logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Politics: ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಶೋಭಾಕರಂದ್ಲಾಜೆ, ಪ್ರತಿಪಕ್ಷ ನಾಯಕರಾಗಿ ಯತ್ನಾಳ್‌ ಹೆಸರು ಅಂತಿಮ ಸಾಧ್ಯತೆ

Karnataka Politics: ಕರ್ನಾಟಕ ಬಿಜೆಪಿ ಅಧ್ಯಕ್ಷರಾಗಿ ಶೋಭಾಕರಂದ್ಲಾಜೆ, ಪ್ರತಿಪಕ್ಷ ನಾಯಕರಾಗಿ ಯತ್ನಾಳ್‌ ಹೆಸರು ಅಂತಿಮ ಸಾಧ್ಯತೆ

Umesha Bhatta P H HT Kannada

Oct 23, 2023 08:36 PM IST

ಕರ್ನಾಟಕದಲ್ಲಿ ಬಿಜೆಪಿ ಅಧ್ಯಕ್ಷರ ನೇಮಕ ಚಟುವಟಿಕೆ ಮತ್ತೆ ಮುನ್ನಲೆಗೆ ಬಂದಿದೆ

    • Karnataka Bjp politics ಕರ್ನಾಟಕದಲ್ಲಿ ಪಕ್ಷದ ಅಧ್ಯಕ್ಷರು( Karnataka BJP president) ಹಾಗೂ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರ( Karnataka Assembly opposition leader) ನೇಮಕ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು. ಯಾರಿಗೆ ಅವಕಾಶ ಸಿಗಬಹುದು ಎನ್ನುವ ಚರ್ಚೆಗಳು ಪಕ್ಷದ ವಲಯದಲ್ಲಿ ನಡೆದಿವೆ. 
ಕರ್ನಾಟಕದಲ್ಲಿ ಬಿಜೆಪಿ ಅಧ್ಯಕ್ಷರ ನೇಮಕ ಚಟುವಟಿಕೆ ಮತ್ತೆ ಮುನ್ನಲೆಗೆ ಬಂದಿದೆ
ಕರ್ನಾಟಕದಲ್ಲಿ ಬಿಜೆಪಿ ಅಧ್ಯಕ್ಷರ ನೇಮಕ ಚಟುವಟಿಕೆ ಮತ್ತೆ ಮುನ್ನಲೆಗೆ ಬಂದಿದೆ

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿಗೆ ನೂತನ ಸಾರಥಿ ಹಾಗೂ ವಿಧಾನಸಭೆ, ವಿಧಾನಪರಿಷತ್ತಿನಲ್ಲಿ ಪಕ್ಷದ ನಾಯಕರ ನೇಮಕ ದಸರಾ ನಂತರ ಆಗಲಿದೆ ಎನ್ನುವ ಚರ್ಚೆಗಳು ನಡೆದಿವೆ. ಕೇಂದ್ರದ ಸಚಿವೆಯಾದ ಶೋಭಾ ಕರಂದ್ಲಾಜೆ ಅವರಿಗೆ ಪಕ್ಷದ ಅಧ್ಯಕ್ಷ ಸ್ಥಾನ ಹಾಗೂ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನ ಸಿಗಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಟ್ರೆಂಡಿಂಗ್​ ಸುದ್ದಿ

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

Hassan Scandal : ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ

Wildlife News: ಹುಲಿ ಉಗುರು ಪ್ರಕರಣ, ವನ್ಯಜೀವಿಗಳ ಅಂಗಾಂಗ ಹಸ್ತಾಂತರ ಇನ್ನಷ್ಟು ವಿಳಂಬ ಸಾಧ್ಯತೆ

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಹೆಚ್ಚುಸ್ಥಾನ ಗೆಲ್ಲಿಸಿಕೊಡುವ ಜತೆಗೆ ಪಕ್ಷ ಸಂಘಟನೆಗೆ ಬಲ ತುಂಬಲು ತಾವು ಹೇಳಿದವರನ್ನು ನೇಮಿಸುವಂತೆ ಪಟ್ಟು ಹಿಡಿದಿರುವುದು ವಿಳಂಬಕ್ಕೆ ಕಾರಣ. ಅದರಲ್ಲೂ ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರರಲ್ಲಿ ಎರಡಲ್ಲಿ ಒಂದು ಹುದ್ದೆ ಕೊಡಿಸಲಬೇಕು ಎನ್ನುವ ಹಠಕ್ಕೆ ಬಿದ್ದಿರುವುದರಿಂದ ಅಡ್ಡಿಯಾಗುತ್ತಿದ್ದು, ಇನ್ನಷ್ಟು ವಿಳಂಬಕ್ಕೆ ಅವಕಾಶ ನೀಡದೇ ವರಿಷ್ಠರು ಈಗ ಪ್ರಕ್ರಿಯೆ ಶುರು ಮಾಡಿದ್ದಾರೆ.

ಹಲವರ ಹೆಸರು ಪರಿಶೀಲನೆ

ಬಿಜೆಪಿ ವರಿಷ್ಠರು ಕರ್ನಾಟಕದಲ್ಲಿ ಜಾತಿ, ಪ್ರಾದೇಶಿಕತೆ ಆಧಾರದ ಮೇಲೆ ಪಕ್ಷದ ಅಧ್ಯಕ್ಷ ಸ್ಥಾನ ಹಾಗೂ ವಿಧಾನಸಭೆ, ವಿಧಾನಪರಿಷತ್ತಿನ ಪ್ರತಿಪಕ್ಷ ನಾಯಕರ ನೇಮಕದ ಹೆಸರುಗಳ ಪರಿಶೀಲನೆಯಲ್ಲಿದ್ದಾರೆ. ಲಿಂಗಾಯಿತ, ಒಕ್ಕಲಿಗ- ಹಿಂದುಳಿದ ವರ್ಗ- ಮಹಿಳೆ ಎನ್ನುವ ಲೆಕ್ಕಾಚಾರದಲ್ಲಿ ಹಲವು ನಾಯಕರ ಹೆಸರನ್ನು ಪರಿಶೀಲಿಸುತ್ತಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರದ ಸಚಿವೆಯಾದ ಶೋಭಾಕರಂದ್ಲಾಜೆ, ಹಿರಿಯ ನಾಯಕ ಬಸನಗೌಡ ಪಾಟೀಲ್‌ ಯತ್ನಾಳ್‌, ಮಾಜಿ ಡಿಸಿಎಂ ಡಾ.ಅಶ್ವಥ್‌ ನಾರಾಯಣ್‌, ಮಾಜಿ ಸಚಿವರಾದ ವಿ.ಸುನೀಲ್‌ ಕುಮಾರ್‌, ಶ್ರೀನಿವಾಸಪೂಜಾರಿ ಸಹಿತ ಹಲವರ ಹೆಸರು ಇದೆ. ಒಬ್ಬರನ್ನು ಅಧ್ಯಕ್ಷರನ್ನಾಗಿ ನೇಮಿಸಿದರೆ, ಮತ್ತೊಬ್ಬರನ್ನು ಪ್ರತಿಪಕ್ಷ ನಾಯಕರನ್ನಾಗಿ ನೇಮಿಸುವ ಇರಾದೆ ವರಿಷ್ಠರಲ್ಲಿದೆ. ಆದರೆ ಯಾರಿಗೆ ಯಾವ ಸ್ಥಾನ ಎನ್ನುವುದು ನಿಖರವಾಗಿಲ್ಲವಾದರೂ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಶೋಭಾ ಕರಂದ್ಲಾಜೆ, ಪ್ರತಿ ಪಕ್ಷ ನಾಯಕನ ಸ್ಥಾನಕ್ಕೆ ಬಸನಗೌಡ ಪಾಟೀಲ್‌ ಯತ್ನಾಳ್‌ ಹೆಸರು ಮುಂಚೂಣಿಯಲ್ಲಿದೆ ಎನ್ನಲಾಗುತ್ತಿದೆ.

ಶೋಭಾ ಕರಂದ್ಲಾಜೆ ಅವರು ಹಿರಿಯರಾಗಿದ್ದು ಬಿಜೆಪಿ ಎಲ್ಲ ಬಣಗಳೊಂದಿಗೆ ನಿಕಟತೆ ಹೊಂದಿದ್ದಾರೆ. ಅವರ ನೇಮಕಕ್ಕೆ ಮುಖ್ಯವಾಗಿ ಮಾಜಿ ಸಿಎಂ.ಯಡಿಯೂರಪ್ಪ ಅವರ ವಿರೋಧವೂ ಅಷ್ಟಾಗಿಲ್ಲ. ಮಹಿಳೆ ಹಾಗೂ ಸಂಘಟನಾ ಶಕ್ತಿಯೂ ಇರುವುದರಿಂದ ಶೋಭಾ ಅವರಿಗೆ ಅಧ್ಯಕ್ಷಗಾದಿ ಒಲಿಯಬಹುದು ಎಂಬ ಅಭಿಪ್ರಾಯ ಪಕ್ಷದಲ್ಲಿದೆ.

ಇದೇ ರೀತಿ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಉತ್ತರ ಕರ್ನಾಟಕದವರೇ ಆದ ಬಸವರಾಜ ಬೊಮ್ಮಾಯಿ ಇಲ್ಲವೇ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಲ್ಲಿ ಒಬ್ಬರ ಹೆಸರಿದ್ದು, ಆಕ್ರಮಣಕಾರಿಯಾಗಿರುವವರನ್ನು ನೇಮಿಸಬೇಕು ಎನ್ನುವುದು ವರಿಷ್ಠರ ಇರಾದೆ. ಇದರಿಂದ ಯತ್ನಾಳರಿಗೆ ಪ್ರತಿಪಕ್ಷ ನಾಯಕನ ಹುದ್ದೆ ಒಲಿದರೂ ಅಚ್ಚರಿಯಿಲ್ಲ ಎನ್ನುವುದು ಹಿರಿಯೊಬ್ಬರ ಅಭಿಪ್ರಾಯ.

ಯಡಿಯೂರಪ್ಪ ಪಟ್ಟು

ಆದರೆ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಸ್ಥಾನ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಕೆಲ ದಿನಗಳ ಹಿಂದೆ ದೆಹಲಿಗೆ ಹೋಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ವರಿಷ್ಠರನ್ನು ಭೇಟಿ ಮಾಡಿದಾಗ ಪಕ್ಷದಲ್ಲಿ ಯುವಕರಿಗೆ ಅವಕಾಶ ಮಾಡಿಕೊಡಿ. ಬಿ. ವೈ. ವಿಜಯೇಂದ್ರ ಪಕ್ಷ ಕಟ್ಟಲು ಸಮರ್ಥರಿದ್ದಾರೆ. ಅವರಿಗೆ ಅವಕಾಶ ಮಾಡಿಕೊಟ್ಟರೆ ಕರ್ನಾಟಕದಲ್ಲಿ ಪಕ್ಷ ಸದೃಢವಾಗಿ ಬೆಳೆದು ಮತ್ತೆ ಅಧಿಕಾರಕ್ಕೆ ಬರಲಿದೆ. ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಸಹಕಾರಿಯಾಗಲಿದೆ ಎನ್ನುವ ಮಾತನ್ನು ಹೇಳಿದ್ದಾರೆ ಎನ್ನಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಹಿರಿಯರಲ್ಲಿ ಯಾರನ್ನು ನೇಮಿಸಿದರೆ ಸೂಕ್ತ ಎನ್ನುವ ಸಲಹೆಯನ್ನು ಕೇಳಿದಾಗ ಯಡಿಯೂರಪ್ಪ ಅವರು ಶೋಭಾ ಕರಂದ್ಲಾಜೆ ಅವರು ಆದರೆ ಓಕೆ ಎನ್ನುವ ಅಭಿಪ್ರಾಯ ತಿಳಿಸಿದ್ದಾರೆ. ಶೋಭಾ ಕರಂದ್ಲಾಜೆ ಅಧ್ಯಕ್ಷರಾದರೆ ವಿಜಯೇಂದ್ರನಿಗೆ ಪ್ರತಿಪಕ್ಷ ನಾಯಕ ಸ್ಥಾನ ಕೊಟ್ಟರೂ ತೊಂದರೆಯಿಲ್ಲ ಎನ್ನುವುದು ಯಡಿಯೂರಪ್ಪ ಅಭಿಪ್ರಾಯವಾಗಿತ್ತು ಎನ್ನುವುದು ಪಕ್ಷದ ಮೂಲಗಳು ತಿಳಿಸಿವೆ.

ವಿಳಂಬದಿಂದ ಹೊಡೆತ

ಬಿಜೆಪಿ ಹೊಸ ಅಧ್ಯಕ್ಷರ ನೇಮಕ, ಪ್ರತಿಪಕ್ಷ ನಾಯಕರ ನೇಮಕ ವಿಚಾರದಲ್ಲಿ ಆರು ತಿಂಗಳನ್ನೇ ಕಳೆದಿದೆ. ಈವರೆಗೂ ಪಕ್ಷಕ್ಕೆ ಹೊಸ ಅಧ್ಯಕ್ಷರ ನೇಮಕವಾಗದೇ ಇರುವುದು, ಉಭಯ ಸದನಗಳಲ್ಲಿ ಅಧಿಕೃತ ನಾಯಕರೇ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ. ಇದರಿಂದ ಪಕ್ಷವನ್ನು ಬಿಟ್ಟು ಹೋಗುವವರ ಸಂಖ್ಯೆ ಹೆಚ್ಚುತ್ತಿದ್ದು. ಇದು ಮುಂದಿನ ದಿನಗಳಲ್ಲಿ ಅಧಿಕವಾಗಬಬಹುದು. ಇದನ್ನು ತಪ್ಪಿಸಲು ಬೇಗನೇ ಹೊಸ ಅಧ್ಯಕ್ಷರ ನೇಮಕ ಮಾಡಬೇಕು ಎನ್ನುವ ಬೇಡಿಕೆ ಪಕ್ಷದ ವಲಯದಲ್ಲಿ ಜೋರಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ವರಿಷ್ಠರು ಮತ್ತೊಂದು ಸುತ್ತಿನ ಪರೀಕ್ಷೆ ಆರಂಭಿಸಿದ್ದಾರೆ. ಶೋಭಾ ಕರಂದ್ಲಾಜೆ ನೇಮಿಸಿದರೆ ಹೇಗೆ ಎನ್ನುವ ಅಭಿಪ್ರಾಯ ಆಲಿಸುತ್ತಿರುವುದು ಇಂತಹ ಪರೀಕ್ಷಾರ್ಥ ಪ್ರಯೋಗದ ಭಾಗವೇ ಆಗಿದೆ ಎಂದು ಹೇಳಲಾಗುತ್ತಿದೆ.

ಶೋಭಾ ಪ್ರತಿಕ್ರಿಯೆ

ಮೈಸೂರು ದಸರಾದಲ್ಲಿ ಭಾಗಿಯಾಗಲು ಮೈಸೂರಿಗೆ ಆಗಮಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ನಾನೀಗ ಕೇಂದ್ರ ಸಚಿವೆಯಾಗಿ ಸಂತೋಷದಿಂದ ಇದ್ದೇನೆ. ಹಲವು ರಾಜ್ಯಗಳಿಗೆ ಭೇಟಿ ನೀಡುತ್ತಿರುವೆ. ಇಲಾಖೆಯಲ್ಲಿಯೇ ಹೆಚ್ಚಿನ ಕೆಲಸವಿದೆ. ಅದನ್ನು ನಿಭಾಯಿಸುವೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಬಗ್ಗೆ ಮಾಹಿತಿ ಗೊತ್ತಿಲ್ಲ ಎಂದು ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ