logo
ಕನ್ನಡ ಸುದ್ದಿ  /  Karnataka  /  Bengaluru Crime News: Theft Case Old Criminal Manju Arrested By Bengaluru Police

Bengaluru Crime News: ಹಾಡು ಹಗಲೇ ಮನೆ ಬೀಗ ಒಡೆದು ಕಳವು ಮಾಡುತ್ತಿದ್ದ ಮಂಜನ ಸೆರೆ

HT Kannada Desk HT Kannada

Nov 25, 2022 11:49 AM IST

ಹಾಡು ಹಗಲಲ್ಲೇ ಮನೆಯ ಬೀಗ ಒಡೆದು ಒಳಗೆ ನುಗ್ಗಿ ಚಿನ್ನಭಾರಣ, ನಗದು ಕಳವು ಮಾಡುತ್ತಿದ್ದ ಹಳೆಯ ಕ್ರಿಮಿನಲ್‌ ಒಬ್ಬನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

  • Bengaluru Crime News: ಹಾಡು ಹಗಲಲ್ಲೇ ಮನೆ ಬೀಗ ಒಡೆದು ಒಳಗೆ ನುಗ್ಗಿ ಚಿನ್ನಾಭರಣ, ನಗದು ಕಳವು ಮಾಡುತ್ತಿದ್ದ ಹಳೆಯ ಕ್ರಿಮಿನಲ್‌ ಮಂಜನನ್ನು ಪೊಲೀಸರು ಬಂಧಿಸಿದ್ದಾರೆ. 

ಹಾಡು ಹಗಲಲ್ಲೇ ಮನೆಯ ಬೀಗ ಒಡೆದು ಒಳಗೆ ನುಗ್ಗಿ ಚಿನ್ನಭಾರಣ, ನಗದು ಕಳವು ಮಾಡುತ್ತಿದ್ದ ಹಳೆಯ ಕ್ರಿಮಿನಲ್‌ ಒಬ್ಬನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಹಾಡು ಹಗಲಲ್ಲೇ ಮನೆಯ ಬೀಗ ಒಡೆದು ಒಳಗೆ ನುಗ್ಗಿ ಚಿನ್ನಭಾರಣ, ನಗದು ಕಳವು ಮಾಡುತ್ತಿದ್ದ ಹಳೆಯ ಕ್ರಿಮಿನಲ್‌ ಒಬ್ಬನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಬೆಂಗಳೂರು: ಹಾಡು ಹಗಲಲ್ಲೇ ಮನೆಯ ಬೀಗ ಒಡೆದು ಒಳಗೆ ನುಗ್ಗಿ ಚಿನ್ನಭಾರಣ, ನಗದು ಕಳವು ಮಾಡುತ್ತಿದ್ದ ಹಳೆಯ ಕ್ರಿಮಿನಲ್‌ ಒಬ್ಬನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Tumkur News: ತುಮಕೂರು ಹರಳೂರಿನ ಐತಿಹಾಸಿಕ ಶ್ರೀವೀರಭದ್ರ ಸ್ವಾಮಿಯ ಅದ್ದೂರಿ ರಥೋತ್ಸವ

Hassan Scandal: ಬಂಧನ ಭೀತಿ, ಜಾಮೀನಿಗಾಗಿ ನ್ಯಾಯಾಲಯಕ್ಕೆ ಮೊರೆ ಹೋದ ಎಚ್‌ಡಿ ರೇವಣ್ಣ

MLC Elections2024 :ಕರ್ನಾಟಕದಲ್ಲಿ ವಿಧಾನಪರಿಷತ್‌ ಚುನಾವಣೆಗೆ ದಿನಾಂಕ ಘೋಷಣೆ, ಯಾವಾಗ ಮತದಾನ?

Bangalore Crime: ಬೆಂಗಳೂರಲ್ಲಿ ವಾಯುವಿಹಾರ ಹೊರಟಿದ್ದ ದಂಪತಿ ಮೇಲೆ ಹಲ್ಲೆ, ನಾಲ್ವರು ಆರೋಪಿಗಳು ಪರಾರಿ

ಬಂಧಿತನನ್ನು ಮಂಜುನಾಥ ಅಲಿಯಾಸ್‌ ಮಂಜ ಅಲಿಯಾಸ್‌ ಶಂಕರ್‌ (40) ಎಂದು ಗುರುತಿಸಲಾಗಿದೆ. ಈತ ರಾಜಾಜಿನಗರ, ಪ್ರಕಾಶ್‌ ನಗರದ ನಿವಾಸಿ. ಬಂಧಿತನಿಂದ 6.2 ಲಕ್ಷ ರೂಪಾಯಿ ಮೌಲ್ಯದ 115 ಗ್ರಾಂ ತೂಕದ ಚಿನ್ನಾಭರಣ, 30 ಗ್ರಾಂ ಬೆಳ್ಳಿಯ ಕಾಲ್ಗೆಜ್ಜೆ, ಒಂದು ಐಫೋನ್‌, ಒಂದು ಫಾಸ್ಟ್ರಾಕ್‌, ಒಂದು ಟೈಮ್ಸ್‌ ಕೈಗಡಿಯಾರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮಾಗಡಿ ರೋಡ್‌ ಪೊಲೀಸ್‌ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಈತನ ವಿರುದ್ಧ ಈ ಹಿಂದೆ ಹಲವು ಪ್ರಕರಣಗಳು ದಾಖಲಾಗಿವೆ. ಅವುಗಳ ಪೈಕಿ, ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎರಡು, ಚಾಮರಾಜಪೇಟೆ ಪೊಲೀಸ್‌ ಠಾಣೆಯಲ್ಲಿ ಎರಡು, ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎರಡು, ಯಶವಂತಪುರ ಪೊಲೀಸ್‌ ಠಾಣೆಯಲ್ಲಿ ಎರಡು, ಮಹಾಲಕ್ಷ್ಮೀ ಲೇಔಟ್, ಆಡುಗೋಡಿ ಪೊಲೀಸ್ ಠಾಣೆ, ಕಲಾಸಿಪಾಳ್ಯ ಪೊಲೀಸ್ ಠಾಣೆ, ಶ್ರೀರಾಮಪುರ, ಜೆ.ಪಿ ನಗರ, ಕೊಡಿಗೆಹಳ್ಳಿ ಹುಳಿಮಾವು ಪೊಲೀಸ್‌ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿವೆ.

ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಲಕ್ಷ್ಮಣ್ ಬ. ನಿಂಬರಗಿ ಮಾರ್ಗದರ್ಶನದಲ್ಲಿ, ವಿಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ರವಿ ಪಿ, ಮಾಗಡಿರಸ್ತೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶ್ರೀ ರಾಜು, ಎಂ.ಎಸ್. ರವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಮಾಗಡಿರೋಡ್ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಪ್ರಸನ್ನ ಎನ್., ಎಎಸ್‌ಐ ರವಿಕುಮಾರ್ , ಎಚ್‌.ಸಿ. ಕೃಷ್ಣಪ್ಪ, ಕಾನ್‌ಸ್ಟೆಬಲ್‌ಗಳಾದ ಪ್ರಕಾಶ್, ಮೌನೇಶ್, ಕೊಟ್ರೇಶ್ ನಲಿ ತಂಡದಲ್ಲಿದ್ದವರು.

ಗಮನಿಸಬಹುದಾದ ಕೆಲವು ಸುದ್ದಿಗಳು

ಬಾಲ್ ಆಧಾರ್ ಕಾರ್ಡ್ ನವೀಕರಣ ಕಡ್ಡಾಯಗೊಳಿಸಿದೆ ಯುಐಡಿಎಐ; ಅಪ್ಡೇಟ್‌ ಮಾಡುವುದು ಹೇಗೆ?

How to update Baal Aadhaar Card: ಬಾಲ್‌ ಆಧಾರ್ ಎಂದು ಕರೆಯಲ್ಪಡುವ ಮಕ್ಕಳ ಆಧಾರ್ ಕಾರ್ಡ್‌ಗೆ ಸಂಬಂಧಿಸಿ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಇತ್ತೀಚೆಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.‌

ಗ್ಯಾಸ್‌ ಸಂಪರ್ಕದೊಂದಿಗೆ 50 ಲಕ್ಷ ರೂ. ವಿಮೆ; ಪ್ರೀಮಿಯಂ ಪಾವತಿಸಬೇಕಾಗಿಲ್ಲ- ಇದು ನಿಮಗೆ ಗೊತ್ತೆ?

LPG Cylinder Insurance Scheme: ಇಂದು ಭಾರತದ ಪ್ರತಿ ಮನೆಗೂ ಗ್ಯಾಸ್ ಸಿಲಿಂಡರ್ ಸಂಪರ್ಕವಿದೆ. ಆದರೆ ನಮ್ಮಲ್ಲಿ ಅನೇಕರಿಗೆ ಗ್ಯಾಸ್ ಸಿಲಿಂಡರ್‌ಗಳಿಗೆ ಸಂಬಂಧಿಸಿದ ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದಿಲ್ಲ. ವಾಸ್ತವವಾಗಿ ಗ್ಯಾಸ್ ಸಂಪರ್ಕಕ್ಕೆ ಸಂಬಂಧಿಸಿ ಗ್ರಾಹಕರಿಗೆ ಅವರ ಹಕ್ಕುಗಳ ಬಗ್ಗೆ ತಿಳಿಸುವುದು ಗ್ಯಾಸ್ ವಿತರಕರ ಕರ್ತವ್ಯವಾಗಿದೆ. ನೀವೂ ತಿಳಿಯಿರಿ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.‌

ಮುಂದೆ ರಾಹುವಿನ ಹಾದಿ! ಜೀವನದಲ್ಲಿ ಅಶುಭದ ಕರಿಛಾಯೆಯಿಂದ ಹೊರಬರಲಿದ್ದಾರೆ 5 ರಾಶಿಚಕ್ರದವರು

Rahu Gochar 2023: ಮುಂದಿನ ವರ್ಷ ಅಕ್ಟೋಬರ್ 30 ರಂದು ರಾಹು ಸಂಕ್ರಮಣ ನಡೆಯಲಿದೆ. ರಾಹು ಮೀನ ರಾಶಿಯನ್ನು ಪ್ರವೇಶಿಸುವರು. ಪರಿಣಾಮವಾಗಿ, ಅನೇಕ ರಾಶಿಚಕ್ರ ಚಿಹ್ನೆಗಳು ಉತ್ತಮ ಅವಧಿಯನ್ನು ಪ್ರಾರಂಭಿಸುತ್ತವೆ. ಈ ಪಟ್ಟಿಯಲ್ಲಿ ಯಾರಿದ್ದಾರೆ ಎಂದು ನೋಡೋಣ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.‌

ಮೀನರಾಶಿಗೆ ಗುರು ನೇರ ಪ್ರವೇಶ; ಯಾವ ರಾಶಿ ಮೇಲೆ ಏನು ಪ್ರಭಾವ?

ಗುರು - ಅದೃಷ್ಟ ಮತ್ತು ಜ್ಞಾನದ ಗ್ರಹ - 119 ದಿನಗಳ ಅವಧಿಯ ನಂತರ, ನವೆಂಬರ್ 24 ರಂದು ಮೀನ ರಾಶಿಯಲ್ಲಿ ನೇರ ಪ್ರವೇಶಿಸುತ್ತಿದ್ದು, ಈ ಹಂತದಲ್ಲಿ, ಗುರುವು ಪ್ರತಿಯೊಬ್ಬರ ಜೀವನದಲ್ಲಿ ಸಮೃದ್ಧಿ ಮತ್ತು ಸಂತೋಷವನ್ನು ತರುತ್ತಾನೆ. ವಿವಿಧ ರಾಶಿಚಕ್ರ ಚಿಹ್ನೆಗಳ ಮೇಲೆ ಅದರ ಪ್ರಭಾವವನ್ನು ಅರಿಯೋಣ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.‌

    ಹಂಚಿಕೊಳ್ಳಲು ಲೇಖನಗಳು