logo
ಕನ್ನಡ ಸುದ್ದಿ  /  ಕರ್ನಾಟಕ  /  Sslc Results2024: ಎಸ್‌ಎಸ್‌ಎಲ್‌ಸಿ ಫೇಲ್ ಆದ್ರೆ ಏನು ಮಾಡಬೇಕು, ಭಯಬಿಡಿ ಇನ್ನೂ ಎರಡು ಪರೀಕ್ಷೆಗಳಿವೆ

SSLC Results2024: ಎಸ್‌ಎಸ್‌ಎಲ್‌ಸಿ ಫೇಲ್ ಆದ್ರೆ ಏನು ಮಾಡಬೇಕು, ಭಯಬಿಡಿ ಇನ್ನೂ ಎರಡು ಪರೀಕ್ಷೆಗಳಿವೆ

Umesha Bhatta P H HT Kannada

May 08, 2024 04:03 PM IST

ಎಸ್‌ಎಸ್‌ಎಲ್ಸಿ ಫಲಿತಾಂಶ ಗುರುವಾರ ಪ್ರಕಟವಾಗಲಿದ್ದು, ಅಂಕ ಸುಧಾರಣೆಗೆ ಅವಕಾಶವುಂಟು.

    • Karnataka SSLC Results2024 ಎಸ್‌ಎಸ್‌ಎಲ್‌ಸಿ2024 ಪರೀಕ್ಷೆಯಲ್ಲಿ ಕಡಿಮೆ ಅಂಕ ಬರುವ ಇಲ್ಲವೇ ಅನುತ್ತೀರ್ಣರಾಗುವ ಆತಂಕವಿದ್ದರೆ ಬಿಟ್ಟುಬಿಡಿ. ಇನ್ನೂ ಎರಡು ಪರೀಕ್ಷೆಗಳು ನಿಮಗಾಗಿಯೇ ಇವೆ. ಆಗಲೂ ನಿಮಗೆ ಅವಕಾಶಗಳಿವೆ.
ಎಸ್‌ಎಸ್‌ಎಲ್ಸಿ ಫಲಿತಾಂಶ ಗುರುವಾರ ಪ್ರಕಟವಾಗಲಿದ್ದು, ಅಂಕ ಸುಧಾರಣೆಗೆ ಅವಕಾಶವುಂಟು.
ಎಸ್‌ಎಸ್‌ಎಲ್ಸಿ ಫಲಿತಾಂಶ ಗುರುವಾರ ಪ್ರಕಟವಾಗಲಿದ್ದು, ಅಂಕ ಸುಧಾರಣೆಗೆ ಅವಕಾಶವುಂಟು.

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ2024 ರ ಫಲಿತಾಂಶ ಪ್ರಕಟಣೆಗೆ ಕ್ಷಣಗಣನೆ ಶುರುವಾಗಿದೆ. ಗುರುವಾರ ಬೆಳಿಗ್ಗೆಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ಫಲಿತಾಂಶವನ್ನು ಪ್ರಕಟಿಸಲಿದೆ. ಇದರಿಂದ ಈಗಾಗಲೇ ಪರೀಕ್ಷೆ ಎದುರಿಸಿದವರಿಗೆ ತಳಮಳ, ಗೊಂದಲ ಉಂಟಾಗಿರಬಹುದು. ಎಷ್ಟು ಅಂಕಗಳು ಬರಬಹುದು. ಫಲಿತಾಂಶ ಏನಾಗಿಬಿಡಬಹುದು ಎನ್ನುವ ಭಯವೂ ವ್ಯಕ್ತವಾಗಿರಬಹುದು. ಇಂತಹ ಭಯವನ್ನು ಈಗಲೇ ಬಿಟ್ಟುಬಿಡಿ. ನೀವು ಪರೀಕ್ಷೆ ಎದುರಿಸಿರುವ ರೀತಿಯ ಬಗ್ಗೆ ಆತ್ಮವಿಶ್ವಾಸ ಹೊಂದಿ. ನಿಮಗೆ ಉತ್ತಮ ಫಲಿತಾಂಶ ಬಂದೇ ಬರುತ್ತದೆ. ಇದರ ನಡುವೆಯೂ ಸಣ್ಣ ಪುಟ್ಟ ವ್ಯತ್ಯಾಸಗಳಾದರೆ ಆತಂಕ ಬೇಡವೇ ಬೇಡ. ಏಕೆಂದರೆ ನಿಮ್ಮ ಅಂಕ ಉತ್ತಮಪಡಿಸಿಕೊಳ್ಳಲು, ಅನುತ್ತೀರ್ಣರಾದರೆ ಉತ್ತೀರ್ಣರಾಗಲೆಂದೇ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಮೇ ಹಾಗೂ ಜೂನ್‌ ನಲ್ಲಿ ಇನ್ನೂ ಎರಡು ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆಯೋಜಿಸಲಿದೆ. ಆಗಲೂ ನಿಮಗೆ ಅವಕಾಶ ಇದ್ದೇ ಇದೆ.

ಟ್ರೆಂಡಿಂಗ್​ ಸುದ್ದಿ

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

Hassan Scandal : ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ

Wildlife News: ಹುಲಿ ಉಗುರು ಪ್ರಕರಣ, ವನ್ಯಜೀವಿಗಳ ಅಂಗಾಂಗ ಹಸ್ತಾಂತರ ಇನ್ನಷ್ಟು ವಿಳಂಬ ಸಾಧ್ಯತೆ

ಇದು ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯು ಎಸ್‌ ಎಸ್‌ಎಲ್‌ಸಿ ಪರೀಕ್ಷೆ ಎದುರಿಸಿ ಕಾತರದಿಂದ ಕಾಯುತ್ತಿರುವ ವಿದ್ಯಾರ್ಥಿಗಳ ಜತೆಗೆ ಅವರ ಪೋಷಕರಿಗೆ ನೀಡುವ ಅಭಯ.

ಹಿಂದೆಲ್ಲಾ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಸಾಕಷ್ಟು ಸಮಯ ಕಾಯಬೇಕಿತ್ತು. ಒಂದು ವರ್ಷ ಹೋಗೆ ಬಿಟ್ಟಿತು ಎನ್ನುವ ಸ್ಥಿತಿಯೂ ಇತ್ತು. ಅಲ್ಲದೇ ಅಂಕ ಉತ್ತಮಪಡಿಸಿಕೊಳ್ಳಲು ವರ್ಷಗಟ್ಟಲೇ ಕಾಯುವ ಸ್ಥಿತಿಯೂ ಇತ್ತು. ಇದೆಲ್ಲವನ್ನೂ ದೂರ ಮಾಡಿ ವಿದ್ಯಾರ್ಥಿ ಸ್ನೇಹಿ ಮೂರು ಪರೀಕ್ಷೆಗಳ ವ್ಯವಸ್ಥೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಮಾಡಿದ್ದು. ಅದು ಈ ವರ್ಷದಿಂದಲೇ ಜಾರಿಗೆ ಬಂದಿದೆ. ಅಲ್ಲಿಯೂ ಪರೀಕ್ಷೆ ಎದುರಿಸಿ ನಿಮ್ಮ ಅಂಕ ಉತ್ತಮಪಡಿಸಿಕೊಳ್ಳಬಹುದು ಇಲ್ಲವೇ ಅನುತ್ತೀರ್ಣರಾಗಿದ್ದರೆ ಪರೀಕ್ಷೆ ಸಹಜವಾಗಿಯೇ ಎದುರಿಸಬಹುದು.

ವರ್ಷವಿಡೀ ಓದಿ ಹದಿನೈದು ದಿನಗಳೊಳಗೆ ಪರೀಕ್ಷೆ ಎದುರಿಸುವುದು ಕೆಲವರಿಗೆ ಕಷ್ಟವೇ ಆಗಬಹುದು. ಮತ್ತೆ ಕೆಲವರು ಚೆನ್ನಾಗಿ ಓದಿದ್ದರೂ ಪರೀಕ್ಷೆ ಎದುರಿಸಬೇಕಾದ ಭಯದಿಂದಲೂ ಅಂಕ ಕಡಿಮೆ ತೆಗೆದುಕೊಳ್ಳಬಹುದು. ಕೌಟುಂಬಿಕ ಕಾರಣಗಳಿಂದ ಪರೀಕ್ಷೆ ಚೆನ್ನಾಗಿ ಎದುರಿಸದೇ ಅನುತ್ತೀರ್ಣವಾಗುವ ಸನ್ನಿವೇಶವೂ ಬಂದಿರಬಹುದು. ಇದಕ್ಕಾಗಿ ಜೀವನವೇ ಮುಗಿದು ಹೋಯಿತು. ನನ್ನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಹೀಗಾಗಿ ಹೋಯಿತು ಎಂದು ಕೊರಗಿ ಕೂರುವ ಇಲ್ಲವೇ ಏನಾದರೂ ಅನಾಹುತಕ್ಕೆ ಮುಂದಾಗುವ ಬದಲು ನನ್ನ ಮುಂದೆ ಸಾಕಷ್ಟು ಅವಕಾಶಗಳಿವೆ. ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿಯೂ ಇದೇ ನಿಟ್ಟಿನಲ್ಲ ವಿದ್ಯಾರ್ಥಿ ಸ್ನೇಹಿ ಪರೀಕ್ಷಾ ವ್ಯವಸ್ಥೆಯನ್ನು ಜಾರಿಗೊಳಿಸಿದೆ.

ಮೊದಲೆಲ್ಲಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ 4 ತಿಂಗಳ ನಂತರ ಸಪ್ಲಿಮೆಂಟರಿ ಪರೀಕ್ಷೆ ಎದುರಿಸಬೇಕಾಗಿತ್ತು. ಅಂಕ ವ್ಯತ್ಯಾಸವಾದರರು ಮರುಮೌಲ್ಯಮಾಪನಕ್ಕೆ ಮಾತ್ರ ಅವಕಾಶವಿತ್ತು. ಮತ್ತೊಮ್ಮೆ ಪರೀಕ್ಷೆ ಎದುರಿಸಲು ಒಂದು ವರ್ಷವೇ ಕಾಯಬೇಕಾಗಿತ್ತು. ಇದರಿಂದ ಹಲವಾರು ವಿದ್ಯಾರ್ಥಿಗಳಿಗೆ ಅನಾನುಕೂಲವೂ ಆಗುತ್ತಿತ್ತು. ಕೆಲವರು ಉತ್ತಮ ಅಂಕಕ್ಕಾಗಿ ಒಂದು ವರ್ಷದ ನಂತರ ಮತ್ತೆ ಮುಖ್ಯ ಪರೀಕ್ಷೆ ಬರೆದಿರುವ ಉದಾಹರಣೆಗಳೂ ಇವೆ.

ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನೂ ಎರಡು ತಿಂಗಳ ಒಳಗೆ ಮೂರು ಬಾರಿ ಎದುರಿಸುವ ಅವಕಾಶವನ್ನು ಮೊದಲ ಬಾರಿಗೆ ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ನೀಡಿದೆ. ಪಿಯುಸಿಗೆ ಕಳೆದ ವರ್ಷ ಪ್ರಾಯೋಗಿಕವಾಗಿ ನಡೆದಿದ್ದನ್ನು ಈ ಬಾರಿ ಮೂರು ಪರೀಕ್ಷೆಗಳಿಗೆ ವಿಸ್ತರಿಸಲಾಗಿದೆ. ಇದೇ ರೀತಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸಿದವರಿಗೂ ಇರಲಿದೆ. ಅಂದರೆ ಈಗಾಗಲೇ ಮುಗಿದಿರುವ ಮೊದಲ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದವರು, ನಿರೀಕ್ಷೆಯಷ್ಟು ಅಂಕಗಳು ಸಿಗದೇ ಇರುವವರು, ಇನ್ನೂ ಅಂಕ ಉತ್ತಮಪಡಿಸಿಕೊಳ್ಳಬೇಕು ಎನ್ನುವವರು ಎರಡು ಪರೀಕ್ಷೆ ಎದುರಿಸಬಹುದು. ಅದೇ ರೀತಿ ಅನುತ್ತೀರ್ಣರಾದವರೂ ಎರಡು ಪರೀಕ್ಷೆ ಎದುರಿಸಲು ಅವಕಾಶವಿದೆ. ಮೂರು ಪರೀಕ್ಷೆಯಲ್ಲಿವಿಷಯಗಳಲ್ಲಿ ಅತಿ ಹೆಚ್ಚು ಅಂಕ ಪಡೆಯುವುದನ್ನೇ ಪರಿಗಣಿಸಲಾಗುತ್ತದೆ ಎನ್ನುವುದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡುವ ವಿವರಣೆ.

ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ2ಗೆ ಸಂಬಂಧಿಸಿ ಮಂಡಳಿಯಿಂದ ನಮಗೆ ಸೂಚನೆಗಳು ಬಂದಿವೆ. ಮೇ 20ರ ನಂತರ ಪರೀಕ್ಷೆಗಳು ನಡೆಯಬಹುದು. ಫಲಿತಾಂಶ ಬಂದ ನಂತರ ಇನ್ನೆರಡು ಪರೀಕ್ಷೆಗಳಿಗೆ ತಯಾರಿ ಆಗಲಿದೆ. ಈಗಾಗಲೇ ಪರೀಕ್ಷೆಗೆ ಮಂಡಳಿಯಲ್ಲಿ ನೊಂದಣಿ ಮಾಡಿಕೊಂಡವರಿಗೆ ಮಾತ್ರ ಹೆಚ್ಚುವರಿ ಪರೀಕ್ಷೆ ಎದುರಿಸಲು ಅವಕಾಶವಿದೆ. ಹೊಸಬರಿಗೆ ಅವಕಾಶವಿಲ್ಲ ಎಂದು ರಾಮನಗರ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪುರುಷೋತ್ತಮ್‌ ಹೇಳುತ್ತಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ