logo
ಕನ್ನಡ ಸುದ್ದಿ  /  ಕರ್ನಾಟಕ  /  Railway News: ಬೇಸಿಗೆ ರಜೆ, ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ರೈಲು, 6 ರೈಲುಗಳಲ್ಲಿ ಬೋಗಿಗಳ ಹೆಚ್ಚಳ

Railway News: ಬೇಸಿಗೆ ರಜೆ, ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ರೈಲು, 6 ರೈಲುಗಳಲ್ಲಿ ಬೋಗಿಗಳ ಹೆಚ್ಚಳ

Umesha Bhatta P H HT Kannada

Apr 24, 2024 05:57 PM IST

google News

ಕರ್ನಾಟಕದಿಂದ ಓಡಲಿವೆ ಬೇಸಿಗೆ ವಿಶೇಷ ರೈಲು.

    • ನೈರುತ್ಯ ರೈಲ್ವೆಯು ಬೇಸಿಗೆ ರಜೆ ಕಾರಣಕ್ಕೆ ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ರೈಲು ಓಡಿಸಲಿದೆ. ಅಲ್ಲದೇ ಕರ್ನಾಟಕದ ಕೆಲವು ರೈಲುಗಳ ಬೋಗಿಗಳನ್ನು ಹೆಚ್ಚಿಸಲಾಗುತ್ತಿದೆ.
ಕರ್ನಾಟಕದಿಂದ ಓಡಲಿವೆ ಬೇಸಿಗೆ ವಿಶೇಷ ರೈಲು.
ಕರ್ನಾಟಕದಿಂದ ಓಡಲಿವೆ ಬೇಸಿಗೆ ವಿಶೇಷ ರೈಲು.

ಬೆಂಗಳೂರು: ಬೇಸಿಗೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಬೇಸಿಗೆ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಬೆಂಗಳೂರಿನಿಂದ ವಿಶಾಖಪಟ್ಟಣಂ ಹಾಗೂ ಹುಬ್ಬಳ್ಳಿಯಿಂದ ಅಹಮದಾಬಾದ್‌ ನಡುವೆ ಈ ವಿಶೇಷ ರೈಲುಗಳು ಸಂಚರಿಸಲಿವೆ. ಇವುಗಳ ಸಂಚಾರದ ದಿನ, ಸಮಯದ ವಿವರವನ್ನೂ ಬಿಡುಗಡೆ ಮಾಡಲಾಗಿದೆ. ಇದಲ್ಲದೇ ಕೆಲವು ಬೇಸಿಗೆ ರೈಲುಗಳ ಅವಧಿಯನ್ನು ವಿಸ್ತರಣೆ ಕೂಡ ಮಾಡಲಾಗಿದೆ. ಕರ್ನಾಟಕದ ಹಲವು ರೈಲುಗಳಿಗೆ ಬೇಡಿಕೆ ಹೆಚ್ಚು ಇರುವ ಕಾರಣಕ್ಕೆ ಮೈಸೂರು ಬೆಳಗಾವಿ, ಮೈಸೂರು ಬಾಗಲಕೋಟೆ ಹಾಗೂ ಮೈಸೂರು ಚಾಮರಾಜನಗರ ಸೇರಿ ಆರು ರೈಲುಗಳಿಗೆ ಬೋಗಿಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ ಎಂದು ಹುಬ್ಬಳ್ಳಿಯಲ್ಲಿರುವ ನೈರುತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ ಕನಮಡಿ ಅವರು ತಿಳಿಸಿದ್ದಾರೆ.

ರೈಲುಗಳ ವಿವರ

  1. ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ (08549/08550) ರೈಲು ಏ. 27ರಿಂದ ಜೂನ್‌ 29ರವರೆಗೆ ವಿಶಾಖಪಟ್ಟಣಂ-ಎಸ್ಎಂವಿಟಿ ಬೆಂಗಳೂರು ನಡುವೆ 10 ಟ್ರಿಪ್ ಸಂಚರಿಸಲಿದೆ. ರೈಲು ಸಂಖ್ಯೆ 08549 ವಿಶಾಖಪಟ್ಟಣಂ ನಿಲ್ದಾಣದಿಂದ ಮಧ್ಯಾಹ್ನ 13:15 ಗಂಟೆಗೆ ಹೊರಟು, ಮರುದಿನ ಬೆಳಿಗ್ಗೆ 07:30 ಗಂಟೆಗೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.

ರೈಲು ಸಂಖ್ಯೆ 08550 ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಬೆಳಿಗ್ಗೆ 08:50 ಗಂಟೆಗೆ ಹೊರಟು, ಮರುದಿನ ಬೆಳಗಿನ ಜಾವ 03:10 ಗಂಟೆಗೆ ವಿಶಾಖಪಟ್ಟಣಂ ನಿಲ್ದಾಣವನ್ನು ತಲುಪಲಿದೆ. ಈ ವಿಶೇಷ ರೈಲು ಎರಡೂ ದಿಕ್ಕುಗಳಲ್ಲಿ ದುವ್ವಾಡ, ರಾಜಮಂಡ್ರಿ, ವಿಜಯವಾಡ, ಒಂಗೋಲ್, ನೆಲ್ಲೂರು, ಗುಡೂರು , ರೇಣಿಗುಂಟ , ಕಟಪಾಡಿ , ಜೋಲಾರ್ ಪೆಟ್ಟೈ ಮತ್ತು ಕೃಷ್ಣರಾಜಪುರಂ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ವಿಶೇಷ ರೈಲುಗಳು 1 ಎಸಿ-ಟು ಟೈಯರ್, 2 ಎಸಿ-ತ್ರಿ ಟೈಯರ್, 11 ಸ್ಲೀಪರ್ ಕ್ಲಾಸ್, 4 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಎಸ್ಎಲ್ಆರ್ ಬೋಗಿಗಳು ಸೇರಿದಂತೆ ಒಟ್ಟು 20 ಬೋಗಿಗಳನ್ನು ಒಳಗೊಂಡಿರುತ್ತದೆ.

2. ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ (07311/07312) ರೈಲು ಏಪ್ರಿಲ್‌ 28ರಿಂದ ಮೇ 26 ರವರೆಗೆ ಎಸ್ಎಸ್ಎಸ್ ಹುಬ್ಬಳ್ಳಿ-ಅಹಮದಾಬಾದ್ ನಡುವೆ 5 ಟ್ರಿಪ್ ಸಂಚರಿಸಲಿದೆ. ರೈಲು ಸಂಖ್ಯೆ 07311 ಹುಬ್ಬಳ್ಳಿಯಿಂದ ಪ್ರತಿ ಭಾನುವಾರ ಸಾಯಂಕಾಲ 7:30 ಗಂಟೆಗೆ ಹೊರಟು, ಮರುದಿನ ಸಾಯಂಕಾಲ 7:20 ಗಂಟೆಗೆ ಅಹಮದಾಬಾದ್ ನಿಲ್ದಾಣವನ್ನು ತಲುಪಲಿದೆ.

ರೈಲು ಸಂಖ್ಯೆ 07312 ಅಹಮದಾಬಾದ್ ನಿಲ್ದಾಣದಿಂದ ಪ್ರತಿ ಸೋಮವಾರ ರಾತ್ರಿ 9 :25 ಗಂಟೆಗೆ ಹೊರಟು, ಮರುದಿನ ಸಾಯಂಕಾಲ 7:45 ಗಂಟೆಗೆ ಎಸ್ಎಸ್ಎಸ್ ನಿಲ್ದಾಣಕ್ಕೆ ಆಗಮಿಸಲಿದೆ.

ಈ ವಿಶೇಷ ರೈಲು ಎರಡೂ ದಿಕ್ಕುಗಳಲ್ಲಿ ಧಾರವಾಡ, ಲೋಂಡಾ, ಬೆಳಗಾವಿ, ಘಟಪ್ರಭಾ, ಮಿರಜ್, ಸಾಂಗ್ಲಿ, ಸತಾರಾ, ಪುಣೆ, ಕಲ್ಯಾಣ್, ವಸಾಯಿ ರೋಡ್, ಬೋಯಿಸರ್, ವಾಪಿ, ಸೂರತ್, ವಡೋದರಾ ಮತ್ತು ಆನಂದ್ ಜಂ. ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ವಿಶೇಷ ರೈಲುಗಳು 1 ಎಸಿ-ಟು ಟೈಯರ್, 2 ಎಸಿ ತ್ರಿ ಟೈಯರ್, 8 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಬ್ರೇಕ್ ವ್ಯಾನ್/ಲಗೇಜ್ & ವಿಕಲಚೇತನ ಬೋಗಿಗಳು ಸೇರಿದಂತೆ ಒಟ್ಟು 18 ಬೋಗಿಗಳನ್ನು ಒಳಗೊಂಡಿರುತ್ತದೆ.

ಬೇಸಿಗೆ ವಿಶೇಷ ರೈಲುಗಳ ಸೇವೆ ವಿಸ್ತರಣೆ

ಅಸ್ತಿತ್ವದಲ್ಲಿರುವ ಸಂಯೋಜನೆ, ನಿಲುಗಡೆ ಮತ್ತು ಸಮಯದೊಂದಿಗೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸಲು ಬೇಸಿಗೆ ವಿಶೇಷ ರೈಲುಗಳ ಸೇವೆಯನ್ನು ವಿಸ್ತರಿಸಲಾಗುತ್ತಿದೆ.

ರೈಲು ಸಂಖ್ಯೆ 06563/06564 ಎಸ್ಎಂವಿಟಿ ಬೆಂಗಳೂರು-ಮಾಲ್ಡಾ ಟೌನ್-ಎಸ್ಎಂವಿಟಿ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ಮೇ 12ರಿಂದ ಜೂನ್‌5ರವೆಗೆ ಹಾಗೂ ರೈಲು ಸಂಖ್ಯೆ 06221/06222 ಮೈಸೂರು-ಮುಜಾಫರ್ಪುರ-ಮೈಸೂರು ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಮೇ13ರಿಂದ ಜೂನ್‌6 ವರೆಗೆ ಸಂಚರಿಸಲಿವೆ.

ಆರು ರೈಲುಗಳಿಗೆ ಹೆಚ್ಚುವರಿ ಬೋಗಿ ಜೋಡಣೆ

ಬೇಸಿಗೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ಸರಿದೂಗಿಸಲು ನಿಗದಿತ ದಿನಾಂಕಗಳಂದು ಈ ಕೆಳಗಿನ ಆರು ರೈಲುಗಳಿಗೆ ತಲಾ ಒಂದು ಸ್ಲೀಪರ್ ಕ್ಲಾಸ್ ಹೆಚ್ಚುವರಿ ಬೋಗಿಯನ್ನು ಜೋಡಿಸಲಾಗುತ್ತಿದೆ.

1. ರೈಲು ಸಂಖ್ಯೆ 17302 ಬೆಳಗಾವಿ-ಮೈಸೂರು ಎಕ್ಸ್ ಪ್ರೆಸ್ ರೈಲು ಏಪ್ರಿಲ್ 24 ರಿಂದ ಮೇ 1ರವರೆಗೆ

2. ರೈಲು ಸಂಖ್ಯೆ 06233 ಮೈಸೂರು-ಚಾಮರಾಜನಗರ ಪ್ಯಾಸೆಂಜರ್ ರೈಲು ಏಪ್ರಿಲ್ 25 ರಿಂದ ಮೇ 2ರವರೆಗೆ

3. ರೈಲು ಸಂಖ್ಯೆ 06234 ಚಾಮರಾಜನಗರ-ಮೈಸೂರು ಪ್ಯಾಸೆಂಜರ್ ರೈಲು ಏಪ್ರಿಲ್ 25 ರಿಂದ ಮೇ 2ರವರೆಗೆ

4. ರೈಲು ಸಂಖ್ಯೆ 17307 ಮೈಸೂರು-ಬಾಗಲಕೋಟೆ ಬಸವ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 25 ರಿಂದ ಮೇ 2ರವರೆಗೆ

5. ರೈಲು ಸಂಖ್ಯೆ17308 ಬಾಗಲಕೋಟೆ-ಮೈಸೂರು ಬಸವ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 26 ರಿಂದ ಮೇ 3ರವರೆಗೆ

6. ರೈಲು ಸಂಖ್ಯೆ17301 ಮೈಸೂರು-ಬೆಳಗಾವಿ ಎಕ್ಸ್ ಪ್ರೆಸ್ ರೈಲು ಏಪ್ರಿಲ್ 27 ರಿಂದ ಮೇ 4 ರವರೆಗೆ.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ