯೇ ನೆಲೆಸಿದ್ದಾರೆ. ಅವರಿಗೆ ಈ ಬಾರಿ ಚುನಾವಣೆಯ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಲಾಗಿತ್ತು. ಈಗಾಗಲೇ ತರಬೇತಿಗಳಲ್ಲೂ ಅವರು ಭಾಗಿಯಾಗಿದ್ದರು. ಅವರಿಗೆ ಮುಧೋಳ ಪಕ್ಕದ ಜಮಖಂಡಿ ಮತ ಕ್ಷೇತ್ರ ವ್ಯಾಪ್ತಿಯ ಮೈಗೂರ ಗ್ರಾಮದ ಮತ ಕ್ಷೇತ್ರಕ್ಕೆ ನಿಯೋಜನೆ ಮಾಡಲಾಗಿತ್ತು.

ಬೆಳಿಗ್ಗೆಯೇ ಮನೆಯಿಂದ ಬಂದಿದ್ದ ಅವರು ಜಮಖಂಡಿಗೆ ತೆರಳಬೇಕಿತ್ತು. ಅಲ್ಲಿಯೇ ಮಸ್ಟರಿಂಗ್‌ ಕೇಂದ್ರದಲ್ಲಿ ಅವರಿಗೆ ಚುನಾವಣೆಗೆ ಸಂಬಂಧಿಸಿದ ಕಿರು ಮಾಹಿತಿ, ಮತಯಂತ್ರಗಳನ್ನು ನೀಡುವುದಿತ್ತು. ಬಸ್‌ ಏರುವ ಮುನ್ನ ನಿಲ್ದಾಣದಲ್ಲಿ ತಲೆ ಸುತ್ತು ಬಂದು ಏಕಾಏಕಿ ಅವರು ಕುಸಿದು ಬಿದ್ದರು. ಜತೆಯಲ್ಲಿದ್ದವರು ಕೂಡಲೇ ಅವರನ್ನು ಆರೈಕೆ ಮಾಡಲು ಯತ್ನಿಸಿದರು. ಸಮೀಪದಲ್ಲೇ ಇದ್ದ ಆಸ್ಪತ್ರೆಗೆ ಕರೆದೊಯ್ದರು. ಅವರಿಗೆ ಚಿಕಿತ್ಸೆ ನೀಡಿದರೂ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ಧಾರೆ ಎಂದು ವೈದ್ಯರು ಮಾಹಿತಿ ನೀಡಿದರು.

ಆನಂತರ ಕುಟುಂಬದವರಿಗೆ ಮಾಹಿತಿ ನೀಡಿ ಮೃತರ ದೇಹವನ್ನು ಮನೆಗೆ ರವಾನಿಸಲಾಯಿತು. ಮುಧೋಳದ ನಿವಾಸಕ್ಕೆ ಆಗಮಿಸಿದ ಅಧಿಕಾರಿಗಳು ಸಂತಾಪ ಸೂಚಿಸಿದರು. ಕುಟುಂಬದವರ ಆಕ್ರಂದನವೂ ಮುಗಿಲುಮುಟ್ಟಿತ್ತು.

ಶಿಕ್ಷಕರಾಗಿ ಗೋವಿಂದಪ್ಪ ಅವರು ಒಳ್ಳೆಯ ಹೆಸರು ಮಾಡಿದ್ದರು. ಚುನಾವಣೆಯ ಎಲ್ಲಾ ತರಬೇತಿಗಳಲ್ಲೂ ಭಾಗಿಯಾಗಿದ್ದರು. ಇಂದು ಚುನಾವಣೆ ಕಾರ್ಯಕ್ಕೆ ತೆರಳಬೇಕಾಗಿತ್ತು. ಏಕಾಏಕಿ ಈ ರೀತಿ ಆಗಿ ಅವರು ಮೃತಪಟ್ಟಿರುವುದು ಬೇಸರ ತಂದಿದೆ ಎಂದು ಸಹದ್ಯೋಗಿಗಳು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ