logo
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bailu Mudukere Mane: 3 ಶತಮಾನಗಳ ಇತಿಹಾಸದ ಬೈಲು ಮೂಡುಕೆರೆ ಮನೆ ಹೇಗಿದೆ? ಇತಿಹಾಸ ಏನು? ಇಲ್ಲಿದೆ ಫೋಟೋ ವಿವರ

Bailu Mudukere Mane: 3 ಶತಮಾನಗಳ ಇತಿಹಾಸದ ಬೈಲು ಮೂಡುಕೆರೆ ಮನೆ ಹೇಗಿದೆ? ಇತಿಹಾಸ ಏನು? ಇಲ್ಲಿದೆ ಫೋಟೋ ವಿವರ

Dec 28, 2022 12:34 PM IST

Bailu Mudukere Mane: 3 ಶತಮಾನಗಳ ಇತಿಹಾಸ ಇರುವ ಬೈಲು ಮೂಡುಕೆರೆ ಮನೆ ನವೀಕರಣಗೊಂಡಿದೆ. ಜನವರಿ 8ರಂದು ನವೀಕೃತ ಮನೆಯ ಗೃಹ ಪ್ರವೇಶ. ಏತಮೊಗರು ದೊಡ್ಡಮನೆ ಖ್ಯಾತಿಯ ಈ ಮನೆಯ ಇತಿಹಾಸದ ಕಡೆಗೊಂದು ಇಣುಕುನೋಟ ಇಲ್ಲಿದೆ. 

ಏತಮೊಗರು ದೊಡ್ಡಮನೆಯೆಂಬ ಈ ತಾಣವು ಹಿಂದೆ ಜೈನ ಪಾಳೆಯಗಾರರ ವಶದಲ್ಲಿದ್ದು ಇದರಲ್ಲಿ ಪಂಚ ಶಕ್ತಿಗಳನೊಳಗೊಂಡ ಜುಮಾದಿ ಮತ್ತು ಬಂಟನ ಚಾವಡಿಯಲ್ಲಿ ಉಯ್ಯಾಲೆಗಳಿವೆ. ಇವು ಒಂದು ಕಾಲದಲ್ಲಿ ಬಿಲ್ಲವ ವರ್ಗದ ಪಂಡ ಪೂಜಾರಿಯ ಅಧೀನದಲ್ಲಿದ್ದು ಅವರಿಂದ ಪೂಜಿಸಲ್ಪಡುತ್ತಿತ್ತು. ನಂತರ ಒಂದನೆ ಯಜಮಾನರಾಗಿದ್ದ ಬೈಲು ಮೂಡುಕರೆ ದಿ. ತೌಡ ಶೆಟ್ಟಿ ಎಂಬವರ ಅಳಿಯಂದಿರಲ್ಲಿ ಹಿರೇ ಭಾಗದ ಕಿಂಞಣ್ಣ ಶೆಟ್ಟಿ ಎಂಬವರು ಸುಮಾರು 1830ರ ದಶಕದಲ್ಲಿ ಏತಮೊಗರು ದೊಡ್ಡಮನೆ ಮತ್ತು ಕೊಪ್ಪಲ ಎಂಬ ಆಸ್ತಿಗಳನ್ನು ಕ್ರಯಕ್ಕೆ ಖರೀದಿಸಿದಾಗ ಈ ಆಸ್ತಿಯ ಮಾಲಕತ್ವವು ಮೂಡುಕರೆಯವರ ಅಧೀನಕ್ಕೆ ಬಂತು. ಕಿಂಞಣ್ಣ ಶೆಟ್ಟಿಯವರು ಕುಟುಂಬದ ಸಂಪತ್ತನ್ನು ವೃದ್ಧಿ ಪಡಿಸಿದರು. ಇವರ ಕಾಲದಲ್ಲಿ ಮನೆಯಲ್ಲಿ ಕಂಬಳದ ಕೋಣಗಳಿದ್ದು ಬಹುಮಾನಗಳನ್ನು ಪಡೆದು ಊರಿನ ಗೌರವವನ್ನು ಪಸರಿಸಿ ಹೆಸರುವಾಸಿಯಾಗಿದ್ದರು.
(1 / 6)
ಏತಮೊಗರು ದೊಡ್ಡಮನೆಯೆಂಬ ಈ ತಾಣವು ಹಿಂದೆ ಜೈನ ಪಾಳೆಯಗಾರರ ವಶದಲ್ಲಿದ್ದು ಇದರಲ್ಲಿ ಪಂಚ ಶಕ್ತಿಗಳನೊಳಗೊಂಡ ಜುಮಾದಿ ಮತ್ತು ಬಂಟನ ಚಾವಡಿಯಲ್ಲಿ ಉಯ್ಯಾಲೆಗಳಿವೆ. ಇವು ಒಂದು ಕಾಲದಲ್ಲಿ ಬಿಲ್ಲವ ವರ್ಗದ ಪಂಡ ಪೂಜಾರಿಯ ಅಧೀನದಲ್ಲಿದ್ದು ಅವರಿಂದ ಪೂಜಿಸಲ್ಪಡುತ್ತಿತ್ತು. ನಂತರ ಒಂದನೆ ಯಜಮಾನರಾಗಿದ್ದ ಬೈಲು ಮೂಡುಕರೆ ದಿ. ತೌಡ ಶೆಟ್ಟಿ ಎಂಬವರ ಅಳಿಯಂದಿರಲ್ಲಿ ಹಿರೇ ಭಾಗದ ಕಿಂಞಣ್ಣ ಶೆಟ್ಟಿ ಎಂಬವರು ಸುಮಾರು 1830ರ ದಶಕದಲ್ಲಿ ಏತಮೊಗರು ದೊಡ್ಡಮನೆ ಮತ್ತು ಕೊಪ್ಪಲ ಎಂಬ ಆಸ್ತಿಗಳನ್ನು ಕ್ರಯಕ್ಕೆ ಖರೀದಿಸಿದಾಗ ಈ ಆಸ್ತಿಯ ಮಾಲಕತ್ವವು ಮೂಡುಕರೆಯವರ ಅಧೀನಕ್ಕೆ ಬಂತು. ಕಿಂಞಣ್ಣ ಶೆಟ್ಟಿಯವರು ಕುಟುಂಬದ ಸಂಪತ್ತನ್ನು ವೃದ್ಧಿ ಪಡಿಸಿದರು. ಇವರ ಕಾಲದಲ್ಲಿ ಮನೆಯಲ್ಲಿ ಕಂಬಳದ ಕೋಣಗಳಿದ್ದು ಬಹುಮಾನಗಳನ್ನು ಪಡೆದು ಊರಿನ ಗೌರವವನ್ನು ಪಸರಿಸಿ ಹೆಸರುವಾಸಿಯಾಗಿದ್ದರು.(Navanitha Balajith)
1956 ರ ಸುಮಾರಿಗೆ 5ನೇ ಕುಳ ಮುಂಡಪ್ಪ ಶೆಟ್ರು ಪೂಜೆಗಳು ನಡೆಯುವಂತೆ ವ್ಯವಸ್ಥೆ ಮಾಡಿದರು. 1976 ಸರಿಸುಮಾರಿಗೆ ತಲೆಮಾರಿನ ಚಂದ್ರಶೇಖರ ಶೆಟ್ರು ಈ ದೇವಸ್ಥಾನಕ್ಕೆ ಸುತ್ತು ಪೌಳಿ, ನಾಗಾಲಯ ದೈವಗಳ ಸಾನಿಧ್ಯ ಪೂರ್ಣ ದೇವಸ್ಥಾನದ ಆಕಾರವನ್ನು ಕೊಟ್ಟರು. ಇತ್ಯಾದಿಗಳನ್ನು ಮಾಡಿ ನಿತ್ಯ ಪೂಜೆಗಳು ನಡೆಯುವಂತೆ ಮಂಜುನಾಥ ಭಂಡಾರಿಯವರು ಶ್ರಮಪಟ್ಟು ನಂತರದ ದಿನಗಳಲ್ಲಿ ಇವರ ಅಳಿಯ 6ನೇ ತಲೆಮಾರಿನ  ಕುಟುಂಬಿಕರನ್ನೂ ಬಂಧು ಬಳಗವನ್ನೂ ಸೇರಿಸಿಕೊಂಡು ಎರಡು ಬ್ರಹ್ಮಕಲಶವನ್ನು ಮಾಡಿದ್ದಾರೆ. ಈ ನಾಲ್ಕು ಬ್ರಹ್ಮಕಲಶಗಳೂ ಕೂಡಾ ಶ್ರೀ ಪಂಚಮಿಯಂದೇ ನಡೆದದ್ದು ವಿಶೇಷ. 
(2 / 6)

ಪ್ರಾರಂಭದಲ್ಲಿ ಹುಲ್ಲಿನ ಛಾವಣಿಯಾಗಿದ್ದ ಈ ಮನೆಗೆ ನಂತರದ ದಿನಗಳಲ್ಲಿ ತಪ್ಪಿ ಓಡು' ಎಂಬ ಕುಂಬಾರರಿಂದ ನಿರ್ಮಿಸಿದ ಹಂಚನ್ನು ಹಾಕಲಾಗಿತ್ತು. 19 ನೇ ಶತಮಾನದಲ್ಲಿ ಬಾಸೆಲ್ ಮಿಶನರಿಗಳಿಂದ ನಿರ್ಮಿಸಲ್ಪಟ್ಟ ಮಂಗಳೂರು ಹಂಚಿನ ಮನೆಯಾಗಿ ಪರಿವರ್ತನೆಗೊಂಡಿತು. 
(3 / 6)

ಈ ಮನೆಯ ವಿಶೇಷವೆಂದರೆ ಮೂಲದಲ್ಲಿ ಹಿರಿಯರು ಹಾಕಿದ ಕೆಸರು ಕಲ್ಲನ್ನು ಮತ್ತು ಪಂಚಾಂಗವನ್ನು ವಿಕೃತಗೊಳಿಸದೆ ಕಲ್ಲಿನ ಕಂಬ, ಮಣ್ಣಿನ ಗೋಡೆ, ಕೆಲವು ಕಡೆ ಕಲ್ಲಿನ ಗೋಡೆಯಿಂದ ಅಗತ್ಯಕ್ಕೆ ತಕ್ಕಂತೆ ವಾಸ್ತುಶಾಸ್ತ್ರಕ್ಕೆ ಕುಂದು ಬಾರದಂತೆ ನಾಲ್ಕು ಸುತ್ತಲೂ ಪಾಗಾರ, ಹಟ್ಟಿ-ಕೊಟ್ಟಿಗೆ ಬರಕಲ) ನಿರ್ಮಾಣವಾಗಿತ್ತು.
(4 / 6)

ಈಶಾನ್ಯದಲ್ಲಿ ಸದಾ ನೀರಿರುವ ದೊಡ್ಡ ಕೆರೆ ನಾಲ್ಕು ಸುತ್ತಲೂ ಭತ್ತ ಬೆಳೆಯುವ ಗದ್ದೆಗಳು ನೈರುತ್ಯದಲ್ಲಿ ನಾಗಾಲಯ ಇದಕ್ಕೆ ಎದುರಾಗಿ ಪಶ್ಚಿಮದಲ್ಲಿ ಮಾಗಣೆಯ ದೈವಗಳ ಸ್ಥಾನ ಈ ದೈವಗಳಿಗೂ, ಈ ನಾಗದೇವರ ಸಾನಿಧ್ಯಕ್ಕೂ ನೇರದೃಷ್ಟಿ ಸಂಪರ್ಕ ಇದೆ. ತೆಂಕು ದಿಕ್ಕಿಗೆ ವಿಶಾಲವಾದ ಅಂಗಳ. 
(5 / 6)

ಇದರ ತೆಂಕಿಗೆ 7 ಜೋಡಿ ಕೋಣಗಳ ಹಟ್ಟಿ ಅಲ್ಲಿಂದ ಉತ್ತರಕ್ಕೆ 9 ಕಲ್ಲಿನ ಕುಳಿಗಳು ಬತ್ತ ಕುಟ್ಟುವ ಬರಕಲ, ಆಯತ ಆಕಾರದಲ್ಲಿರುವ ಈ ಮನೆಯ ಮೇಲೆ 7 ಕೋಣೆಗಳುಳ್ಳ  ಮಾಳಿಗೆ ಈ ಮಾಳಿಗೆಗಳ ಮೇಲೆ ಮೆತ್ತಿಗೆ ರೂಪದಲ್ಲಿ ವಿಶಾಲವಾದ ಒಂದೇ ಮಾಳಿಗೆ. ಚಾವಡಿಯಲ್ಲಿ ದೊಡ್ಡದಾದ ಉಯ್ಯಾಲೆ ಇದೆ. ಈ ಉಯ್ಯಾಲೆ ರಾಜರಿಗೆ ಸಂಬಂಧ ಪಟ್ಟ ಮನೆಗಳಲ್ಲಿರುತ್ತದೆ.
(6 / 6)

    ಹಂಚಿಕೊಳ್ಳಲು ಲೇಖನಗಳು