logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Crime News: ಟೆಕ್‌ ಹಬ್‌ ಬೆಂಗಳೂರಿನಲ್ಲಿದ್ರು 5 ಹೈಟೆಕ್‌ ಖದೀಮರು!; ಇಂಟರ್‌ನ್ಯಾಷನಲ್‌ ಕಾಲ್ಸ್ ಆಗ್ತಿದ್ದವು ಲೋಕಲ್‌ ಕಾಲ್ಸ್‌

Bengaluru Crime News: ಟೆಕ್‌ ಹಬ್‌ ಬೆಂಗಳೂರಿನಲ್ಲಿದ್ರು 5 ಹೈಟೆಕ್‌ ಖದೀಮರು!; ಇಂಟರ್‌ನ್ಯಾಷನಲ್‌ ಕಾಲ್ಸ್ ಆಗ್ತಿದ್ದವು ಲೋಕಲ್‌ ಕಾಲ್ಸ್‌

HT Kannada Desk HT Kannada

Sep 14, 2022 07:16 PM IST

ಇಂಟರ್‌ನ್ಯಾಷನಲ್‌ ಕರೆಗಳನ್ನು ಲೋಕಲ್‌ ಕರೆಗಳನ್ನಾಗಿ ಪರಿವರ್ತಿಸುವುದಕ್ಕೆ ಸಾಧ್ಯ. ಈ ಕೆಲಸವನ್ನು ಅಕ್ರಮವಾಗಿ ಮಾಡಿ ವಂಚಿಸಿದ ಐವರು ಖದೀಮರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. (ಸಾಂದರ್ಭಿಕ ಚಿತ್ರ)

    • Bengaluru Crime News:‌ ಇಂಟರ್‌ನ್ಯಾಷನಲ್‌ ಕರೆಗಳನ್ನು ಲೋಕಲ್‌ ಕರೆಗಳನ್ನಾಗಿ ಪರಿವರ್ತಿಸುವುದಕ್ಕೆ ಸಾಧ್ಯ. ಈ ಕೆಲಸವನ್ನು ಅಕ್ರಮವಾಗಿ ಮಾಡಿ ವಂಚಿಸಿದ ಐವರು ಖದೀಮರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಏನಿದು ಪ್ರಕರಣ ವಿವರ ಇಲ್ಲಿದೆ ಗಮನಿಸಿ. 
ಇಂಟರ್‌ನ್ಯಾಷನಲ್‌ ಕರೆಗಳನ್ನು ಲೋಕಲ್‌ ಕರೆಗಳನ್ನಾಗಿ ಪರಿವರ್ತಿಸುವುದಕ್ಕೆ ಸಾಧ್ಯ. ಈ ಕೆಲಸವನ್ನು ಅಕ್ರಮವಾಗಿ ಮಾಡಿ ವಂಚಿಸಿದ ಐವರು ಖದೀಮರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. (ಸಾಂದರ್ಭಿಕ ಚಿತ್ರ)
ಇಂಟರ್‌ನ್ಯಾಷನಲ್‌ ಕರೆಗಳನ್ನು ಲೋಕಲ್‌ ಕರೆಗಳನ್ನಾಗಿ ಪರಿವರ್ತಿಸುವುದಕ್ಕೆ ಸಾಧ್ಯ. ಈ ಕೆಲಸವನ್ನು ಅಕ್ರಮವಾಗಿ ಮಾಡಿ ವಂಚಿಸಿದ ಐವರು ಖದೀಮರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. (ಸಾಂದರ್ಭಿಕ ಚಿತ್ರ) (unsplash)

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಐಟಿ ಸಿಟಿಯಷ್ಟೇ ಅಲ್ಲ, ಟೆಕ್‌ ಹಬ್‌ ಕೂಡ ಹೌದು. ಅಪರಾಧಗಳಿಗೂ ಕೊರತೆ ಇಲ್ಲ. ಟೆಕ್ನಾಲಜಿ ಬಳಸಿಕೊಂಡು, ಅಂತಾರಾಷ್ಟ್ರೀಯ ಕರೆಗಳನ್ನು ಅಕ್ರಮವಾಗಿ ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ವಂಚಿಸುತ್ತಿದ್ದ ಐವರು ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

MLC Election 2024: ಪ್ರಜ್ವಲ್ ಪ್ರಕರಣ ನಡುವೆಯೇ ವಿಧಾನ ಪರಿಷತ್ 6 ಸ್ಥಾನಗಳಿಗೆ ಜೂನ್ 3 ರಂದು ಚುನಾವಣೆ; ಜೂ 6 ಕ್ಕೆ ಫಲಿತಾಂಶ

Hassan Scandal; ಹಾಸನ ಹಗರಣದ ಸಂತ್ರಸ್ತೆ ನಾಪತ್ತೆ ಆತಂಕಕಾರಿ, ಪ್ರಜ್ವಲ್‌ ರೇವಣ್ಣ ಬಂಧನ ಯಾವಾಗ, ಫೇಸ್‌ಬುಕ್ ಪೋಸ್ಟಲ್ಲಿ ವಾಸು ಎಚ್‌ವಿ ಕಳವಳ

Bengaluru Rains: ದಾಖಲೆಯ ಬಿಸಿ ಕಂಡ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ; ರಣ ಬಿಸಿಲಿಗೆ ಬೆಂದ ಜನ ಫುಲ್ ಖುಷ್

NEP ಅಥವಾ SEP: ಪದವಿ ಕೋರ್ಸ್ ಪ್ರವೇಶ ಗೊಂದಲ ರಾಜ್ಯವ್ಯಾಪಿ; ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿದ್ಯಾರ್ಥಿಗಳ ಹಪಾಹಪಿ

ಈ ಐವರು ಕೇರಳ ಮೂಲದವರು. ಬಂಧಿತರನ್ನು ಕೇರಳದ ಡ್ಯಾನೀಷ್ ಪೊವರ್, ವಿಪಿನ್ ಕೆ.ಪಿ., ಸುಭಾಷ್, ಬಿಜಿನ್ ಜೋಸೆಫ್ ಮತ್ತು ಸಮ್ಮದ್ ಸಾಜಾನ್ ಬಂತ ಎಂದು ಗುರುತಿಸಲಾಗಿದೆ.

40 ದಿನಗಳಲ್ಲಿ 4,722 ದಿನಗಳ ಅವಧಿಯ ಕರೆ!

ಕೋರಮಂಗಲದ ಬಿಜ್ಯುಬ್ ಸಲ್ಯುಷನ್ ಕಂಪನಿಯಲ್ಲೇ ಸುಮಾರು 1500 ಸಿಪ್ ಪೋರ್ಟಲ್‍ಗಳ ಸಂಪರ್ಕವಿದೆ. ಇಲ್ಲಿ 40 ದಿನಗಳಲ್ಲಿ 68 ಲಕ್ಷ ನಿಮಿಷಗಳ (4,722.22 ದಿನ) ಅಂತಾರಾಷ್ಟ್ರೀಯ ಕರೆಗಳನ್ನು ಅಕ್ರಮವಾಗಿ ಮಾಡಲಾಗಿದೆ.

ಮೈಕೋಲೇಔಟ್‍ನ ಒಟೂರ್ ಟೆಕ್ನಾಲೀಜಿಸ್‍ನಲ್ಲಿ 900 ಸಿಪ್ ಪೋರ್ಟಲ್ ಪಡೆದು 60 ದಿನಗಳಲ್ಲಿ 24 ನಿಮಿಷಗಳ ಅಕ್ರಮ ಅಂತಾರಾಷ್ಟ್ರೀಯ ಕರೆಗಳನ್ನು ಮಾಡಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಅಪಾರ ಪ್ರಮಾಣದ ನಷ್ಟ ಉಂಟು ಮಾಡಿದ್ದಾರೆ. ಈ ಕುರಿತು ದೂರು ಬಂದ ಕಾರಣ ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೇಗೆ ಮಾಡಿದ್ರು ಈ ಅಕ್ರಮ?

ಜಿಯೋ ಕಂಪನಿಯ ಟ್ರಂಕ್ ಕಾಲ್ ಡಿವೈಸ್‍ಗಳನ್ನು ಪಡೆದು ಬಿಜ್ಯುಬ್ ಸಲ್ಯುಷನ್(ಒಪಿಸಿ) ಪ್ರೈವೇಟ್ ಲಿಮಿಟೆಡ್, ಒಟೂರ್ ಟೆಕ್ನಾಲೀಜಿಸ್ ಪ್ರೈವೇಟ್ ಲಿಮಿಟೆಡ್ ಮತ್ತು ಟೈಮ್ ಇನೋ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಗಳ ದಾಖಲೆಗಳನ್ನು ಸೃಷ್ಟಿಸಿ ಎಸ್‍ಐಪಿ ಪೋರ್ಟಲ್‍ಗಳಿಂದ ಸ್ಥಿರ ದೂರವಾಣಿಯನ್ನು ಪಡೆದುಕೊಂಡು ಟೆಲಿಪೋನ್ ಎಕ್ಸಚೇಂಜ್ ರೀತಿಯಲ್ಲಿ ಇಒಎಲ್‍ಪಿ( ವಾಯ್ಸ್ ಓವರ್ ಇಂಟರನೆಟ್ ಪೋರ್ಟೊಕಾಲ್) ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಆರೋಪಿಗಳು ವಂಚಿಸುತ್ತಿದ್ದರು.

ಇವೆಲ್ಲವೂ ರಾಜಾಜಿನಗರ, ಕೋರಮಂಗಲ ಹಾಗೂ ಮೈಕೋಲೇಔಟ್ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದಿವೆ. ಈ ಬಗ್ಗೆ ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಈ ಸಂಬಂಧ ಮುಂದಿನ ತನಿಖೆ ಕೈಗೊಂಡಿದ್ದ ಸಿಸಿಬಿ ಆರ್ಥಿಕ ಅಪರಾಧ ದಳ ಅಧಿಕಾರಿಗಳು ಐವರು ಆರೋಪಿಗಳನ್ನು ಬಂಧಿಸಿ ಕಂಪ್ಯೂಟರ್‍ಗಳು, ಲ್ಯಾಪ್‍ಟಾಪ್‍ಗಳು, ವಂಚನೆಗೆ ಬಳಸಿದ್ದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು